For Quick Alerts
ALLOW NOTIFICATIONS  
For Daily Alerts

ಈ ಹಿಂದೂ ದೇವಾಲಯದಲ್ಲಿ ದಿನನಿತ್ಯ ಮುಸ್ಲಿಂ ಮಹಿಳೆಯನ್ನು ಪೂಜಿಸುತ್ತಾರೆ!

By Deepu
|

ಹಿಂದೂ ಧರ್ಮ ಭಾರತದ ಪ್ರಾಚೀನ ಧರ್ಮವಾಗಿದ್ದು ಇದನ್ನು ಅನುಸರಿಸುವವರು ವಿಶಾಲ ಮನೋಭಾವವನ್ನು, ಕ್ಷಮಾಗುಣವನ್ನೂ, ಶೃದ್ಧೆ, ತನ್ಮಯತೆಗಳನ್ನು ಹೊಂದಿರಬೇಕೆಂದು ಬೋಧಿಸುತ್ತದೆ. ಕೆಲವರ ದೃಷ್ಟಿಯಲ್ಲಿ ಇದೊಂದು ತತ್ವಜ್ಞಾನವೂ ಹೌದು. ಹಿಂದೂ ಧರ್ಮದಲ್ಲಿಯೂ ಹಲವಾರು ಒಳಪಂಗಡಗಳಿದ್ದು ಪ್ರತಿ ಪಂಗಡಗಳಿಗೂ ಪ್ರತ್ಯೇಕವಾದ ಕಟ್ಟಳೆಗಳಿವೆ.

ಒಂದು ಪಂಗಡದ ಕಟ್ಟಳೆ ಇನ್ನೊಂದು ಪಂಗಡದ ಕಟ್ಟಳೆಗೂ ಭಿನ್ನವಾಗಿರಬಹುದು, ಕೆಲವೊಮ್ಮೆ ವ್ಯತಿರಿಕ್ತವೂ ಆಗಿರಬಹುದು. ಆದರೆ ಮುಖ್ಯವಾದ ಕಟ್ಟಳೆಗಳೆಲ್ಲಾ ಒಂದೇ ಆಗಿರುತ್ತವೆ. ದೇವನೊಬ್ಬ ನಾಮ ಹಲವು ಎಂಬ ಸೂತ್ರವನ್ನು ಅನುಸರಿಸುವ ಹಿಂದೂಗಳು ತಮ್ಮ ಆರಾಧ್ಯ ದೈವವನ್ನು ಪೂಜಿಸುವ, ಗರ್ಭಗುಡಿಗೆ ಸುತ್ತುಬರುವ, ಕಾಣಿಕೆ ಅರ್ಪಿಸುವ ಮೊದಲಾದ ವಿಧಿಗಳು ಸರಿಸುಮಾರು ಒಂದೇ ಪ್ರಕಾರವಾಗಿವೆ. ಹಿಂದೂ ಪುರಾಣಗಳ ಪ್ರಕಾರ ಮೂವತ್ತಮೂರು ಕೋಟಿ ದೇವತೆಗಳಿದ್ದರೂ ಎಲ್ಲಾ ದೇವರಿಗೆ ಗುಡಿಗಳನ್ನು ಕಟ್ಟಲಾಗಿಲ್ಲ. ಪ್ರಮುಖವಾದ ಕೆಲವು ದೇವರುಗಳಿಗೆ ಗುಡಿಗಳನ್ನು ಕಟ್ಟಲಾಗಿದ್ದು ಸಾವಿರಾರು ವರ್ಷಗಳಿಂದ ಪೂಜೆಗಳನ್ನು ಸಲ್ಲಿಸುತ್ತಾ ಬರಲಾಗಿದೆ.

 

ಜನರು ಈ ದೇವಸ್ಥಾನಕ್ಕೆ ಹೋಗಲು ಭಯಪಡುತ್ತಾರಂತೆ! ಯಾಕೆ ಗೊತ್ತೇ?

ನಮಗೆಲ್ಲಾ ಗೊತ್ತಿರುವ ಹಾಗೆ, ಹಿಂದೂ ಧರ್ಮದಲ್ಲಿ ದೇವಾಲಯಗಳಿಗೆ ಹಚ್ಚಿನ ಪ್ರಾಮುಖ್ಯತೆಯಿದೆ. ಹಿಂದೂಗಳು ದೇವಾಲಯಗಳನ್ನು ತುಂಬಾ ಪವಿತ್ರವೆಂದು ಭಾವಿಸುತ್ತಾರೆ. ದೇವಾಲಯಗಳಿಗೆ ಗೌರವ ಮತ್ತು ಮಹತ್ವ ನೀಡಲಾಗುವುದು. ದೇವರನ್ನು ಪೂಜಿಸಲು ದೇವಾಲಯಗಳು ತುಂಬಾ ಪವಿತ್ರ ಜಾಗವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ಹಿಂದೂ ಧರ್ಮದ ಲಕ್ಷಾಂತರ ದೇವಾಲಯಗಳು ಇವೆ. ಪ್ರತಿಯೊಂದು ದೇವಾಲಯಕ್ಕೂ ಅದರದ್ದೇ ಆಗಿರುವ ಪ್ರಾಮುಖ್ಯತೆಯಿದೆ. ಭಾರತದಲ್ಲಿರುವ ವಿಶೇಷವಾದ ಮಂದಿರವೆಂದರೆ ಡೋಲಾ ಮಾತಾ ಮಂದಿರ. ಇದು ಝುಲಸನ್ ನಲ್ಲಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದಕ್ಕೆ ಓದುತ್ತಾ ಸಾಗಿ.....

ಇಲ್ಲಿರುವ ದೇವತೆ ಮುಸ್ಲಿಂ!

ಇಲ್ಲಿರುವ ದೇವತೆ ಮುಸ್ಲಿಂ!

ಭಾರತದಲ್ಲಿರುವ ಅತ್ಯಂತ ವಿಶೇಷವಾಗಿರುವ ಮಂದಿರವೇ ಡೋಲಾ ಮಾತಾ ಮಂದಿರ. ಇಲ್ಲಿ ಮುಸ್ಲಿಂ ಮಹಿಳೆಯನ್ನು ಪೂಜಿಸಲಾಗುವುದು. ಮುಸ್ಲಿಂ ಮಹಿಳೆಯಾಗಿರುವ ಡೋಲಾ ಇಲ್ಲಿನ ಜನರಿಗೆ ಆಶೀರ್ವಾದ ನೀಡುತ್ತಾಳೆಂದು ನಂಬಲಾಗಿದೆ. ಪುರಾತನ ಕಥೆಗಳ ಪ್ರಕಾರ ಝಲಸನ್ ಮೇಲೆ ದರೋಡೆಕೋರರು ದಾಳಿ ಮಾಡಿದ ಸಂದರ್ಭದಲ್ಲಿ ಡೋಲಾ ಎನ್ನುವ ಮುಸ್ಲಿಂ ಮಹಿಳೆ ಅವರ ವಿರುದ್ಧ ಧೈರ್ಯದಿಂದ ಹೋರಾಡಿದ್ದಳು. ದರೋಡೆಕೋರರ ವಿರುದ್ಧ ಹೆಚ್ಚು ಸಮಯ ಕಾದಾಡಲು ಸಾಧ್ಯವಾಗದೆ ಆಕೆ ಪ್ರಾಣ ಕಳಕೊಂಡಿದ್ದಳು.

ಮಂದಿರ ನಿರ್ಮಿಸಿದರು

ಮಂದಿರ ನಿರ್ಮಿಸಿದರು

ಡೋಲಾ ತನ್ನ ಕೊನೆಯುಸಿರೆಳುತ್ತಿದ್ದಂತೆ ಆಕೆಯ ದೇಹವು ಹೂ ಆಗಿ ಪರಿವರ್ತೆನೆ ಗೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಧೈರ್ಯವಂತೆ ಡೋಲಾಗೆ ಗೌರವ ಸೂಚಕವಾಗಿ ಇಲ್ಲಿನ ಜನರು ಮಂದಿರ ನಿರ್ಮಾಣ ಮಾಡಲು ನಿರ್ಧರಿಸಿದರು. ಇಲ್ಲಿ ಈಗ ಡೋಲಾಳನ್ನು ಪೂಜಿಸಲಾಗುತ್ತದೆ. ಈ ಮಂದಿರವನ್ನು ಡೋಲಾ ಮಾತಾ ಮಂದಿರವೆನ್ನಲಾಗುತ್ತದೆ.

ಯಾವುದೇ ಮೂರ್ತಿಯಿಲ್ಲ
 

ಯಾವುದೇ ಮೂರ್ತಿಯಿಲ್ಲ

ಈ ಮಂದಿರದಲ್ಲಿ ಯಾವುದೇ ರೀತಿಯ ಮೂರ್ತಿಯಿಲ್ಲ. ಆದರೆ ಒಂದು ಕಲ್ಲಿಗೆ ಸೀರೆ ಸುತ್ತಲಾಗಿದೆ. ಈ ಕಲ್ಲನ್ನು ಪವಿತ್ರವೆಂದು ಪರಿಗಣಿಸಿ ಜನರು ಪೂಜಿಸುವರು. ಈ ಮಂದಿರದ ಕಡೆ ಜನರಿಗೆ ಎಷ್ಟರ ಮಟ್ಟಿಗೆ ನಂಬಿಕೆಯಿದೆಯೆಂದರೆ ಸುಮಾರು ನಾಲ್ಕು ಕೋಟಿ ರೂ.ಗಳಲ್ಲಿ ಈ ಮಂದಿರವನ್ನು ಜೀರ್ಣೋದ್ಧಾರ ಮಾಡಲು ಮುಂದಾಗಿದ್ದಾರೆ.

ಈ ಗ್ರಾಮವು ಜನಪ್ರಿಯ

ಈ ಗ್ರಾಮವು ಜನಪ್ರಿಯ

ಗ್ರಾಮವು ಜನಪ್ರಿಯವಾಗಿರುವುದು ಈ ಮಂದಿರದಿಂದ ಮಾತ್ರವಲ್ಲ. ಇದು ಭಾರತದ ಪ್ರಥಮ ಅಂತರಿಕ್ಷ ಯಾನಿ ಸುನಿತಾ ವಿಲಿಯಮ್ಸ್ ಅವರು ಹುಟ್ಟೂರು. ಸುನಿತಾ ವಿಲಿಯಮ್ಸ್ ತನ್ನ ತಂದೆಯೊಂದಿಗೆ ಡೋಲಾ ಮಾತಾ ಮಂದಿರಕ್ಕೆ ಪ್ರಾರ್ಥನೆ ಸಲ್ಲಿಸಲು ಬಂದಾಗ ಈ ಮಂದಿರ ಜನಪ್ರಿಯವಾಗಿತ್ತು. ಸುನಿತಾ ಈ ಸಣ್ಣ ಗ್ರಾಮದಲ್ಲಿ ಜನಿಸಿರುವುದಕ್ಕೆ ಇಲ್ಲಿನ ಜನರು ಹೆಮ್ಮೆ ಪಡುತ್ತಿದ್ದಾರೆ. ಈ ಗ್ರಾಮದಲ್ಲಿ ಸುನಿತಾ ತಂದೆ 22 ವರ್ಷ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಕೆಟ್ಟ ಚಟಗಳನ್ನು ಓಡಿಸಿ, ಮಹಿಳೆಯರನ್ನು ಆರಾಧಿಸುವ ದೇಗುಲವಿದು!

ಮಂದಿರದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಯಾಗುವುದು

ಮಂದಿರದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಯಾಗುವುದು

ವಿದೇಶದಲ್ಲಿ ನೆಲೆಸಿರುವಂತಹ ಈ ಗ್ರಾಮದ ಜನರು ತಮ್ಮ ಇಷ್ಟಾರ್ಥ ಸಿದ್ಧಿಸಿಕೊಳ್ಳಲು ಇಲ್ಲಿ ಪ್ರಾರ್ಥನೆ ಸಲ್ಲಿಸುವರು. ಈ ಗ್ರಾಮದ ಏಳು ಸಾವಿರ ಜನರಲ್ಲಿ ಒಂದುವರೆ ಸಾವಿರ ಜನರು ಅಮೆರಿಕಾದಲ್ಲಿ ವಾಸವಾಗಿದ್ದಾರೆ. ಅವರು ಭಾರತಕ್ಕೆ ಮರಳಿದಾಗ ಡೋಲಾ ಮಾತಾ ಮಂದಿರಕ್ಕೆ ಭೇಟಿ ನೀಡುವರು.

English summary

The Only Indian Temple Where A Muslim Woman Is Worshipped

Temples are respected and valued, as these are the divine places to worship God and are also known to uphold the culture of Hinduism. With millions and millions of temples in India, each one of them has its own significance. One among the unique temples in India is the Dola Mata Mandir, situated in the small village of Jhulasan. So, continue reading to know more on why this temple is so unique.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more