ಬರೋಬ್ಬರಿ 11 ಮಂದಿಯನ್ನು ಮದುವೆಯಾಗಿ ಹಣ ಲೂಟಿ ಮಾಡಿದ ಮಹಿಳೆ!

Posted By: manu
Subscribe to Boldsky

ಶ್ರೀಮಂತರಾಗಲು ಎರಡು ವಿಧವಿದೆ. ಒಂದು ಕಠಿಣ ಪರಿಶ್ರಮ ವಹಿಸಿ, ದುಡಿದು ಹಣ ಸಂಪಾದನೆ ಮಾಡುವುದು ಅಥವಾ ಮೋಸ, ವಂಚನೆ ಮಾಡಿ ಹಣ ಮಾಡಿ ಶ್ರೀಮಂತರಾಗುವುದು. ಮೊದಲನೇ ದಾರಿಯಲ್ಲಿ ಹೋದವರಿಗೆ ಯಾವುದೇ ಭಯವಿರುವುದಿಲ್ಲ. ಆದರೆ ಎರಡನೇ ದಾರಿಯಲ್ಲಿ ಹೋದವರು ಅಂತಿಮವಾಗಿ ಸೇರುವುದು ಜೈಲು.

ಇಲ್ಲೊಬ್ಬಳು ಮಹಿಳೆ ಮದುವೆಯೆಂಬ ಅಸ್ತ್ರ ಬಳಸಿಕೊಂಡು ಹಣಗಳಿಸುವ ಉಪಾಯ ಕಂಡುಕೊಂಡಿದ್ದಾಳೆ. ಧಾಯ್ಲೆಂಡ್‌ನಲ್ಲಿ ಮದುವೆಯಾಗುವ ವರನು ವಧು ದಕ್ಷಿಣೆ ನೀಡುವ ಕಾರಣದಿಂದ ಈ ಮಹಿಳೆಯು ಅದನ್ನೇ ಬಳಸಿಕೊಂಡು ಒಂದು ಡಜನ್‌ನಷ್ಟು ಪುರುಷರನ್ನು ಮದುವೆಯಾಗಿ ವಂಚಿಸಿ ಹಣ ದೋಚಿದ್ದಾಳೆ. ಈ ಕಥೆಯ ಬಗ್ಗೆ ಮತ್ತಷ್ಟು ಓದಿಕೊಳ್ಳಿ...

11 ಪುರುಷರ ಮದುವೆಯಾದ ಮಹಾಮಹಿಳೆ!

11 ಪುರುಷರ ಮದುವೆಯಾದ ಮಹಾಮಹಿಳೆ!

ಪ್ರತೀ ಸಲ ಈ ಮಹಿಳೆ ಮದುವೆಯಾದಾಗ ತನ್ನ ಪತಿಯಿಂದ ಸುಮಾರು 6 ಸಾವಿರ ಡಾಲರ್ ನಿಂದ 30 ಸಾವಿರ ಡಾಲರ್ ತನಕ ಪಡೆದು ಬಳಿಕ ನಾಪತ್ತೆಯಾಗುತ್ತಿದ್ದಳು. ಹೀಗೆ ಪತಿಯನ್ನು ಬಿಟ್ಟು ಹೋಗಲು ಅವಳು ವಿವಿಧ ಕಾರಣ ನೀಡಿದ್ದಾಳೆ.

ಪುರುಷರನ್ನು ಬಿಡಲು ಆಕೆ ನೀಡುತ್ತಿದ್ದ ಕಾರಣಗಳು

ಪುರುಷರನ್ನು ಬಿಡಲು ಆಕೆ ನೀಡುತ್ತಿದ್ದ ಕಾರಣಗಳು

ತನ್ನ ಮನೆಯವರು ನಡೆಸುತ್ತಿರುವಂತಹ ಹಣ್ಣಿನ ವ್ಯಾಪಾರದಲ್ಲಿ ನಾನು ಕೈಜೋಡಿಸಬೇಕಾಗಿದೆ ಎಂದು ಆಕೆ ಒಬ್ಬ ಪುರುಷನೊಂದಿಗೆ ಮಲಗುವಾಗ ಹೇಳಿದರೆ, ನನ್ನ ಜಾತಕವು ಈಗ ಮದುವೆಗೆ ಸರಿಯಾದ ಸಮಯವಲ್ಲವೆಂದು ಹೇಳುತ್ತಿದೆ ಎಂದು ಹೇಳಿ ಇನ್ನೊಬ್ಬ ಪುರುಷನನ್ನು ವಂಚಿಸುತ್ತಿದ್ದಳು. ಎಲ್ಲಾ ಪುರುಷರು ಆಕೆ ಹೆಣೆದ ಬಲೆಗೆ ಬೀಳುತ್ತಾ ಇದ್ದದ್ದು ತುಂಬಾ ವಿಚಿತ್ರವೆನಿಸುತ್ತದೆ.

 ಒಂದೇ ತಿಂಗಳಲ್ಲಿ ನಾಲ್ಕು ಜನರಿಗೆ ಮೋಸ!

ಒಂದೇ ತಿಂಗಳಲ್ಲಿ ನಾಲ್ಕು ಜನರಿಗೆ ಮೋಸ!

ಒಂದೇ ತಿಂಗಳಲ್ಲಿ ಆ ಮಹಿಳೆಯು ನಾಲ್ಕು ಮಂದಿಗೆ ಮೋಸ ಮಾಡಿದ್ದಾಳೆ ಎಂದು ಮೂಲಗಳು ಹೇಳುತ್ತಿವೆ. ಥಾಯ್ಲೆಂಡ್ ನ ಸಂಪ್ರದಾಯದ ಪ್ರಕಾರ ಮದುವೆಯಾಗುವಂತ ವರನು ತನ್ನ ಹುಡುಗಿಗೆ ಪ್ರೀತಿ ಹಾಗೂ ಗೌರವ ರೂಪದಲ್ಲಿ ಹಣ ನೀಡಬೇಕು. ಇದನ್ನೇ ಆ ಮಹಿಳೆಯು ವ್ಯಾಪಾರವಾಗಿ ಮಾಡಿಕೊಂಡಳು.

ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸುದ್ದಿಯು ಕಾಡ್ಗಿಚ್ಚಿನಂತೆ ಹಬ್ಬಿತು

ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸುದ್ದಿಯು ಕಾಡ್ಗಿಚ್ಚಿನಂತೆ ಹಬ್ಬಿತು

ಮಹಿಳೆಯ ಹಿಂದಿರುವ ಮುಖವಾಡ ಕಳಚಿದ ವ್ಯಕ್ತಿಯೊಬ್ಬ ಆಕೆಯ ಮೋಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ.

ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸುದ್ದಿಯು ಕಾಡ್ಗಿಚ್ಚಿನಂತೆ ಹಬ್ಬಿತು

ಸಾಮಾಜಿಕ ಜಾಲತಾಣದಲ್ಲಿ ಆಕೆಯ ಸುದ್ದಿಯು ಕಾಡ್ಗಿಚ್ಚಿನಂತೆ ಹಬ್ಬಿತು

ಇದರಿಂದ ತಾವು ಮೋಸ ಹೋಗಿದ್ದೇವೆ ಎಂದು ಹಲವಾರು ಮಂದಿಗೆ ಅರ್ಥವಾಯಿತು. ಆಕೆಯ ವಿರುದ್ಧ ದೂರು ದಾಖಲಾಗಿದೆ ಮತ್ತು ಇದರ ಬಳಿಕ ಆಕೆಯನ್ನು ಬಂಧಿಸಲಾಗಿದೆ.

Image Courtesy

English summary

Thai Woman Who Married 11 Men And Conned Them!

Everybody wishes to have a great life and to see it happen, people do a lot many things. Some work hard to make their dreams come true, while some choose the smart way out! This is one such case where a woman decided to fool men by marrying them and running away with the dowry money that she received in the wedding as a Thai ritual from the bridegroom. Check out the story of this con lady.