ಗರ್ಭಿಣಿಯರಿಗೆ ಹಾವಿನ ಕನಸು ಬಿದ್ದರೆ, ಅದರ ಹಿಂದಿನ ರಹಸ್ಯ...

Posted By: Lekhaka
Subscribe to Boldsky

ಕನಸುಗಳು ಸುಪ್ತ ಮನಸ್ಸಿನಲ್ಲಿರುವ ಭಾವನೆಗಳು ಎಂದು ಹೇಳಲಾಗುತ್ತದೆ. ನಮ್ಮ ಒಳಮನಸ್ಸಿನಲ್ಲಿ ಯಾವೆಲ್ಲಾ ಆಸೆಗಳು ಈಡೇರಿವುದಿಲ್ಲವೋ ಅಥವಾ ನಾವು ಯಾವುದು ಬೇಕೆಂದು ಬಯಸುತ್ತೇವೆಯೋ, ಯಾವುದಕ್ಕೆ ಹೆದರಿತ್ತೆವೆವೋ ಅದೆಲ್ಲವೂ ನಮ್ಮ ಕನಸಿನ ರೂಪದಲ್ಲಿ ಬರುವುದು. ಆದರೆ ಕನಸಿಗೂ ತನ್ನದೇ ಆಗಿರುವ ಅರ್ಥಗಳು ಇವೆ ಎಂದು ಭಾರತೀಯರು ಹೇಳುತ್ತಾರೆ. ಅದರಲ್ಲೂ ಮುಂಜಾನೆ ಸಮಯದಲ್ಲಿ ಬೀಳುವಂತಹ ಕನಸುಗಳು ನನಸಾಗುವುದು ಎನ್ನುವುದು ಭಾರತೀಯರ ನಂಬಿಕೆ.

ಕಾಡು, ಸಂಭ್ರಮದ ಕಾರ್ಯಕ್ರಮ, ಪಕ್ಷಿಗಳು ಹಾಗೂ ಪ್ರಾಣಿಗಳ ಕನಸುಗಳಿಗೆ ತನ್ನದೇ ಆಗಿರುವ ಅರ್ಥವಿದೆ. ಕನಸಿನಲ್ಲಿ ಹಾವು ಬರುವುದಕ್ಕೆ ವಿಶೇಷವಾದ ಅರ್ಥವಿದೆ. ಅದರಲ್ಲೂ ವಿಶೇಷವಾಗಿ ಗರ್ಭಿಣಿಯರಿಗೆ. ಗರ್ಭಿಣಿಯರಿಗೆ ಹಾವಿನ ಕನಸು ಬಿದ್ದರೆ ಅದು ಮೇಲಿನಿಂದ ಬಂದಿರುವ ಸಂದೇಶವೆಂದು ತಿಳಿಯಬೇಕು. ಗರ್ಭಧಾರಣೆಯ ವೇಳೆ ನಿಮಗೆ ಧನಾತ್ಮಕ ಅಥವಾ ಋಣಾತ್ಮಕವಾಗಿರುವುದು ಏನಾದರೂ ಆಗಬಹುದು. ವಿವಿಧ ಬಣ್ಣಗಳ ಹಾವಿನ ಕನಸುಗಳು ಗರ್ಭಿಣಿಯರ ಜೀವನದಲ್ಲಿ ಏನು ಹೇಳುತ್ತದೆ ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.... 

ಹಸಿರು ಹಾವು

ಹಸಿರು ಹಾವು

ಗರ್ಭಿಣಿ ಮಹಿಳೆಯರಿಗೆ ತಮ್ಮ ಕನಸಿನಲ್ಲಿ ಹಸಿರು ಹಾವು ಕಂಡುಬಂದರೆ ಗರ್ಭದಲ್ಲಿರುವ ಭ್ರೂಣವು ಆರೋಗ್ಯವಾಗಿ ಬೆಳವಣಿಗೆಯಾಗುತ್ತಿದೆ ಎಂದು ತಿಳಿದುಕೊಳ್ಳಬಹುದು. ನೀವು ಇದರಿಂದ ತುಂಬಾ ಸಂತೋಷವಾಗಿರಬಹುದು.

ಕೆಂಪು ಹಾವು ಬರುವುದು

ಕೆಂಪು ಹಾವು ಬರುವುದು

ಗರ್ಭಿಣಿ ಮಹಿಳೆಗೆ ಕನಸಿನಲ್ಲಿ ಕೆಂಪು ಹಾವು ಕಂಡುಬಂದರೆ ಮುಂಬರುವ ದಿನಗಳಲ್ಲಿ ಸ್ನೇಹಿತರು ಅಥವಾ ಸಂಬಂಧಿಗಳು ಮದುವೆಯಾಗಲಿದ್ದಾರೆ ಎಂದು ಅರ್ಥ ಬರುವುದು. ಇದನ್ನು ಸ್ವಲ್ಪ ವಿಸ್ತಾರವಾಗಿ ನೋಡಿದರೆ ಇದು ಗರ್ಭಿಣಿ ಮಹಿಳೆಯರಿಗೆ ತುಂಬಾ ಅದೃಷ್ಟವೆಂದು ನಂಬಲಾಗಿದೆ.

ಕಪ್ಪು ಹಾವು

ಕಪ್ಪು ಹಾವು

ಗರ್ಭಿಣಿ ಮಹಿಳೆಗೆ ಕಪ್ಪು ಹಾವು ಅಥವಾ ದೊಡ್ಡ ಹಾವು ಕನಸಿನಲ್ಲಿ ಬಂದರೆ ಆಗ ಆಕೆಗೆ ಗಂಡು ಮಗು ಆಗಲಿರುವ ಸೂಚನೆಯಿದು. ಹಾವು ಬಾವಿಯೊಳಗೆ ಇರುವುದು ಕನಸಿನಲ್ಲಿ ಕಂಡುಬಂದರೆ ಆಗ ಮಗು ದೇವರ ಸಂಪೂರ್ಣ ಆಶೀರ್ವಾದ ಪಡೆದಿದೆ ಎಂದರ್ಥ.

ಬಿಳಿ ಹಾವು

ಬಿಳಿ ಹಾವು

ಗರ್ಭಿಣಿ ಮಹಿಳೆಗೆ ತನ್ನ ಕೈಯಲ್ಲಿ ಬಿಳಿ ಹಾವು ಇರುವ ಬಗ್ಗೆ ಕನಸು ಬಿದ್ದರೆ ಆಗ ಆಕೆಗೆ ಹೆಣ್ಣು ಮಗು ಆಗುತ್ತದೆ ಎಂದು ಅರ್ಥ ಕಲ್ಪಿಸಬಹುದು. ಇದು ವಿಚಿತ್ರವಾಗಿದೆ. ಆದರೆ ಜನರು ಇಂತಹ ಸಂಕೇತಗಳನ್ನು ನಂಬುವರು.

ಹಾವು ಕಡಿದರೆ

ಹಾವು ಕಡಿದರೆ

ಕನಸಿನಲ್ಲಿ ಮಹಿಳೆಗೆ ಹಾವು ಕಡಿಯುವುದು ಕಂಡುಬಂದರೆ ಇದು ತುಂಬಾ ಫಲಪ್ರದ ಮತ್ತು ಸಂತೋಷವೆಂದು ನಂಬಲಾಗಿದೆ. ಹಾವು ಕಡಿಯವುದು ತುಂಬಾ ಶುಭವೆಂದು ನಂಬುವಂತಹ ಅಪರೂಪದಲ್ಲಿ ಅಪರೂಪದ ಘಟನೆ ಇದು.

ಲೈಂಗಿಕ ಶಕ್ತಿಗಿಂತ ಹೆಚ್ಚಿನದ್ದು

ಲೈಂಗಿಕ ಶಕ್ತಿಗಿಂತ ಹೆಚ್ಚಿನದ್ದು

ಹಾವುಗಳು ಕನಸಿನಲ್ಲಿ ಬಂದರೆ ಅದು ಲೈಂಗಿಕ ಶಕ್ತಿಯ ಪ್ರತೀಕವೆಂದು ನಂಬಲಾಗುತ್ತದೆ. ಕನಸಿನಲ್ಲಿ ನಿಮ್ಮ ಜತೆ ಹಾವು ಹೊರಲಾಡಿದರೆ ಅಥವಾ ಉದ್ರೇಕಿಸುವಂತಹ ಭಂಗಿಯಲ್ಲಿ ಕಂಡುಬಂದರೆ ಇದಕ್ಕೆ ಬೇರೆ ಹಲವಾರು ರೀತಿಯ ಕಾರಣಗಳು ಇವೆ. ಅದು ಯಾವುದೆಂದು ನೀವು ತಿಳಿಯಿರಿ.

ಹೊಸ ದಾರಿ

ಹೊಸ ದಾರಿ

ಶತಮಾನಗಳಿಂದಲೂ ಹಾವುಗಳಿಗೆ ಬುದ್ದಿವಂತಿಕೆ ಮತ್ತು ಚಿಕಿತ್ಸೆಗೆ ಸಂಬಂಧ ಕಲ್ಪಿಸಲಾಗಿದೆ. ಕನಸಿನಲ್ಲಿ ಹಾವುಗಳು ಬರುವುದು ವೈಯಕ್ತಿಕ ಬದಲಾವಣೆಯ ಬಲವಾದ ಸೂಚನೆಯಾಗಿದೆ. ಚಿಕಿತ್ಸೆಯು ಒಂದು ಆರಂಭವಷ್ಟೇ. ಹಾವಿನ ಕನಸುಗಳು ನಿಮಗೆ ತುಂಬಾ ಆತಂಕವನ್ನು ಉಂಟು ಮಾಡಬಹುದು. ಅದರೆ ನಿಮ್ಮ ಕಷ್ಟ ಹಾಗೂ ಕೆಲವೊಂದು ಕಟ್ಟುಪಾಡುಗಳನ್ನು ಬಿಟ್ಟು ಮುಂದೆ ಸಾಗಲು ಇದು ಸೂಚನೆಯಾಗಿದೆ.

ನಿಮಗೆ ಎಚ್ಚರಿಕೆ ನೀಡುತ್ತಿರಬಹುದು!

ನಿಮಗೆ ಎಚ್ಚರಿಕೆ ನೀಡುತ್ತಿರಬಹುದು!

ಹಾವುಗಳು ನಿಮಗೆ ಕೆಲವೊಂದು ಸಲ ಅಚ್ಚರಿ ಉಂಟುಮಾಡಬಹುದು. ಯಾಕೆಂದರೆ ಅವು ರಹಸ್ಯಗಳಿಗೆ ಸಂಬಂಧಿಸಿದ್ದಾಗಿದೆ. ಹುಲ್ಲಿನಲ್ಲಿ ಹಾವು ಕಂಡುಬಂದರೆ ನೀವು ಯಾರನ್ನು ನಂಬಬಾರದು, ಆತ ನಿಮಗೆ ಮೋಸ ಮಾಡಬಹುದು ಅಥವಾ ಕೆಲವೊಂದು ರಹಸ್ಯ ಮುಚ್ಚಿಡಬಹುದು ಎನ್ನುವುದರ ಸೂಚನೆಯಾಗಿದೆ. ಇದು ಬೇರೆ ಯಾರು ಆಗಿರಲಿಕ್ಕಿಲ್ಲ. ನಿಮಗೆ ಸತ್ಯ ಗೊತ್ತಿರಬಹುದು. ಆದರೆ ಅದನ್ನು ಕಡೆಗಣಿಸುತ್ತಿರಬಹುದು.

ಗೌಪ್ಯವಾದ ಆಕಾಂಕ್ಷೆಗಳಿವೆಯಾ?

ಗೌಪ್ಯವಾದ ಆಕಾಂಕ್ಷೆಗಳಿವೆಯಾ?

ಕನಸಿನಲ್ಲಿ ಹಾವು ಕಂಡುಬಂದರೆ ಭಯಭೀತರಾಗುವುದು ಸಹಜ. ಯಾಕೆಂದರ ಅವುಗಳು ಉಂಟು ಮಾಡುವ ಬದಲಾವಣೆ ಹಾಗೂ ಅವುಗಳಲ್ಲಿರುವ ಶಕ್ತಿ. ಮೇಲೆದ್ದು ಬರುವಂತಹ ಹಾವು, ಮಲಗಿದ್ದ ಹಾವು ಎದ್ದು ಬರುವುದು ಇವುಗಳು ನಿಮ್ಮ ಜೀವನದಲ್ಲಿ ಮತ್ತೆ ಶಕ್ತಿಯು ಹರಿದುಬರಲಿದೆ, ನಿಮ್ಮ ಆಕಾಂಕ್ಷೆಗಳಿಗೆ ಪ್ರೇರಣಿಯಾಗಲಿದೆ ಎಂದರ್ಥ.

ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತ

ಆಧ್ಯಾತ್ಮಿಕ ಬೆಳವಣಿಗೆಯ ಸಂಕೇತ

ಕನಸಿನಲ್ಲಿ ಹಾವು ಕಂಡುಬಂದರೆ ಅದು ಕುಂಡಲಿನ ಜಾಗೃತವಾದ ಸಂಕೇತವೆಂದು ಪಾಶ್ಚಿಮಾತ್ಯರು ನಂಬಿದ್ದಾರೆ. ಶಕ್ತಿಯು ನಿಮ್ಮ ಬೆನ್ನು ಮೂಳೆಯ ಮೂಲಕ ತಲೆ ಹೋಗುವುದು ಇದು ಆಧ್ಯಾತ್ಮಿಕತೆಯ ಶಕ್ತಿ ಎಚ್ಚರವಾಗುವುದು ಎನ್ನಲಾಗುತ್ತದೆ. ಕನಸಿನಲ್ಲಿ ಹಾವು ಬಂದರೆ ಅದು ನಿಮ್ಮನ್ನು ನಾಶ ಮಾಡುವುದಕ್ಕಿಂತ ಹೆಚ್ಚು ಒಳ್ಳೆಯದು ಮಾಡಲಿದೆ. ಆದರೆ ಆಯ್ಕೆ ನಿಮಗೆ ಬಿಟ್ಟಿರುವುದು.

ಕನಸಿನಲ್ಲಿ ಹಾವು ಬರುವುದು ಸುಪ್ತತೆ ಸಂಕೇತ

ಕನಸಿನಲ್ಲಿ ಹಾವು ಬರುವುದು ಸುಪ್ತತೆ ಸಂಕೇತ

ನಿಮ್ಮ ಜೀವನದಲ್ಲಿರುವ ತುಂಬಾ ಕಷ್ಟದ ಪರಿಸ್ಥಿತಿ ಅಥವಾ ತಡೆದುಕೊಳ್ಳಲಾರದೆ ಇರುವಂತಹ ಭಾವನೆಗಳು ಸುಪ್ತ ಮನಸ್ಸಿನಿಂದ ಹೊರಬರುವುದು. ಹಾವುಗಳ ಧನಾತ್ಮಕವಾಗಿ ನೋಡಿದಾಗ ಇದೆಲ್ಲವೂ ನಿಮಗೆ ಚಿಕಿತ್ಸೆ ನೀಡಿ ನಿಮ್ಮನ್ನು ಜೀವನದಲ್ಲಿ ಮುಂದುವರಿಯುವಂತೆ ಮಾಡುವುದು.

ಹಾವುಗಳೊಂದಿಗೆ ನಿಮ್ಮ ವೈಯಕ್ತಿಕ ಸಮೀಕರಣ

ಹಾವುಗಳೊಂದಿಗೆ ನಿಮ್ಮ ವೈಯಕ್ತಿಕ ಸಮೀಕರಣ

ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಕನಸಿನಲ್ಲಿ ಬರುವ ಪ್ರಾಣಿಯೆಂದರೆ ಅದು ಹಾವು. ಹಾವುಗಳು ತುಂಬಾ ಕ್ಲಿಷ್ಟವಾದ ಸಂಕೇತಗಳು. ಯಾಕೆಂದರೆ ಇದರಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಎರಡೂ ಇದೆ. ಕನಸಿನಲ್ಲಿ ಹಾವು ಕಂಡುಬಂದರೆ ಆಗ ಹಾವುಗಳೊಂದಿಗೆ ನಿಮ್ಮ ವೈಯಕ್ತಿಕ ಅನುಭವ ಹೇಗಿದೆ ಮತ್ತು ನಿಮ್ಮ ಸಂಸ್ಕೃತಿಯಲ್ಲಿ ಅದನ್ನು ಹೇಗೆ ನೋಡಿಕೊಳ್ಳಲಾಗುವುದು ಎಂದು ಅರ್ಥ ಮಾಡಿಕೊಳ್ಳಬೇಕು. ನೀವು ಹಾವನ್ನು ಮನೆಯಲ್ಲಿ ಸಾಕುತ್ತಲಿದ್ದರೆ ಆಗ ನಿಮಗೆ ಬೀಳುವ ಕನಸಿಗೆ ಬೇರೆ ಅರ್ಥವಿದೆ. ಅದೇ ಹಾವು ನೋಡಿ ಭಯಭೀತನಾಗುವವನಿಗೆ ಬೀಳುವ ಕನಸಿಗೆ ಬೇರೆಯದ್ದೇ ಅರ್ಥವಿದೆ.

ಹಾವುಗಳು ಭೀತಿ ಉಂಟು ಮಾಡುವುದು

ಹಾವುಗಳು ಭೀತಿ ಉಂಟು ಮಾಡುವುದು

ಹೆಚ್ಚಿನವರಿಗೆ ಹಾವುಗಳನ್ನು ಕಂಡರೆ ತುಂಬಾ ಭಯವಿರುತ್ತದೆ. ಯಾಕೆಂದರೆ ಹಾವುಗಳನ್ನು ಊಹಿಸಲು ಸಾಧ್ಯವಿಲ್ಲ. ಅವು ಯಾವುದೇ ಸಂದರ್ಭದಲ್ಲೂ ದಾಳಿ ಮಾಡಬಹುದು. ಕನಸಿನಲ್ಲಿ ಹಾವು ಕಂಡುಬಂದರೆ ನಿಮ್ಮ ಜೀವನದಲ್ಲಿ ಏನೋ ಅನಿರೀಕ್ಷಿತ ಅಥವಾ ನಿಮ್ಮ ನಿಯಂತ್ರಣದಲ್ಲಿ ಇರದೆ ಆಗುವಂತಹ ಚಟುವಟಿಕೆ ಸೂಚನೆಯಾಗಿರಬಹುದು. ನಿಮಗೆ ಅಪರಿಚಿತರ ಬಗ್ಗೆ ಭೀತಿಯಿರಬಹುದು.

English summary

Snake Dreams During Pregnancy Have A Secret Message!

Just like any other animal-related dreams, dreaming of snakes can have a wide variety of meanings, especially for pregnant women.If a woman dreams about snakes during pregnancy, it means that it is a sign from above. It can be a warning about the potential events that can affect your pregnancy in a positive or a negative way. So, check out what do the different coloured snakes and other snake-related dreams during pregnancy signify, as the colour of the slithering creature can affect the overall explanation.
Story first published: Wednesday, November 22, 2017, 23:31 [IST]
Please Wait while comments are loading...
Subscribe Newsletter