ಆರ್ಥಿಕ ನಷ್ಟಕ್ಕೆ ಒಳಗಾಗುವ ಸುಳಿವುಗಳು! ನಿಮಗೂ ತಿಳಿದಿರಲಿ....

By: manu
Subscribe to Boldsky

ಜೀವನದಲ್ಲಿ ಕಷ್ಟನಷ್ಟಗಳು ಇದ್ದೇ ಇರುತ್ತದೆ. ಅದರಲ್ಲೂ ಆರ್ಥಿಕ ನಷ್ಟ ಉಂಟಾದಾಗ ಜೀವನವೇ ಅಲ್ಲೋಲಕಲ್ಲೋಲವಾಗುತ್ತದೆ. ಇಂತಹ ಸಮಯದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ ಅದು ವ್ಯತಿರಿಕ್ತವಾಗಿ ಕೆಲಸ ಮಾಡುತ್ತದೆ. ಆರ್ಥಿಕ ನಷ್ಟವು ಜೀವನವನ್ನೇ ಬದಲಾಯಿಸಿ ಬಿಡಬಲ್ಲದು.

ಕೆಲವರು ವ್ಯಾಪಾರದಲ್ಲಿ ಹೂಡಿಕೆಯಿಂದ ಆರ್ಥಿಕ ನಷ್ಟವನ್ನು ಅನುಭವಿಸಿದರೆ ಇನ್ನು ಕೆಲವು ಮಂದಿ ಅತಿಯಾದ ಶೋಕಿಯಿಂದ ಆರ್ಥಿಕ ನಷ್ಟಕ್ಕೆ ಗುರಿಯಾಗುತ್ತಾರೆ. ವ್ಯಕ್ತಿಯೊಬ್ಬ ಆರ್ಥಿಕ ನಷ್ಟಕ್ಕೆ ಗುರಿಯಾಗುವ ಲಕ್ಷಣಗಳು ಯಾವುದು ಎಂದು ಈ ಲೇಖನದ ಮೂಲಕ ತಿಳಿಸಿ ಕೊಡಲಾಗುತ್ತದೆ. ನಿಮಗೆ ಈ ಸುಳಿವು ಕಾಣಿಸಿಕೊಂಡರೆ ಆಗ ಆರ್ಥಿಕ ನಷ್ಟ ಉಂಟಾಗುವುದನ್ನು ತಡೆಯುವಂತಹ ಪ್ರಯತ್ನ ಮಾಡಬಹುದು. ಆರ್ಥಿಕ ನಷ್ಟವಾಗುವ ಲಕ್ಷಣಗಳು ಯಾವುದು ಎಂದು ತಿಳಿಯುವ....  

1#

1#

ನೀರು ಮತ್ತು ವಿದ್ಯುತ್ ಉಪಕರಣಗಳು ಪದೇ ಪದೇ ರಿಪೇರಿಗೆ ಬಂದರೆ ಮುಂದೆ ನಿಮಗೆ ಆರ್ಥಿಕ ಸಂಕಷ್ಟ ಎದುರಾಗಲಿದೆ ಎನ್ನುವ ಸೂಚನೆ ಇದಾಗಿದೆ.

2#

2#

ಕೊನೇ ಕ್ಷಣದಲ್ಲಿ ಉತ್ತಮ ಅವಕಾಶಗಳು ನಿಮ್ಮ ಕೈಜಾರುತ್ತಾ ಇದ್ದರೆ ಆಗ ಆರ್ಥಿಕ ಸಂಕಷ್ಟವು ನಿಮಗೆ ಎದುರಾಗಲಿದೆ ಎಂದು ಹೇಳಬಹುದು.

3#

3#

ಸಾಮಾನ್ಯಕ್ಕಿಂತ ಹೆಚ್ಚಾಗಿ ಮತ್ತು ಪದೇ ಪದೇ ನಿಮ್ಮ ಜತೆಗಾರರೊಂದಿಗೆ ಜಗಳವಾಗುತ್ತಾ ಇದ್ದರೆ ಹಠಾತ್ ಆಗಿ ಆರ್ಥಿಕ ನಷ್ಟಕ್ಕೆ ಒಳಗಾಗಲಿದ್ದೀರಿ ಎನ್ನುವ ಸೂಚನೆಯಿದು.

4#

4#

ಹಠಾತ್ ಆಗಿ ಆರ್ಥಿಕ ನಷ್ಟಕ್ಕೆ ಗುರಿಯಾಗುವ ವ್ಯಕ್ತಿಯ ದೇಹವು ಸಾಮಾನ್ಯಕ್ಕಿಂತ ಹೆಚ್ಚಾಗಿ ಎಂಜಲನ್ನು ಹೀರಿಕೊಳ್ಳುತ್ತದೆ ಮತ್ತು ಮಾತನಾಡುವಾಗಲು ಹೆಚ್ಚಿನ ಎಂಜಲು ಹೀರಿಕೊಳ್ಳುತ್ತದೆ.

5#

5#

ಯಾವಾಗಲೂ ಅನಾರೋಗ್ಯದಿಂದ ಇರುವುದು ಅಥವಾ ಆರೋಗ್ಯವು ಹಠಾತ್ ಆಗಿ ಕೈಕೊಡುವುದರಿಂದ ಮುಂದೆ ನಿಮಗೆ ಆರ್ಥಿಕ ಸಂಕಷ್ಟವು ಎದುರಾಗಲಿದೆ ಎನ್ನುವುದರ ಲಕ್ಷಣವಾಗಿದೆ. ಯಾವುದೇ ಕಾರಣವಿಲ್ಲದೆ ಆತಂಕಕ್ಕೆ ಒಳಗಾಗುವುದು ಅಥವಾ ಹೊಟ್ಟೆ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುವುದು.

6#

6#

ಸಾಕು ಪ್ರಾಣಿಯು ಸಾವನ್ನಪ್ಪುವುದು ಕೂಡ ಆರ್ಥಿಕ ಸಂಕಷ್ಟದ ಸುಳಿವಾಗಿದೆ.

7#

7#

ಬೆರಳಿನ ಸೂರ್ಯನ ಆರೋಹಣದಿಂದ ಕಪ್ಪು ಮಚ್ಚೆಯು ಆರಂಭವಾಗುತ್ತಾ ಇದ್ದರೆ ಇದು ಆರ್ಥಿಕ ಸಂಕಷ್ಟ ಎದುರಾಗುವ ಲಕ್ಷಣವಾಗಿದೆ.

8#

8#

ಯಾವುದೇ ಟ್ಯಾಂಕ್‌ಗಳು ಇಲ್ಲದೆಯೂ ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಾ ಇದ್ದರೆ ಇದು ಹಣ ಕೈಜಾರಿ ಹೋಗುವ ಸುಳಿವಾಗಿದೆ.

9#

9#

ನೀವು ಚಿನ್ನವನ್ನು ಕಳೆದುಕೊಳ್ಳುವುದು ನಿಮ್ಮ ಸ್ನೇಹಿತರು, ವ್ಯಾಪಾರದ ಜತೆಗಾರ ಅಥವಾ ಸಂಬಂಧಿಕರಿಂದ ಹಣದ ವಿಚಾರದಲ್ಲಿ ಮೋಸ ಹೋಗುತ್ತೀರಿ ಎನ್ನುವ ಸುಳಿವಾಗಿದೆ.

10#

10#

ಹಠಾತ್ ಆಗಿ ಕಾರಣವಿಲ್ಲದೆ ಮನೆಯಲ್ಲಿ ಎಣ್ಣೆಯು ಸೋರಿಕೆಯಾದರೆ ಇದು ಸಾಲ ಮಾಡುವ ಪರಿಸ್ಥಿತಿಯ ಸುಳಿವಾಗಿದೆ ಎಂದು ಪುರಾತನ ಗ್ರಂಥಗಳು ಹೇಳುತ್ತವೆ.

English summary

Signs You Are Going To Face Financial Losses!

In this article, we are here to share about some of the signs which reveal on how a person would face financial losses. These are the signs that are a giveaway about the actual financial loss that can be curbed at the right time if these signs are noticed initially. Check them out.
Subscribe Newsletter