ಕೊನೆಗೂ ಆತ ಮೂಗನ್ನೇ ಕಳೆದುಕೊಂಡ ಹುಡುಗಿಯನ್ನೇ ಮದುವೆಯಾದ!

By: Hemanth
Subscribe to Boldsky

ಪ್ರೀತಿ ಕುರುಡು ಎನ್ನುವ ಮಾತಿದೆ. ಅದು ನಿಜವಾಗುವುದು ಕೆಲವೊಂದು ಘಟನೆಗಳ ಬಗ್ಗೆ ನಾವು ಕೇಳಿದಾಗ. ಕೆಲವರು ಕಾಲಿಲ್ಲದ ಹುಡುಗಿಯನ್ನು ಮದುವೆಯಾದರೆ, ಇನ್ನು ಕೆಲವರು ಬಾಯಿ ಬರದೆ ಇರುವ ಹುಡುಗನನ್ನು ಮದುವೆಯಾದ ಬಗ್ಗೆ ನಾವು ಕೇಳಿದ್ದೇವೆ. ಇಂತಹ ಒಂದು ಘಟನೆ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದ್ದೇವೆ. ಕಣ್ಣಲ್ಲಿ ಕಣ್ಣೀರು ತರಿಸುವ ಪ್ರೇಮಿಗಳ 'ಪ್ರೇಮ ಕಥೆ' ಇದು.....

ಹುಟ್ಟಿದ 29 ದಿನಗಳಲ್ಲಿ ತನ್ನ ಮೂಗನ್ನು ಕಳಕೊಂಡು ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾದ ಕಥೆಯಿದು. ಇದು ನಡೆದಿರುವುದು ನಮ್ಮ ನೆರೆಯ ರಾಷ್ಟ್ರ ಚೀನಾದಲ್ಲಿ. ಇದರ ಬಗ್ಗೆ ಇನ್ನೂ ಹೆಚ್ಚು ತಿಳಿಯಬೇಕೆಂದರೆ ಮುಂದಕ್ಕೆ ಓದುತ್ತಾ ಸಾಗಿ. ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು

ಲಿನ್ ಝುಕ್ವಿಯಾಂಗ್(23) ಮತ್ತು ಆತನ ಪತ್ನಿ ಕ್ಸೂ ಕ್ವಿನ್ ಕ್ವಿನ್ ಇಂಟರ್ನೆಟ್ ನಲ್ಲಿ ಚಾಟಿಂಗ್ ಮಾಡುತ್ತಾ ಪ್ರೇಮಲೋಕದಲ್ಲಿ ಮುಳುಗಿ ಹೋದರು. ಕ್ಸೂಗೆ ಮೂಗು ಇರಲಿಲ್ಲವೆನ್ನುವ ಸಮಸ್ಯೆಯೇ ಅವನಿಗೆ ಕಾಣಿಸಲಿಲ್ಲ.....  

ಒಂದು ತಿಂಗಳ ಮಗುವಿರುವಾಗಲೇ ದುರ್ಘಟನೆ ನಡೆಯಿತು

ಒಂದು ತಿಂಗಳ ಮಗುವಿರುವಾಗಲೇ ದುರ್ಘಟನೆ ನಡೆಯಿತು

ಇನ್ನು ಮಗುವಿಗೆ ಒಂದು ತಿಂಗಳು ಕೂಡ ಆಗಿರಲಿಲ್ಲ. ಆಗ ಅಕೆಯ ತಾಯಿ ಒಂದು ಬಾಸ್ಕೆಟ್ ನಲ್ಲಿ ಮಗುವನ್ನು ಹಾಕಿ ಕೋಣೆಯಲ್ಲಿಟ್ಟು ಕೆಲಸಕ್ಕೆ ಹೋದಳು. ಈ ವೇಳೆ ಮಗುವಿನ ಮೂಗನ್ನು ಇಲಿ ಕಚ್ಚಿತ್ತು.

ಗೇಲಿ ಮಾಡುತ್ತಲಿದ್ದರು

ಗೇಲಿ ಮಾಡುತ್ತಲಿದ್ದರು

ಶಾಲೆಯಲ್ಲಿ ಆಕೆಯ ಸಹಪಾಠಿಗಳು ಆಕೆಯನ್ನು ಗೇಲಿ ಮಾಡುತ್ತಾ ಇದ್ದರು. ಇದರಿಂದ 6ನೇ ತರಗತಿಯಲ್ಲಿ ಆಕೆ ಶಾಲೆ ಬಿಟ್ಟುಬಿಟ್ಟಳು. 17ರ ಹರೆಯದಲ್ಲಿ ಒಂದು ಸಣ್ಣ ಕೆಲಸವನ್ನು ಆಯ್ದುಕೊಂಡರೂ ಆಕೆಯ ಸಹೋದ್ಯೋಗಿಗಳು ಮಾತ್ರ ಗೇಲಿ ಮಾಡುತ್ತಾ ಇದ್ದರು.

18ರ ಹರೆಯದಲ್ಲಿ ಮದುವೆಯಾದಳು

18ರ ಹರೆಯದಲ್ಲಿ ಮದುವೆಯಾದಳು

ಮೂಗು ಕಳಕೊಂಡ ಕಾರಣದಿಂದಾಗಿ ಆಕೆಗೆ ಸರಿಯಾದ ವರ ಕೂಡ ಸಿಗುತ್ತಾ ಇರಲಿಲ್ಲ. 18ರ ಹರೆಯದಲ್ಲಿ ಆಕೆಗಿಂತ 8 ವರ್ಷ ಹಿರಿಯನಾಗಿರುವವನೊಂದಿಗೆ ಮದುವೆಯಾಯಿತು. ಆದರೆ ಕೇವಲ 2 ವರ್ಷದಲ್ಲಿ ಅವರಿಬ್ಬರು ಡೈವೋರ್ಸ್ ಪಡೆದರು. ಆಕೆಯ ಸೌಂದರ್ಯವನ್ನು ನೋಡಿ ಪತಿ ಹಾಗೂ ಆಕೆಯ ಮನೆಯವರು ಯಾವಾಗಲೂ ಗೇಲಿ ಮಾಡುತ್ತಾ ಇದ್ದರು.

ಎಲ್ಲವನ್ನೂ ಮೀರಿ ನಿಲ್ಲಬೇಕೆಂದು ಬಯಸಿದಳು

ಎಲ್ಲವನ್ನೂ ಮೀರಿ ನಿಲ್ಲಬೇಕೆಂದು ಬಯಸಿದಳು

ಆಕೆಯನ್ನು ಗೇಲಿ ಮಾಡುತ್ತಾ ಇದ್ದ ಕಾರಣ ಮತ್ತು ತಿರಸ್ಕರಿಸುತ್ತಾ ಇದ್ದುದರಿಂದ ಆಕೆ ಹೊರಜಗತ್ತಿನಿಂದ ಎಲ್ಲಾ ಸಂಪರ್ಕವನ್ನು ಕಡಿದುಕೊಳ್ಳಲು ಬಯಸಿದಳು. ಇದರ ಬಳಿಕ ಆಕೆ ಕೇವಲ ಇಂಟರ್ನೆಟ್ ನಲ್ಲಿ ಮುಳುಗಿ ಹೋದಳು.

ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾದರು

ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾದರು

ಆಕೆ ಒಂದು ಸಾಮಾಜಿಕ ಜಾಲತಾಣದಲ್ಲಿ ಲಿನ್‌ನನ್ನು ಭೇಟಿಯಾದಳು. ಆಕೆ ತನ್ನ ಮುಖವನ್ನು ಮುಚ್ಚುತ್ತಾ ಮಾತುಕತೆ ನಡೆಸುತ್ತಾ ಇದ್ದಳು. ಆದರೆ ತನ್ನ ಮೂಗಿಗೆ ಏನಾಗಿದೆ ಎಂದು ಆತನಿಗೆ ತಿಳಿಯಬೇಕು ಎಂದು ಬಯಸಿದಳು. ಇದರಿಂದ ಆಕೆ ತನ್ನ ಬಗ್ಗೆ ಎಲ್ಲವನ್ನು ಹೇಳಿದಳು. ಆದರೆ ಆಕೆಯ ನಡತೆ, ಸಂತೋಷ ಮತ್ತು ಒಳ್ಳೆಯ ಮನಸ್ಸನ್ನು ನೋಡಿ ಲಿನ್ ಮೊದಲೇ ಮರುಳಾಗಿದ್ದ.

ಅವರಿಬ್ಬರು ಪ್ರೀತಿಯಲ್ಲಿ ಮುಳುಗಿದರು

ಅವರಿಬ್ಬರು ಪ್ರೀತಿಯಲ್ಲಿ ಮುಳುಗಿದರು

ಮೊದಲ ಸಲ ಅವರಿಬ್ಬರು ಭೇಟಿಯಾದ ಒಂದು ತಿಂಗಳ ಬಳಿಕ ಅವರಿಬ್ಬರು ಮದುವೆಯಾದರು.

ಆತನಿಗೆ ಕುಟುಂಬದವರನ್ನು ಒಪ್ಪಿಸಲು ಕಷ್ಟವಾಯಿತು

ಆತನಿಗೆ ಕುಟುಂಬದವರನ್ನು ಒಪ್ಪಿಸಲು ಕಷ್ಟವಾಯಿತು

ಲಿನ್ ತನ್ನ ತಂದೆತಾಯಿಗೆ ಏಕೈಕ ಮಗನಾಗಿದ್ದ. ಇದರಿಂದ ಕ್ಸೂ ರೂಪದ ಬಗ್ಗೆ ಅವರ ಮನವೊಲಿಸಲು ಆತನಿಗೆ ತುಂಬಾ ಕಷ್ಟವಾಯಿತು. ಆದರೆ ತನ್ನ ಪತ್ನಿಯ ಅಂದದ ಬಗ್ಗೆ ಜೀವಮಾನವಿಡಿ ಟೀಕೆ ಹಾಗೂ ಗೇಲಿಯನ್ನು ತಡೆದುಕೊಳ್ಳಲು ಆತ ತಯಾರಿದ್ದ. ಆತ ದೃಢ ಮನಸ್ಸಿನ ವ್ಯಕ್ತಿಯಾಗಿದ್ದ ಕಾರಣದಿಂದ ಯಾರ ಗೇಲಿಗೂ ಮಣಿಯದೆ ಕ್ಸೂಳನ್ನು ಮದುವೆಯಾಗಲು ಒಪ್ಪಿಕೊಂಡ.

 

English summary

She Did Not Have A Nose, Yet Found The Love Of Her Life

This story is a clear example of love not being only about physical appearance. It is all about the connection and the purity of heart. Meet the girl who lost her nose when she was barely 29 days old. She is a confident young woman and even has married the man whom she met on a social site!
Please Wait while comments are loading...
Subscribe Newsletter