ಅಘೋರಿ ಸಾಧುಗಳ ಅವತಾರ ನೋಡಲು ಗುಂಡಿಗೆ ಗಟ್ಟಿ ಇರಬೇಕು!

By: Deepu
Subscribe to Boldsky

ಭಾರತದಲ್ಲಿ ನಾವು ಇಲ್ಲಿ ಹಲವಾರು ಬಗೆಯ ಸಾಧುಗಳನ್ನು ಕಾಣಬಹುದು. ಅವರಲ್ಲಿ ಕೆಲವರು ಖಾವಿ ಬಟ್ಟೆಯನ್ನು ಧರಿಸಿದರೆ, ಇನ್ನೂ ಕೆಲವರು ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಿರುತ್ತಾರೆ. ಇನ್ನು ಕೆಲವು ಸಾಧುಗಳು ಬಟ್ಟೆಯನ್ನೇ ಧರಿಸದೆಯೇ ತಿರುಗಾಡುತ್ತಾರೆ. ಸಾಧುಗಳು ಎಂದರೆ ನಮ್ಮ ಮನಸ್ಸಿನಲ್ಲಿ ತಮ್ಮ ಜೀವನವನ್ನು ದೇವರಿಗಾಗಿ ಸಮರ್ಪಿಸಿದ, ಐಹಿಕ ಸುಖ ಭೋಗಗಳನ್ನು ತ್ಯಾಗ ಮಾಡಿ, ತಮ್ಮ ಆತ್ಮ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಜೀವಿಸುತ್ತಿರುವ ವ್ಯಕ್ತಿಗಳ ಚಿತ್ರಣ ನಮ್ಮ ಮುಂದೆ ಬರುತ್ತದೆ... ಭಯಾನಕ ರಹಸ್ಯ..! ನಾಗಾ ಸಾಧುಗಳು ವಸ್ತ್ರಗಳನ್ನೇಕೆ ಧರಿಸುವುದಿಲ್ಲ?

ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಇವರ ಪೈಕಿ ಅತ್ಯ೦ತ ಭಯವನ್ನು ಹುಟ್ಟಿಸುವ ಆದರೆ ಅಷ್ಟೇ ಗೌರವಾದರಗಳಿಗೂ ಪಾತ್ರರಾಗಿರುವ ಒ೦ದು ಸಾಧುವರ್ಗವೆ೦ದರೆ ಅದು ಅಘೋರಿ ಸಾಧುಗಳ ಪ೦ಗಡವಾಗಿದೆ... ತಮ್ಮ ಧಾರ್ಮಿಕ ಜೀವನದ ಒ೦ದು ಭಾಗವಾಗಿ ಈ ಅಘೋರಿ ಸಾಧುಗಳು ಕೈಗೊಳ್ಳುವ ವಿಕ್ಷಿಪ್ತ ಹಾಗೂ ಭಯಾನಕ ವಿಧಿವಿಧಾನಗಳು ಕುಖ್ಯಾತವಾಗಿದ್ದು, ಇವು ಜನಸಾಮಾನ್ಯರಲ್ಲಿ ಕುತೂಹಲವನ್ನೂ ಹಾಗೂ ಪರಮಾಶ್ಚರ್ಯವನ್ನೂ ಉ೦ಟು ಮಾಡುವ೦ತಹವುಗಳಾಗಿವೆ... ಮುಂದೆ ಓದಿ..

ಯಾರಿವರು

ಯಾರಿವರು "ಅಘೋರಿ" ಸಾಧುಗಳು?

"ಅಘೋರಿ" ಎಂಬ ಪದವು ಸಂಸ್ಕೃತ ಮೂಲದಿಂದ ಬಂದಿದ್ದಾಗಿದೆ. ಇದರರ್ಥ ಅಂಧಕಾರ ರಹಿತ ಎಂದು. ಅಘೋರ್ ಎಂಬುದು ನಿರ್ಭಯದಿಂದ ಕೂಡಿದ ಅಥವಾ ಅಸಹ್ಯ ರಹಿತವಾದ ಸ್ವಾಭಾವಿಕ ಪ್ರಜ್ಞೆಯನ್ನು ಸೂಚಿಸುತ್ತದೆ. ಆದ್ದರಿಂದಲೆ ಅಘೋರಿಗಳು ಭಯವಿಲ್ಲದೆ ಬದುಕುವವರು ಮತ್ತು ಯಾವುದೇ ತಾರತಾಮ್ಯವನ್ನು ಹೊಂದಿಲ್ಲದೆ ಬದುಕುವವರಾಗಿರುತ್ತಾರೆ. ಇಲ್ಲ, ಈಗಾಗಲೇ ತಿಳಿಸಿರುವ೦ತೆ, ಅವರು ಸರ್ವಸ೦ಗ ಪರಿತ್ಯಾಗಿಗಳು. ತನ್ನೆಲ್ಲಾ ಬ೦ಧು ಬಳಗ ಹಾಗೂ ಮಿತ್ರರೊ೦ದಿಗಿನ ಬಾ೦ಧವ್ಯವನ್ನು ಕಳಚಿಕೊ೦ಡಿರುವವರೇ ಸಾಧುಗಳಾಗಿರುತ್ತಾರೆ.

ವಿಭಿನ್ನ ಬಗೆಯ ಉಡುಗೆತೊಡುಗೆಗಳು

ವಿಭಿನ್ನ ಬಗೆಯ ಉಡುಗೆತೊಡುಗೆಗಳು

ತಾವು ಅಘೋರಿವರ್ಗದರೆ೦ದು ತೋರಿಸಿಕೊಳ್ಳುವುದಕ್ಕಾಗಿ, ಅ೦ತ್ಯಕ್ರಿಯೆಗೊಳಗಾದ ಮಾನವ ಶರೀರದ ತೊಡೆಮೂಳೆಗಳನ್ನು ಹಿಡಿದುಕೊ೦ಡು ಓಡಾಡಿಕೊ೦ಡಿರುತ್ತಾರೆ, ಅವರೆ೦ದಿಗೂ ತಮ್ಮ ಕೂದಲನ್ನು ಕತ್ತರಿಸಿಕೊಳ್ಳಲಾರರು. ಉದ್ದವಾದ ತಮ್ಮ ಕೇಶರಾಶಿಯನ್ನು ತಮ್ಮ ಮೊಣಕಾಲುಗಳವರೆಗೂ ಜೋತುಬೀಳಿಸಿಕೊ೦ಡಿರುತ್ತಾರೆ.

ಶವಗಳ ಜೊತೆಗೆ ಲೈಂಗಿಕ ಕ್ರಿಯೆ!

ಶವಗಳ ಜೊತೆಗೆ ಲೈಂಗಿಕ ಕ್ರಿಯೆ!

ಕೆಲವೊಮ್ಮೆ ಇವರು ಶವಗಳ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಸಹ ತೊಡಗಿಕೊಳ್ಳುತ್ತಾರಂತೆ! ಇದರಿಂದ ಅವರಿಗೆ ಲೈಂಗಿಕ ಬಯಕೆಗಳು ಬಿಡುಗಡೆ ಹೊಂದುತ್ತವೆ ಹಾಗು ಅವರ ಇಂದ್ರಿಯ ಆಸೆಗಳು ಅವರಿಂದ ದೂರ ಸರಿಯುತ್ತವೆ ಎಂದು ಅವರು ನಂಬುತ್ತಾರೆ!, ಅಷ್ಟೇ ಅಲ್ಲದೆ ನಗ್ನವಾಗಿ ಸಂಚರಿಸುವ ಇವರಿಗೆ ಜೀವನದಲ್ಲಿ ಅಗತ್ಯ ಅಂಶಗಳ ಹೊರತಾಗಿ ಯಾವುದೇ ದುರಾಸೆಯಿರುವುದಿಲ್ಲ.

ನಗ್ನರಾಗಿಯೇ ತಿರುಗುತ್ತಾರೆ!

ನಗ್ನರಾಗಿಯೇ ತಿರುಗುತ್ತಾರೆ!

ಹುಟ್ಟುವಾಗ ಯಾವ ರೂಪದಲ್ಲಿ ಬಂದರೋ, ಹೋಗುವಾಗ ಅದೇ ರೂಪದಲ್ಲಿ ಹೋಗುತ್ತಾರೆ. ಹಾಗಾಗಿ ಅವರು ನಗ್ನವಾಗಿರುವುದರ ಕುರಿತು ಮುಜುಗರವನ್ನು ವ್ಯಕ್ತಪಡಿಸುವುದಿಲ್ಲ. ಅವರು ಪ್ರೀತಿ, ದ್ವೇಷ,ಅಸೂಯೆ ಮತ್ತು ಅಹಂನಂತಹ ಭಾವನೆಗಳಿಂದ ದೂರವಿರುತ್ತಾರೆ. ಅವರ ಪ್ರಕಾರ ಅತಿ ಕೊಳಕು ಮತ್ತು ಅಪವಿತ್ರ ವಸ್ತುಗಳಲ್ಲಿಯೂ ಸಹ ದೇವರು ನೆಲೆಸಿರುತ್ತಾನೆ.

ಇವರು ತಪಸ್ಸು ಎಲ್ಲಿ ಮಾಡುತ್ತಾರೆ ಗೊತ್ತೇ?

ಇವರು ತಪಸ್ಸು ಎಲ್ಲಿ ಮಾಡುತ್ತಾರೆ ಗೊತ್ತೇ?

ಸಾಧುಗಳಾಗಲೀ, ಅಘೋರಿಗಳಾಗಲೀ ಸಾವಿಗೆ ಹೆದರುವುದಿಲ್ಲ. ಇವರು ಸ್ಮಶಾನದಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಇವರು ಶವಗಳೊಂದಿಗೆ ಕುಳಿತು ಊಟ ಮಾಡುತ್ತಾರೆ, ಶವಗಳ ಪಕ್ಕದಲ್ಲಿಯೇ ಮಲಗುತ್ತಾರೆ. ಅಪರೂಪಕ್ಕೆ ಕೆಲವರು ಶವದೊಂದಿಗೆ ಕೂಡುವುದೂ ಇದೆ. ಭಾರತದಲ್ಲಿ ಪ್ರಥಮ ಅಘೋರಿ ಕಾಶಿಯಿಂದ ಬಂದ ಎಂದು ಹೇಳಲಾಗುತ್ತದೆ. ನಗರದಲ್ಲಿ ಜನರ ಓಡಾಟ ಇಲ್ಲದೇ ಇರುವ ಯಾವುದೇ ಕತ್ತಲ ಸ್ಥಳದಲ್ಲಿ ಇವರು ಆಶ್ರಯ ಪಡೆದು ಹಗಲಿಡೀ ತಪಸ್ಸು ಮಾಡುತ್ತಿರುತ್ತಾರೆ.

ಶಿವ ಮತ್ತು ಕಾಳಿಯ ಮಹಾಭಕ್ತರು!

ಶಿವ ಮತ್ತು ಕಾಳಿಯ ಮಹಾಭಕ್ತರು!

ಅಘೋರಿಗಳಿಗೆ ಅಲೌಕಿಕ ಶಕ್ತಿಗಳಂತಹ ದಶ ಮಹಾವಿದ್ಯೆಗಳನ್ನು ದಯಪಾಲಿಸುವವಳು ಕಾಳಿ ಅಥವಾ ತಾರಾ. ಹಾಗಾಗಿ ಈಕೆಯನ್ನು ಇವರು ಪೂಜಿಸುತ್ತಾರೆ. ಇವರು ಕಾಳಿಯನ್ನು ಧೂಮವತಿ ಎಂಬ ಹೆಸರಿನಿಂದ ಆರಾಧಿಸುತ್ತಾರೆ. ಭಾಗಲಮುಖಿ ಮತ್ತು ಬೈರವಿ ಎಂಬ ಹೆಸರಿನಿಂದಲೂ ಇವರು ಈ ದೇವಿಯನ್ನು ಪೂಜಿಸುತ್ತಾರೆ. ಇದಲ್ಲದೆ ಇವರು ಶಿವನನ್ನು ಆತನ ರುದ್ರ ಸ್ವರೂಪವಾದ ಮಹಾಕಾಳ, ಬೈರವ ಮತ್ತು ವೀರಭದ್ರ ಎಂಬ ಅವತಾರ ರೂಪಗಳಲ್ಲಿ ಆರಾಧಿಸುತ್ತಾರೆ. ಹಿಂಗ್ಲಾಜ್ ಮಾತಾ ಅಘೋರಿಗಳ ಕುಲ ದೇವತೆಯಾಗಿ ಪೂಜಿಸಲ್ಪಡುತ್ತಾಳೆ.

 

  

 

English summary

Secrets Of The Aghori Sadhus

The Aghori Sadhus are considered to be the most revered and feared sect of the Hindus. Their lifestyle, being quite unconventional and different from that of the civilised world, is the most attractive aspect about them that makes them a matter of common curiosity among the masses. Let’s find out the deepest darkest secrets of the Aghori Sadhus.
Subscribe Newsletter