Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ಸರ್ಪದೋಷಕ್ಕೆ ಕಾರಣ ಹಾಗೂ ಪರಿಹಾರ ಕ್ರಮಗಳು
ಹಿಂದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸರ್ಪದೋಷ ಅತ್ಯಂತ ಭಯಾನಕವಾದದ್ದು. ಈ ದೋಷ ಇದ್ದ ವ್ಯಕ್ತಿಗಳು ಸದಾ ದುಃಖ ಹಾಗೂ ತೊಂದರೆಯಲ್ಲಿ ಮುಳುಗಿರುತ್ತಾರೆ ಎನ್ನುವ ಸತ್ಯವನ್ನು ಬಿಚ್ಚಿಡುತ್ತದೆ. ಸರ್ಪದ ಶಾಪಕ್ಕೆ ಅಥವಾ ಅದರ ಕೆಂಗಣ್ಣಿಗೆ ಗುರಿಯಾದರೆ ದೋಷ ಬರುವುದು. ಸರ್ಪ ದೋಷವು ಕೇವಲ ಒಂದು ಜನ್ಮಕ್ಕೆ ಮೀಸಲಾಗಿರುವುದಲ್ಲ. ಅದು ಜನ್ಮ ಜನ್ಮಾಂತರಕ್ಕೂ ಹಿಂಬಾಲಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಸರ್ಪವನ್ನು ಹೊಡೆಯುವುದು, ಅದರ ಮೊಟ್ಟೆಯನ್ನು ಹಾಳುಮಾಡುವುದು, ಸರ್ಪವನ್ನು ಹಿಂಸಿಸಿ ದುರ್ಬಳಕೆ ಮಾಡುವುದು ಇವೆಲ್ಲ ಕೃತ್ಯಗಳಿಂದ ಸರ್ಪದೋಷ ಉಂಟಾಗುತ್ತದೆ. ಜಾತಕದಲ್ಲಿ ಸರ್ಪದೋಷವನ್ನು ರಾಹು ತೋರಿಸಿಕೊಡುತ್ತಾನೆ. ಲಗ್ನದಲ್ಲಿ 2ನೇ, 5ನೇ, 7 ನೇ ಮತ್ತು 8ನೇ ಮನೆಯಲ್ಲಿ ರಾಹುವಿದ್ದರೆ ಸರ್ಪದೋಷವಿದೆ ಎನ್ನುವುದು ದೃಢವಾಗುತ್ತದೆ. ಈ ದೋಷದಿಂದ ಸಂತಾನ ನಷ್ಟ, ಸಂತಾನ ವಿಳಂಬ, ವೈವಾಹಿಕ ಜೀವನದಲ್ಲಿ ಜಗಳ, ಹೊಂದಾಣಿಕೆ ಇಲ್ಲದಿರುವುದು, ಜೀವನದಲ್ಲಿ ಅಭ್ಯುದಯ, ಪ್ರಗತಿಯ ಕೊರತೆ, ದೀರ್ಘಕಾಲದ ಅನಾರೋಗ್ಯ, ಚರ್ಮರೋಗ ಹೀಗೆ ಅನೇಕ ದೈಹಿಕ ಮತ್ತು ಭಾವನಾತ್ಮಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಈ ಜನ್ಮದಲ್ಲಿ ಯಾವುದೇ ರೀತಿಯಲ್ಲಿ ಹಾವಿಗೆ ತೊಂದರೆ ಕೊಡದಿದ್ದರೂ ಹಿಂದನ ಜನ್ಮದ ಪಾಪ ಕರ್ಮಗಳಿಗನುಸಾರದವಾಗಿ ದೋಷವು ಸುತ್ತಿಕೊಂಡಿರುತ್ತದೆ. ಹಾಗಾಗಿ ಬಹು ಬೇಗ ಎಚ್ಚೆತ್ತುಕೊಂಡು, ಸೂಕ್ತ ರೀತಿಯ ಪರಿಹಾರೋಪಾಯವನ್ನು ಮಾಡಿಸಬೇಕು. ಆಗ ಸಮಸ್ಯೆಗಳು ನಿಧಾನವಾಗಿ ಕರಗುತ್ತಾ ಸಾಗುತ್ತದೆ. ಈ ವಿಚಾರದ ಕುರಿತು ನೀವು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಮನಸ್ಸಾಗುತ್ತಿದ್ದರೆ ಲೇಖನದ ಮುಂದಿನ ಭಾಗವನ್ನು ಓದಿ...

ಸೂಕ್ತ ಪರಿಹಾರಗಳು
ಸರ್ಪ ದೋಷ ನಿವಾರಣೆಗೆ ಸೂಕ್ತ ಪರಿಹಾರ ಕ್ರಮವೆಂದರೆ ಸರ್ಪಶಾಂತಿಯನ್ನು ಮಾಡಿಸುವುದು. ಕರ್ನಾಟಕದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪದೋಷಕ್ಕೆ ಸಂಬಂಧಿಸಿದ ಸರ್ಪ ಸಂಸ್ಕಾರ, ಅಶ್ಲೇಷ ಬಲಿ, ನಾಗ ದೇವರ ಪ್ರತಿಷ್ಠಾಪನಾ ಕೆಲಸ ಸೇರಿದಂತೆ ಎಲ್ಲಾ ಬಗೆಯ ಪರಿಹಾರೋಪಾಯಗಳನ್ನು ಮಾಡಿಕೊಡುತ್ತಾರೆ. ನಾಗದೇವರ ಪ್ರತಿಷ್ಠಾನವನ್ನು ಪವಿತ್ರ ನಾಗ/ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಿರ್ವಹಿಸಬಹುದು. ಅದಕ್ಕಾಗಿ ಅಲ್ಲಿರುವ ಅರ್ಚಕರು ಹೇಳುವ ಮಾರ್ಗವನ್ನು ಅನುಸರಿಸಬೇಕಷ್ಟೆ. ಕರ್ನಾಟಕ ರಾಜ್ಯದಲ್ಲಿರುವ ಘಾಟಿ ಸುಬ್ರಹ್ಮಣ್ಯದಲ್ಲೂ ಸರ್ಪದೋಷಕ್ಕೆ ಸಂಬಂಧಿಸಿದ ಪರಿಹಾರ ಕಾರ್ಯಗಳನ್ನು ಮಾಡಿಸಿಕೊಡುತ್ತಾರೆ. ಅಲ್ಲಿ ಸುಬ್ರಹ್ಮಣ್ಯ ದೇವರಿಗೆ ಪೂಜೆ ಹಾಗೂ ವಿಶೇಷ ಹರಕೆಯನ್ನು ನಡೆಸಿಕೊಡಬಹುದು.
ಮಂಗಳೂರಿನ ಸಮೀಪವಿರುವ ಕಡುಪು ದೇಗುಲ. ಇಲ್ಲಿರುವ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನವು ಕ್ರ್ರಿ.ಶ ಕಾಲದಿಂದಲೂ ಇರುವ ಪುರಾತನ ದೇಗುಲ ಎಂಬ ನಂಬಿಕೆಯಿದೆ. ತಿರುತಣಿ, ಪಳನಿ, ತಿರುಚೆಂಡೂರ್, ತಿರುಪಾರಕುಂಡ್ರಮ್, ಸ್ವಾಮಿ ಮಲೈ, ಪಜಮಿದಿರ್ಚೋಲೈ, ತಿರುನಾಗೇಶ್ವರಂ, ನಾಗರ್ಕೋಯಿಲ್ ತಮಿಳುನಾಡಿನಲ್ಲಿದೆ. ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಸನ್ನಿಧಿ.
ಈ ಪವಿತ್ರ ಕ್ಷೇತ್ರದಲ್ಲಿ ನಾಗ ದೇವತೆಗೆ ಸೂಕ್ತ ಪೂಜೆ ಪರಿಹಾರ ಕಾರ್ಯಗಳನ್ನು ಮಾಡಿಸಬಹುದು.
ಇತರ ಪರಿಹಾರ ಕ್ರಮಗಳು
ತ್ರಯಂಬಕೇಶ್ವರ (ನಾಸಿಕ್) ದೇವಸ್ಥಾನದಲ್ಲಿ ಸರ್ಪ ಶಾಂತಿ;
ಶ್ರೀ ಕಾಳಹಸ್ತಿ ದೇವಸ್ಥಾನದಲ್ಲಿ ರಾಹು-ಕೇತು ಪೂಜೆಯ ರುದ್ರಾಭಿಷೇಕದೊಂದಿಗೆ ಶಿವನ ಪೂಜೆ;
ತಿರುಮಲ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಕಪಿಲ ತೀರ್ಥಂನಲ್ಲಿರುವ ರುದ್ರಭೀಶ್ಯಾಮ್/ ಸರ್ಪದೋಷ ನಿವಾರಣಾ ಪೂಜೆ;
ಸಂಪೂರ್ಣ ಕುಜಾ-ರಾಹು-ಕೇತು ಶಾಂತಿ +ಗಣಪತಿ ಹೋಮ;
ಸರ್ಪ ಸೂಕ್ತಂ ಜೊತೆ ಮಹಾನ್ಯಾಸ ಪೂರ್ವಕ ಏಕಾದಶಾವರಾ ರುದ್ರಾಭಿಷೇಕ ಮಾಡಿಸಬೇಕು.
ಈ ದಿನಗಳಲ್ಲಿ ಪೂಜೆ
ನಾಗ ಚತುರ್ಥಿ, ಶ್ರಾವಣ ಮಾಸದಲ್ಲಿ ಗರುಡ ಪಂಚಮಿ ವ್ರತ, ಭಾದ್ರಪದ ಮಾಸದಲ್ಲಿ ಅನಂತ ಪದ್ಮನಾಭ ವ್ರತ(ಅನಂತ ಚತುರ್ದಸಿ) ಮಾರ್ಗಶಿರಾ ಮಾಸದಲ್ಲಿ ಸ್ಕಂದ ಶಾಸ್ತಿ ಮಾಡಿಸಬೇಕು.
ಆರ್ಥಿಕವಾಗಿ ದುರ್ಬಲರಾಗಿದ್ದರೆ
ಆರ್ಥಿಕವಾಗಿ ಅಷ್ಟು ಅನುಕೂಲವಿಲ್ಲದಿದ್ದರೆ ಅಥವಾ ಶಾಂತಿ ಹವನಗಳಿಗೆ ಹಣವನ್ನು ಹೊಂದಿಸಲು ಸಾಧ್ಯವಾಗದಿದ್ದರೆ ಈ ಕೆಳಗೆ ಹೇಳುವ ಪರಿಹಾರ ಕ್ರಮವನ್ನು ಕೈಗೊಳ್ಳಬಹುದು.
ಅಶ್ವತ್ಥ್ ಮರದ ಕೆಳಗೆ ಇರುವ ನಾಗದೇವರ ವಿಗ್ರಹಕ್ಕೆ ಹಾಲಿನ ಅಭಿಷೇಕ ಮಾಡಬೇಕು. ಅದು ಯಾವ ದೇವಸ್ಥಾನದ ಆವರಣದಲ್ಲಿರುವ ಅಶ್ವತ್ಥ್ ಮರ ಅಥವಾ ಆಲದ ಮರದಡಿಯಲ್ಲಿರುವ ನಾಗರ ಕಲ್ಲು ಆಗಿರಬಹುದು. ಅಭಿಷೇಕವನ್ನು 41 ದಿನಗಳಕಾಲ ಮಾಡಬೇಕು. ಜೊತೆಗೆ ನಾಗದೇವರಿಗೆ ಹೇಳುವ ಶ್ಲೋಕವನ್ನು ಹೇಳಬೇಕು. ಆದಷ್ಟು ಬೆಳಗಿನ ಜಾವದಲ್ಲಿ ಅಭೀಷೇಕ ಮತ್ತು ಪೂಜೆಯನ್ನು ಮಾಡಬೇಕು. ಹಾಲಿನ ಒಂದು ಭಾಗವನ್ನು ಆಲದ ಮರ/ಅಶ್ವತ್ಥ್ ಮರದ ಬೇರಿಗೆ ಹಾಕಬೇಕು.
ಮಹಿಳೆಯರು ಈ ಅಭಿಷೇಕವನ್ನು ಪ್ರಾರಂಭಿಸಿದ ಮೇಲೆ ನೈಸರ್ಗಿಕ ಅನಾನೂಕೂಲತೆಗೆ ನಾಲ್ಕು ದಿನವನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಮುಂದುವರಿಸಬೇಕು. ಈ ಪವಿತ್ರ ಆಚರಣೆಯು ಮಂಗಳವಾರ ಅಥವಾ ಭಾನುವಾರದಿಂದ ಪ್ರಾರಂಭಿಸಬೇಕು. ಅಭಿಷೇಕ ಪೂರ್ಣಗೊಂಡನಂತರ ಯಾವುದಾದರೂ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿನೀಡಿ ಕ್ಷೀರಾಭಿಷೇಕ ಮತ್ತು ಬೆಳ್ಳಿಯ ಎರಡು ನಾಗ ಮೂರ್ತಿ ಹಾಗೂ 1,1/4 ಕೆ.ಜಿ ಕಪ್ಪು ಉದ್ದಿನಬೇಳೆ, ಹುರುಳಿ ಕಾಳು ಮತ್ತು ದಕ್ಷಿಣೆಯನ್ನು ಒಬ್ಬ ಬ್ರಾಹ್ಮಣನಿಗೆ ದಾನ ನೀಡಬೇಕು. ಈ ಸಮಯದಲ್ಲಿ ಸಾತ್ವಿಕ ಆಹಾರ ಸೇವನೆ ಹಾಗೂ ಬ್ರಹ್ಮಚರ್ಯವನ್ನು ಅನುಸರಿಸಬೇಕು.
ಅಶುಚದ ಅವಧಿಯಲ್ಲಿ ಪರಿಹಾರೋಪಾಯಗಳು
ಶ್ರೀ ಕೃಷ್ಣನಿಗೆ ಸಂಬಂಧಿಸಿದ ಆರಾಧನೆ, ಸ್ತೋತ್ರ ಪಠಿಸುವುದು, ಲಕ್ಷ್ಮಿ, ನರಸಿಂಹ, ಹನುಮಂತ, ಗರುಡ ದೇವತೆ, ಸುಬ್ರಹ್ಮಣ್ಯ, ರಾಘವೇಂದ್ರ ಸ್ವಾಮಿ ಸಂಬಂಧಿಸಿದ ಸ್ತೋತ್ರಗಳನ್ನು ಹೇಳುವುದು ಹಾಗೂ ನಿತ್ಯ ಪೂಜೆ ಗೈಯುವುದರಿಂದ ಸರ್ಪದೋಷದ ಪರಿಹಾರವಾಗುವುದು ಎಂದು ಹೇಳಲಾಗುತ್ತದೆ. ಸಂಪೂರ್ಣವಾದ ನಂಬಿಕೆ ಹಾಗೂ ಭಕ್ತಿಯಿಂದ ಮಾಡಿದ ಕಾರ್ಯವು ಯಶಸ್ಸು ಹಾಗೂ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವುದು. ಹಾಗಾಗಿ ಪೂಜೆ ಹಾಗೂ ಪರಿಹಾರ ಕಾರ್ಯವನ್ನು ನಡೆಸುವಾಗ ಶ್ರದ್ಧಾ ಭಕ್ತಿಯಿಂದ ಹೃತ್ಪೂರ್ವಕವಾಗಿ ನಿರ್ವಹಿಸಿ. ಆಗ ದೇವನು ನಿಮಗೆ ಒಳ್ಳೆಯದನ್ನು ಕರುಣಿಸುವನು. ಜೊತೆಗೆ ದೋಷವು ಮುಕ್ತವಾಗುವುದು ಎಂದು ಹೇಳಲಾಗುತ್ತದೆ.



Click it and Unblock the Notifications

