ಅಪ್ಪಿತಪ್ಪಿಯೂ ಈ ದೇವಾಲಯಗಳಿಗೆ ಮಹಿಳೆಯರು ಪ್ರವೇಶಿಸುವಂತಿಲ್ಲ!

Posted By: manu
Subscribe to Boldsky

ಭಾರತವನ್ನು ಸಂಪೂರ್ಣ ಸುತ್ತಿದರೆ ವಿಶ್ವವನ್ನೇ ಸುತ್ತಿ ಬಂದಂತೆ. ವಿಶ್ವದ ಯಾವುದೇ ದೇಶದಲ್ಲೂ ಇರದ ಸಾಂಸ್ಕೃತಿಕ ವೈವಿಧ್ಯತೆ ಭಾರತದಲ್ಲಿದೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಇದು ಬದಲಾಗುತ್ತಾ ಹೋಗುತ್ತದೆ. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತರಿಗೆ ತಮ್ಮದೇ ಆದ ಧಾರ್ಮಿಕ ಆಚರಣೆಗಳಿವೆ. ಆದರೆ ಕೆಲವೊಂದು ಕಟ್ಟುಪಾಡುಗಳು ಹಿಂದೂ ಧರ್ಮದಂತೆ ಇತರ ಧರ್ಮದಲ್ಲೂ ಇರುತ್ತದೆ.

ಇತ್ತೀಚೆಗೆ ಪತ್ರಿಕೆಗಳು ಹಾಗೂ ಸುದ್ದಿ ಚಾನೆಲ್‌ಗಳಲ್ಲಿ ಭಾರೀ ಸುದ್ದಿಯಾಗಿದ್ದ ವಿಷಯವೆಂದರೆ ಮಹಿಳೆಯರಿಗೆ ದೇವಾಲಯಗಳ ಒಳಗೆ ಪ್ರವೇಶ ನಿಷೇಧ ಮಾಡಿರುವುದು. ಮಹಿಳೆಯರಿಗೆ ದೇವಾಲಯಗಳಿಗೆ ಪ್ರವೇಶ ನೀಡಬೇಕೆನ್ನುವ ಅಭಿಯಾನವೂ ಆರಂಭವಾಯಿತು. ಹಿಂದೂ ಧರ್ಮದಲ್ಲಿ ಮುಟ್ಟಾದ ಹೆಂಗಸರನ್ನು ಏಕೆ ಅಪವಿತ್ರ ಎಂದು ಪರಿಗಣಿಸಲಾಗುತ್ತದೆ?

ಆದರೆ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯವನ್ನು ಮುರಿಯಲು ಸಾಧ್ಯವಿಲ್ಲ ಎನ್ನುವ ವಾದ ದೇವಾಲಯದ ಆಡಳಿತದ್ದಾಗಿದೆ. ಭಾರತದಲ್ಲಿ ಯಾವ್ಯಾವ ಸ್ಥಳಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ ಎನ್ನುವ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳುವ.... 

ಶನಿ ಸಿಂಗಾಪುರ್-ಕಲ್ಲಿನ ಮೂರ್ತಿ

ಶನಿ ಸಿಂಗಾಪುರ್-ಕಲ್ಲಿನ ಮೂರ್ತಿ

ಇಲ್ಲಿರುವ ಕಲ್ಲಿನ ಮೂರ್ತಿಯನ್ನು ಯುವತಿಯೊಬ್ಬಳು ಮುಟ್ಟಿದಕ್ಕಾಗಿ ದೇವಾಲಯದ ಆಡಳಿತವು ಶುದ್ಧೀಕರಿಸುವ ಕೆಲಸವನ್ನು ಮಾಡಿದಾಗ ಭಾರೀ ಸುದ್ದಿಯಾಯಿತು. ಕಲ್ಲಿನ ಮೂರ್ತಿಯನ್ನು ಮಹಿಳೆಯರು ಮುಟ್ಟಬಾರದೆಂಬ ಕಾರಣಕ್ಕಾಗಿ ಅದನ್ನು ತುಂಬಾ ಸುರಕ್ಷಿತ ಪ್ರದೇಶದಲ್ಲಿ ಇಡಲಾಗಿದೆ.

ನಿಜಾಮುದ್ದೀನ್ ದರ್ಗಾ-ಒಳಗಿನ ಕೋಣೆ

ನಿಜಾಮುದ್ದೀನ್ ದರ್ಗಾ-ಒಳಗಿನ ಕೋಣೆ

ಸುಮಾರು 700 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಎಲ್ಲಾ ಮಹಿಳಾ ಭಕ್ತರು ಒಂದು ಹಂತದ ತನಕ ಮಾತ್ರ ದರ್ಗಾದ ಒಳಗೆ ಪ್ರವೇಶಿಸಬಹುದು. ಧರ್ಮಗುರು ವಾಸವಿದ್ದರು ಎನ್ನಲಾದ ಒಳಗಿನ ಕೋಣೆಗೆ ಮಹಿಳೆಯರಿಗೆ ಪ್ರವೇಶವಿಲ್ಲ.

ಎಎಂಯು-ಮೌಲಾನಾ ಅಜಾದ್ ಲೈಬ್ರೆರಿ

ಎಎಂಯು-ಮೌಲಾನಾ ಅಜಾದ್ ಲೈಬ್ರೆರಿ

ಲೈಬ್ರೆರಿಗೆ ಹುಡುಗಿಯರನ್ನು ಬಿಟ್ಟರೆ ಅದರಿಂದ ಶಿಸ್ತುಪಾಲನೆ ಕಷ್ಟವಾಗಬಹುದು ಎನ್ನುವ ಕಾರಣಕ್ಕಾಗಿ ಇಲ್ಲಿನ ಕಾಲೇಜು ಆಡಳಿತವು ಹುಡುಗಿಯರಿಗೆ ಲೈಬ್ರೆರಿ ಒಳಗಡೆ ಪ್ರವೇಶ ನೀಡಿಲ್ಲ. ಒಬ್ಬಳು ಹುಡುಗಿ ಲೈಬ್ರೆರಿಗೆ ಬಂದರೆ ನಾಲ್ಕು ಮಂದಿ ಹುಡುಗರು ಆಕೆಯ ಹಿಂದಿನಿಂದ ಬರುತ್ತಾರೆ ಎನ್ನುವುದು ಕಾಲೇಜು ಆಡಳಿತದ ವಾದ. ಇದರಿಂದ ಶಿಸ್ತು ಕೆಡುತ್ತದೆ ಎನ್ನುತ್ತಾರೆ.

ಹಾಜಿ ಅಲಿ ದರ್ಗಾ

ಹಾಜಿ ಅಲಿ ದರ್ಗಾ

ಮುಂಬಯಿಯಲ್ಲಿರುವ ಈ ಪ್ರಸಿದ್ಧ ಪ್ರಾರ್ಥನಾ ಸ್ಥಳವನ್ನು 15ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದನ್ನು ಸೂಫಿ ಸಂತ ಪಿರ್ ಹಾಜಿ ಅಲಿ ಬುಖಾರಿಗೆ ಅರ್ಪಿಸಲಾಗಿದೆ. ದರ್ಗಾದ ಒಳಗಿನ ಪ್ರದೇಶಕ್ಕೆ ಹೋಗಲು ಮಹಿಳೆಯರಿಗೆ ಅವಕಾಶವಿಲ್ಲ. ಶರಿಯಾ ಕಾನೂನಿನ ಪ್ರಕಾರ ಈ ಪ್ರದೇಶಕ್ಕೆ ಮಹಿಳೆಯರು ಪ್ರವೇಶಿಸುವುದು ಇಸ್ಲಾಂಗೆ ವಿರುದ್ಧವಾಗಿದೆ.

ಶಬರಿಮಲೆ-ಅಯ್ಯಪ್ಪ ಮಂದಿರ

ಶಬರಿಮಲೆ-ಅಯ್ಯಪ್ಪ ಮಂದಿರ

ಶಬರಿಮಲೆ ಅಯ್ಯಪ್ಪ ಮಂದಿರಕ್ಕೆ 10ರ ಹರೆಯದಿಂದ 50ರ ಹರೆಯದ ತನಕದ ಮಹಿಳೆಯರಿಗೆ ಪ್ರವೇಶ ನಿಷಿದ್ಧ. ಮಹಿಳೆಯರು ಪ್ರತೀ ತಿಂಗಳು ಮುಟ್ಟಾಗುವ ಕಾರಣದಿಂದ ದೇವಾಲಯದೊಳಗೆ ಪ್ರವೇಶಿಸಿದರೆ ಅಶುದ್ಧವಾಗುತ್ತದೆ ಎಂದು ಹೇಳಲಾಗಿದೆ.ಶಬರಿಮಲೆಯ 'ಹದಿನೆಂಟು ಮೆಟ್ಟಿಲುಗಳ' ಮಹಿಮೆ ಕೇಳಿರಣ್ಣ....

ಕಾರ್ತಿಕೇಯ ಮಂದಿರ-ಪೆಹೊವಾ(ಹರಿಯಾಣ) ಮತ್ತು ಪುಷ್ಕರ್(ರಾಜಸ್ಥಾನ)

ಕಾರ್ತಿಕೇಯ ಮಂದಿರ-ಪೆಹೊವಾ(ಹರಿಯಾಣ) ಮತ್ತು ಪುಷ್ಕರ್(ರಾಜಸ್ಥಾನ)

ಈ ದೇವಾಲಯಗಳಲ್ಲಿ ಕಾರ್ತಿಕೇಯ ದೇವರನ್ನು ಬ್ರಹ್ಮಚಾರಿಯ ರೂಪದಲ್ಲಿ ಪೂಜಿಸುವ ಕಾರಣದಿಂದಾಗಿ ಈ ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಈ ದೇವಾಲಯಗಳಿಗೆ ಮಹಿಳೆಯರು ಪ್ರವೇಶಿಸಿದರೆ ಆಕೆಗೆ ವರ ಸಿಗುವ ಬದಲು ಶಾಪ ಸಿಗುತ್ತದೆ ಎಂದು ನಂಬಲಾಗಿದೆ.

 

English summary

Religious places in India where women are not allowed

Here, in this article, we are about to share the list of places where women are not allowed to enter. Check out the list, as it has some of the most famous places where women are not allowed to enter!