Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
08-12-2017 ಶುಕ್ರವಾರದ ದಿನ ಭವಿಷ್ಯ

ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ.
ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ ಅನುಭವ ಹಾಗೂ ನೆನಪುಗಳು ಮಾತ್ರವೇ ನಮ್ಮೊಂದಿಗೆ ಉಳಿದುಕೊಳ್ಳುತ್ತವೆ. ಆ ಅನುಭವಗಳೇ ಜೀವನ ಎಂದರೇನು? ಎನ್ನುವ ಪಾಠವನ್ನು ಹೇಳಿಕೊಡುತ್ತವೆ. ಶುಕ್ರವಾರವಾದ ಈ ಶುಭ ದಿನ ಆ ಮಹಾ ಲಕ್ಷ್ಮಿಯು ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಯಾವೆಲ್ಲಾ ಬದಲಾವಣೆಯನ್ನು ತರುತ್ತಾಳೆ? ನಿಮ್ಮ ಜೀವನದ ಪಯಣದಲ್ಲಿ ನಾಳೆ ಯಾವೆಲ್ಲಾ ಘಟನೆಗಳು ನಡೆಯಬಹುದು? ಅವುಗಳಿಂದ ನೀವೇನು ಜೀವನದ ತಾತ್ಪರ್ಯ ಪಡೆದುಕೊಳ್ಳುವಿರಿ ಎನ್ನುವ ವಿವರಣೆಯನ್ನು ಬೋಲ್ಡ್ ಸ್ಕೈ ನೀಡುತ್ತಿದೆ...

ಮೇಷ
ಮನೆಯಲ್ಲಿ ನೆಮ್ಮದಿ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ. ನಿಮಗಿಂದು ನೆಮ್ಮದಿಯ ದಿನವಾಗುವುದು. ಅಡಿಕೆ, ತೆಂಗು ಹಾಗೂ ಸಿರಿಧಾನ್ಯಗಳಿಂದ ಲಾಭವನ್ನು ಪಡೆದುಕೊಳ್ಳುವಿರಿ. ವಿದೇಶ ಪ್ರಯಾಣದ ಕನಸು ನನಸಾಗುವುದು. ಆರ್ಥಿಕವಾಗಿ ಎಲ್ಲಾ ಸಮಸ್ಯೆಗಳು ನಿವಾರಣೆ ಹೊಂದುವವು. ಆರೋಗ್ಯದಲ್ಲಿ ಚೇತರಿಕೆ ಕಾಣುವಿರಿ. ಜೀವನದಲ್ಲಿ ಇನ್ನಷ್ಟು ಯಶಸ್ಸು ಹಾಗೂ ಸಂತೋಷವನ್ನು ಪಡೆದುಕೊಳ್ಳಲು ದೇವಿ ಮತ್ತು ಲಕ್ಷ್ಮಿಯನ್ನು ಆರಾಧನೆ ಮಾಡಿ.

ವೃಷಭ
ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ಆಘಾತ ಉಂಟಾಗುವ ಸಾಧ್ಯತೆಗಳಿವೆ. ರಾಹು ಕಾಳದಲ್ಲಿ ಪ್ರಯಾಣವನ್ನು ಆರಂಭಿಸದಿರಿ. ಇಷ್ಟ ಮಿತ್ರರು ಎಂದು ನಿಮ್ಮ ರಹಸ್ಯಗಳನ್ನು ಹಂಚಿಕೊಳ್ಳದಿರಿ. ಸ್ಥಿರಾಸ್ತಿಯನ್ನು ಖರೀದಿ ಮಾಡುವ ಹುಂಬ ಧೈರ್ಯ ಮಾಡದಿರಿ. ನೀವು ತೀರ್ಮಾನಿಸಿರುವ ವಿಚಾರದಲ್ಲಿ ಗೊಂದಲ ಹಾಗೂ ಅಡೆತಡೆ ಉಂಟಾಗುವುದು. ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪಜಯ ಉಂಟಾಗುವುದು. ಸಾಲ ಪಡೆಯುವುದು ಅಥವಾ ನೀಡುವ ಕೆಲಸಕ್ಕೆ ಮುಂದಾಗದಿರಿ. ಸಮಸ್ಯೆಗಳ ನಿವಾರಣೆಗೆ ದೇವಿಯ ಆರಾಧನೆ ಮಾಡಿ.

ಮಿಥುನ
ಸಮಾಧಾನಕರವಾದ ದಿನ. ಪತ್ನಿಯ ಕಿರಿಕಿರಿಯಿಂದ ನಿಮ್ಮ ಮಾನಸಿಕ ಸ್ಥಿತಿ ಹೈರಾಣಗೊಳ್ಳುವ ಸಾಧ್ಯತೆಗಳಿವೆ. ನೀವು ಮಾಡುತ್ತಿರುವ ಕೆಲಸದಲ್ಲಿ ಶ್ರದ್ಧೆಯನ್ನು ತೋರಿ. ತಾಂತ್ರಿಕ ಕೆಲಸದಲ್ಲಿರುವವರಿಗೆ ಲಾಭ ಉಂಟಾಗುವುದು. ಛಾಯಾಗ್ರಾಹಕರಿಗೆ ಉತ್ತಮ ಲಾಭ ಉಂಟಾಗುವುದು. ವಿದ್ಯಾರ್ಥಿಗಳಿಗೆ ಶುಭ ದಿನ. ಉನ್ನತ ವ್ಯಾಸಂಗದ ಕನಸು ನನಸಾಗುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಕರ್ಕ
ಸೌಂದರ್ಯ ವರ್ಧಕ ಸಾಮಾಗ್ರಿಗಳ ವ್ಯಾಪಾರ ಹಾಗೂ ಕಬ್ಬಿಣ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುವುದು. ಅಧ್ಯಾಪಕ ವೃತ್ತಿಯಲ್ಲಿರುವವರಿಗೆ ಸಮಾಧನ ಉಂಟಾಗುವುದು. ಶಿಶ್ಯರಿಂದ ಗುರುಗಳಿಗೆ ಗೌರವ ದೊರೆಯುವುದು. ದೂರದ ಪ್ರಯಾಣದಿಂದಲೂ ಲಾಭ ಗಳಿಸುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗುವುದು. ಹೆಚ್ಚಿನ ಅಭಿವೃದ್ಧಿಗಾಗಿ ದೇವಿಯ ಆರಾಧನೆ ಮಾಡಿ.

ಸಿಂಹ
ಮಾನಸಿಕ ವೈಪರೀತ್ಯ ಉಂಟಾಗುವುದು. ಆರೋಗ್ಯದಲ್ಲುಂಟಾಗುವ ಏರು ಪೇರುಗಳು ನಿಮ್ಮನ್ನು ಹೈರಾಣ ಗೊಳಿಸುವುದು. ಸಾಲ ಬಾಧೆಯಿಂದ ಹಾಗೂ ಬಂಧು ಮಿತ್ರರಿಂದಲೂ ಕಿರಿಕಿರಿ ವಾತಾವರಣ ಉಂಟಾಗುವುದು. ಅನಿರೀಕ್ಷಿತ ಸನ್ನಿವೇಷಗಳಿಗೆ ಹೈರಾಣವಾಗುವ ಸಾಧ್ಯತೆಗಳಿವೆ. ಮಿತ್ರರಿಂದಲೇ ಒಂದಿಷ್ಟು ತೊಡಕನ್ನು ಹಾಗೂ ಅಪ ಪ್ರಚಾರವನ್ನು ಅನುಭವಿಸ ಬೇಕಾಗುವುದು. ಸಾಲ ಪಡೆಯುವುದು ಮತ್ತು ಸಾಲ ನೀಡುವ ಕಾರ್ಯಕ್ಕೆ ಮುಂದಾಗದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಭವಿಷ್ಯಕ್ಕೆ ಕುಲದೇವರ ಆರಾಧನೆ ಹಾಗೂ ಶಕ್ತಿಯ ಉಪಾಸನೆ ಮಾಡಿ.

ಕನ್ಯಾ
ಇಂದು ನಿಮಗೆ ಸಮಾಧಾನಕರವಾದ ದಿನ. ಸ್ತ್ರೀಯರು ಉದ್ಯೋಗ ಕ್ಷೇತ್ರದಲ್ಲಿ ಮೇಲುಗೈ ಸಾಧಿಸುವರು. ಗೃಹ ಕೈಗಾರಿಕೆಗಳು ಅಧಿಕ ಲಾಭವನ್ನು ತಂದುಕೊಡುವುದು. ಚಾಲಕರಿಗೂ ಉತ್ತಮವಾದ ಲಾಭ ದೊರೆಯುವುದು. ಉಪನ್ಯಾಸ ವರ್ಗದವರಿಗೆ ಗೌರವ ದೊರೆಯುವುದು. ಹೋಟೆಲ್ ಉದ್ಯಮದಲ್ಲೂ ಉನ್ನತ ಲಾಭವನ್ನೇ ಕಾಣಲಿದ್ದೀರಿ. ಇನ್ನಷ್ಟು ಲಾಭ ಹಾಗೂ ಸಂತೋಷಕರವಾದ ಜೀವನಕ್ಕೆ ದೇವಿಯ ಆರಾಧನೆ ಮಾಡಿ.

ತುಲಾ
ಸಮಾಧಾನದ ಬವದುಕನ್ನು ಕಾಣಲಿದ್ದೀರಿ. ಬಂಧು ಮಿತ್ರರ ಸಂಪೂರ್ಣ ಸಹಕಾರ ದೊರೆಯುವುದು. ಕೆಲವೇ ದಿನಗಳಲ್ಲಿ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಉದ್ಯೋಗದಲ್ಲಿ ಬಡ್ತಿ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ದೊರೆಯುವುದು. ಜೀವನದಲ್ಲಿ ಇನ್ನಷ್ಟು ಪ್ರಗತಿಗಾಗಿ ದೇವಿಯ ಆರಾಧನೆ ಮಾಡಿ.

ವೃಶ್ಚಿಕ
ಯಾವುದೇ ವಿಚಾರ ಅಥವಾ ಕೆಲಸದಲ್ಲಿ ಆತುರ ತೋರದಿರಿ. ಸ್ಥಿರಾಸ್ತಿಯಿಂದ ಲಾಭ ಗಳಿಸುವಿರಿ. ರಾಜಕೀಯ ನಾಯಕರಿಗೆ ಸಾಮಾನ್ಯವಾದ ಮುನ್ನಡೆ ಉಂಟಾಗುವುದು. ಸ್ತ್ರೀಯರು ಪ್ರಗತಿಯನ್ನು ಕಾಣುವರು. ಜೀವನದಲ್ಲಿ ಇನ್ನಷ್ಟು ಯಶಸ್ಸು ಹಾಗೂ ಸಂತೋಷಕರವಾದ ಬದುಕನ್ನು ಪಡೆದುಕೊಳ್ಳಲು ಶಿವನ ಆರಾಧನೆ ಹಾಗೂ ಶಕ್ತಿ ಉಪಾಸನೆಯನ್ನು ಮಾಡಿ.

ಧನು
ಭವಿಷ್ಯಯದಲ್ಲಿ ಶನಿಯ ಪ್ರಭಾವವನ್ನು ಹೊಂದಿರುವುದರಿಂದ ಎಲ್ಲಾ ಕೆಲಸದಲ್ಲೂ ನಷ್ಟ ಹಾಗೂ ಹಿನ್ನಡೆಯನ್ನು ಹೊಂದಬೇಕಾಗುವುದು. ವಿವಿಧ ಅವಮಾನಗಳನ್ನು ಅನುಭವಿಸಬೇಕಾಗುವುದು. ಅನೇಕ ದಿನಗಳಿಂದ ಅಂದುಕೊಂಡ ವಿಚಾರದಲ್ಲೂ ಹಿನ್ನಡೆ ಉಂಟಾಗುವುದು. ನ್ಯಾಯಾಂಗ ವ್ಯವಸ್ಥೆಯಲ್ಲೂ ಸೂಲನ್ನು ಅನುಭವಿಸಬೇಕಾಗುವ ಸಾಧ್ಯತೆ ಇದೆ. ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡಲಿದೆ. ಜೀವನದಲ್ಲಿ ಸಮಸ್ಯೆಗಳ ನಿವಾರಣೆಗಾಗಿ ಗಣೇಶನಿಗೆ ಗರಿಕೆಯ ಸಮರ್ಪಣೆ ಹಾಗೂ ದೇವಿಯ ಆರಾಧನೆ ಮಾಡಿ.

ಮಕರ
ಸಂಪೂರ್ಣವಾದ ಸಮಾಧಾನ ಲಭ್ಯವಾಗದು. ಮಾಡುತ್ತಿರುವ ಉದ್ಯೋಗದಲ್ಲಿ ಅಡೆತಡೆ ಹಾಗೂ ಕಿರಿಕಿರಿ ಉಂಟಾಗುವುದು. ಶನಿಯ ಪ್ರಭಾವ ಇರುವುದರಿಂದ ಅನೇಕ ಸಮಸ್ಯೆ ಉಂಟಾಗುವುದು. ಪತ್ನಿಯ ಅನಾರೋಗ್ಯಕ್ಕೆ ಹಣವನ್ನು ವ್ಯಯಿಸಬೇಕಾಗುವುದು. ಮಕ್ಕಳಿಂದ ಅಶುಭ ವಾರ್ತೆ ಕೇಳುವ ಸಾಧ್ಯತೆಗಳಿವೆ. ಅನೇಕ ದಿನಗಳಿಂದ ತೀರ್ಮಾನಿಸಿದ ವಿಚಾರದಲ್ಲಿ ಅಡೆ-ತಡೆ ಉಂಟಾಗುವುದು. ಇದು ಮಾನಸಿಕ ಕಿರಿಕಿರಿಗೆ ಕಾರಣವಾಗುವುದು. ಸಮಸ್ಯೆಗಳ ನಿವಾರಣೆಗೆ ಆಂಜನೇಯ ಮತ್ತು ದೇವಿಯ ಉಪಾಸನೆ ಮಾಡಿ.

ಕುಂಬ
ಇಂದು ನಿಮಗೆ ಸಮಾಧಾನದ ದಿನ. ಆರ್ಥಿಕ ವಲಯದಲ್ಲಿ ಪ್ರಗತಿಯನ್ನು ಸಾಧಿಸುವಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣ. ತಂದೆಯೊಂದಿಗೆ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಕೈಗಾರಿಕೆಗಳಲ್ಲಿ ಲಾಭ ಉಂಟಾಗುವುದು. ವಿದೇಶಯಾನ ಕೈಗೂಡುವುದು. ಅವಿವಾಹಿತರಿಗೆ ವಿವಾಹ ಯೋಗ ಲಭಿಸುವುದು. ಇನ್ನಷ್ಟು ಉತ್ತಮ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.

ಮೀನ
ಮನೆಯಲ್ಲಿ ಸಂತೋಷದ ವಾತಾವರಣ. ನೆಮ್ಮದಿಯನ್ನು ಕಾಣುವಿರಿ. ಅನೇಕದಿನಗಳಿಂದ ತೀರ್ಮಾನಗೊಳ್ಳದ ವ್ಯಾಜ್ಯ ಇಂದು ಪರಿಹಾರ ಕಾಣುವುದು. ಸಹೋದರರ ಆಗಮನ ಹಾಗೂ ಒಂದಿಷ್ಟು ಲಾಭ ಉಂಟಾಗುವುದು. ವಾಹನ ಚಲಿಸುವಾಗ ಆದಷ್ಟು ಜಾಗ್ರತೆಯಿಂದ ಚಲಾಯಿಸಿ. ಇನ್ನಷ್ಟು ಉತ್ತಮ ಬದುಕಿಗಾಗಿ ದೇವಿಯ ಆರಾಧನೆ ಮಾಡಿ.



Click it and Unblock the Notifications











