Latest Updates
-
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು -
ಉದ್ದಿನ ಬೇಳೆ ಇದ್ರೆ ಸಾಕು! ಈ 4 ಹೊಸ ಬಗೆಯ ತಿಂಡಿ ಮಾಡಿ ನೋಡಿ.. ಎಲ್ಲರೂ ಇಷ್ಟಪಟ್ಟು ತಿಂತಾರೆ -
ಹಳೇ ಅನ್ನ ಎಸೆಯಬೇಡಿ! 10 ನಿಮಿಷದಲ್ಲಿ ಮಾಡಿ ಈ ಸ್ವಾದಿಷ್ಟ ದೋಸೆ.. ಉಳಿದ ಅನ್ನದ ಮ್ಯಾಜಿಕ್ ರೆಸಿಪಿ -
March 20 Horoscope: ಸ್ನೇಹ ಸಂಬಂಧಗಳಲ್ಲಿ ಶುಭಫಲ! -
ಅವಿವಾಹಿತರಿಗೆ ಇಂದು ಬಹಳ ಶುಭ ದಿನ! ಲವ್ಗೆ ಕುಟುಂಬದ ಬೆಂಬಲ
14-12-2017 ಗುರುವಾರದ ದಿನ ಭವಿಷ್ಯ

ಸೂರ್ಯನ ಕಿರಣವು ಅತ್ಯಂತ ಪ್ರಕಾಶಮಾನವಾದದ್ದು. ಆ ಬೆಳಕಿಲ್ಲದೆ ಯಾವ ಜೀವ ಸಂಕುಲವೂ ಉಳಿಯದು. ಇಂತಹ ಒಂದು ಪವಿತ್ರ ಹಾಗೂ ಶ್ರೇಷ್ಠವಾದ ಬೆಳಕು ಪ್ರಪಂಚದೆಲ್ಲೆಡೆಯು ಹೋಗುತ್ತದೆ. ಅದಕ್ಕೆ ಆ ಜಾಗ, ಈಜಾಗ ಎನ್ನುವ ತಾರತಮ್ಯವಿಲ್ಲ. ಹಾಗಂತ ಎಂತಹ ಸ್ಥಳಕ್ಕೆ ಹೋದರೂ ಅದು ತನ್ನ ತನವನ್ನು ಮರೆಯುವುದಿಲ್ಲ. ಆ ಶ್ರೇಷ್ಠತೆ ಹಾಗೂ ಪವಿತ್ರತೆಯನ್ನು ಕಾಯ್ದುಕೊಳ್ಳುತ್ತದೆ. ಅದರಂತೆಯೇ ನಾವು ಎಲ್ಲರೊಂದಿಗೂ ಬೆರೆತು ಬಾಳಬೇಕು.
ಮೇಲು-ಕೀಳು ಎನ್ನುವ ತಾರತಮ್ಯವಿಲ್ಲದೆ, ದಾನ-ಧರ್ಮಗಳನ್ನು ಮಾಡಬೇಕು. ಆಗಲೇ ನಮ್ಮ ಜೀವನಕ್ಕೊಂದು ಬೆಲೆ ಸಿಗುವುದು. ಎಲ್ಲಿಗೇ ಹೋದರು ನಮ್ಮ ತನವನ್ನು ನಾವು ಮರೆಯಬಾರದು. ಆಗ ಭಗವಂತನ ಕೃಪೆ ನಮಗೆ ಲಭಿಸುವುದು. ಗುರುವಾರವಾದ ಇಂದು ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆಗಳು ಉಂಟಾಗುವ ಸಾಧ್ಯತೆಗಳಿವೆ. ಎನ್ನುವುದನ್ನು ನೀವು ಅರಿಯಬೇಕು ಎಂದಾದರೆ ಬೋಲ್ಡ್ ಸ್ಕೈ ನೀಡಿರುವ ದಿನ ಭವಿಷ್ಯದ ವಿವರಣೆಯನ್ನು ಪರಿಶೀಲಿಸಿ...

ಮೇಷ
ಎರಡೂವರೆ ವರ್ಷಗಳಿಂದ ಕಷ್ಟಗಳನ್ನೇ ಅನುಭವಿಸುತ್ತಾ ಬಂದಿರುವ ನಿಮ್ಮ ಜೀವನ ಇದೀಗ ಉತ್ತಮ ದಿನಗಳ ಕಡೆಗೆ ಹೆಜ್ಜೆ ಹಾಕುತ್ತಿದೆ. ಸಮಾಧಾನದ ಬದುಕು ನಿಮ್ಮ ಪಾಲಾಗುವುದು. ಅನಿರೀಕ್ಷಿತ ಲಾಭಗಳು ನಿಮಗೆ ಲಭಿಸುವುದು. ವಿದೇಶಯಾನ ಮಾಡಬೇಕು ಎನ್ನುವ ಕನಸು ನನಸಾಗುವುದು. ಮಿತ್ರರಿಂದಲೂ ಸಹಕಾರ ಲಭಿಸುವುದು. ಕೆಲವು ಅನಿರೀಕ್ಷಿತ ಸೋಲುಗಳು ಸಹ ನಿಮ್ಮನ್ನು ಕಾಡುವ ಸಾಧ್ಯತೆಗಳಿವೆ. ಕೆಲವು ಕಠಿಣವಾದ ನಿರ್ಧಾರಗಳಿಂದ ಲಾಭವನ್ನು ಗಳಿಸುವಿರಿ. ವ್ಯಾಪಾರ ವಹಿವಾಟುಗಳಲ್ಲಿ ಸಮೃದ್ಧಿ ಉಂಟಾಗುವುದು. ಮಕ್ಕಳಿಂದ ಶುಭ ವಾರ್ತೆಯನ್ನು ಕೇಳುವಿರಿ. ಅನೇಕ ದಿನಗಳಿಂದ ತೀರ್ಮಾನಿಸಿದ ತೀರ್ಮಾನಗಳು ಇಂದು ಕಾರ್ಯ ರೂಪಕ್ಕೆ ಬರುವುದು. ಸ್ತ್ರೀಯರು ಮಾಡುತ್ತಿರುವ ಕೆಲಸದಲ್ಲಿ ಪ್ರಗತಿ ಹಾಗೂ ವಿದ್ಯಾಭ್ಯಾಸದಲ್ಲಿ ಮುನ್ನಡೆ ಸಾಧಿಸುವಿರಿ. ಇನ್ನಷ್ಟು ಉತ್ತಮ ಬದುಕಿಗಾಗಿ ಗಣೇಶನ ಆರಾಧನೆ ಹಾಗೂ ಗುರುವಿನ ಸ್ಮರಣೆ ಮಾಡಿ.

ವೃಷಭ
ಆರ್ಥಿಕ ವಲಯದಲ್ಲಿ ಸಂಕಷ್ಟ ಉಂಟಾಗುವುದು. ಮಿತ್ರರಿಂದಲೇ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ. ದಾಂಪತ್ಯದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ. ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕೆಂದುಕೊಳ್ಳುವ ವಿಚಾರದಲ್ಲೂ ಅಡ್ಡಿ ಉಂಟಾಗುವ ಸಾಧ್ಯತೆಗಳಿವೆ. ಮಕ್ಕಳಿಂದ ಅಶುಭ ವಾರ್ತೆಗಳನ್ನು ಕೇಳುವಿರಿ. ನಿರ್ದಿಷ್ಟ ಗುರಿಯನ್ನು ತಲುಪಲು ಅಸಾಧ್ಯವಾಗುವುದು. ಬಂಧು ಮಿತ್ರರಿಂದಲೂ ಕಿರಿಕಿರಿ ಉಂಟಾಗುವುದು. ಸ್ಥಿರಾಸ್ತಿಯಿಂದ ನಷ್ಟ. ಬೆಳೆಗಳನ್ನು ಕಳೆದುಕೊಳ್ಳುವ ಲಕ್ಷಣ. ಸಮಸ್ಯೆಗಳ ನಿವಾರಣೆಗೆ ಗುರುವಿನ ಆರಾಧನೆ ಮಾಡಿ.

ಮಿಥುನ
ಸಮಾಧಾನದ ಬದುಕನ್ನು ಕಾಣುವಿರಿ. ಬಂಧು ಮಿತ್ರರ ಸಹಕಾರವೂ ಲಭ್ಯವಾಗುವುದು. ಮನೆಯಲ್ಲಿ ನೆಮ್ಮದಿ ಹಾಗೂ ನಿರ್ದಿಷ್ಟ ಗುರಿಯನ್ನು ತಲುಪುವಿರಿ. ವಿದ್ಯಾರ್ಥಿಗಳಿಗೆ ಶುಭ ದಿನ, ವ್ಯಾಪಾರಿಗಳಿಗೆ ಸಾಮಾನ್ಯವಾದ ದಿನ. ಶುಭ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಅತಿಯಾದ ಆಹಾರ ಸೇವನೆ ಮಾಡದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ಕರ್ಕ
ನಿಮಗಿಂದು ಅದೃಷ್ಟದ ದಿನ. ಯಾವ ಕೆಲಸಕ್ಕೆ ಮುಂದಾದರೂ ಯಶಸ್ಸನ್ನು ಸಾಧಿಸುವಿರಿ. ವ್ಯಾಪಾರ ವಹಿವಾಟು ನಡೆಸುತ್ತಿರುವವರಿಗೆ ಉತ್ತಮವಾದ ದಿನ. ತಾಂತ್ರಿಕ ಕ್ಷೇತ್ರದಲ್ಲಿರುವವರಿಗೆ ಅನುಕೂಲ ಉಂಟಾಗುವುದು. ವಿದೇಶಯಾನದ ಕನಸು ನನಸಾಗುವುದು. ಪತ್ರಿಕೋದ್ಯಮದಲ್ಲಿರುವವರು ಮುನ್ನಡೆ ಸಾಧಿಸುವರು. ಬಂಧು ಮಿತ್ರರಿಂದಲೂ ಸಹಕಾರ ಲಭ್ಯವಾಗುವುದು. ಮಕ್ಕಳಿಂದ ಶುಭವಾರ್ತೆ ಕೇಳುವಿರಿ. ವಿದ್ಯಾರ್ಥಿಗಳಿಗೆ ಶುಭ ದಿನ. ಇನ್ನಷ್ಟು ಉತ್ತಮ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ಸಿಂಹ
ಆರ್ಥಿಕ ವಲಯವು ಕುಸಿತವನ್ನು ಕಾಣುವುದು. ನಿಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಬರಬಹುದು. ಅಹಂಕಾರವನ್ನು ತೋರದಿರಿ. ಜಂಟಿ ವ್ಯವಹಾರಕ್ಕೆ ಮುಂದಾಗದಿರಿ. ಸಾಲ ಪಡೆಯುವುದು ಅಥವಾ ನೀಡುವ ಕೆಲಸಕ್ಕೆ ಕೈಹಾಕದಿರಿ. ಶನಿಯ ಪ್ರಭಾವ ಇರುವುದರಿಂದ ಎಚ್ಚರಿಕೆಯಿಂದ ನಡೆಯಬೇಕಿದೆ. ಸಹೋದ್ಯೋಗಿಗಳಿಂದ ಹಾಗೂ ಸಹ ಪಾಠಿಗಳಿಂದಲೂ ಅಡೆತಡೆ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕುಕಿಗಾಗಿ ಗುರುವಿನ ಆರಾಧನೆ ಮಾಡಿ.

ಕನ್ಯಾ
ಇಂದು ನಿಮಗೆ ಸಾಮಾನ್ಯವಾದಂತಹ ದಿನ. ಮಾನಸಿಕ ಕಿರಿಕಿರಿ ದೂರವಾಗುವುದು. ಅನಿರೀಕ್ಷಿತ ಒಲವನ್ನು ಪಡೆದುಕೊಳ್ಳುವಿರಿ. ದಾಂಪತ್ಯದಲ್ಲಿ ಸುಖ ಜೀವನವನ್ನು ಕಾಣುವಿರಿ. ಸಂತಾನ ಸಮಸ್ಯೆಯಿಂದ ಬಳಲುತ್ತಿದ್ದವರು ಸಂತಾನ ಭಾಗ್ಯ ಪಡೆದುಕೊಳ್ಳುವರು. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷದ ಜೀವನಕ್ಕಾಗಿ ಗುರುವಿನ ಆರಾಧನೆ ಮಾಡಿ.

ತುಲಾ
ಇಂದು ನೀವು ಲಾಭವನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುವಿರಿ. ವರಮಾನವು ಹೆಚ್ಚಲಿದೆ. ಮನೆಯಲ್ಲಿ ನೆಮ್ಮದಿ ಹಾಗೂ ಸುಂದರವಾದ ಜೀವನಕ್ಕೆ ಭಗವಂತನ ಕೃಪೆ ದೊರೆಯುವುದು. ಮಕ್ಕಳಿಂದ ಶುಭ ವಾರ್ತೆ. ಸಹೋದರರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗುವುದು. ಸಿಹಿ ಭೋಜನವನ್ನು ಸವಿಯಲಿದ್ದೀರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ದತ್ತಾತ್ರೇಯನ ಆರಾಧನೆ ಮಾಡಿ.

ವೃಶ್ಚಿಕ
ಆರ್ಥಿಕವಾಗಿ ಕುಸಿತ ಉಂಟಾದರೂ ಮಾನಸಿಕ ಧೈರ್ಯವು ನಿಮ್ಮನ್ನು ಉತ್ತಮ ಸ್ಥಾನಕ್ಕೆ ಕರೆದೊಯ್ಯುವುದು. ಯುವಕರು ಸೋಮಾರಿತನ ಹಾಗೂ ಚಟಕ್ಕೆ ಬೀಳುವ ಸಾಧ್ಯತೆಗಳಿವೆ. ಆದಷ್ಟು ಎಚ್ಚರಿಕೆಯಿಂದ ಇರಿ. ಅನಿರೀಕ್ಷಿತ ಸೋಲು ನಿಮ್ಮನ್ನು ಕಾಡುವುದು. ಸ್ಥಿರಾಸ್ತಿಯನ್ನು ಮಾರದಿರಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗುರುವಿನ ಆರಾಧನೆ ಹಾಗೂ ಇಷ್ಟ ದೇವರ ಪ್ರಾರ್ಥನೆ ಮಾಡಿ.

ಧನು
ಮಾನಸಿಕವಾದ ಕಿರಿಕಿರಿ ಹಾಗೂ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರುವ ಲಕ್ಷಣಗಳಿವೆ. ಎಡಗಾಲಿಗೆ ಪೆಟ್ಟಾಗುವ ಸಾಧ್ಯತೆಗಳಿವೆ. ಯುವಕರು ವಾಹನ ಚಲಾಯಿಸುವಾಗ ಹೆಚ್ಚು ಕಾಳಜಿ ವಹಿಸಬೇಕು. ಮೂರನೇ ವ್ಯಕ್ತಿಯ ಮಾತಿಗೆ ಕಿವಿಕೊಡದಿರಿ. ಇದರಿಂದ ನಿಮ್ಮ ಜೀವನ ಹಾಳಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಗಣೇಶ ಮತ್ತು ಗುರುವಿನ ಆರಾಧನೆ ಮಾಡಿ.

ಮಕರ
ಆತುರದಿಂದ ವರ್ತಿಸದಿರಿ. ಕೈಗಾರಿಕೋದ್ಯಮದಲ್ಲಿ ಕೆಲವರಿಗೆ ಅಸಮಧಾನ ಉಂಟಾಗುವ ಸಾಧ್ಯತೆಗಳಿವೆ. ನಷ್ಟ ಉಂಟಾಗುವುದು. ಬ್ಯಾಂಕ್ ನೌಕರರು ಕೆಟ್ಟ ಪರಿಸ್ಥಿತಿಯನ್ನು ಎದುರಿಸಬೇಕಾಗುವ ಸಾಧ್ಯತೆಗಳಿವೆ. ವಂಚಕರ ಸುಳಿಗೆ ಬೀಳುವ ಸಾಧ್ಯತೆಗಳಿವೆ. ಸಾಲ ನೀಡುವಾಗ ಎಚ್ಚರಿಕೆಯನ್ನು ವಹಿಸಿ. ಸಮಸ್ಯೆಗಳ ನಿವಾರಣೆ ಹಾಗೂ ಉತ್ತಮ ಬದುಕಿಗಾಗಿ ಗುರುವಿನ ಆರಾಧನೆ ಮಾಡಿ.

ಕುಂಬ
ಮನೆಯಲ್ಲಿ ನೆಮ್ಮದಿ, ಮನಸ್ಸಿಗೆ ಸಂತೋಷ ದೊರೆಯುವುದು. ಸ್ತ್ರೀಯರು ಉತ್ತಮ ಪ್ರಗತಿಯನ್ನು ಸಾಧಿಸುವರು. ಬಡ್ತಿ ಸಿಗುವ ಸಾಧ್ಯತೆಗಳಿವೆ. ಆರಕ್ಷಣೆ ಅಧಿಕಾರಿಗಳಿಗೆ ಹಾಗೂ ಅರಣ್ಯ ಇಲಾಖೆಯಲ್ಲಿರುವವರಿಗೆ ಅನುಕೂಲಕರವಾದ ದಿನ. ಸುಂದರವಾದ ಕನಸು ನನಸಾಗುವುದು. ಸಮಸ್ಯೆಗಳ ನಿವಾರಣೆ ಹಾಗೂ ಇನ್ನಷ್ಟು ಶುಭ ಫಲಗಳಿಗಾಗಿ ಗುರುವಿನ ಆರಾಧನೆ ಮಾಡಿ.

ಮೀನ
ನಿಮಗೆ ಶುಭ ದಿನ. ಅನಿರೀಕ್ಷಿತ ಸೋಲುಗಳಿಂದ ಪಾರಾಗುವಿರಿ. ನಿರೀಕ್ಷಿತ ಯಶಸ್ಸಿಗೆ ಸ್ನೇಹಿತರ ಸಹಕಾರ ಲಭ್ಯವಾಗುವುದು. ರಾಜಕೀಯದಲ್ಲಿರುವವರಿಗೆ ಉತ್ತಮವಾದ ದಿನ. ಹಾಗೂ ಯಶಸ್ಸನ್ನು ಪಡೆದುಕೊಳ್ಳುವರು. ಸಮಾಜ ಸುಧಾರಕರಿಗೆ ಸನ್ಮಾನಗಳು ಲಭಿಸುವುದು. ಉಪಕಾರಿಗಳಿಗೆ ಪ್ರಶಂಸೆ ಹಾಗೂ ಅಪಕಾರಿಗಳಿಗೆ ಉಪದ್ರ ಉಂಟಾಗುವ ಸಾಧ್ಯತೆಗಳಿವೆ. ಸಮಸ್ಯೆಗಳ ನಿವಾರಣೆ ಹಾಗೂ ಸಂತೋಷಕರವಾದ ಜೀವನಕ್ಕೆ ಗುರುವಿನ ಆರಾಧನೆ ಮಾಡಿ.



Click it and Unblock the Notifications











