For Quick Alerts
ALLOW NOTIFICATIONS  
For Daily Alerts

ಬಲು ಘೋರ ಅನುಭವ ನೀಡುವ ವಿಸ್ಮಯ ಸ್ಥಳಗಳಿವು!

ಜಗತ್ತಿನಲ್ಲಿ ಹಲವಾರು ನಿಗೂಢ ಸ್ಥಳಗಳಿದ್ದು ಹೆಚ್ಚಿನವುಗಳ ಬಗ್ಗೆ ಯಾವುದೋ ಅಗೋಚರ ಕಾರಣಕ್ಕಾಗಿ ಮಾಹಿತಿಯನ್ನು ಗುಪ್ತವಾಗಿಯೇ ಇಡಲಾಗಿದೆಯಂತೆ! ಹಾಗಾದರೆ ಇದರ ಹಿಂದಿರುವ ರಹಸ್ಯವೇನು? ಮುಂದೆ ಓದಿ....

By Deepu
|

ಪ್ರತಿ ದೇಶದಲ್ಲಿಯೂ ಅತಿಗಣ್ಯ ವ್ಯಕ್ತಿಗಳಿರುವ ಕಟ್ಟಡ ಅಥವಾ ರಕ್ಷಣಾ ವ್ಯವಸ್ಥೆಯ ಕಟ್ಟಡಗಳಿಗೆ ಪ್ರವೇಶ ಪಡೆಯಲು ಜನಸಾಮಾನ್ಯರಿಗೆ ಸಾಧ್ಯವಿಲ್ಲ. ಏಕೆಂದರೆ ಸುರಕ್ಷತೆಯ ವಿಷಯವಾಗಿ ವಿಶೇಷ ಅನುಮತಿಯಿಲ್ಲದೇ ಪ್ರವೇಶ ಸಾಧ್ಯವೇ ಇಲ್ಲ. ಉದಾಹರಣೆಗೆ ರಾಷ್ಟ್ರಪತಿ ಭವನ. ಭಾರತದ ಈ ಐದು ಸ್ಥಳಗಳಲ್ಲಿ ಭಾರತೀಯರಿಗೇ ಪ್ರವೇಶವಿಲ್ಲ!

ಆದರೆ ಕೆಲವು ಸ್ಥಳಗಳು ಈ ನಿಯಮಗಳಿಗೆ ಹೊರತಾಗಿದ್ದು ಯಾರಿಗೂ ಅನುಮತಿ ನೀಡಲಾಗುವುದಿಲ್ಲ. ಜಗತ್ತಿನಲ್ಲಿ ಇಂತಹ ಹಲವಾರು ಸ್ಥಳಗಳಿದ್ದು ಹೆಚ್ಚಿನವುಗಳ ಬಗ್ಗೆ ಯಾವುದೋ ಅಗೋಚರ ಕಾರಣಕ್ಕಾಗಿ ಮಾಹಿತಿಯನ್ನು ಗುಪ್ತವಾಗಿಯೇ ಇಡಲಾಗಿದೆಯಂತೆ! ಹಾಗಾದರೆ ಇದರ ಹಿಂದಿರುವ ರಹಸ್ಯವೇನು? ಮುಂದೆ ಓದಿ....

ಕಿಲಕಿಲ ನಗುವ ಗೊಂಬೆಗಳು!!

ಕಿಲಕಿಲ ನಗುವ ಗೊಂಬೆಗಳು!!

ಮೆಕ್ಸಿಕೋದ ಐಲಾ ಡೆ ಲಾಸ್ ಮ್ಯೂನೆಕಾಸ್ (ಗೊಂಬೆಗಳ ದ್ವೀಪ) ಇಡಿಯ ದ್ವೀಪದಲ್ಲಿ ಮರಗಳ, ಗಿಡಗಳ, ಒಟ್ಟಾರೆ ಎಲ್ಲೆಲ್ಲಿ ತೂಗು ಹಾಕಬಹುದೋ ಅಲ್ಲೆಲ್ಲಾ ಗೊಂಬೆಗಳನ್ನು ತೂಗು ಹಾಕಿರುವ ಈ ದ್ವೀಪ ಪ್ರಾಯಶಃ ವಿಶ್ವದಲ್ಲಿಯೇ ಅತಿ ಹೆಚ್ಚು ಭಯಹುಟ್ಟಿಸುವ ದ್ವೀಪವಾಗಿದೆ. ರಾತ್ರಿ ಹೊತ್ತು ಈ ಗೊಂಬೆಗಳಲ್ಲಿ ಆತ್ಮಸಂಚಾರವಾಗಿ ಜೀವತಳೆಯುತ್ತವೆ, ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತವೆ, ಕಿಲಕಿಲ ನಗುತ್ತವೆ ಎಂದು ಸ್ಥಳೀಯರು ತಿಳಿಸುತ್ತಾರೆ.Image courtesy

ಅಂಡಮಾನಿನ ನಾರ್ಥ್ ಸೆಂಟಿನಲ್ ದ್ವೀಪ

ಅಂಡಮಾನಿನ ನಾರ್ಥ್ ಸೆಂಟಿನಲ್ ದ್ವೀಪ

ಈ ಮೂಲನಿವಾಸಿಗಳು ನಾಗರಿಕತೆಯನ್ನು ದ್ವೇಷಿಸುವ ಜನರಾಗಿದ್ದು ತಮ್ಮ ದ್ವೀಪಕ್ಕೆ ಯಾರನ್ನೂ ಬರಮಾಡಿಕೊಳ್ಳಲು ಇಚ್ಛಿಸುವುದಿಲ್ಲ. ಪ್ರಾಯಶಃ ಈ ಜನರು ಇಂದು ಭೂಮಿಯಲ್ಲಿ ಉಳಿದಿರುವ ಕೆಲವೇ ಮೂಲನಿವಾಸಿಗಳಲ್ಲಿ ಒಬ್ಬರಾಗಿರಬಹುದು ಎಂದು ನಂಬಲಾಗಿದೆ. ಈ ದ್ವೀಪಕ್ಕೆ ಭೇಟಿ ನೀಡುವವರನ್ನು ಅವರು ಅತಿಕ್ರಮಿಗಳೆಂದು ಪರಿಗಣಿಸಿ ಬಾಣ ಹೂಡಿ ಕೊಲ್ಲಲು ಯತ್ನಿಸುತ್ತಾರೆ. Image courtesy

ಹಾವುಗಳ ದ್ವೀಪ!

ಹಾವುಗಳ ದ್ವೀಪ!

ಬ್ರೆಜಿಲ್ ದೇಶದ ಹಾವುಗಳ ದ್ವೀಪ ಬ್ರೆಜಿಲ್ ದೇಶದ ಸಾವೋ ಪಾವ್ಲೋ ತೀರದಿಂದ ಅನತಿ ದೂರದಲ್ಲಿರುವ Ilha da Queimada Grande ಎಂಬ ದ್ವೀಪ Snake Island ಅಥವಾ ಹಾವುಗಳ ದ್ವೀಪವೆಂದೇ ಪ್ರಸಿದ್ಧಿ ಪಡೆದಿದೆ. ಹೆಸರೇ ಸೂಚಿಸುವಂತೆ ಈ ದ್ವೀಪದಲ್ಲಿ ವಿಪರೀತ ಸಂಖ್ಯೆಯಲ್ಲಿ ಚಿನ್ನದ ಬಣ್ಣದ ಹಾವುಗಳು ಅಥವಾ Golden Lancehead Vipers (Bothrops insularis) ಹರಿದಾಡಿಕೊಂಡಿವೆ ಎಷ್ಟು ಎಂದರೆ ಪ್ರತಿ ಚದರ ಮೀಟರಿಗೆ ಒಂದರಷ್ಟು ಹೆಚ್ಚು!. ಈ ಹಾವುಗಳು ವಿಷಪೂರಿತವಾಗಿದ್ದು ದ್ವೀಪದ ಎಲ್ಲೆಡೆ ಕಾಣಬರುವ ಕಾರಣ ಈ ದ್ವೀಪಕ್ಕೆ ಕಾಲಿಡುವುದು ಪ್ರಾಣಕ್ಕೆ ಅಪಾಯಕರ.

ಯಹೂದಿಗಳ ಹಳೆಯ ಸ್ಮಶಾನ

ಯಹೂದಿಗಳ ಹಳೆಯ ಸ್ಮಶಾನ

ಝೆಕ್ ಗಣರಾಜ್ಯದ ಪ್ರಾಗ್ ಜೊಸೆಫೊವ್ ನಲ್ಲಿದೆ ಈ ಸ್ಮಶಾನವಿದೆ. ಈ ಸ್ಮಶಾನದಲ್ಲಿ ಲೆಕ್ಕವಿಲ್ಲದಷ್ಟು ಶವಗಳ ಅಂತ್ಯಕ್ರಿಯೆ ನಡೆಸಲಾಗಿದೆ. 12 ಸಾವಿರಷ್ಟು ಸಮಾಧಿ ಶಿಲೆಗಳನ್ನು ಇಲ್ಲಿ ನೆಡಲಾಗಿದೆ. ಆದರೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಶವಗಳ ಅಂತ್ಯಸಂಸ್ಕಾರ ಇಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಈ ಸ್ಮಶಾನದಲ್ಲಿ ರಾತ್ರಿ ವೇಳೆ ವಿಚಿತ್ರ ಚಲನವಲನಗಳು ನಡೆಯುತ್ತದೆ, ಹಾಗಾಗಿ ಈ ಪ್ರದೇಶಗಳತ್ತ ಯಾರೂ ತಲೆ ಎತ್ತಿ ಕೂಡ ನೋಡುವುದಿಲ್ಲವಂತೆ. Image courtesy

ಜಪಾನಿನ ಐಸೆ ಗ್ರಾಂಡ್ ಮಂದಿರಕ್ಕೆ ಯಾರಿಗೂ ಪ್ರವೇಶವಿಲ್ಲ!

ಜಪಾನಿನ ಐಸೆ ಗ್ರಾಂಡ್ ಮಂದಿರಕ್ಕೆ ಯಾರಿಗೂ ಪ್ರವೇಶವಿಲ್ಲ!

ಈ ಮಂದಿರವನ್ನು ಕ್ರಿ. ಪೂರ್ವ ನಾಲ್ಕನೆಯ ಇಸವಿಯಲ್ಲಿ ಕಟ್ಟಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಮಂದಿರಕ್ಕೆ ಕೇವಲ ಜಪಾನಿನ ರಾಜಮನೆತನದ ಅತ್ಯುನ್ನತ ಹುದ್ದೆ ಹೊಂದಿರುವ ವ್ಯಕ್ತಿಗಳು ಮತ್ತು ಮಂದಿರದ ಪೂಜಾರಿ ಅಥವಾ ಪೂಜಾರ್ತಿಯವರಿಗೆ ಮಾತ್ರ ಪ್ರವೇಶ ಸಾಧ್ಯ. ಇನ್ನುಳಿದಂತೆ ಜಗತ್ತಿನ ಬೇರೆ ಯಾರಿಗೂ ಈ ಹುಲ್ಲಿನ ಛಾವಣಿಯ ಮಂದಿರಕ್ಕೆ ಪ್ರವೇಶ ಸಾಧ್ಯವಿಲ್ಲ.wikipedia.org

English summary

Places You Are Absolutely, Definitely, Not Allowed To Visit

These places are not just barred for human visits, they have remained so secretive for all these years, that we never ever got of wind of their existence until now! To step into these places one either needs to be crazy scientist/researcher or absolute royalty. We advise you not to plan out any outings as yet!
X
Desktop Bottom Promotion