For Quick Alerts
ALLOW NOTIFICATIONS  
For Daily Alerts

ಭಾರತದ ಈ ಐದು ಸ್ಥಳಗಳಲ್ಲಿ ಭಾರತೀಯರಿಗೇ ಪ್ರವೇಶವಿಲ್ಲ!

By Super
|

ರಾಷ್ಟ್ರಪತಿ ಭವನ ಮೊದಲಾದ ಕೆಲವು ಸ್ಥಳಗಳಲ್ಲಿ ಪ್ರವೇಶ ಪಡೆಯಲು ವಿಶೇಷ ಅನುಮತಿಯ ಅಗತ್ಯವಿದೆ. ಆದರೆ ಈ ಅನುಮತಿಗೆ ರಾಷ್ಟ್ರೀಯತೆ ಅಡ್ಡಿಯಾಗದು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತದಲ್ಲಿ ಇಂದಿಗೂ ಜಾತೀಯತೆ ಮೆರೆಯುತ್ತಿದ್ದು ಹಲವೆಡೆ ಕೆಲವು ಜಾತಿಗಳ ಜನರಿಗೆ ಮಂದಿರ ಮೊದಲಾದ ಸ್ಥಳಗಳಲ್ಲಿ ಪ್ರವೇಶ ನಿಷೇಧವಿದೆ. ಆದರೆ ಕೆಲವು ವ್ಯಾಪಾರಿ ಮನೋಭಾವದವರು ಭಾರತದಲ್ಲಿ ಕೆಲವು ವ್ಯಾಪಾರದ ಸ್ಥಳಗಳನ್ನು ಸ್ಥಾಪಿಸಿ ಕೇವಲ ವಿದೇಶೀಯರಿಗೆ ಮೀಸಲಾಗಿಸಿ ಭಾರತೀಯರಿಗೇ ಪ್ರವೇಶ ನಿರಾಕರಿಸಿದ್ದಾರೆ.

ಇನ್ನೂ ಕೆಲವೆಡೆಯಂತೂ "ಇಲ್ಲಿ ಭಾರತೀಯರಿಗೆ ಮತ್ತು ನಾಯಿಗಳಿಗೆ ಪ್ರವೇಶವಿಲ್ಲ" ಎಂಬ ಫಲಕವನ್ನು ರಾಜಾರೋಷವಾಗಿಯೇ ಸಾರ್ವಜನಿಕವಾಗಿ ಇರಿಸಿದ್ದಾರೆ. ಇಂತಹದ್ದೊಂದು ಪ್ರದೇಶ ಬೆಂಗಳೂರಿನಲ್ಲಿಯೇ ಇತ್ತು ಎಂದರೆ ಅಚ್ಚರಿಯಾಗದೇ? ಬನ್ನಿ, ಇಂತಹ ಐದು ಸ್ಥಳಗಳನ್ನು ಇಂದಿನ ಸ್ಲೈಡ್ ಶೋ ಮೂಲಕ ನೋಡೋಣ:

ಬೆಂಗಳೂರಿನ ಯುನೋ-ಇನ್ ಹೋಟೆಲ್

ಬೆಂಗಳೂರಿನ ಯುನೋ-ಇನ್ ಹೋಟೆಲ್

2012ರಲ್ಲಿ ಜಪಾನಿನ ನಿಪ್ಪಾನ್ ಇನ್ಫ್ರಾಸ್ಟ್ರಕ್ಚರ್ ಕಂಪನಿಯ ಸಹಯೋಗದೊಂದಿಗೆ ಯೂನೋ-ಇನ್ ಎಂಬ ಹೋಟೆಲೊಂದನ್ನು ಕೇವಲ ಜಪಾನೀಯರಿಗಾಗಿ ತೆರೆಯಲ್ಪಟ್ಟಿತು. ಐಟಿ ಬಿಟಿ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಬೆಂಗಳೂರಿಗೆ ಇತರ ರಾಷ್ಟ್ರಗಳ ಜನತೆಯೊಂದಿಗೇ ಜಪಾನಿನ ಪ್ರಮುಖ ಸಂಸ್ಥೆಗಳೂ ಕಾಲಿಟ್ಟವು. ಈ ಸಂಸ್ಥೆಗಳ ಪ್ರಮುಖರಿಗಾಗಿಯೇ ಈ ಹೋಟೆಲ್ ಮುಡಿಪಾಗಿದ್ದು ಇಲ್ಲಿ ಭಾರತೀಯರಿಗೆ ಪ್ರವೇಶವಿಲ್ಲ ಎಂದು ಸ್ಪಷ್ಟವಾಗಿಯೇ ಪ್ರಕಟಿಸಲಾಗಿತ್ತು.

ಬೆಂಗಳೂರಿನ ಯುನೋ-ಇನ್ ಹೋಟೆಲ್

ಬೆಂಗಳೂರಿನ ಯುನೋ-ಇನ್ ಹೋಟೆಲ್

ಆದರೆ 2014ರಲ್ಲಿ ಹೋಟೆಲಿಗೆ ಪ್ರವೇಶಿಸಲು ಯತ್ನಿಸಿದ ಭಾರತೀಯರನ್ನು ತಡೆದ ಸಿಬ್ಬಂದಿ ನಡುವೆ ನಡೆದ ಚಕಮಕಿಯ ಕಾರಣ ಬೆಂಗಳೂರು ಮಹಾನಗರ ಪಾಲಿಕೆ ಈ ಹೋಟೆಲಿನ ಸದಸ್ಯತ್ವವನ್ನು ರದ್ದುಪಡಿಸಿತು. ಭಾರತೀಯ ಸಂವಿಧಾನದಲ್ಲಿ ರಾಷ್ಟ್ರೀಯತೆ, ಬಣ್ಣ, ಜಾತಿಯ ಕಾರಣ ಸಾರ್ವಜನಿಕ ಸ್ಥಳದಲ್ಲಿ ಪ್ರವೇಶ ನಿರಾಕರಿಸುವಂತಿಲ್ಲ ಎಂಬ ವಿಧಿಯನ್ನೇ ನಗರಪಾಲಿಕೆ ಎತ್ತಿ ಹಿಡಿಯಿತು.

Image courtesy - www.dailymail.co.u

ಹಿಮಾಚಲ ಪ್ರದೇಶದ ಫ್ರೀ ಕಾಸೋಲ್ ಕೆಫೆ

ಹಿಮಾಚಲ ಪ್ರದೇಶದ ಫ್ರೀ ಕಾಸೋಲ್ ಕೆಫೆ

ಹಿಮಾಲಯದ ತಪ್ಪಲಿನಲ್ಲಿರುವ ಹಿಮಾಚಲ ಪ್ರದೇಶದ ತಣ್ಣಗಿನ ಪುಟ್ಟ ಪಟ್ಟಣವಾದ ಕಾಸೋಲ್‌ಗೆ ಭೇಟಿ ನೀಡುವ ವಿದೇಶೀಯರಲ್ಲಿ ಇಸ್ರೇಲಿಗರೇ ಹೆಚ್ಚು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹಿಮಾಚಲ ಪ್ರದೇಶದ ಫ್ರೀ ಕಾಸೋಲ್ ಕೆಫೆ

ಹಿಮಾಚಲ ಪ್ರದೇಶದ ಫ್ರೀ ಕಾಸೋಲ್ ಕೆಫೆ

ಇವರಿಗೆ ತಾವು ಉಣ್ಣುವ ಸ್ಥಳದಲ್ಲಿ ಭಾರತೀಯರಿದ್ದರೆ ಮುಜುಗರ ಅನುಭವಿಸುತ್ತಾರೆ ಎಂದು ಮನಗಂಡ ಕೆಫೆ ಮಾಲಿಕರು ಭಾರತೀಯರನ್ನೇ ಕೆಫೆಯಿಂದ ಹೊರಗಿಟ್ಟಲು ರೆಡಿಯಾದರು! ಈ ಬಗ್ಗೆ ಕೆಲವು ಮನವಿಗಳನ್ನು ನೀಡಲಾಗಿದೆಯಾದರೂ ಪರಿಣಾಮವಾದಂತೆ ಕಾಣುತ್ತಿಲ್ಲ.

Image courtesy - www.firstpost.com

ಗೋವಾದ

ಗೋವಾದ "ವಿದೇಶೀಯರಿಗೆ ಮಾತ್ರ" ತೀರಗಳು

ನಮ್ಮ ಗೋಕರ್ಣ, ಕಾರವಾರದ ಬೀಚುಗಳಲ್ಲಿ ವಿದೇಶೀಯರು ಸೂರ್ಯಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರೂ ಗೋವಾದ ಕೆಲವು ತೀರಗಳಿಗೆ ಆಗಮಿಸುವಷ್ಟಿಲ್ಲ. ಏಕೆಂದರೆ ಈ ತೀರಗಳನ್ನು ಕೆಲವು ಖಾಸಗಿ ಸಂಸ್ಥೆಗಳು ವಹಿಸಿಕೊಂಡಿದ್ದು ಇಲ್ಲಿ ಭಾರತೀಯರಿಗೆ ಪ್ರವೇಶವೇ ಇಲ್ಲ!

ಗೋವಾದ

ಗೋವಾದ "ವಿದೇಶೀಯರಿಗೆ ಮಾತ್ರ" ತೀರಗಳು

ಇದಕ್ಕೇನು ಕಾರಣ ಎಂದು ಕೇಳಿದರೆ ಇಂತಹ ತೀರಗಳಲ್ಲಿ ಸೂರ್ಯಸ್ನಾನ ಮಾಡುವ ವಿದೇಶೀಯರನ್ನು ದಿಟ್ಟಿಸಿ ನೋಡುವ ಭಾರತೀಯರ ಪರಿ ಅವರಿಗೆ ಇಷ್ಟವಾಗುವುದಿಲ್ಲ! ಅಂದರೆ ಭಾರತೀಯರು ಬಿಟ್ಟು ಬೇರೆ ಯಾವ ರಾಷ್ಟ್ರದವರಾದರೂ ಅಲ್ಲಿ ನುಗ್ಗಬಹುದು!

ಚೆನ್ನೈಯ ಒಂದು ಹೋಟೆಲ್ (ವಿನಂತಿಯ ಮೇರೆಗೆ ಹೆಸರನ್ನು ಪ್ರಕಟಿಸಲಾಗಿಲ್ಲ)

ಚೆನ್ನೈಯ ಒಂದು ಹೋಟೆಲ್ (ವಿನಂತಿಯ ಮೇರೆಗೆ ಹೆಸರನ್ನು ಪ್ರಕಟಿಸಲಾಗಿಲ್ಲ)

ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿಯ ಅನುಸಾರ ಚೆನ್ನೈಯಲ್ಲಿರುವ ಓರ್ವ ನವಾಬರ ಪುರಾತನ ಹವೇಲಿ ಅಥವಾ ಭವ್ಯ ಬಂಗಲೆಯನ್ನು ಈಗ ಹೋಟೆಲನ್ನಾಗಿ ಮಾರ್ಪಡಿಸಲಾಗಿದ್ದು ಪ್ರವೇಶವನ್ನು ಕೇವಲ ವಿದೇಶೀಯರಿಗೆ ಮುಡಿಪಾಗಿರಿಸಲಾಗಿದೆ. ಈ ಹೋಟೆಲಿನಲ್ಲಿ ವಾಸ್ತವ್ಯ ಹೂಡಲು ವಿದೇಶೀ ಪಾಸ್ ಪೋರ್ಟ್ ಹೊಂದಿರುವುದು ಅಗತ್ಯವಾಗಿದೆ.

ಪಾಂಡಿಚೇರಿಯ

ಪಾಂಡಿಚೇರಿಯ "ವಿದೇಶೀಯರಿಗೆ ಮಾತ್ರ" ಸಮುದ್ರತೀರಗಳು

ಗೋವಾದ ಬಳಿಕ ಭಾರತದ ಪೂರ್ವತೀರದ, ಫ್ರೆಂಚರ ವಾಸ್ತುಶಿಲ್ಪ ಹೆಚ್ಚಾಗಿ ಕಾಣಬರುವ ಪಾಂಡಿಚೇರಿಯಲ್ಲಿಯೂ ಹಲವು ವಿದೇಶಿಯರಿಗೆ ಪ್ರಿಯವಾದ ಬೀಚುಗಳಿವೆ.

ಪಾಂಡಿಚೇರಿಯ

ಪಾಂಡಿಚೇರಿಯ "ವಿದೇಶೀಯರಿಗೆ ಮಾತ್ರ" ಸಮುದ್ರತೀರಗಳು

ಸ್ಫಟಿಕ ಶುಭ್ರವಾದ ನೀರು, ಹದವಾದ ಬಿಸಿಲು ಮತ್ತು ತುಂಬಾ ಎತ್ತರವಲ್ಲದ ಅಲೆಗಳು ಇವರ ಸೂರ್ಯಸ್ನಾನಕ್ಕೆ ಹೇಳಿ ಮಾಡಿಸಿದ ಸ್ಥಳಗಳಾಗಿವೆ. ಈ ಸ್ಥಳಗಳನ್ನೂ ಗುರುತಿಸಿ ಕೇವಲ ವಿದೇಶೀಯರಿಗಾಗಿ ಮುಡಿಪಾಗಿರಿಸಲಾಗಿದೆ. ಈ ಬೀಚುಗಳಲ್ಲಿಯೂ "ಭಾರತೀಯರಿಗೆ ಪ್ರವೇಶವಿಲ್ಲ"!

Image courtesy - wikimedia.org

English summary

Places in India where Indians Are Banned

If you think, as an Indian, you can roam over any places in India (except the highly secured and protected areas), you are absolutely wrong! Unfortunately, there are some places still in India where Indians are not allowed. have a look
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more