For Quick Alerts
ALLOW NOTIFICATIONS  
For Daily Alerts

  ಈ ಊರಿನಲ್ಲಿ ರಾಯಲ್ ಎನ್‌ಫೀಲ್ಡ್ ಬೈಕೇ ದೇವರು!

  By Manu
  |

  ಭಾರತದಲ್ಲಿ ಜರುಗುವ ಹತ್ತು ಹಲವು ವಿಚಿತ್ರ ಸಂಪ್ರದಾಯಗಳು, ಅನುಸರಿಸುವ ಕ್ರಮಗಳು ವಿದೇಶೀಯರಿಗೆ ಬಿಡಿ, ಭಾರತದ ಇತರ ಪ್ರದೇಶಗಳಲ್ಲಿರುವವರಿಗೂ ಅಚ್ಚರಿ ತರಿಸಬಹುದು. ಉದಾಹರಣೆಗೆ ತಮಿಳುನಾಡಿನಲ್ಲಿ ನೆಚ್ಚಿನ ತಾರೆಯರನ್ನು ದೇವರ ಸಮಾನವಾಗಿ ಕಂಡು ದೇವಾಲಯ ಕಟ್ಟಿ ಪೂಜಿಸುವುದು.

  ಕೆಲವು ಬುಡಕಟ್ಟು ಜನಾಂಗದಲ್ಲಿ ವರ್ಷಕ್ಕೊಮ್ಮೆ ಸ್ನಾನ ಮಾಡುವ ಸಂಪ್ರದಾಯವಿದೆ. ಆದರೆ ರಾಜಸ್ಥಾನದ ಒಂದು ಊರಿನ ಈ ಸಂಪ್ರದಾಯ ಆಧುನಿಕವಾದದ್ದು ಅಂದರೆ ಕೆಲವೇ ವರ್ಷಗಳ ಹಿಂದೆ ಹೊಸದಾಗಿ ಪ್ರಾರಂಭವಾಗಿದ್ದು. ಇಲ್ಲಿನ ಜನರು ರಾಯಲ್ ಎನ್‌ಫೀಲ್ಡ್ ಬುಲೆಟ್ ಎಂಬ ಭಾರೀ ಭಾರದ ಗುಡುಗುಡು ಶಬ್ದ ಹೊರಡಿಸುವ ಬೈಕಿಗೆ ಪೂಜೆ ಸಲ್ಲಿಸುತ್ತಾರೆ.   ಭಾರತದ ಈ ಐದು ಸ್ಥಳಗಳಲ್ಲಿ ಭಾರತೀಯರಿಗೇ ಪ್ರವೇಶವಿಲ್ಲ!

  ಸುಮಾರು ಇಪ್ಪತ್ತೈದು ವರ್ಷಗಳಿಂದ ಈ ಊರಿನಲ್ಲಿ ಹಾದು ಹೋಗುವ ರಾ.ಹೆ 65ರ ಪಕ್ಕದಲ್ಲಿರುವ ಗುಡಿಯೊಂದರಲ್ಲಿ ನಿಲ್ಲಿಸಲಾಗಿರುವ ಬುಲೆಟ್ ಬೈಕಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಏಕೆ ಈ ಪೂಜೆ? ಕುತೂಹಲ ಕೆರಳಿತೇ? ಮುಂದೆ ಓದಿ....    

  ಈ ಊರು ಎಲ್ಲಿದೆ?

  ಈ ಊರು ಎಲ್ಲಿದೆ?

  ರಾಜಸ್ಥಾನದ ಜೋಧಪುರ ಜಿಲ್ಲೆಯ ಪಾಲಿ ತಾಲ್ಲೂಕಿನ ಚೋಟಿಲಾ ಎಂಬ ಊರಿನಲ್ಲಿ ಸುಮಾರು ಸಾವಿರದಷ್ಟು ಜನಸಂಖ್ಯೆಯಿದ್ದು ಸರಿಸುಮಾರು ಎಲ್ಲರೂ ಈ ಬೈಕಿಗೆ ನಿಯಮಿತವಾಗಿ ಪೂಜೆ ಸಲ್ಲಿಸುತ್ತಾರೆ.

  ಈ ಊರು ಎಲ್ಲಿದೆ?

  ಈ ಊರು ಎಲ್ಲಿದೆ?

  ಈ ಊರಿನಲ್ಲಿ ಹಾದು ಹೋಗುವ ಪಾಲಿ-ಜೋಧ್ಪುರ ರಾ.ಹೆ 65ರ ಪಕ್ಕದಲ್ಲಿಯೇ 350cc ಸಾಮರ್ಥ್ಯದ ದೊಡ್ಡಗಾತ್ರದ ಬುಲ್ಲೆಟ್ಟೊಂದನ್ನು ನಿಲ್ಲಿಸಿದ್ದು ನಿತ್ಯ ಇದಕ್ಕೆ ಪೂಜೆ ಸಲ್ಲಿಸಲಾಗುತ್ತಿದೆ. ಕಾಣಿಕೆಯ ರೂಪದಲ್ಲಿ ಹೂವು, ಹಣ್ಣು, ಚಿಲ್ಲರೆಗಳ ಜೊತೆಗೇ ಮದ್ಯವನ್ನೂ ಅರ್ಪಿಸಲಾಗುತ್ತದೆ.

  ಈ ಗುಡಿಯ ಹಿನ್ನಲೆಯೇನು?

  ಈ ಗುಡಿಯ ಹಿನ್ನಲೆಯೇನು?

  1991ರಲ್ಲಿ ಈ ಊರಿನ ನಿವಾಸಿ ಓಂ ಸಿಂಗ್ ರಾಥೋಡ್ ಅಥವಾ ಓಂ ಬನ್ನಾ ಎಂಬ ವ್ಯಕ್ತಿ ಈ ಬುಲ್ಲೆಟ್ ಬೈಕನ್ನು ಓಡಿಸುತ್ತಿದ್ದಾಗ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ವ್ಯಕ್ತಿ ಊರಿನ ಮುಖಂಡರ ಪುತ್ರನಾಗಿದ್ದರು.

  ಬೈಕನ್ನು ಪೋಲೀಸರು ವಶಪಡಿಸಿಕೊಂಡಿದ್ದರು, ಆದರೆ....

  ಬೈಕನ್ನು ಪೋಲೀಸರು ವಶಪಡಿಸಿಕೊಂಡಿದ್ದರು, ಆದರೆ....

  ಅಪಘಾತವಾದ ಬಳಿಕ ಕಾನೂನಿನ ಕ್ರಮದ ಪ್ರಕಾರ ಬೈಕನ್ನು ಪೋಲೀಸರು ವಶಪಡಿಕೊಂಡು ಪೋಲೀಸ್ ಠಾಣೆಯ ಅಂಗಳದಲ್ಲಿ ನಿಲ್ಲಿಸಿದ್ದರು.

  ಬೈಕನ್ನು ಪೋಲೀಸರು ವಶಪಡಿಸಿಕೊಂಡಿದ್ದರು, ಆದರೆ....

  ಬೈಕನ್ನು ಪೋಲೀಸರು ವಶಪಡಿಸಿಕೊಂಡಿದ್ದರು, ಆದರೆ....

  ಆದರೆ ಅಚ್ಚರಿಯೋ ಎಂಬಂತೆ ಮರುದಿನ ಬೆಳಿಗ್ಗೆ ಈ ಬೈಕು ಹಿಂದಿನ ದಿನ ಅಪಘಾತವಾದ ಸ್ಥಳದಲ್ಲಿ ಪ್ರತ್ಯಕ್ಷವಾಗಿತ್ತು. ಪೋಲೀಸ್ ಠಾಣೆಯ ಬಿಗಿ ಭದ್ರತೆಯನ್ನು ಬೇಧಿಸಿಕೊಂಡು ಈ ಬೈಕ್ ಇಲ್ಲಿಗೆ ಹೇಗೆ ಬಂದಿತು ಎಂಬುದು ಇಂದಿಗೂ ಚಿದಂಬರ ರಹಸ್ಯವಾಗಿದೆ.

  ಈ ಮ್ಯಾಜಿಕ್ ಮತ್ತೊಮ್ಮೆ ನಡೆಯಿತು....

  ಈ ಮ್ಯಾಜಿಕ್ ಮತ್ತೊಮ್ಮೆ ನಡೆಯಿತು....

  ಯಾರೋ ಕಿಡಿಗೇಡಿಗಳ ಕಿತಾಪತಿ ಎಂದುಕೊಂಡ ಪೋಲೀಸರು ಮತ್ತೊಮ್ಮೆ ಬೈಕನ್ನು ಠಾಣೆಗೆ ಕೊಂಡೊಯ್ದು ಇನ್ನಷ್ಟು ಸುರಕ್ಷಿತ ಸ್ಥಳದಲ್ಲಿರಿಸಿ ಯಾರೂ ಕದಿಯಲು ಸಾಧ್ಯವಾಗದಂತೆ ಸರಪಳಿಗಳಿಂದ ಕಟ್ಟಿ ಎರಡೆರಡು ಬೀಗ ಹಾಕಿ ಬೀಗಿದರು.

  ಈ ಮ್ಯಾಜಿಕ್ ಮತ್ತೊಮ್ಮೆ ನಡೆಯಿತು....

  ಈ ಮ್ಯಾಜಿಕ್ ಮತ್ತೊಮ್ಮೆ ನಡೆಯಿತು....

  ಆದರೆ ಪೋಲೀಸರೇ ಅವಾಕ್ಕಾಗುವಂತೆ ಮರುದಿನ ಬೈಕು ಅಪಘಾತವಾದ ಸ್ಥಳದಲ್ಲಿತ್ತು. ಪಟ್ಟು ಬಿಡದ ಪೋಲೀಸರು ಮತ್ತೆ ಹಿಂದೆ ತಂದು ಇನ್ನಷ್ಟು ಸರಪಳಿ ಬಿಗಿದರು, ಸರ್ಪಗಾವಲು ಹಾಕಿದರು. ಏನು ಮಾಡಿದರೂ ಸತತ ಆರು ತಿಂಗಳವರೆಗೆ ಬೈಕು ಮರುದಿನ ಬೆಳಿಗ್ಗೆ ಅಪಘಾತವಾದ ಸ್ಥಳದಲ್ಲಿರುತ್ತಿತ್ತು.

  ಮುಂದಿನದ್ದೆಲ್ಲಾ ಇತಿಹಾಸ......

  ಮುಂದಿನದ್ದೆಲ್ಲಾ ಇತಿಹಾಸ......

  ಇಂತಹದ್ದೇನಾದರೂ ಬೇರೆಡೆ ನಡೆದರೆ ಇದಕ್ಕೆ ವೈಜ್ಞಾನಿಕ ಕಾರಣ ನೀಡುತ್ತಿದ್ದರೋ ಏನೋ, ಆದರೆ ನಮ್ಮ ಭಾರತದಲ್ಲಿ ಈ ವಿಷಯ ಕಿವಿಯಿಂದ ಕಿವಿಗೆ ದಾಟುತ್ತಾ ಓಂ ಬನ್ನಾನ ಆತ್ಮವೇ ಈ ಬೈಕನ್ನು ಬಿಟ್ಟಿರಲಾರದೇ ಠಾಣೆಯಿಂದ ತರುತ್ತಿದೆ ಎಂಬ ವದಂತಿಯ ರೂಪದಲ್ಲಿ ದಟ್ಟವಾಗಿ ಹರಡಿತು. ಆತ್ಮ ಎಂದ ಬಳಿಕ ನಮ್ಮ ಭಕ್ತರು ಈ ಅವಕಾಶವನ್ನು ಕಳೆದುಕೊಂಡಾರೆಯೇ? ಆಗಲೇ ಈ ಬೈಕಿಗೆ ದೈವೀಕಳೆಯನ್ನು ನೀಡಿ ಪೋಲೀಸರಿಗೆ ಇದನ್ನು ಕೊಂಡೊಯ್ಯಲು ಬಿಡದೇ ಅಲ್ಲಿಯೇ ಪೂಜೆ ಸಲ್ಲಿಸಲು ಪ್ರಾರಂಭಿಸಿದರು.

  ಮುಂದಿನದ್ದೆಲ್ಲಾ ಇತಿಹಾಸ......

  ಮುಂದಿನದ್ದೆಲ್ಲಾ ಇತಿಹಾಸ......

  ಕ್ರಮೇಣ ಈ ಸ್ಥಳ ಪೂಜಾಸ್ಥಳವಾಗಿ ಮಾರ್ಪಟ್ಟು ಕೆಲದಿನಗಳ ಬಳಿಕ ಈ ಬೈಕು ನಿಂತಲ್ಲೇ ಗುಡಿಯೊಂದನ್ನು ಕಟ್ಟಲಾಯಿತು. ಮಳೆಯಿಂದ ರಕ್ಷಿಸಲು ಇದಕ್ಕೆ ಗಾಜಿನ ಆವರಣವೊಂದನ್ನೂ ನಿರ್ಮಿಸಲಾಗಿದೆ. ಈ ಬೈಕಿಗೆ ಗೌರವ ಸಲ್ಲಿಸಲು ಈ ಹೆದ್ದಾರಿಯ ಮೂಲಕ ಹಾದು ಹೋಗುವ ಯಾವುದೇ ವಾಹನಗಳು ಈ ಸ್ಥಳದಲ್ಲಿ ಹಾರನ್ನು ಹೊಡೆಯುವುದಿಲ್ಲ!

   

  English summary

  People Worship Royal Enfield Bike At This Place!

  There are many incredible things that happen only in India. Some of these will stun you, while a few make you giggle and realise that these things can happen only in India! One such case is of a Royal Enfield bike being worshipped in a small town in Rajasthan! Yeah, you read that right!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more