ಬಿಸಿಲ ಧಗೆಗೆ ನಿಮ್ಮನ್ನು ಕೂಲ್ ಆಗಿಸುವ 'ಐಸ್ ಕ್ರೀಮ್‌ಗಳು'

By: Manasa K M
Subscribe to Boldsky

ಐಸ್ ಕ್ರೀಮ್ ಎಂದರೆ ಬಾಯಲ್ಲಿ ಯಾರಿಗೆ ನೀರೂರಲ್ಲ ಹೇಳಿ. ಅದರಲ್ಲೂ ಈ ಸುಡು ಬಿಸಿಲಲ್ಲಿ ತಣ್ಣನೆಯ ಐಸ್ ಕ್ರೀಮ್ ನಮ್ಮ ಬಾಯಲ್ಲಿ ಇಟ್ಟರೆ ಸ್ವರ್ಗಕ್ಕೆ ಇನ್ನೂ ಮೂರೇ ಗೇಣು ಎನಿಸುತ್ತದೆ. ಬಾಯಲ್ಲಿ ಇಟ್ಟೊಡನೆ ತನ್ನ ರುಚಿಯಿಂದ ನಾಲಿಗೆಗೆ ಅತ್ಯಾನಂದ ನೀಡುತ್ತಾ ಗಂಟಲಿಗೆ ತಂಪಾಗಿ ಇಳಿಯುವ ಐಸ್ ಕ್ರೀಮ್ ಹೊಟ್ಟೆ ಸೇರುವಷ್ಟರಲ್ಲಿ ಹಾಯ್ ಎಂದು ಅನಿಸದೆ ಇರುವುದಿಲ್ಲ.

ಐಸ್ ಕ್ರೀಮ್ ಎಂದರೆ ಇಷ್ಟವಿಲ್ಲದೆ ಇರುವವರು ಇರುವುದಿಲ್ಲ. ಕಿರಿಯರು ಹಿರಿಯರು ಎನ್ನದೆ ಇದಕ್ಕೆ ಮಾರು ಹೋಗಿದ್ದಾರೆ ಎಲ್ಲರೂ. ಕೆಲ ಮಂದಿ ಕ್ಯಾಲೊರೀಸ್ ಕೊಲೆಸ್ಟ್ರಾಲ್ ಎಂದು ತಿನ್ನುವುದನ್ನು ನಿಲ್ಲಿಸಿರುತ್ತಾರೆ. ಆದರೆ ಅವರ ಮುಂದೆ ಐಸ್ ಕ್ರೀಮ್ ಇಟ್ಟು ನೋಡಿ ಅವರ ಪ್ರತಿಜ್ಞೆ ಕೂಡ ಐಸ್ ಕ್ರೀಮ್ ನಂತೆ ಕರಗಿ ಹೋಗಿ ಸವಿಯಲು ಸಿದ್ಧರಾಗಿಬಿಡುತ್ತಾರೆ. ಮುಖ್ಯವಾಗಿ ಹಾಲಿನ ಪದಾರ್ಥವಾದ ಐಸ್ ಕ್ರೀಮ್ ನಲ್ಲಿ ಹಾಲು ಕೆನೆ ಮಾತ್ರವಲ್ಲದೆ ಹಣ್ಣುಗಳು, ಕೋಕೋ, ಅನೇಕ ರೀತಿಯ ಸುವಾಸನೆ, ರುಚಿಗಳು ಸೇರಿಸಲ್ಪಡುತ್ತವೆ. ವಾವ್! ಕಲ್ಲಂಗಡಿ ಐಸ್ ಕ್ಯಾಂಡಿ ಸೋ ಕೂಲ್

ಐಸ್‌ಕ್ರೀಮ್‌ಗೆ ಶತಮಾನಗಳ ಇತಿಹಾಸವಿದೆ. ಮೊದಲಿಗೆ ಕ್ರೀಮ್ ಐಸ್ ಎಂದು ಕರೆಯಲ್ಪಡುತ್ತಿದ್ದ ಐಸ್ ಕ್ರೀಮ್ ಅನ್ನು ಸುಮಾರು ಹದಿನೇಳನೇ ಶತಮಾನದಲ್ಲಿ ಅತ್ಯಧಿಕವಾಗಿ ತಯಾರಿಸಲು ಶುರು ಮಾಡಿದರಂತೆ. ಅದರ ನಂತರ ಐಸ್ ಕ್ರಿಂನಲ್ಲಿ ಬಹಳಷ್ಟು ಬೆಳವಣಿಗೆಗಳು ಹಾಗೂ ಸುಧಾರಣೆಗಳು ಆಗಿವೆ.  ಬಾದಾಮಿ ಕುಲ್ಫಿ ಮಾಡುವುದು ಬ್ರಹ್ಮವಿದ್ಯೆಯಲ್ಲ

ಕಪ್ ಐಸ್, ಕೋನ್ ಐಸ್, ಕ್ಯಾಂಡಿ ಐಸ್ ನಿಂದ ಹಾಗೆಯೇ ಬೆಳೆದುಬಂದ ಐಸ್ ಕ್ರೀಮ್ ಈಗ ಅನೇಕ ವೈವಿಧ್ಯಗಳಲ್ಲಿ ದೊರಕುತ್ತದೆ. ನಮ್ಮ ಬೆಂಗಳೂರಿನಲ್ಲಿ ವಿಧ ವಿಧ ಐಸ್ ಕ್ರೀಮ್‌ಗಳನ್ನು ಸವಿಯಲು ನೂರಾರು ಐಸ್ ಕ್ರೀಮ್ ಪಾರ್ಲರ್‌ಗಳಿವೆ. ಅದರಲ್ಲೂ ಒಂದೊಂದರ ವೈಶಿಷ್ಟ್ಯ ಒಂದೊಂದು ರೀತಿ......  

ಹೊಡೆದು ಬಡಿದು ಮಾಡುವ ಐಸ್ ಕ್ರೀಮ್!!

ಹೊಡೆದು ಬಡಿದು ಮಾಡುವ ಐಸ್ ಕ್ರೀಮ್!!

ಇತ್ತೀಚೆಗೆ ಅತ್ಯಂತ ಜನಪ್ರಿಯವಾದ ವಿಧಾನ ಐಸ್ ಕ್ರೀಮ್ ಅನ್ನು ಇತರ ಪದಾರ್ಥಗಳ ಜೊತೆ ಸೇರಿಸಿ ಹೊಡೆದು ಬಡಿದು ಒಂದು ತನ್ನದೇ ಆದ ರುಚಿ ಬರುವಂತೆ ಮಾಡಿಕೊಡುವುದು. ಐಸ್ ಕ್ರೀಮ್ ಅನ್ನು ಹೊಡೆದು ಬಡೆದು ಅಂದರೆ ಆಶ್ಚರ್ಯವಾಗುತ್ತಿದೆಯಾ? ವಿವರವಾಗಿ ಹೇಳುತ್ತೇವೆ ಕೇಳಿ. ಐಸ್ ಕ್ರೀಮ್ ಪಾರ್ಲರ್‌ನಲ್ಲಿ ಅಗಲವಾದ ಎರಡು ದೊಡ್ಡ ತಟ್ಟೆಯಂತಹ ಲೋಹದ ವಸ್ತುವಿರುತ್ತದೆ. ಅದರ ತಾಪಮಾನ ಮೈನಸ್ ಮೂವತ್ತು ಡಿಗ್ರಿ ಇದ್ದು ಟರ್ಬೊ ಕೂಲಿಂಗ್ ವಿಧಾನದಲ್ಲಿ ಕೆಲಸ ಮಾಡುತ್ತದೆ.

ಐಸ್ ಕ್ರೀಮ್ ಎರಡು ಅಥವಾ ಮೂರು ಫ್ಲೇವರ್!!

ಐಸ್ ಕ್ರೀಮ್ ಎರಡು ಅಥವಾ ಮೂರು ಫ್ಲೇವರ್!!

ಇದರ ಮೇಲೆ ನಮಗೆ ಬೇಕಾದ ಐಸ್ ಕ್ರೀಮ್ ಎರಡು ಅಥವಾ ಮೂರು ಫ್ಲೇವರ್ ಹಾಕಿ ಅದರ ಜೊತೆ ಸರಿ ಹೋಗುವ ಅಥವಾ ನಮಗೆ ಇಷ್ಟವಾದ ಚಾಕೊಲೇಟ್ ಚಿಪ್ಸ್, ಸಾಸ್, ಜೇಮ್ಸ್, ಜೆಲ್ಲೀ, ಒರಿಯೋ ಬಿಸ್ಕೆಟ್, ಅಥವಾ ಇನ್ನೂ ಅನೇಕ ವಿಧ ಇರುವ ಯಾವುದೇ ಕೆಲವು ಪದಾರ್ಥಗಳನ್ನು ಹಾಕಿ, ಎರಡು ಕೈಗಳಲ್ಲಿ ಎರಡು ದೊಡ್ಡ ದೊಡ್ಡ ತಗಡಿನಂತಹ ಚಮಚಾಗಳಿಂದ ಹೊಡೆದು ಹೊಡೆದು ಹದವಾಗಿ ಮಿಕ್ಸ್ ಮಾಡುತ್ತಾರೆ. ಹೀಗೆ ಮೈನಸ್ ಮೂವತ್ತು ಡಿಗ್ರಿ ಇರುವ ತಟ್ಟೆಯ ಮೇಲೆ ಹೊಡೆಯುವುದರಿಂದ ಐಸ್ ಕ್ರೀಮ್ ಕರಗುವುದಿಲ್ಲ. ಅನೇಕ ರುಚಿಗಳನ್ನು ತನ್ನೊಡನೆ ಸೇರಿಸಿಕೊಂಡು ಐಸ್‌ಕ್ರೀಂ ಹದವಾಗಿ ಬೆರೆತು ಒಂದಾಗುತ್ತದೆ.

ಕೊನೆಗೆ ಕೈಗೆ ಬರುವ ಐಸ್ ಕ್ರೀಮ್ ರುಚಿಯೇ ಅತ್ಯದ್ಭುತ

ಕೊನೆಗೆ ಕೈಗೆ ಬರುವ ಐಸ್ ಕ್ರೀಮ್ ರುಚಿಯೇ ಅತ್ಯದ್ಭುತ

ಇದರ ಮೇಲೆ ಅದರ ರುಚಿಗೆ ಅನುಗುಣವಾಗಿ ಚೊಕೊಲೇಟ್ ಸಾಸ್, ಚಿಪ್ಸ್ ಅಥವಾ ಅಂತಹ ಟಾಪಿಂಗ್ಸ್ ಇಟ್ಟು ನಮಗೆ ನೀಡುತ್ತಾರೆ. ಈ ವಿಧಾನ ನೋಡಲೆಂದೇ ಅನೇಕರು ಇಂತಹ ಐಸ್‌ಕ್ರೀಮ್ ಪಾರ್ಲರ್ಗೆ ಹೋಗುತ್ತಾರೆ. ಮಕ್ಕಳಿಗಂತೂ ಚಕ ಚಕನೆ ಐಸ್ ಕ್ರೀಮ್ ಹೊಡೆಯುವ ಕೈಚಳಕ ನೋಡಲು ಖುಷಿ. ಅದರಲ್ಲೂ ಇಷ್ಟೆಲ್ಲ ಆದಮೇಲೆ ನಮ್ಮ ಕೈಗೆ ಬರುವ ಐಸ್ ಕ್ರೀಮ್ ರುಚಿ ಅತ್ಯದ್ಭುತ.

ಐಸ್ ಕ್ರೀಮ್ ಪಾರ್ಲರ್‌ಗಳು

ಐಸ್ ಕ್ರೀಮ್ ಪಾರ್ಲರ್‌ಗಳು

ಈ ರೀತಿ ಐಸ್ ಕ್ರೀಮ್ ನೀಡುವ ಪಾರ್ಲರ್‌ಗಳು ಬೆಂಗಳೂರಿನಲ್ಲಿ ಅಣಬೆಗಳಂತೆ ತಲೆ ಎತ್ತಿವೆ. ಎಲ್ಲ ಪ್ರಮುಖ ಬಡಾವಣೆಗಳಲ್ಲಿ ನಮ್ಮ ಶಾಖೆಗಳನ್ನು ತೆರೆದಿವೆ. ಇವುಗಳಲ್ಲಿ ಪ್ರಮುಖವಾದುವು ಎಂದರೆ ಕ್ರೀಮ್ ಸ್ಟೋನ್, ಸ್ಟೋನ್ಡ್ ಮಂಕಿ, ಸ್ಟೋನರ್, ರಾಕ್ ಸ್ಟೋನ್, ಮಿಲಾನೋ, ಮೆಂಚೀಸ್ ಮುಂತಾದುವು. ಇವೆ ಅಲ್ಲದೆ ಇನ್ನೂ ಹಲವಾರು ಐಸ್ ಕ್ರೀಮ್ ಪಾರ್ಲರ್ ಗಳು ನಿಮ್ಮ ಮನೆಗೆ ಹತ್ತಿರದಲ್ಲೇ ಇರಬಹುದು.

'ಐಸ್ ಕ್ರೀಮ್ ರೋಲ್ಸ್

'ಐಸ್ ಕ್ರೀಮ್ ರೋಲ್ಸ್

ಈಗ ಇನ್ನೂ ಹೊಸದಾಗಿ ಬಂದಿರುವ ವೈವಿಧ್ಯ 'ಐಸ್ ಕ್ರೀಮ್ ರೋಲ್ಸ್'. ಐಸ್ ಕ್ರೀಮ್ ಅನ್ನು ಸುರುಳಿ ಸುರುಳಿ ಯಾಗಿ ಪೇಪರ್‌ನಂತೆ ಸುತ್ತಿ ಕೊಡುವುದಂತೂ ವಿವರಿಸಲು ಅಸಾಧ್ಯ. ನಿಜ ನಂಬಿ. ನೀವೇ ನಿಮ್ಮ ಕಣ್ಣಾರೆ ನೋಡಬಹುದು ಹೇಗೆ ತಯಾರಿಸುತ್ತಾರೆ ಅಂತ. ನಿಮ್ಮ ಮುಂದೆಯೇ ನೀವು ಕೇಳಿದ ಫ್ಲೇವರ್ ಅನ್ನು ಹೀಗೆ ಸುರುಳಿ ಸುರುಳಿ ಸುತ್ತಿ ನಿಮ್ಮ ಕೈಗೆ ನೀಡಿದರೆ ತಿನ್ನುವುದನ್ನು ಮರೆತು ಆಶ್ಚರ್ಯ ಪಡುವ ಸರದಿ ನಮ್ಮದು.ಇಷ್ಟೆಲ್ಲ ಹೊಸತರ ನಡುವೆ ಬೆಂಗಳೂರಿಗರು ಮರೆಯಲಾರದಂತಹ ಹಳೆಯ ಐಸ್ ಕ್ರೀಮ್ ಪಾರ್ಲರ್ಗಳಿವೆ.

ನೆನೆಪುಗಳ ಮೆಲುಕು

ನೆನೆಪುಗಳ ಮೆಲುಕು

ಕಾರ್ನರ್ ಹೌಸ್, ರಿಚಿ ರಿಚ್, ಲೇಕ್ ವ್ಯೂ, ಹೇಗನ್ ದಾಸ್ ಐಸ್‌ ಕ್ರೀಮ್ ಗಳು ಅದರದೇ ಆದ ಪ್ರತ್ಯೇಕತೆ ಹೊಂದಿವೆ. ಬಹಳಷ್ಟು ಜನ ಬೆಂಗಳೂರಿನ ಯಾವುದೇ ಭಾಗದಲ್ಲಿ ನೆಲೆಸಿದ್ದರೂ, ಈ ಐಸ್ ಕ್ರೀಮ್ ಪಾರ್ಲರ್ ಗಳಿಗಾಗಿ ಎಷ್ಟೋ ದೂರ ಡ್ರೈವ್ ಮಾಡಿಕೊಂಡು ಹೋಗುತ್ತಾರೆ. ಇವುಗಳ ರುಚಿ ಎಷ್ಟು ಮುದ್ರೆ ಹೊತ್ತಿದೆ ನೋಡಿ ಜನರ ಜೀವನದಲ್ಲಿ. ಈ ಐಸ್ ಕ್ರೀಮ್ ಗಳ ಜೊತೆ ಬೆಸೆದಿರುವ ತಮ್ಮ ಬಾಲ್ಯ, ಕಾಲೇಜು ದಿನಗಳು ಹಾಗೂ ಇತರ ಅನೇಕ ನೆನೆಪುಗಳನ್ನು ಮೆಲುಕು ಹಾಕುತ್ತಾರೆ.

ಮತ್ತೇಕೆ ತಡ? ಐಸ್ ಕ್ರೀಮ್ ಪಾರ್ಲರ್‌ಗೆ ಹೋಗಲು ರೆಡಿಯಾಗಿ!

ಮತ್ತೇಕೆ ತಡ? ಐಸ್ ಕ್ರೀಮ್ ಪಾರ್ಲರ್‌ಗೆ ಹೋಗಲು ರೆಡಿಯಾಗಿ!

ಇನ್ನೂ ಕೆಲವು ಐಸ್ ಕ್ರೀಮ್ ಬ್ರಾಂಡ್‌ಗಳಾದ ಅರುಣ್ ಐಸ್ ಕ್ರೀಮ್, ಕಾರ್ನೆಟ್ಟೋ, ವಾಲ್ಸ್, ಲಂಡನ್ ಡೈರಿ, ಬಾಸ್ಕಿನ್ ಅಂಡ್ ರಾಬಿನ್ಸ್, ಐಬಾಕೋ ಮುಂತಾದವು ಬೆಂಗಳೂರಿನ ಮೂಲೆ ಮೂಲೆಗಳಲ್ಲೂ ಅಸ್ತಿತ್ವದಲ್ಲಿವೆ. ಬೇಸಿಗೆಯ ಬಿಸಿಲು ಕಣ್ಣು ಕುಕ್ಕುತ್ತಿರುವಾಗ ಐಸ್ ಕ್ರೀಮ್ ನ ಬಗ್ಗೆ ಓದುವುದು ಕೂಡ ಎಷ್ಟು ಹಿತವಾದಿದೆ ಅಲ್ವಾ. ಮತ್ತೇನು ತಡ ಇವತ್ತು ಅಥವಾ ನಾಳೆ ತಪ್ಪದೆ ಐಸ್ ಕ್ರೀಮ್ ಸೇವಿಸಿ. ಅದರಲ್ಲೂ ಇಷ್ಟೆಲ್ಲ ಆಯ್ಕೆಗಳನ್ನು ನಾವು ನಿಮ್ಮ ಮುಂದೆ ಇಟ್ಟಿದ್ದೇವೆ. ಇನ್ನೂ ತಡವೇಕೆ? ನಿಮ್ಮ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ, ರುಚಿ ನೋಡಿ ಹಾಗೂ ನಮಗೂ ತಿಳಿಸಿ ಹೇಗಿತ್ತು ಆ ತಣ್ಣನೆಯ ಅನುಭವ.

  

 

English summary

New variety of icecreams to be tried in Bangalore's Summer"

Feeling hot and bothered? These delectable ice cream parlours in will have you rushing out and sampling each of their desserts this season! What better way to beat the heat this summer than by heading to one of the many ice cream parlours in Bangalore? From simple, classic flavours like vanilla and chocolate to incredibly delectable dishes that combine taste with creativity, In the thick of summer or even in the chill of winter, nothing screams joy as much as a good ice cream!
Subscribe Newsletter