ಅಂಗೈಯಲ್ಲಿ ಈ X ಚಿಹ್ನೆ ಇದ್ದರೆ, ಅವರೇ ಅದೃಷ್ಟವಂತರು!

Posted By: Divya
Subscribe to Boldsky

ಹಸ್ತಮುದ್ರಿಕೆ ಎನ್ನುವುದು ಒಂದು ವಿಶೇಷವಾದ ಸಂಗತಿ. ಇದನ್ನು ಅರಿಯುವುದು ಎಂದರೆ ಅಷ್ಟು ಸುಲಭವಲ್ಲ. ಅಂಗೈಯಲ್ಲಿರುವ ಹಲವಾರು ಚಿತ್ತಾರಗಳು ಒಂದೊಂದು ವಿಶೇಷತೆಯನ್ನು ಹೇಳುತ್ತವೆ. ಅಲ್ಲದೆ ಕೆಲವು ರೇಖೆಗಳು ನಮ್ಮ ಪೂರ್ವ ಜನ್ಮದ ಹಾಗೂ ಭವಿಷ್ಯದ ವಿಚಾರವನ್ನು ತೆರೆದಿಡುತ್ತವೆ. ಇದನ್ನು ಕೆಲವರು ಸುಳ್ಳೆಂದು ಭಾವಿಸಬಹುದು. ಆದರೆ ವೈಜ್ಞಾನಿಕವಾಗಿ ನಿಜವೆಂದು ದೃಢಪಟ್ಟಿದೆ.

ಅಂಗೈಯಲ್ಲಿ 'M' ಅಕ್ಷರದ ಗುರುತು ಇದ್ದವರು ಅದೃಷ್ಟವಂತರು!

ಅಂಗೈ ಭವಿಷ್ಯದ ಬಗ್ಗೆ ಈಗಾಗಲೇ ಅನೇಕ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಈಗ ಹೇಳುತ್ತಿರುವುದು ಅಂಗೈಯಲ್ಲಿರುವ ಇಂಗ್ಲಿಷ್ ವರ್ಣ ಮಾಲೆಯ ಎಕ್ಸ್ ಅಕ್ಷರದ ಬಗ್ಗೆ. ಇದು ಪ್ರಪಂಚದಲ್ಲಿಯೇ ಕೇವಲ ಶೇ.3ರಷ್ಟು ಮಂದಿಗೆ ಇದೆ. ಇದನ್ನು ಹೊಂದಿದವರ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ಇಲ್ಲಿ ಹೇಳುತ್ತಿದ್ದೇವೆ...

ಪ್ರಪಂಚದೆಲ್ಲೆಡೆ ಹರಡಿದೆ

ಪ್ರಪಂಚದೆಲ್ಲೆಡೆ ಹರಡಿದೆ

ಭಾರತದಿಂದ ಹಸ್ತಮುದ್ರಿಕಾ ಶಾಸ್ತ್ರದ ಜ್ಞಾನ ಮತ್ತು ಅಭ್ಯಾಸವು ಚೀನಾ, ಟಿಬೆಟ್, ಈಜಿಪ್ಟ್, ಪರ್ಷಿಯಾ, ಯುರೋಪ್ ಸೇರಿದಂತೆ ಪ್ರಪಂಚದಾದ್ಯಂತ ಹರಡಿದೆ.

ಗ್ರೀಕ್ ಜ್ಯೋತಿಷ್ಯ

ಗ್ರೀಕ್ ಜ್ಯೋತಿಷ್ಯ

ಗ್ರೀಕ್ ವಿದ್ವಾಂಸ ಅನಾಕ್ಸಾಗೊರಾಸ್ ಎಂಬುವವರು ಭಾರತದ ಉಪಖಂಡಗಳಿಂದ ಹಸ್ತಮುದ್ರಿಕೆಯನ್ನು ಕಲಿತರು. ನಂತರ ತನ್ನ ಜ್ಞಾನವನ್ನು ಹರ್ಮಸ್‍ರೊಂದಿಗೆ ಹಂಚಿಕೊಂಡರು ಎನ್ನಲಾಗುತ್ತದೆ.

 ಅಲೆಕ್ಸಾಂಡರ್‌ನ ರಹಸ್ಯ

ಅಲೆಕ್ಸಾಂಡರ್‌ನ ರಹಸ್ಯ

ಹರ್ಮೆಸ್‍ನ ಬಲಿಪೀಠದ ಒಂದು ಭಾಗದಲ್ಲಿ ಹಸ್ತಮುದ್ರಿಕಾ ವಿಷಯದ ಕುರಿತಾಗಿ ಇರುವ ಲೇಖನವನ್ನು ಅರಿಸ್ಟಾಟಲ್ ಕಂಡುಹಿಡಿದನು. ನಂತರ ಅವನು ಅಲೆಕ್ಸಾಂಡರ್‌ಗೆ ತೋರಿಸಿದನು. ಇವರ ನಂತರ ಬಂದ ರಾಜರು ಈ ವಿಚಾರದ ಬಗ್ಗೆ ಹೆಚ್ಚು ಆಸಕ್ತಿ ತೋರಿದರು. ಅಲ್ಲದೆ ತಮ್ಮ ಅಧಿಕಾರದ ಅವಧಿಯ ಬಗ್ಗೆಯೂ ತಿಳಿದುಕೊಳ್ಳಲು ಪ್ರಾರಂಭಿಸಿದರು.

ಸಾಕ್ಷಿಗಳಿಲ್ಲ

ಸಾಕ್ಷಿಗಳಿಲ್ಲ

ಅಲೆಕ್ಸಾಂಡರ್ ಹೀಗೆ ಮಾಡಿದ್ದರು ಎನ್ನುವುದಕ್ಕೆ ಆಳವಾದ ಸಾಕ್ಷಿಗಳಿಲ್ಲ. ಆದರೆ ಅವರು ತಮ್ಮ ಅಂಗೈಗಳನ್ನು ಆಳವಾಗಿ ಅಧ್ಯಯನ ನಡೆಸಿದ್ದರು. ಅದರಂತೆಯೇ ಜೀವನದ ಫಲವನ್ನು ಅನುಭವಿಸಿದ್ದರು ಎಂದು ಹೇಳುತ್ತಾರೆ.

ಅಂಗೈ ಮೇಲೆ ಎಕ್ಸ್ ಚಿಹ್ನೆ

ಅಂಗೈ ಮೇಲೆ ಎಕ್ಸ್ ಚಿಹ್ನೆ

ಈಜಿಪ್ಟಿನ ವಿದ್ವಾಂಸರು ಅಲೆಕ್ಸಾಂಡರ್ ದಿ ಗ್ರೇಟ್, ತನ್ನ ಅಂಗೈಯಲ್ಲಿ ವಿಶಿಷ್ಟವಾದ ಗುರುತನ್ನು ಹೊಂದಿದ್ದರು. ಇದು ಜಗತ್ತಿನಲ್ಲಿಯೇ ಕಡಿಮೆ ಜನರಿಗೆ ಈ ಗುರುತು ಇರುತ್ತದೆ. ಅದೇ ಇಂಗ್ಲಿಷ್ ವರ್ಣಮಾಲೆಯ ಎಕ್ಸ್ (X) ಅಕ್ಷರ ಎಂದು ಹೇಳಲಾಗಿದೆ.

ಅಧ್ಯಯನದ ಪ್ರಕಾರ

ಅಧ್ಯಯನದ ಪ್ರಕಾರ

ಮಾಸ್ಕೋ ಎಸ್‍ಟಿಐ ವಿಶ್ವವಿದ್ಯಾಲಯದಿಂದ ಎಕ್ಸ್ ಚಿಹ್ನೆಯ ಕುರಿತು ಒಂದು ಅಧ್ಯಯನ ನಡೆದಿದೆ. ಚಿಹ್ನೆ ಹೊಂದಿರುವ ವ್ಯಕ್ತಿಗಳನ್ನು ಅವರ ಊರಿನಿಂದಲೇ ಪ್ರಶ್ನೆ ಉತ್ತರದ ರೀತಿಯಲ್ಲಿ ಪೇಪರ್ ಅಧ್ಯಯನವನ್ನು ನಡೆಸಿದೆ ಎಂದು ಬಹಿರಂಗ ಪಡಿಸಿದೆ.

ಮಹಾನ್ ನಾಯಕರು

ಮಹಾನ್ ನಾಯಕರು

2 ಮಿಲಿಯನ್ ಜನರಿಂದ ಸಂಗ್ರಹಿಸಿದ ವಿಷಯದ ಪ್ರಕಾರ ಎರಡು ಅಂಗೈಯಲ್ಲಿ ಎಕ್ಸ್ ಚಿಹ್ನೆ ಹೊಂದಿದವರು ಉತ್ತಮ ನಾಯಕರಾಗಿದ್ದಾರೆ. ಜೊತೆಗೆ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದಾರೆ ಎಂದು ಹೇಳಲಾಗಿದೆ.

ಅಂಗೈಯಲ್ಲಿ ಎಕ್ಸ್ ಚಿಹ್ನೆ

ಅಂಗೈಯಲ್ಲಿ ಎಕ್ಸ್ ಚಿಹ್ನೆ

ಈ ಚಿಹ್ನೆ ಹೊಂದಿದವರು ಅಪರೂಪದ ವ್ಯಕ್ತಿಗಳಾಗಿರುತ್ತಾರೆ. ಗ್ರೀಕ್ ಚಕ್ರವರ್ತಿ ಅಲೆಕ್ಸಾಂಡರ್ ಕೈಯಲ್ಲಿ ಇತ್ತು. ಅಲ್ಲದೆ ಅಬ್ರಾಹಾಂ ಲಿಂಕನ್ ಮತ್ತು ವ್ಲಾಡಿಮಿರ್ ಪುಟಿನ್ ಅವರ ಅಂಗೈಯಲ್ಲೂ ಇದೆ ಎಂದು ಹೇಳಲಾಗಿದೆ.

ಜನಪ್ರಿಯ ವ್ಯಕ್ತಿಗಳು

ಜನಪ್ರಿಯ ವ್ಯಕ್ತಿಗಳು

ಈ ಚಿಹ್ನೆ ಹೊಂದಿದವರು ಬಹಳ ಜನಪ್ರಿಯ ವ್ಯಕ್ತಿಗಳಾಗಿರುತ್ತಾರೆ. ಹಾಗೊಮ್ಮೆ ಇವರು ಮರಣ ಹೊಂದಿದರೂ, ಮರಣದ ನಂತರವೂ ಜನರು ಇವರನ್ನು ನೆನಪಿಸಿಕೊಳ್ಳುತ್ತಾರೆ. ಈ ಚಿಹ್ನೆ ಹೊಂದಿದವರು ಅತ್ಯಂತ ಪ್ರಸಿದ್ಧಿ ಹಾಗೂ ಯಶಸ್ವಿ ವ್ಯಕ್ತಿಗಳಾಗಿ ಹೋಗುತ್ತಾರೆ ಎನ್ನಲಾಗುವುದು.

ವ್ಯಕ್ತಿತ್ವದ ಲಕ್ಷಣ

ವ್ಯಕ್ತಿತ್ವದ ಲಕ್ಷಣ

ಈ ಚಿಹ್ನೆ ಹೊಂದಿದವರು ವಿಶೇಷ ಬಗೆಯ ಒಳನೋಟವನ್ನು ಹೊಂದಿರುತ್ತಾರೆ. ದ್ರೋಹ, ಅಪಾಯ, ನಂಬಿಕೆಯಂತಹ ವಿಚಾರಗಳ ಬಗ್ಗೆ ವಿಶೇಷವಾದ ಸುಳಿವು ಇವರಿಗಿರುತ್ತದೆ. ಇವರಿಗೆ ಜನರು ಗೌರವ ನೀಡುತ್ತಾರೆ.

ವಿಶೇಷ ಶಕ್ತಿ

ವಿಶೇಷ ಶಕ್ತಿ

ಇವರಿಗೆ ಯಾವುದೇ ರೀತಿಯ ಸುಳ್ಳು ಹೇಳಲು ಪ್ರಯತ್ನಿಸಿದರೂ ಅವರಿಗೆ ಅರ್ಥವಾಗುತ್ತದೆ. ಅನಾವಶ್ಯಕವಾಗಿ ಇವರಿಗೆ ತೊಂದರೆ ಕೊಡುವವರಿದ್ದಾರೆ. ಅವರನ್ನು ಇವರು ಕ್ಷಮಿಸುತ್ತಾರೆ. ಆದರೆ ಮಾಡಿರುವುದನ್ನು ಮರೆಯುವುದಿಲ್ಲ. ಇವರಿಗೆ ಯಾರೂ ಕೆಟ್ಟದ್ದು ಮಾಡಲು ಸಾಧ್ಯವಿಲ್ಲ. ಹಾಗೊಮ್ಮೆ ಮಾಡಿದರೂ ಅದು ಇವರಿಗೆ ತಗಲುವುದಿಲ್ಲ. ಏಕೆಂದರೆ ಈ ಚಿಹ್ನೆಯ ಅದೃಷ್ಟವೇ ಹಾಗಿದೆ.

ವಿಶೇಷ ಜ್ಞಾನ

ವಿಶೇಷ ಜ್ಞಾನ

ಈ ಚಿಹ್ನೆ ಹೊಂದಿದವರು ಅತ್ಯಂತ ಬುದ್ಧಿವಂತರು ಎನ್ನಬಹುದು. ಇವರು ಆನೆಯ ಜ್ಞಾನ ಮತ್ತು ಸ್ಮರಣೆಯ ಶಕ್ತಿಯನ್ನು ಹೊಂದಿರುತ್ತಾರೆ ಎನ್ನಲಾಗುತ್ತದೆ. ಇವರ ಸುತ್ತಲಿನ ವ್ಯವಸ್ಥೆಯಲ್ಲಿ ಹೊಂದಿಕೊಂಡು, ಯಾವುದೇ ಗಡಿಬಿಡಿಯಿಂದ ಅಪಾಯವನ್ನು ತಂದೊಡ್ಡಿಕೊಳ್ಳದವರಾಗಿರುತ್ತಾರೆ.

For Quick Alerts
ALLOW NOTIFICATIONS
For Daily Alerts

    English summary

    Mystery behind Letter X on your palms

    Based on the ancient knowledge of palmistry, we know how the palm lines and symbols are associated with our personalities and future prospects in terms of career, life, marriage, money and health.This popular ancient practice of foretelling the future through the study of the palm, has its roots traced back to Indian (Hindu-Vedic) astrology.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more