ನೀವೆಷ್ಟು ಸುಳ್ಳು ಹೇಳುತ್ತೀರಿ ಎನ್ನುವುದನ್ನು 'ರಾಶಿಚಕ್ರ' ಹೇಳುತ್ತದೆ!

By: Divya
Subscribe to Boldsky

ಕೆಲವರು ಸತ್ಯದ ತಲೆಯ ಮೇಲೆ ಹೊಡೆದಂತೆಯೇ ಸುಳ್ಳು ಹೇಳುತ್ತಾರೆ. ಅವರು ಹೇಳುತ್ತಿರುವುದು ಸುಳ್ಳು ಎಂದೆನಿಸದು. ಸುಳ್ಳು ಹೇಳುವುದು ಮೋಸ ಮಾಡಿದಷ್ಟೇ ಪಾಪದ ಕೆಲಸ. ಆದರೆ ಕೆಲವೊಮ್ಮೆ ಒಳ್ಳೆಯ ಕೆಲಸಕ್ಕಾಗಿ ಸುಳ್ಳು ಹೇಳುವುದು ತಪ್ಪಲ್ಲ.  ರಾಶಿ ಭವಿಷ್ಯ: ನಿಮ್ಮ ಅದೃಷ್ಟವನ್ನೇ ಖುಲಾಯಿಸುವ 'ಭವಿಷ್ಯವಾಣಿ'

ಸುಳ್ಳು ಹೇಳುವುದನ್ನೇ ಪ್ರವೃತ್ತಿಯನ್ನಾಗಿಸಿಕೊಂಡು ಸದಾ ಇನ್ನೊಬ್ಬರಿಗೆ ತೊಂದರೆ ಕೊಡುವುದು ಅಥವಾ ಅವರ ಸತ್ಯದ ಮಾರ್ಗವನ್ನು ತಪ್ಪಿಸುವುದು ಅಪರಾಧ. ಹೀಗೆ ಸುಳ್ಳು ಮತ್ತು ಸತ್ಯವನ್ನು ಹೇಳುವುದು ನಮ್ಮ ರಾಶಿಚಕ್ರದ ಮೇಲೆ ನಿಂತಿರುತ್ತದೆ ಎನ್ನುತ್ತದೆ ನಮ್ಮ ಜ್ಯೋತಿಷ್ಯಾಸ್ತ್ರ!  ಧೈರ್ಯ ಶಾಲಿಗಳ 'ಧೈರ್ಯ' ಸೂಚಿಸುವ ರಾಶಿ ಭವಿಷ್ಯ

ವ್ಯಕ್ತಿಯ ಆಗು ಹೋಗುಗಳು ಹೇಗೆ ರಾಶಿ, ನಕ್ಷತ್ರಗಳನ್ನು ಅವಲಂಭಿಸಿರುತ್ತದೆಯೋ ಹಾಗೇ ನಾವು ಆಡುವ ಮಾತುಗಳು ಸಹ ಇವುಗಳನ್ನು ಆಧರಿಸಿರುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಕೆಲವೊಂದು ರಾಶಿಯವರು ಅತಿ ಹೆಚ್ಚು ಸುಳ್ಳು ಹೇಳುತ್ತಾರೆ ಎಂದು ಹೇಳುತ್ತದೆ. ಕುತೂಹಲ ಮೂಡಿಸುವ ಈ ವಿಚಾರಕ್ಕೆ ಯಾವ ರಾಶಿವರು ಏನೆಲ್ಲಾ ಸುಳ್ಳು ಹೇಳುತ್ತಾರೆ ಎನ್ನುವುದನ್ನು ತಿಳಿಯೋಣ ಬನ್ನಿ...   

ಮೇಷ

ಮೇಷ

ಈ ರಾಶಿಯವರು ತಾವು ಹೆಚ್ಚು ಭಯಪಡುತ್ತೇವೆ ಎನ್ನುವ ವಿಚಾರವನ್ನು ಹೇಳುವುದರಲ್ಲಿ ಸುಳ್ಳು ಹೇಳುತ್ತಾರೆ. ಇವರು ಬಂಗೀ ಜಂಪ್, ಜೆಟ್ ಸ್ಕೈ, ಸ್ಕೈ ಡೈವ್‍ಗಳಂತಹ ಭಯಾನಕ ಆಟವನ್ನು ಆಡಲು ಹೆದರುತ್ತಾರೆಯಾದರೂ, ಇವೆಲ್ಲಾ ಸಿಲ್ಲಿ ಆಟಗಳು ಎಂದು ಹೇಳಿಕೊಳ್ಳುತ್ತಾರೆ. ಅಲ್ಲದೆ ತಮ್ಮ ಏಳಿಗೆ ಹಾಗೂ ಖ್ಯಾತಿಯನ್ನು ಉಳಿಸಿಕೊಳ್ಳುವುದರಲ್ಲಿ ಯಾವುದೇ ಭಯಭೀತಿಯಿಲ್ಲ ಎಂದು ತೋರಿಸಿಕೊಳ್ಳುತ್ತಾರೆ. ಅಪ್ರಾಮಾಣಿಕ ಜನರ, ರಾಶಿ ಭವಿಷ್ಯದಲ್ಲೂ ಮೋಸದ ಗುಣವಿದೆ!

ವೃಷಭ

ವೃಷಭ

ಇವರು ಇತರರ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ ಎನ್ನುವುದಾಗಿ ಸುಳ್ಳು ಹೇಳುತ್ತಾರೆ. ತಮ್ಮ ವರ್ತಮಾನದಲ್ಲಿರುವವರಂತೆಯೇ ವರ್ತಿಸುತ್ತಾರೆ. ಯಾವುದೇ ಭಾವನೆಗಳ ಉದ್ವೇಗಕ್ಕೆ ಒಳಗಾಗದವರಂತೆ ಹಾಗೂ ಬಹಳ ಸಮಾಧಾನ ಪ್ರಿಯರಾಗಿರುವವರಂತೆ ನಟಿಸುತ್ತಾರೆ.

ಮಿಥುನ

ಮಿಥುನ

ಈ ರಾಶಿಯವರು ತಮ್ಮ ಆರೋಗ್ಯ ಮತ್ತು ಆಯಾಸದ ವಿಚಾರಗಳ ಬಗ್ಗೆ ಸುಳ್ಳು ಹೇಳುತ್ತಾರೆ. ಯಾರಾದರೂ ನೀವು ನೋಡಲು ಗಂಭೀರವಾಗಿ ಕಾಣುತ್ತಿದ್ದೀರಿ ಎಂದರೆ ಅದಕ್ಕೆ ಸುಳ್ಳು ಉತ್ತರವಾಗಿ ನಿದ್ದೆ ಸರಿ ಯಾಗಲಿಲ್ಲ ಅಥವಾ ಅಲರ್ಜಿ ಕಾರಣವನ್ನು ನೀಡಿ ಮರೆಮಾಚುತ್ತಾರೆ. ವಾಸ್ತವದ ವಿಚಾರವನ್ನು ಮರೆಮಾಚಿ ಸುಳ್ಳು ಹೇಳುತ್ತಾರೆ.

ಕರ್ಕ

ಕರ್ಕ

ಇವರು ತಮ್ಮ ಸಂಬಂಧಗಳ ಬಗ್ಗೆ ಸುಳ್ಳು ಹೇಳುತ್ತಾರೆ. ಯಾಕೆಂದರೆ ತಮ್ಮ ಸಂಬಂಧಗಳು ಬಹಳ ಯೋಗ್ಯವಾದದ್ದು ಎನ್ನುವುದನ್ನು ಪ್ರಪಂಚಕ್ಕೆ ತೋರಿಸಿಕೊಳ್ಳಲು ಇಷ್ಟಪಡುವವರು. ತಮ್ಮ ಪಾಲುದಾರರ ಬಗ್ಗೆ ಹೆಚ್ಚು ರಕ್ಷಣಾ ಭಾವನೆ ಇರುವವರಂತೆಯೇ ವರ್ತಿಸುತ್ತಾರೆ.

ಸಿಂಹ

ಸಿಂಹ

ಇವರು ತಮ್ಮ ಹಣಕಾಸಿನ ವಿಚಾರವಾಗಿ ಸುಳ್ಳು ಹೇಳುತ್ತಾರೆ. ತಮ್ಮ ಸ್ನೇಹಿತರಿಂದ ಪಡೆದುಕೊಂಡ ವಿಚಾರಗಳನ್ನು ಇತರರ ಮುಂದೆ ಹೇಳಲು ಮರೆಮಾಚುತ್ತಾರೆ.

ಕನ್ಯಾ

ಕನ್ಯಾ

ಇವರು ತಮಗೆ ಸಹಾಯದ ಅಗತ್ಯವಿದೆ ಎನ್ನುವದರ ಬಗ್ಗೆ ಸುಳ್ಳು ಹೇಳುತ್ತಾರೆ. ಇವರು ಇತರರೊಂದಿಗೆ ಬೆರೆಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಆದರೂ ಈ ವಿಚಾರವಾಗಿ ಸುಳ್ಳು ಹೇಳುತ್ತಾರೆ. ಕಷ್ಟದಿಂದ ಮೇಲೆ ಬಂದಿದ್ದೇನೆ ಎಂದು ಸುಳ್ಳು ಹೇಳಿಕೊಳ್ಳಲು ಹೆಮ್ಮೆ ಪಡುತ್ತಾರೆ.

ತುಲಾ

ತುಲಾ

ಇವರು ಕ್ಷಮಿಸಿರುವವರಂತೆ ನಟಿಸುತ್ತಾರೆ. ಆದರೆ ವಾಸ್ತವವಾಗಿ ದ್ವೇಷದಿಂದಲೇ ಇರುತ್ತಾರೆ. ವಾಸ್ತವವಾಗಿ ದ್ವೇಷಿಸುತ್ತೇನೆ ಎಂಬುದನ್ನು ಗುಟ್ಟಾಗಿ ಇಡಲು ಪ್ರಯತ್ನಿಸುತ್ತಾರೆ. ಜೊತೆಗೆ ತಾವು ಹಾಗಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ.

ವೃಶ್ಚಿಕ

ವೃಶ್ಚಿಕ

ಇವರು ಎಷ್ಟು ಜನರನ್ನು ಮುದ್ದಿಸಿದ್ದಾರೆ ಎನ್ನುವ ವಿಚಾರದ ಬಗ್ಗೆ ಸುಳ್ಳು ಹೇಳುತ್ತಾರೆ. ತಮ್ಮ ಜೀವನವು ಬಹಳ ಅದ್ಭುತವಾಗಿದೆ ಎಂಬಂತೆ ನಟಿಸುತ್ತಾರೆ. ಸ್ನೇಹಿತರನ್ನು ಮನರಂಜನಾ ವ್ಯಕ್ತಿಗಳನ್ನಾಗಿ ಮಾಡಿಕೊಳ್ಳುತ್ತಾರೆ.

ಧನು

ಧನು

ಇವರು ತಾವು ಏಕಾಂತ ಜೀವನವನ್ನು ಪ್ರೀತಿಸುತ್ತೇವೆ ಎನ್ನುವುದರ ಬಗ್ಗೆ ಸುಳ್ಳು ಹೇಳುತ್ತಾರೆ. ಹಾಗಂತ ಇವರು ಸಂಬಂಧಗಳ ನಡುವೆ ಇರಲು ಬಯಸುತ್ತಾರೆ ಎಂದಲ್ಲ. ಏಕಾಂತವನ್ನು ಇಷ್ಟ ಪಡುವ ಇವರು ಜೀವನದಲ್ಲಿ ಬಹಳ ಸಂತೋಷವಾಗಿದ್ದೇನೆ ಎಂಬುದರ ಬಗ್ಗೆ ಸುಳ್ಳು ಹೇಳುತ್ತಾರೆ.

ಮಕರ

ಮಕರ

ಎಲ್ಲರೊಂದಿಗೂ ಒಟ್ಟಾಗಿ ಇರುವವರಂತೆ ಸುಳ್ಳು ಹೇಳುತ್ತಾರೆ. ಸುತ್ತಲ ಜನರಿಗೆ ಹೆಚ್ಚು ಶಾಂತತೆ ಕಲಾಪಾಡಬೇಕು, ತಾವು ಹಾಗೆಯೇ ಇದ್ದೇವೆ ಎನ್ನುವ ಸುಳ್ಳು ವರ್ತನೆ ತೋರುತ್ತಾರೆ. ವಾಸ್ತವವಾಗಿ ಇವರು ಅನೇಕ ಗೊಂದಲದಲ್ಲಿ ಕಳೆದುಹೋದವರಾಗಿರುತ್ತಾರೆ.

ಕುಂಭ

ಕುಂಭ

ಇವರು ಸಣ್ಣ ಪುಟ್ಟ ವಿಚಾರಗಳಿಗೂ ಸುಳ್ಳು ಹೇಳುತ್ತಾರೆ. ಅವರು ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ತಿಳಿದಿರುವುದಿಲ್ಲ. ಅವರು ಹೊರಗಡೆ ಹೋಗಿ ಕೆಲಸ ಮಾಡಲು ಸಮಯ ಇಲ್ಲದೆ ಇರುವಷ್ಟು ಕಾರ್ಯ ನಿರತರಾಗಿರುವವರಂತೆ ವರ್ತಿಸುತ್ತಾರೆ.

ಮೀನ

ಮೀನ

ಇವರು ನಾಟಕೀಯವಾಗಿ ಸುಳ್ಳು ಹೇಳುತ್ತಾರೆ. ಹಾಗಾಗಿ ಇವರ ಸ್ನೇಹಿತರು ಇವರನ್ನು ದ್ವೇಷಿಸುವುದಿಲ್ಲ. ಇವರು ಸಂಗೀತವನ್ನು ಪ್ರೀತಿಸುತ್ತಾರೆ ಎನ್ನಬಹುದು. ಆದರೆ ಅದು ನಿಜವಲ್ಲ. ಇವರು ಸಾಮಾನ್ಯವಾಗಿ ಒಳ್ಳೆಯವರಂತೆ ಮುಖವಾಡವನ್ನು ಧರಿಸಿಯೇ ಇರುತ್ತಾರೆ.

 

 

English summary

Lies That People Tell According To Zodiac Signs

People of different zodiac signs have a tendency to lie in one of the weirdest ways. Check out on how people lie according to their zodiac sign.
Subscribe Newsletter