Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶ್!! ಇದು ಪ್ರೇಮ ಸ್ಮಾರಕ 'ತಾಜ್ ಮಹಲ್'ನ ಸೀಕ್ರೆಟ್!!
ಚಕ್ರವರ್ತಿ ಶಹಜಾನ್ (ಶಾ ಜಹಾನ್ ಅಥವಾ ಷಹಜಹಾನ್) ತನ್ನ ಪ್ರೀತಿ ಪಾತ್ರ ಮಡದಿಗಾಗಿ ನಿರ್ಮಿಸಿದ, ಸರಿಸಾಟಿಯಿಲ್ಲದ ಪ್ರೀತಿಯ ಧ್ಯೋತಕವಾಗಿ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿರುವ 'ತಾಜ್ ಮಹಲ್' ಗೋರಿಯು ಅಪರಿಮಿತ ಖ್ಯಾತಿಯನ್ನು ತನ್ನ ಮುಡಿಗೇರಿಸಿ ಕೊಂಡಿದ್ದು ನಮಗೆಲ್ಲರಿಗೂ ಗೊತ್ತೇ ಇದೆ. ಪತ್ನಿ ಸತ್ತಾಗ ಆಕೆಯ ನೆನಪಿಗಾಗಿ ಆಗ್ರಾದಲ್ಲಿ ಶಾ ಜಹಾನ್ ಸಾವಿರಾರು ಮಂದಿ ಕಾರ್ಮಿಕರನ್ನು ಬಳಸಿಕೊಂಡು ಈ ಭವ್ಯ ಸಮಾಧಿಯ ನಿರ್ಮಾಣ ಮಾಡಿದ.
ಅಂದು ನಿರ್ಮಾಣ ಮಾಡಿದ ತಾಜ್ ಮಹಲ್ ಇಂದು ವಿಶ್ವದ ಅದ್ಭುತಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತಿದೆ. ಆದರೆ ಈ ಸ್ಮಾರಕದ ಬಗ್ಗೆ ಈಗಲೂ ಕೆಲವೊಂದು ಸತ್ಯಗಳು ಇನ್ನೂ ಹೊರಜಗತ್ತಿಗೆ ತಿಳಿದೇ ಇಲ್ಲ! ತಾಜ್ ಮಹಲ್, ಶಹಜಾನ್ ಮತ್ತು ಮುಮ್ತಾಜ್ ಬಗ್ಗೆ ಇರುವ ಕೆಲವೊಂದು ಸತ್ಯಗಳನ್ನು ತಿಳಿಯಲು ಈ ಲೇಖನವನ್ನು ಓದಲೇಬೇಕು. ಕೆಲವೊಂದು ಆಸಕ್ತಿದಾಯಕ ಹಾಗೂ ತಿಳಿಯದೇ ಇರುವಂತಹ ಸತ್ಯಗಳ ಬಗ್ಗೆ ನಿಮಗೆ ಬೋಲ್ಡ್ ಸ್ಕೈ ತಿಳಿಸಿಕೊಡಲಿದೆ ಮುಂದೆ ಓದಿ....

#1
ಶಹಜಾನ್‍ನ ಪೂರ್ಣ ಹೆಸರು ಶೆಹನ್ ಷಾ ಆಲ್ ಸುಲ್ತಾನ್ ಆಲ್ ಅಜಂವಾಲ ಖಕ್ವನ್ ಅಲ್ ಕುಖರ್ರಮ್, ಮಲಿಕ್ ಉಲ್ ಸುಲ್ತಾನತ್, ಅಲ್ ಅಜ್ರತ್ ಅಲಬುಲ್ ಮುಝಫರ್ ಶಾಹಬ್ ಉದ ದಿನ್ ಮೊಹಮ್ಮದ್ ಷಾ ಜಹಾನ್, ಸಾಹಿಬ್ ಐ ಕಿರಾನ್ ಐ ಸನಿ, ಪಾದಶಾಹ ಘಝಿ ಝಿಲ್ಲುಲ್ಹಾ, ಫಿರ್ದೌಸ್ ಆಶಿಯಾನಿ, ಶಾಹನ್ ಶಾಹ ಎ ಸುಲ್ತಾನತ್ ಉಲ್ ಹಿಂದಿಯಾ ವಾಲ್ ಮುಘಲಿಯಾ. ಇದನ್ನು ಒಂದೇ ವಾಕ್ಯದಲ್ಲಿ ಓದಲು ತುಂಬಾ ಕಠಿಣ ಅಭ್ಯಾಸ ಮಾಡಬೇಕಾಗಬಹುದು.

#2
ಶಹಜಾನ್ 7 ಸಲ ಮದುವೆಯಾಗಿದ್ದಾನೆ. ಮುಮ್ತಾಜ್ ಮಹಾಲ್ ಆತನ 4 ನೇ ಪತ್ನಿಯಂತೆ!

#3
ಮುಮ್ತಾಜ್ ಮಹಾಲ್ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆದರೆ ಮುಮ್ತಾಜ್ ಪ್ರೀತಿಯಲ್ಲಿ ಬಿದ್ದ ಶಹಜಾನ್ ಆತನನ್ನು ಕೊಂದು ಮುಮ್ತಾಜ್‌ಳನ್ನು ಮದುವೆಯಾದನಂತೆ!

#4
ಮುಮ್ತಾಜ್ ಮಹಾಲ್ ತನ್ನ 14ನೇ ಮಗುವಿಗೆ ಜನ್ಮ ನೀಡುತ್ತಿದ್ದ ವೇಳೆ ಸಾವನ್ನಪ್ಪಿದಳು.

#5
ಮುಮ್ತಾಜ್ ಸಾವಿನ ಬಳಿಕ ಶಹಜಾನ್ ಆಕೆಯ ತಂಗಿಯನ್ನು ಮದುವೆಯಾದ. ಆತ ನಿಜವಾಗಿಯೂ ಮುಮ್ತಾಜ್‌ಳನ್ನು ಪ್ರೀತಿಸುತ್ತಿದ್ದನೇ ಎನ್ನುವ ಪ್ರಶ್ನೆ ಕಾಡುತ್ತದೆ.

#6
ಶಹಜಾನ್‌ನ ಮಕ್ಕಳು ತಮ್ಮೊಳಗೆ ರಾಜನ ಪಟ್ಟಕ್ಕಾಗಿ ಹೋರಾಟ ನಡೆಸಿದರು. ಈ ಹೋರಾಟವನ್ನು ಸಮುಗ್ರ ಎಂದು ಕರೆಯಲಾಯಿತು.

#7
ಶಹಜಾನ್‌ನ ಮಗ ಔರಂಗಜೇಬ ತನ್ನ ತಂದೆಯನ್ನೇ ಗೃಹಬಂಧನದಲ್ಲಿರಿಸಿದ.

#8
1628ರಿಂದ 1658ರ ತನಕ ಭಾರತವನ್ನು ಆಳಿದರೂ ಶಹಜಾನ್‌ಗೆ ಸಾವಿನ ವೇಳೆ ಯಾವುದೇ ರೀತಿಯ ರಾಜಮರ್ಯಾದೆ ಸಿಗಲಿಲ್ಲ.

#9
ತಾಜ್ ಮಹಾಲ್‌ನಲ್ಲಿ ಶಹಜಾನ್‌ನನ್ನು ಆತನ ಪತ್ನಿ ಮುಮ್ತಾಜ್ ಮಹಾಲ್ ಸಮಾಧಿ ಬದಿಯಲ್ಲೇ ದಫನ ಮಾಡಲಾಯಿತು.

#10
ತಾಜ್ ಮಹಾಲ್ ಎನ್ನುವುದು ಮುಮ್ತಾಜ್‌ಗೆ ಮಾತ್ರ ಸಮಾಧಿಯಾಗಿತ್ತು. ಆದರೆ ಔರಂಗಜೇಬನು ತನ್ನ ತಂದೆಗೆ ಮತ್ತೊಂದು ಸಮಾಧಿ ನಿರ್ಮಿಸುವ ಬದಲು ಮುಮ್ತಾಜ್‌ಳ ಸಮಾಧಿಯ ಪಕ್ಕದಲ್ಲೇ ಆತನನ್ನು ದಫನಗೊಳಿಸಿದ.



Click it and Unblock the Notifications
