For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ನಿಮ್ಮಲ್ಲಿರುವ ಒಳ್ಳೆಯ ಗುಣಗಳನ್ನೂ ರಾಶಿಚಕ್ರ ಬಿಚ್ಚಿಡುತ್ತದೆ...

  By Divya Pandit
  |

  ಪ್ರತಿಯೊಬ್ಬರಲ್ಲೂ ಒಳ್ಳೆಯ ಹಾಗೂ ಕೆಟ್ಟ ಗುಣಗಳು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಆದರೆ ನಾವು ಯಾವಾಗಲೂ ಒಳ್ಳೆಯ ವಿಚಾರಗಳನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ನಮ್ಮಲ್ಲಿರುವ ಒಳ್ಳೆಯ ಗುಣಗಳಿಂದಲೇ ಪ್ರಪಂಚಕ್ಕೆ ಹತ್ತಿರವಾಗುವುದು. ಕೆಲವು ಘಟನೆ ಅಥವಾ ಸಂದರ್ಭಗಳಲ್ಲಿ ಕೆಟ್ಟ ಗುಣಗಳು ಹೊರ ಬೀಳುವುದು, ಅಥವಾ ಕೆಲ ವ್ಯಕ್ತಿಗಳಲ್ಲಿ ಒಳ್ಳೆಯ ಗುಣಕ್ಕಿಂತ ಕೆಟ್ಟ ಗುಣಗಳೇ ಹೆಚ್ಚಾಗಿದ್ದರೆ ಅಂತಹವರು ಕಟ್ಟ ವಿಚಾರಗಳಿಂದಲೇ ಹೆಸರುವಾಸಿಯಾಗುತ್ತಾರೆ.

  ಅದೇನೇ ಇರಲಿ... ಮನಸ್ಸು ಶಾಂತವಾಗಿ, ಇತರರನ್ನೂ ಒಪ್ಪಿಕೊಂಡು ಬಾಳಬೇಕು ಎಂದರೆ ಮೊದಲು ನಾವು ಸಕಾರಾತ್ಮಕವಾಗಿ ಚಿಂತಿಸಬೇಕು. ಇತರರಲ್ಲೂ ಸಕಾರಾತ್ಮಕ ಗುಣಗಳನ್ನು ಗುರುತಿಸಿ ಸ್ನೇಹ, ವಿಶ್ವಾಸದಿಂದ ಬದುಕಬೇಕು. ನಿಮ್ಮ ರಾಶಿಚಕ್ರಕ್ಕೆ ಅನುಗುಣವಾಗಿ ಯಾವೆಲ್ಲಾ ಒಳ್ಳೆಯ ಗುಣಗಳು ಇವೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ...

  ಮೇಷ

  ಮೇಷ

  ಇವರು ಕೈಗೆತ್ತಿಕೊಂಡ ಕೆಲಸವನ್ನು ಪೂರ್ಣಗೊಳಿಸಲು ಜಾಣ್ಮೆ ಹಾಗೂ ಹೆಚ್ಚಿನ ಶ್ರಮ ವಹಿಸುತ್ತಾರೆ. ಯಾವುದಾದರೂ ವಿಚಾರಕ್ಕೆ ಭರವಸೆ ನೀಡಿದರೆ ಅದನ್ನು ಪೂರ್ಣಗೊಳಿಸುತ್ತಾರೆ. ಸಾಧಿಸಬೇಕೆಂದುಕೊಂಡ ವಿಚಾರವನ್ನು ತಮ್ಮ ಕೊನೆಯ ರಕ್ತದ ಹನಿ ಇರುವವರೆಗೂ ಪ್ರಯತ್ನ ಮಾಡಿ ಸಾಧಿಸಿ ತೋರಿಸುತ್ತಾರೆ. ಇವರು ಅತ್ಯಂತ ಶ್ರಮ ಜೀವಿಗಳು ಎನ್ನಬಹುದು. ಇನ್ನು ಈ ರಾಶಿಯವರು ಉತ್ತಮ ಮಾತುಗಾರಿಕೆಯನ್ನು ಹೊಂದಿರುತ್ತಾರೆ. ಇವರಲ್ಲಿ ಮಾತಿನ ಕಲೆ, ಆತ್ಮವಿಶ್ವಾಸ ಮತ್ತು ಹಠಾತ್ ಆಗಿ ನಿರ್ಧಾರಕ್ಕೆ ಬರುವ ಇವರಿಗೆ ಸರಿಯಾಗಿ ಹೊಂದಿಕೊಳ್ಳುವ ಕೆಲಸವೆಂದರೆ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗ, ಕಾಮಗಾರಿ ವೃತ್ತಿ, ಹೊಟೇಲ್ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಉದ್ಯೋಗವು ಸೂಕ್ತವಾಗಿರುವುದು. ಮೇಷ ರಾಶಿಯವರು ಅತ್ಯಂತ ಶ್ರಮಜೀವಿಗಳಾಗಿರುತ್ತಾರೆ.

  ವೃಷಭ

  ವೃಷಭ

  ಇವರು ಅತ್ಯಂತ ಸ್ಥಿರ ಮತ್ತು ವಿಶ್ವಾಸಾರ್ಹ ವ್ಯಕ್ತಿಗಳು. ಇವರು ತಮ್ಮ ಸುತ್ತಲಿನ ಪರಿಸರವನ್ನು ಸ್ಥಿರತೆಯಿಂದ ಹಾಗೂ ವಿಶ್ವಾಸಾರ್ಹವಾಗಿ ಕಾಣುತ್ತಾರೆ. ದೊಡ್ಡದು ಅಥವಾ ಚಿಕ್ಕದು ಎನ್ನುವ ತಾರತಮ್ಯವನ್ನು ತೋರುವುದಿಲ್ಲ. ಎಲ್ಲಾ ವಿಚಾರಕ್ಕೂ ಸಮಾನ ಸ್ಥಾನಮಾನವನ್ನು ನೀಡುತ್ತಾರೆ. ಈ ರಾಶಿಯ ಜನರಿಗೆ ವಿಶಾಲವಾದ ಹೃದಯವಿದ್ದು ಎಲ್ಲಾ ಪ್ರಸಂಗಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವ ಶಕ್ತಿಯಿದೆ. ಹತ್ತಿರದಿಂದ ಬಲ್ಲವರು ನಿಮ್ಮ ನಿಷ್ಠೆ ಮತ್ತು ನಂಬುಗೆಯನ್ನು ಇಷ್ಟಪಡುತ್ತಾರೆ. ನಿಮಗೆ ಅದೃಷ್ಟ ತರುವ ಗುಣವೆಂದರೆ ನಿಮ್ಮ ಪುಸ್ತಕ. ಪ್ರತಿಬಾರಿ ನೀವು ಒಂದು ಪುಸ್ತಕವನ್ನು ಓದಿದಾಗ ಅದರಿಂದ ನಿಮಗೆ ಶಾಂತಿ ಮತ್ತು ನೆಮ್ಮದಿ ದೊರಕುತ್ತದೆ. ಅಲ್ಲದೆ ಇವರಿಗೆ ಹೊಂದಿಕೆಯಾಗುವಂತಹ ವೃತ್ತಿಗಳೆಂದರೆ ಹಣಕಾಸು, ಲೆಕ್ಕಪತ್ರ ನಿರ್ವಹಣಿ, ಇಂಟೀರಿಯರ್ ಡಿಸೈನ್, ನರ್ಸಿಂಗ್, ಇಂಜಿನಿಯರಿಂಗ್, ಕಾನೂನು, ಮಾರ್ಕೆಟಿಂಗ್ ಮತ್ತು ಪಿಆರ್ ವೃತ್ತಿ ಮಾಡಬಹುದಾಗಿದೆ.

  ಮಿಥುನ

  ಮಿಥುನ

  ಇವರು ಅತ್ಯುತ್ತಮವಾದ ಸಂಭಾಷಣಾ ಕಾರರು ಎನ್ನಬಹುದು. ಇನರನ್ನು ತಮ್ಮ ಮಾತಿನಿಂದಲೇ ಮಂತ್ರಮುಗ್ಧರನ್ನಾಗಿಸುತ್ತಾರೆ. ಇವರ ರಾಶಿಗೆ ಅನುಗುಣವಾಗಿ ಯಾವುದೇ ಪರಿಶ್ರಮವಿಲ್ಲದೆ ಸುಲಭವಾಗಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ. ಮಿಥುನ ಇವರು ಹೊಸ ಹೊಸ ವಿಚಾರವನ್ನು ಕಲಿಯುತ್ತಾ ಇರುತ್ತಾರೆ. ಹೊಸ ಹೊಸ ಜಾಗಗಳಿಗೆ ಭೇಟಿ ನೀಡುತ್ತಿರುತ್ತಾರೆ ಮತ್ತು ಹೊಸಬರನ್ನು ಭೇಟಿ ಮಾಡುತ್ತಿರುತ್ತಾರೆ ಆ ಮೂಲಕ ಯಶಸ್ಸನ್ನು ಗಳಿಸುತ್ತಾರೆ. ಅಲ್ಲದೆ ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಹುರಿದುಂಬಿಸುವ ಹಾಗೂ ಆಸಕ್ತಿ ಹುಟ್ಟಿಸುವಂತಹ ವೃತ್ತಿ ಅವರಿಗೆ ಬೇಕಾಗಿದೆ. ಈ ರಾಶಿಯ ಜನರು ಸದಾ ಚಟುವಟಿಕೆ ಯುಳ್ಳವರಾಗಿದ್ದು ಸ್ನೇಹಪರ ಮತ್ತು ತಮಾಷೆಯ ವ್ಯಕ್ತಿತ್ವದವರಾಗಿದ್ದಾರೆ. ಇವರ ಕಲ್ಪನೆ ವಿಪರೀತ ತೂಪ ಪಡೆದು ಇದಕ್ಕೆ ವಿಚಿತ್ರವಾದ ಉತ್ತರವನ್ನೂ ಪಡೆಯುವಲ್ಲಿ ಸಫಲಾರಾಗುತ್ತಾರೆ.

  ಕರ್ಕ

  ಕರ್ಕ

  ಇವರಿಗೆ ಪ್ರೀತಿಯನ್ನು ಸೃಷ್ಟಿಸುವ ಮಾಂತ್ರಿಕ ಶಕ್ತಿಯಿದೆ ಎಂದು ಹೇಳಬಹುದು. ಇವರು ಬಹಳ ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ. ಇವರು ಜನರ ನಡುವೆ ಹಾಗೂ ಕೆಲವು ಸಂದರ್ಭಗಳಲ್ಲಿ ಸುಲಭವಾಗಿ ಅನುಭೂತಿಯನ್ನು ಪಡೆದುಕೊಳ್ಳುತ್ತಾರೆ. ಹಾಗಾಗಿ ಬಹು ಸುಲಭವಾಗಿ ಪ್ರೀತಿಯನ್ನು ಸೃಷ್ಟಿಸಬಲ್ಲರು.

  ಸಿಂಹ

  ಸಿಂಹ

  ಇವರು ತಮ್ಮ ಮನೆಗೆ ಬೆಳಕನ್ನು ಚಲ್ಲುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರು ಸಾಕಷ್ಟು ಧೈರ್ಯ ಹಾಗೂ ಆಕರ್ಷಣೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರ ನಡವಳಿಕೆಯಲ್ಲಿ ಕೆಲವು ಖಚಿತವಾದ ನಿರ್ಧಾರಗಳಿರುತ್ತವೆ. ಈ ರಾಶಿಯವರಿಗೆ ಚಿತ್ತಾಕರ್ಷಕ ಮತ್ತು ಹೊಳೆಯುವ ಹರಳುಗಳು ಹೆಚ್ಚು ಅದೃಷ್ಟವನ್ನು ತಂದುಕೊಡುತ್ತವೆ. ಜೆಮ್‍ಸ್ಟೋನ್ ಅಥವಾ ನೀಲಿ ಮಣಿ ಇವರಿಗೆ ಅತ್ಯಂತ ಅದೃಷ್ಟದ ವಸ್ತು ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಜನರು ಸಿಂಹದಂತೆಯೇ ದೃಢನಿಶ್ಚಯವುಳವರು ಮತ್ತು ದಿಟ್ಟ ಸ್ವಭಾವದವರಾಗಿರುತ್ತಾರೆ.

  ಕನ್ಯಾ

  ಕನ್ಯಾ

  ಇವರು ಒಳ್ಳೆಯದನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಿಗೆ ಒಳ್ಳೆಯ ನಡತೆಗಳು ಯಾವವು ಎನ್ನುವುದು ತಿಳಿದಿರುತ್ತವೆ. ಒಳ್ಳೆಯದಕ್ಕಾಗಿ ಹೋರಾಡುತ್ತಾರೆ. ಒಳ್ಳೆಯದನ್ನು ಸಾಧಿಸುವಾಗ ಇತರರ ಕಣ್ಣಿಗೆ ಬೀಳುತ್ತಾರೆ. ಇವರು ಕೆಲವು ವಿಚಾರದ ಬಗ್ಗೆ ಶ್ರಮ ವಹಿಸಿ ದುಡಿಯುತ್ತಾರೆ. ಇನ್ನು ದುಷ್ಟ ಕಣ್ಣುಗಳೇ ಈ ರಾಶಿಯವರಿಗೆ ಅತ್ಯಂತ ಅದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ದುಷ್ಟ ಕಣ್ಣುಗಳು ಸುತ್ತಲಿರುವ ಕೆಟ್ಟ ಶಕ್ತಿಯಿಂದ ರಕ್ಷಿಸುತ್ತದೆ. ಸುತ್ತಲಿನ ಶಕ್ತಿಯು ಹೆಚ್ಚು ಸಂವೇದನಾ ಶೀಲವಾಗಿರುತ್ತದೆ.ಈ ರಾಶಿಯ ಜನರು ಇತರರಿಗಿಂತ ಎರಡು ಹೆಜ್ಜೆ ಮುಂದಿರುತ್ತಾರೆ. ಇದಕ್ಕೆ ನೀವು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸುವ ಗುಣವೇ ಕಾರಣ. ನೀವು ಸಾಮಾನ್ಯವಾಗಿ ಎಲ್ಲರಿಗೂ ಸಹಾಯ ಮಾಡುವ ಮನಸ್ಸುಳ್ಳವರಾಗಿದ್ದು ವ್ಯವಹಾರಿಕ ಅಥವಾ ಕಾರ್ಯರೂಪದ ಕೆಲಸಗಳನ್ನೇ ಹಮ್ಮಿಕೊಳ್ಳುತ್ತೀರಿ.

  ತುಲಾ

  ತುಲಾ

  ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವ ಇವರು ಜನರಿಂದ ಆಕರ್ಷಿತರಾಗುತ್ತಾರೆ. ಇವರಲ್ಲಿ ಕೆಲವು ಸೂಕ್ಷ್ಮ ಹಾಗೂ ಸಂವೇದನಾ ಶೀಲದ ಗುಣಗಳಿವೆ. ಈ ಗುಣಗಳಿಂದ ಇವರು ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಾರೆ.

  ವೃಶ್ಚಿಕ

  ವೃಶ್ಚಿಕ

  ಇವರು ಒಳ್ಳೆಯ ಉದ್ದೇಶಗಳನ್ನು ಹೆಚ್ಚಾಗಿ ಹೊಂದಿರುತ್ತಾರೆ. ಇವರು ನಡೆದುಕೊಳ್ಳವ ವರ್ತನೆ ಹಾಗೂ ಮಾತನಾಡುವ ವಿಚಾರಗಳು ಬಹುತೇಕವಾಗಿ ಉತ್ತಮ ವಿಚಾರಕ್ಕೆ ಹಾಗೂ ಒಳ್ಳೆಯ ಉದ್ದೇಶಗಳಿಗಾಗಿಯೇ ಇರುತ್ತದೆ.

  ಧನು

  ಧನು

  ಇವರ ಜ್ಞಾನ ಹಾಗೂ ಒಳ್ಳೆಯ ಬುದ್ಧಿಗಾಗಿ ಮನೆಯ ಜನರು ಹೆಚ್ಚು ಹೆಮ್ಮೆ ಪಡುತ್ತಾರೆ. ಇವರು ಬಹಳ ಕುತೂಹಲಕಾರಿ ಶಕ್ತಿ ಹಾಗೂ ಜ್ಞಾನವನ್ನು ಪಡೆದುಕೊಳ್ಳಬೇಕು ಎನ್ನುವ ದಾಹ ಹೆಚ್ಚಾಗಿರುತ್ತದೆ.

  ಮಕರ

  ಮಕರ

  ಇವರು ಬೇರೆಯವರಿಗೆ ಹೇಗೆ ಬೇಕೋ ಹಾಗೇ ವರ್ತಿಸಬಲ್ಲ ಸಾಮಥ್ರ್ಯವನ್ನು ಹೊಂದಿರುತ್ತಾರೆ. ತಮ್ಮ ಕನಸನ್ನು ಸಾಧಿಸುವ ಚಲವನ್ನು ಹೊಂದಿರುತ್ತಾರೆ. ಯಾವ ಬಗೆಯ ಕನಸನ್ನು ಹೊಂದಿರಬೇಕು ಎನ್ನುವುದರ ಬಗ್ಗೆಯೂ ಹೆಚ್ಚು ಜ್ಞಾನವನ್ನು ಪಡೆದುಕೊಂಡಿರುತ್ತಾರೆ.

  ಕುಂಬ

  ಕುಂಬ

  ಇವರು ಕೆಲವು ವಿಶಿಷ್ಟ ಮತ್ತು ಬುದ್ಧಿವಂತ ಕಲ್ಪನೆಯನ್ನು ಪಡೆದುಕೊಂಡಿರುತ್ತಾರೆ. ತಮ್ಮ ಬಗ್ಗೆ ಹೆಚ್ಚಿನ ಹೆಮ್ಮೆಯನ್ನು ಪಡೆದುಕೊಂಡಿರುತ್ತಾರೆ. ವಿಭಿನ್ನ ದೃಷ್ಟಿಕೋನವನ್ನು ಪಡೆದುಕೊಂಡಿರುತ್ತಾರೆ. ಆದರೆ ಅವೆಲ್ಲವೂ ಅವರ ನಿಯಂತ್ರಣದಲ್ಲಿಯೇ ಇರುತ್ತದೆ.

  ಮೀನ

  ಮೀನ

  ಇವರು ಆಧ್ಯಾತ್ಮಿಕ ವಿಚಾರದ ಬಗ್ಗೆ ಹೆಮ್ಮೆಪಡುತ್ತಾರೆ. ವಿಚಾರಗಳು ಅಥವಾ ಸನ್ನಿವೇಶಗಳನ್ನು ಎಲ್ಲಾ ರೀತಿಯಲ್ಲೂ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತಾರೆ. ತಮ್ಮನ್ನು ತಾವು ಅರ್ಥೈಸಿಕೊಳ್ಳುವ ಹಾಗೂ ಸ್ವಯಂ ಸಾಧನೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

  English summary

  Know what you are proud of according to your Zodiac Sign

  Every zodiac sign is quite unique in itself. All of the natives of different zodiacs in the house possess certain qualities, both negative and positive. However, rather than delving into the negativity let us delve into the positive traits and understand what is each astrological sign proud of!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more