ಮುಂದಿನ ಹಲ್ಲುಗಳ ನಡುವಿನ ಅಂತರ, ಅದೃಷ್ಟದ ಸಂಕೇತ!

By: Arshad
Subscribe to Boldsky

ಓರ್ವ ವ್ಯಕ್ತಿ ನಮಗೆ ಎರಡು ಬಗೆಯಲ್ಲಿ ಸುಂದರರಾಗಿ ಕಾಣುತ್ತಾರೆ. ಪ್ರಥಮವಾಗಿ ಹೊರನೋಟ ಆ ಬಳಿಕ ವ್ಯಕ್ತಿತ್ವ. ಹೊರನೋಟವು ವ್ಯಕ್ತಿಯತ್ತ ಗಮನ ಸೆಳೆಯಲು ಮಾತ್ರವೇ ಶಕ್ತವಾದರೆ ವ್ಯಕ್ತಿತ್ವ ವ್ಯಕ್ತಿಯ ಅಂತರಾಳದ ಪರಿಚಯ ಮಾಡಿಸುತ್ತದೆ. ಓರ್ವ ವ್ಯಕ್ತಿ ನಮಗೆ ಇಷ್ಟವಾಗಲು ಎರಡೂ ಅಗತ್ಯವಾದರೂ ವ್ಯಕ್ತಿತ್ವಕ್ಕೆ ಸಿಂಹಪಾಲಿದೆ.

ಇದೇ ಕಾರಣಕ್ಕೆ ಗಾಂಧೀಜಿ, ಚಾರ್ಲಿ ಚಾಪ್ಲಿನ್, ನರಸಿಂಹರಾಜು, ಡಾ. ಕಲಾಂ ಎಲ್ಲರೂ ನಮಗೆ ಸುಂದರರಾಗಿಯೇ ಕಾಣುತ್ತಾರೆ. ಆದರೆ ಅತ್ಯಂತ ಸ್ಫೂರದ್ರೂಪವಿದ್ದ ಚಾರ್ಲ್ಸ್ ಶೋಭರಾಜ್ ನನ್ನು ಇಡಿಯ ವಿಶ್ವವೇ ಏಕೆ ದ್ವೇಶಿಸುತ್ತದೆ ಎಂದು ನಿಮಗೆ ಗೊತ್ತು. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂವಾದ ನಡೆಸಬೇಕಾದರೆ ಅಗತ್ಯವಾಗಿ ಬೇಕಾಗಿರುವುದು ಆತನೆಡೆಗೆ ನೀಡುವ ಗಮನ, ಮುಖದಲ್ಲಿ ನಗು ಮತ್ತು ಉತ್ತಮ ಮಾತುಗಳು.  ಹುಷಾರ್, ಹಲ್ಲುಗಳ ಜೊತೆ ಎಂದೂ ಆಟವಾಡಬೇಡಿ..!

ಕೆಲವರು ನಗುವಾಗ ಅವರ ಮುಂದಿನ ಎರಡು ಬಾಚಿಹಲ್ಲುಗಳ ನಡುವೆ ಕೊಂಚ ಅಂತರವಿರುವುದನ್ನು ಗಮನಿಸಬಹುದು. ಈ ಅಂತರ ನಮ್ಮ ಗಮನವನ್ನು ಥಟ್ಟನೇ ಸೆಳೆಯುತ್ತದೆ. ಆದರೆ ಈ ಅಂತರ ಅದೃಷ್ಟಕ್ಕೆ ಸಂಬಂಧಿಸಿದೆ ಎಂದೇನಾದರೂ ನಿಮಗೆ ಗೊತ್ತಿತ್ತೇ?

ಇಂದಿನ ಲೇಖನದಲ್ಲಿ ನಾವು ಈ ಬಗೆಯ ಅಂತರವಿರುವ ಕೆಲವು ವ್ಯಕ್ತಿಗಳ ಬಗ್ಗೆ ಅರಿಯೋಣ. ಈ ವೈಶಿಷ್ಟ್ಯ ವ್ಯಕ್ತಿಯ ವ್ಯಕ್ತಿತ್ವವನ್ನೂ ಅದೃಷ್ಟವಂತರೇ ಅಲ್ಲವೇ ಎಂಬುದನ್ನೂ ಸಾದರಪಡಿಸಲಿದೆ. ಬನ್ನಿ, ಈ ಕುತೂಹಲಕರ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ..... 

ಈ ವ್ಯಕ್ತಿಗಳು ಕೆಚ್ಚೆದೆಯ ವ್ಯಕ್ತಿತ್ವ ಹೊಂದಿರುತ್ತಾರೆ

ಈ ವ್ಯಕ್ತಿಗಳು ಕೆಚ್ಚೆದೆಯ ವ್ಯಕ್ತಿತ್ವ ಹೊಂದಿರುತ್ತಾರೆ

ಬಾಚಿಹಲ್ಲುಗಳ ನಡುವೆ ಅಂತರವಿರುವ ವ್ಯಕ್ತಿಗಳು ಅತಿ ಹೆಚ್ಚಿನ ಧೈರ್ಯ ಹೊಂದಿರುವ ವ್ಯಕ್ತಿಗಳಾಗಿದ್ದು ಆತ್ಮ ವಿಶ್ವಾಸವುಳ್ಳವರಾಗಿರುತ್ತಾರೆ. ಯಾವುದೇ ಕೆಲಸದಲ್ಲಿ ಹೆಚ್ಚಿನ ಅಪಾಯ ಅಥವಾ ಗಂಡಾಂತರವಿದ್ದರೂ ಇವರು ಆ ಸವಾಲನ್ನು ಎದುರಿಸುವ ಸ್ಥೈರ್ಯವನ್ನು ಹೊಂದಿದ್ದು ಒಂದು ಪ್ರಯತ್ನದ ಹೊರತಾಗಿ ಹಿಂದೇಟು ಹಾಕದ ವ್ಯಕ್ತಿಗಳಾಗಿರುತ್ತಾರೆ.

ಇವರು ಸದಾ ತಮ್ಮ ಅತ್ಯುತ್ತಮ ಸಾಧನೆಯನ್ನು ನೀಡುತ್ತಾರೆ

ಇವರು ಸದಾ ತಮ್ಮ ಅತ್ಯುತ್ತಮ ಸಾಧನೆಯನ್ನು ನೀಡುತ್ತಾರೆ

ಯಾವುದೇ ಕೆಲಸದಲ್ಲಿ ಎದುರಾಗುವ ಪರಿಣಾಮದ ಹೊರತಾಗಿಯೂ ಇವರು ಸತತವಾಗಿ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ. ಅಲ್ಲದೇ ಈ ಪ್ರಯತ್ನದಲ್ಲಿ ಇವರು ತಮ್ಮ ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಈ ಕೆಲಸವನ್ನು ಪೂರೈಸಲು ಯತ್ನಿಸುತ್ತಾರೆ. ಇವರು ಕೈಗೊಳ್ಳುವ ನಿರ್ಧಾರಗಳು ಹೆಚ್ಚಾಗಿ ಅಂತರ್ದೃಷ್ಟಿಯನ್ನೇ ಅವಲಂಬಿಸಿರುತ್ತವೆ ಹಾಗೂ ಹೆಚ್ಚಿನ ಸಮಯ ಈ ನಿರ್ಧಾರಗಳು ಸರಿಯೂ ಆಗಿರುತ್ತವೆ.

ಇವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ

ಇವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ

ಈ ವ್ಯಕ್ತಿಗಳು ಕ್ರಿಯಾತ್ಮಕರೂ ಹೆಚ್ಚು ಬುದ್ಧಿವಂತರೂ ಆಗಿರುತ್ತಾರೆ. ಇವರಿಗೆ ತಾವು ಮಾಡುವ ಕೆಲಸದಲ್ಲಿ ಹೆಚ್ಚಿನ ಶ್ರದ್ಧೆ ಮತ್ತು ಉತ್ಸಾಹವಿರುವ ಕಾರಣ ಇವರು ಸದಾ ತಮ್ಮ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವುದು ಮಾತ್ರವಲ್ಲ ಹೊಸ ಹೊಸ ಕಾರ್ಯಗಳಿಗೂ ಮುಂದಾಗುತ್ತಾರೆ. ಇವರಿಗೆ ಇದುವರೆಗೆ ಯಾರೂ ಮಾಡದ ಕೆಲಸಗಳನ್ನು ಪ್ರಥಮವಾಗಿ ಕೈಗೊಳ್ಳುವ ಉತ್ಸಾಹವಿರುತ್ತದೆ. ಇದೇ ಕಾರಣದಿಂದ ಇವರು ಜೀವನದಲ್ಲಿ ಹೆಚ್ಚಿನ ಯಶಸ್ವಿ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ.

ಇವರು ವಾಚಾಳಿಗಳೂ ಆಗಿರುತ್ತಾರೆ

ಇವರು ವಾಚಾಳಿಗಳೂ ಆಗಿರುತ್ತಾರೆ

ಒಂದು ಗುಂಪಿನಲ್ಲಿದ್ದಾಗ ಇವರು ಎದುರಿನವರಿಗೆ ಇಷ್ಟವಾಗುತ್ತದೋ ಇಲ್ಲವೋ ಎಂಬುದನ್ನು ಗಮನಿಸದೇ, ತಮ್ಮದೇ ಹಾವಭಾವದಲ್ಲಿ ನಿರರ್ಗಳವಾಗಿ ಮಾತನಾಡುವ ಕೌಶಲ್ಯವನ್ನು ಹೊಂದಿರುತ್ತಾರೆ! ಅಷ್ಟೇ ಅಲ್ಲದೆ ಇವರು ಗಂಟೆಗಟ್ಟಲೇ ಯಾವುದೇ ವಿಷಯದ ಮೇಲೆ ಮಾತನಾಡಿದರೂ ಇನ್ನೂ ಮಾತನಾಡುವ ಶಕ್ತಿಯನ್ನು ಉಳಿಸಿಕೊಂಡಿರುತ್ತಾರೆ.

ಇವರು ಹಣಕಾಸಿನ ವಿಷಯದಲ್ಲಿ ಹೆಚ್ಚು ಪ್ರಬುದ್ಧರಾಗಿದ್ದಾರೆ

ಇವರು ಹಣಕಾಸಿನ ವಿಷಯದಲ್ಲಿ ಹೆಚ್ಚು ಪ್ರಬುದ್ಧರಾಗಿದ್ದಾರೆ

ಹಣಕಾಸಿನ ವಿಷಯದಲ್ಲಿ ಹೇಗೆ ಮುಂದುವರೆಯಬೇಕೆಂದು ಇತರರಿಗಿಂತಲೂ ಈ ವ್ಯಕ್ತಿಗಳು ಹೆಚ್ಚು ತಿಳಿದಿರುತ್ತಾರೆ. ಇವರು ತಮ್ಮ ಗಳಿಕೆಯ ಹಣವನ್ನು ಸರಿಯಾದ ಕ್ರಮದಲ್ಲಿ ವಿನಿಯೋಗಿಸಿ ಉಳಿತಾಯವನ್ನೂ ಮಾಡುವ ವ್ಯಕ್ತಿಗಳಾಗಿರುತ್ತಾರೆ.

ಇವರ ಆಹಾರಕ್ರಮ ಆರೋಗ್ಯಕರವಾಗಿರುತ್ತದೆ

ಇವರ ಆಹಾರಕ್ರಮ ಆರೋಗ್ಯಕರವಾಗಿರುತ್ತದೆ

ಈ ವ್ಯಕ್ತಿಗಳು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ನೀಡುವ ಕಾರಣ ತಮ್ಮ ಆಹಾರಾಭ್ಯಾಸಗಳಲ್ಲಿಯೂ ಕಟ್ಟುನಿಟ್ಟು ಪಾಲಿಸುತ್ತಾರೆ. ಇವರು ಆಹಾರದಲ್ಲಿ ವೈವಿಧ್ಯತೆಯನ್ನು ಇಷ್ಟಪಡುತ್ತಾರೆ ಹಾಗೂ ಹೊಸ ಹೊಸ ರುಚಿಗಳನ್ನು ಸದಾ ಅಸ್ವಾದಿಸುವ ಹುನ್ನಾರದಲ್ಲಿರುತ್ತಾರೆ.

ಇವರ ವೃತ್ತಿಜೀವನ ಏಕಪ್ರಕಾರವಾಗಿ ಮುಂದುವರೆಯುತ್ತದೆ

ಇವರ ವೃತ್ತಿಜೀವನ ಏಕಪ್ರಕಾರವಾಗಿ ಮುಂದುವರೆಯುತ್ತದೆ

ಸಾಮಾನ್ಯವಾಗಿ ಈ ವಕ್ತಿಗಳ ವೃತ್ತಿಜೀವನ ಏರುವಿಕೆಯ ಕ್ರಮದಲ್ಲಿ ಮುಂದೆ ಸಾಗುತ್ತದೆ. ಇವರು ಯಶಸ್ವೀ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ ಹಾಗೂ ಉಳಿದವರಿಗೆ ಒಂದು ಮಾದರಿಯಾಗುತ್ತಾರೆ.

 
English summary

Is Gap In Your Front Two Teeth Considered To Be Lucky?

Here, in this article, we are about to share some of the facts on people with a gap in their front two teeth. It helps to define a person's personality and also reveals if it is lucky or not! Find out more about this interesting unique feature.
Please Wait while comments are loading...
Subscribe Newsletter