ತುಟಿಗಳ ಬಗ್ಗೆ ನೀವು ತಿಳಿದಿರದ ಇಂಟರೆಸ್ಟಿಂಗ್ ಸಂಗತಿಗಳು

By: Deepu
Subscribe to Boldsky

ತುಟಿಗಳ ಬಗ್ಗೆ ವರ್ಣನೆ ಮಾಡಿದವರು ಒಂದೊಂದು ರೀತಿಯ ಹೂಗಳಿಗೆ ಅದನ್ನು ಹೋಲಿಸಿದ್ದಾರೆ. ತುಟಿ ನಮಗೆ ನೆನಪಿಗೆ ಬರುವುದು ಮುತ್ತು ನೀಡುವಾಗ. ಮುತ್ತು ಹಾಗೂ ತುಟಿಗೆ ಅವಿನಾಭಾವ ಸಂಬಂಧವಿದೆ. ಆದರೆ ತುಟಿಗಳ ಬಗ್ಗೆ ಇನ್ನೂ ಹೆಚ್ಚಿನ ಸತ್ಯಗಳು ನಮಗೆ ತಿಳಿದಿಲ್ಲ. ತುಟಿಗಳನ್ನು ಆಹಾರ ಸೇವನೆ ಮತ್ತು ಮಾತನಾಡಲು ಬಳಸಲಾಗುತ್ತದೆ. ಮನುಷ್ಯರ ತುಟಿಗಳು ಪ್ರಾಣಿಗಳ ತುಟಿಗಳಿಗಿಂತ ತುಂಬಾ ಭಿನ್ನವಾಗಿದೆ. ತುಟಿಯನ್ನು ನೋಡಿ ಭವಿಷ್ಯ ಹೇಳಬಹುದಂತೆ, ನಂಬುತ್ತೀರಾ?

ಯಾಕೆಂದರೆ ಮಾತನಾಡಲು ಈ ತುಟಿಗಳ ರಚನೆ ಮಾಡಲಾಗಿದೆ. ತುಟಿಗಳ ಬಗ್ಗೆ ನಮಗೆ ತಿಳಿಯದೆ ಇರುವಂತಹ ಕೆಲವೊಂದು ಸತ್ಯಗಳು ಇವೆ. ಆದರೆ ಇದರ ಬಗ್ಗೆ ನಾವು ಗಮನ ಹರಿಸುವುದೇ ಇಲ್ಲ. ತುಟಿಗಳ ಬಗ್ಗೆ ಇರುವ ಸತ್ಯಗಳು ಯಾವುದು ಎಂದು ಈ ಲೇಖನದ ಮೂಲಕ ನೀವು ತಿಳಿದುಕೊಳ್ಳಿ... 

ವಾಸ್ತವ #1

ವಾಸ್ತವ #1

ಮಾನವ ದೇಹದಲ್ಲಿರುವ ಅತ್ಯಂತ ಸೂಕ್ಷ್ಮ ಅಂಗಗಳಲ್ಲಿ ತುಟಿ ಒಂದಾಗಿದೆ. ಲಕ್ಷಾಂತರ ನರಗಳು ಬಂದು ತುಟಿಗಳಲ್ಲಿ ಅಂತ್ಯವನ್ನು ಕಾಣುತ್ತದೆ. ಆದರೆ ಇದರ ರಕ್ಷಣೆಗೆ ಯಾವುದೇ ರೀತಿಯ ಪದರವಿಲ್ಲವೆಂದು ಅಧ್ಯಯನಗಳು ಹೇಳಿವೆ.

ವಾಸ್ತವ #2

ವಾಸ್ತವ #2

ತುಟಿಗಳಲ್ಲಿ ಯಾವುದೇ ರೀತಿಯ ಬೆವರಿನ ನಾಳಗಳು ಇರದೆ ಇರುವ ಕಾರಣ ತುಟಿಗಳಲ್ಲಿ ಬೆವರು ಬರುವುದಿಲ್ಲ. ದೇಹದ ಇತರ ಭಾಗಕ್ಕಿಂತ ತುಂಬಾ ಬೇಗನೆ ತುಟಿಗಳು ಒಣಗುತ್ತದೆ.

ವಾಸ್ತವ #3

ವಾಸ್ತವ #3

ಬೆರಳ ಗುರುತಿನಂತೆ ತುಟಿಗಳು ಕೂಡ ತುಂಬಾ ವಿಶೇಷವಾಗಿರುವಂತದ್ದಾಗಿದೆ. ವ್ಯಕ್ತಿಗಳಿಬ್ಬರ ತುಟಿಗಳ ಗುರುತು ಒಂದೇ ರೀತಿಯಾಗಿರಲು ಸಾಧ್ಯವಿಲ್ಲ.

ವಾಸ್ತವ #4

ವಾಸ್ತವ #4

ಒಳಗಡೆ ಹಾಗೂ ಹೊರಗಡೆ ವಿಸ್ತರಣೆಯಾಗುವ ದೇಹದ ಒಂದು ಭಾಗವೆಂದರೆ ಅದು ತುಟಿಗಳು. ಬಾಯಿಯ ಒಳಗಡೆ ಉಂಟುಮಾಡುವ ಲೋಳೆಯ ಪೊರೆ ಮತ್ತು ಹೊರಭಾಗದಲ್ಲಿ ಉಂಟಾಗುವ ಲೋಳೆಯ ಪೊರೆ ಸಮಾನವಾಗಿದೆ.

ವಾಸ್ತವ #5

ವಾಸ್ತವ #5

ವ್ಯಕ್ತಿಗೆ ವಯಸ್ಸಾಗುತ್ತಾ ಹೋದಂತೆ ತುಟಿಗಳು ತೆಳುವಾಗುತ್ತಾ ಹೋಗುತ್ತದೆ. ವಯಸ್ಸಾಗುತ್ತಿರುವ ಕಾರಣ ಮತ್ತು ದೇಹದಲ್ಲಿ ಕಾಲಜನ್ ಬಿಡುಗಡೆ ಕಡಿಮೆಯಾಗುವ ಕಾರಣದಿಂದಾಗಿ ಹೀಗೆ ಆಗುತ್ತದೆ. ಕಾಲಜನ್ ಕಡಿಮೆಯಾಗುವ ಕಾರಣದಿಂದಾಗಿ ತುಟಿಗಳು ತೆಳುವಾಗುತ್ತಾ ಹೋಗುತ್ತದೆ.

ವಾಸ್ತವ #6

ವಾಸ್ತವ #6

ಲೈಂಗಿಕತೆಯ ರಹಸ್ಯ ತುಟಿಗಳಲ್ಲಿ ಅಡಗಿದೆ ಎಂದು ನಿಮಗೆ ತಿಳಿದಿದೆಯಾ? ಮಹಿಳೆ ಬೇಗನೆ ಅಥವಾ ತಡವಾಗಿ ಪರಾಕಾಷ್ಠೆಗೆ ತಲುಪುತ್ತಾಳೆಯಾ ಎಂದು ತುಟಿಗಳನ್ನು ನೋಡಿ ತಿಳಿದುಕೊಳ್ಳಬಹುದು ಎಂದು ಅಧ್ಯಯನಗಳು ಕಂಡುಕೊಂಡಿವೆ.

ವಾಸ್ತವ #7

ವಾಸ್ತವ #7

ತುಟಿಗಳು ಕೂಡ ಪಾರ್ಶ್ವವಾಯುವಿಗೆ ತುತ್ತಾಗಬಹುದು. ಮುಖದ ಈ ರೀತಿಯ ಪಾರ್ಶ್ವವಾಯುವನ್ನು ಬೆಲ್ಸ್ ಪಾರ್ಶ್ವವಾಯು ಎನ್ನಲಾಗುತ್ತದೆ. ಮುಖದಲ್ಲಿನ ನರಗಳು ಹಾನಿಗೊಳಗಾಗುವುದರಿಂದ ಹೀಗೆ ಆಗಬಹುದು.

 
English summary

Interesting Facts About Lips

Learning about some bodily facts can get really interesting.. Check out these facts on lips to further improve your knowledge.
Subscribe Newsletter