Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಅಪ್ಪಂದಿರ ದಿನ ವಿಶೇಷ: ಪ್ರೀತಿಯ ಅಪ್ಪನಿಗೆ ಅಕ್ಕರೆಯ ಉಡುಗೊರೆಗಳು
ಇಷ್ಟರವರೆಗೆ ಅಪ್ಪಂದಿನ ದಿನದಂದು ನಿಮ್ಮ ತಂದೆಯವರಿಗೆ ಟೈ ಅಥವಾ ಕಫ್ಲಿಂಕ್ ಮೊದಲಾದ ಉಪಯೋಗಕ್ಕೆ ಬಾರದ ಉಡುಗೊರೆಗಳನ್ನೇ ನೀಡುತ್ತಾ ಬಂದಿದ್ದೀರೇ? ನಿಜವಾಗಿ ಹೇಳಬೇಕೆಂದರೆ ನಿಮ್ಮ ಮೇಲಿನ ಪ್ರೀತಿ ಅಭಿಮಾನಕ್ಕೆ ಅವರಿದನ್ನು ಸ್ವೀಕರಿಸಿದರೇ ಹೊರತು ಉಡುಗೊರೆಯ ಪೆಟ್ಟಿಗೆಯನ್ನೂ ತೆರೆದು ನೋಡಿರಲಿಕ್ಕಿಲ್ಲ.
ಅಲ್ಲದೇ ನೀವು ಇದುವರೆಗೆ ನೀಡುತ್ತಾ ಬಂದಿರುವ ಉಡುಗೊರೆ ಆಗ ಅವರಿಗೆ ಪ್ರಿಯವಾಗಿದ್ದರೂ ಪ್ರತಿ ಬಾರಿಗೂ ಇದನ್ನೇ ಉಡುಗೊರೆಯಾಗಿ ಬಯಸುತ್ತಿದ್ದಿರಲಾರರು. ಈ ವರ್ಷ ನಿಮ್ಮ ತಂದೆಯವರಿಗೆ ನಿಮ್ಮ ಪ್ರೀತಿಯನ್ನು ಕೊಂಚ ಭಿನ್ನವಾಗ ಉಡುಗೊರೆ ನೀಡುವ ಮೂಲಕ ಏಕೆ ವ್ಯಕ್ತಪಡಿಸಬಾರದು?
ಉಡುಗೊರೆ ಕೊಡುವುದಕ್ಕಿಂತಲೂ ಇದನ್ನು ಆಯ್ಕೆ ಮಾಡುವುದೇ ಅತ್ಯಂತ ಕಷ್ಟಕರವಾಗಿದೆ. ಆನ್ಲೈನ್ ತಾಣಗಳಲ್ಲಿ ಲಭ್ಯವಿರುವ ಲಕ್ಷಾಂತರ ವಸ್ತುಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡುವುದೇ ದುಸ್ತರ. ಒಂದು ವೇಳೆ ಇದೇ ದ್ವಂದ್ವ ನಿಮ್ಮದೂ ಆಗಿದ್ದರೆ ಇಂದಿನ ಲೇಖನ ನಿಮ್ಮ ದ್ವಂದ್ವ ದುಗುಡಗಳನ್ನು ನಿವಾರಿಸಿ ನಿಮ್ಮ ಆಪ್ತರ ಮನಗೆಲ್ಲಲು ನೆರವಾಗಬಹುದು.
ಅವರು ಮೆಚ್ಚುವ ಕ್ರೀಡಾ ಪಂದ್ಯದ ಟಿಕೆಟ್
ಕ್ರೀಡೆ ಎಲ್ಲರೂ ಮೆಚ್ಚುವಂತಹದ್ದೇ. ಆದರೆ ಎಲ್ಲರಿಗೂ ತಮ್ಮದೇ ಆದ ಮೆಚ್ಚಿನ ಕ್ರೀಡೆಗಳಿರುತ್ತವೆ. ನಿಮ್ಮ ತಂದೆಯವರ ನೆಚ್ಚಿನ ಕ್ರೀಡೆ ಯಾವುದೆಂದು ನಿಮಗೆ ತಿಳಿದೇ ಇರಬಹುದು. ಸಾಮಾನ್ಯವಾಗಿ ಹಿರಿಯರು ತಮ್ಮ ಮಕ್ಕಳಿಗಾಗಿ ತಮ್ಮನೆಚ್ಚಿನ ಕ್ರೀಡೆ ಅಥವಾ ಇತರ ಆಯ್ಕೆಗಳನ್ನು ದುಬಾರಿ ಎಂಬ ಕಾರಣ ನೀಡಿ ಹೋಗದೇ ಉಳಿಯುತ್ತಾರೆ. ಕೊಂಚ ಹುಡುಕಾಡಿದರೆ ಮುಂದಿನ ದಿನಗಳಲ್ಲಿ ನಡೆಯಲಿರುವ ನಿಮ್ಮ ತಂದೆಯವರ ಮೆಚ್ಚಿನ ಕ್ರೀಡಾಕೂಟದ ಟಿಕೆಟ್ ಸಿಗಬಹುದು. ಇದನ್ನು ತಂದೆಯವರ ದಿನಕ್ಕಾಗಿ ಉಡುಗೊರೆಯಾಗಿ ನೀಡಿದರೆ ಅವರು ನಿಜಕ್ಕೂ ಸಂತೋಷಗೊಳ್ಳುವರು.

ಉತ್ತಮ ಸಂಗೀತದ ಅನುಭವಕ್ಕಾಗಿ ಸ್ಪೀಕರುಗಳು
ಸಾಮಾನ್ಯವಾಗಿ ಹಿರಿಯರು ತಮ್ಮ ಕಾಲದ ಸಂಗೀತವನ್ನು ಇಷ್ಟಪಡುತ್ತಾರೆ. ಆದರೆ ಅಂದು ಲಭ್ಯವಿಲ್ಲದಿದ್ದ ಇಂದಿನ ತಂತ್ರಜ್ಞಾನದಿಂದಾಗಿ ಇವರ ಸಂಗೀತ ಆಸ್ವಾದನೆಯ ಅನುಭವವೂ ಅಂದಿನ ದಿನಕ್ಕೇ ಉಳಿದುಬಿಟ್ಟಿದ್ದು ಇಂದು ಸಂಗೀತ ಅದ್ಭುತ ಪರಿಣಾಮಗಳೊಂದಿಗೂ ಆಸ್ವಾದಿಸಬಹುದು ಎಂದು ಅವರಿಗೆ ಗೊತ್ತೇ ಇರಲಿಕ್ಕಿಲ್ಲ. ಹಾಗಾಗಿ ಈ ವರ್ಷ ಅವರಿಗೆ ಸರೌಂಡ್ ಸೌಂಡ್ ಅಥವಾ ವಿಶೇಷ ಅನುಭವ ನೀಡುವ ಹೆಡ್ ಫೋನ್ ಅಥವಾ ಮ್ಯೂಸಿಕ್ ಸಿಸ್ಟಮ್ ಒಂದನ್ನು ಉಡುಗೊರೆಯಾಗಿ ನೀಡುವ ಮೂಲಕ ಅವರ ನೆಚ್ಚಿನ ಗಾಯಕನ ಗೀತೆಗಳನ್ನು ಇನ್ನೂ ಹೆಚ್ಚಾಗಿ ಸವಿಯಲು ಸಾಧ್ಯವಾಗುತ್ತದೆ.
ಮಿನಿ ಗ್ರೂಮಿಂಗ್ ಕಿಟ್
ಒಂದು ವೇಳೆ ನಿಮ್ಮ ತಂದೆಯವರಿಗೆ ತಿರುಗಾಟ ಇಷ್ಟವೆಂದಾಗಿದ್ದರೆ ಈ ಉಡುಗೊರೆ ಅತ್ಯುತ್ತಮವಾಗಿದೆ. ಸಾಮಾನ್ಯವಾಗಿ ಪರ ಊರುಗಳಿಗೆ ಹೋದಾಗ ಶೇವಿಂಗ್, ಕೂದಲು ಕತ್ತರಿಸಿಕೊಳ್ಳಲು ಮೊದಲಾದ ಚಿಕ್ಕ ಪುಟ್ಟ ಕೆಲಸಗಳಿಗೆ ಬೇರೆಯವರನ್ನು ಅವಲಂಬಿಸುವುದು ತುಂಬಾ ಕಷ್ಟವಾಗುತ್ತದೆ. ಆಗ ಶೇವಿಂಗ್ ಉಪಕರಣಗಳು, ಕತ್ತರಿ, ಚಿಮ್ಮಟ, ಆಫ್ಟರ್ ಶೇವ್, ಚಿಕ್ಕ ಸುಗಂಧ ದ್ರವ್ಯದ ಬಾಟಲಿ, ಬಾಚಣಿಗೆ ಮೊದಲಾದ ಅಗತ್ಯವಸ್ತುಗಳನ್ನೊಳಗೊಂಡ ಗ್ರೂಮಿಂಗ್ ಸೆಟ್ ಉತ್ತಮ ಆಯ್ಕೆಯಾಗಿದ್ದು ನಿಮ್ಮ ತಂದೆಯವರು ತುಂಬಾ ಇಷ್ಟಪಡುವರು.
ಸುಸ್ತಾಗಿರುವ ದೇಹಕ್ಕೆ ಸ್ಪಾ ಆರೈಕೆ
ಸಾಮಾನ್ಯವಾಗಿ ನಡುವಯಸ್ಸು ದಾಟಿದ ಬಳಿಕ ಸುಲಭ ವ್ಯಾಯಾಮಗಳಿಗೇ ಮೀಸಲಾಗುವ ಮೂಲಕ ದೇಹದ ಸ್ನಾಯುಗಳು ಕೊಂಚ ಜಡ್ಡುಗಟ್ಟಿರುತ್ತವೆ. ಹಾಗಾಗಿ ಕೊಂಚ ಮಸಾಜ್ ನೀಡುವ ಸ್ಪಾ ಸೇವೆಯನ್ನು ಉಡುಗೊರೆಯಾಗಿ ನೀಡುವುದು ಒಂದು ಉತ್ತಮ ಆಯ್ಕೆ. ಅದರಲ್ಲೂ ನಿಮ್ಮ ತಂದೆಯವರು ಚಟುವಟಿಕೆಯ ಕೊರತೆಯಿಂದ ನಿಸ್ತೇಜರಾಗಿದ್ದಂತೆ ಕಂಡುಬಂದರೆ ಅವರೊಂದಿಗೆ ನೀವೂ ಜೊತೆಯಾಗಿದ್ದರೆ ಅವರು ಇನ್ನಷ್ಟು ಹೆಚ್ಚು ಸಂತೋಷಗೊಳ್ಳುವರು.
ಚರ್ಮದ ಡಫ್ಲೆ ಬ್ಯಾಗ್ (Leather Duffle Bag)
ಇದೊಂದು ಸಾರ್ವಕಾಲಿಕವಾಗಿ ಇಷ್ಟಪಡುವಂತಹ ವಸ್ತುವಾಗಿದ್ದು ನಿಮ್ಮ ತಂದೆಯವರಿಗೆ ಖಂಡಿತಾ ಇಷ್ಟವಾಗಬಹುದು. ಈ ಚೀಲ ನಿಮ್ಮ ತಂದೆಯವರ ಕಿರುಪ್ರವಾಸ ಹಾಗೂ ಇತರ ಅಗತ್ಯ ತಿರುಗಾಟದಲ್ಲಿ ದೊಡ್ಡ ಸೂಟ್ ಕೇಸ್ ಬದಲಿಗೆ ಸುಲಭವಾಗಿ ಕೊಂಡು ಹೋಗುವಂತಿದ್ದು ಹಗುರವೂ, ಸುಂದರವೂ ಆಗಿರುವ ಕಾರಣ ಯಾರನ್ನೂ ಅವಲಂಬಿಸದೇ ಸ್ವತಃ ತಮ್ಮ ವಸ್ತುಗಳನ್ನು ಕೊಂಡು ಹೋಗುವ ತೃಪ್ತಿ ಒಂದು ಲಾಭವಾದರೆ ಈ ಚೀಲದಿಂದಾಗಿ ಸುತ್ತಮುತ್ತಲಿರುವ ಲಲನೆಯರು ನೋಡುವ ಮೆಚ್ಚುಗೆಯ ನೋಟ ಇನ್ನೊಂದು ಪ್ಲಸ್ ಪಾಯಿಂಟ್.
ಡಿಜಿಟಲ್ ಫ್ರೇಮ್
ಯಾವುದೇ ಹಿರಿಯರಿಗೆ ಮೆಚ್ಚುಗೆಯಾಗುವ ಇದು ಇನ್ನೊಂದು ನೂತನ ಉಡುಗೊರೆಯಾಗಿದೆ. ಅವರ ಸ್ಮರಣ ಭಂಡಾರದಲ್ಲಿ ಅಪಾರವಾದ ಮಾಹಿತಿಯೇ ಇದ್ದು ಇವುಗಳಲ್ಲಿ ಕೆಲವನ್ನಾದರೂ ಅವರು ತಮ್ಮ ಸಂಗ್ರಹದಲ್ಲಿ ಚಿತ್ರರೂಪದಲ್ಲಿರಿಸಿರುತ್ತಾರೆ. ಈ ಚಿತ್ರಗಳನ್ನು ಒಮ್ಮೆ ಸ್ಕ್ಯಾನ್ ಮಾಡಿಸಿ ಡಿಜಿಟಲ್ ಫ್ರೇಂ ನಲ್ಲಿ ಒಂದಾದ ಮೇಲೊಂದು ಬರುವಂತೆ ಪ್ರದರ್ಶಿಸುವ ಮೂಲಕ ನಿಮ್ಮ ತಂದೆಯವರಿಗೆ ಅವರ ವಿವಾಹ, ವಾರ್ಷಿಕೋತ್ಸವ, ಹಬ್ಬ, ಸಂಭ್ರಮದ ಕ್ಷಣಗಳನ್ನು ನೆನೆಸಿಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.



Click it and Unblock the Notifications












