ಈ ನಿಧಿ ರಹಸ್ಯಗಳು ನಿಜವಾಗಿದ್ದರೆ-ಭಾರತ ಒಂದೇ ದಿನದಲ್ಲಿ ಶ್ರೀಮಂತ ರಾಷ್ಟ್ರವಾಗಲಿದೆ!!

Posted By: Arshad
Subscribe to Boldsky

ಎಷ್ಟೋ ಸಲ, ನಿಧಿಯೊಂದು ಸಿಕ್ಕಿದರೆ ಜೀವನವೇ ಬದಲಾಗಿಬಿಡುತ್ತದಲ್ಲಾ ಎಂಬ ಬಯಕೆ ಪ್ರತಿಯೊಬ್ಬರನ್ನೂ ಜೀವನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಕಾಡದೇ ಇರಲಾರದು. ಅದರಲ್ಲೂ ಭಾರತದಲ್ಲಿ ಹಿಂದಿನ ಜನರು ತಮ್ಮ ನಿಧಿಯನ್ನು ಇನ್ನೊಬ್ಬರಿಗೆ ಸಿಗದಂತೆ ಗೋಪ್ಯ ಸ್ಥಳದಲ್ಲಿ ಹೂತಿಟ್ಟು ಮರಣಕ್ಕೂ ಮುನ್ನ ಆ ಸ್ಥಳದ ಬಗ್ಗೆ ಮಾಹಿತಿಯನ್ನು ತಮ್ಮ ಆಪ್ತರಿಗೆ ತಿಳಿಸಿ ಸಾಯುವುದಿತ್ತು. ಆದರೆ ಕೆಲವು ನತದೃಷ್ಟರಿಗೆ ಹೂತಿಟ್ಟ ಬಗ್ಗೆ ಮಾಹಿತಿ ನೀಡಲು ಅವಕಾಶವೇ ಸಿಗದೇ ಆ ನಿಧಿಗಳು ಇಂದಿಗೂ ಭಾರತದಾದ್ಯಂತ ಎಲ್ಲಲ್ಲೋ ಹುದುಗಿವೆ. ಇವು ಸಿಗುವುದು ಆ ಸ್ಥಳದಲ್ಲಿ ಮನೆಯ ಅಡಿಪಾಯ ಅಥವಾ ಇನ್ನಾವುದೋ ಕೆಲಸಕ್ಕೆ ಅಗೆತ ನಡೆಸಿದಾಗಲೇ!

ಕನಸಿನಲ್ಲಿ ದೇವಸ್ಥಾನ ಕಂಡರೆ ಅದರ ಅರ್ಥ ಹೀಗೂ ಇರಬಹುದು...

ಆದರೆ ಕೆಲವು ವರದಿಗಳ ಪ್ರಕಾರ ಇಂದಿಗೂ ಭಾರತದಲ್ಲಿ ಕೆಲವಾರು ಸ್ಥಳಗಳಲ್ಲಿ ನಿಧಿ ಇರುವ ಬಗ್ಗೆ ಮಾಹಿತಿ ಇದೆ! ಒಂದು ವೇಳೆ ಈ ಮಾಹಿತಿಯ ಪ್ರಕಾರ ಇರುವಷ್ಟು ನಿಧಿಯೇನಾದರೂ ಸಿಕ್ಕ ಇದನ್ನು ಸದ್ಬಳಕೆಗೊಳಿಸಿಕೊಂಡರೆ ಭಾರತ ಒಂದೇ ದಿನದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ರಾಷ್ಟ್ರವಾಗುವುದರಲ್ಲಿ ಸಂಶಯವೇ ಇಲ್ಲ. ಬನ್ನಿ, ಇಂತಹ ನಿಧಿ ಇರುವ ಬಗ್ಗೆ ಖಚಿತ ಮಾಹಿತಿ ಇರುವ ಸ್ಥಳಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೋಡೋಣ.... 

ಜೈಗಢ ಕೋಟೆ

ಜೈಗಢ ಕೋಟೆ

ಇತಿಹಾಸದ ಮಾಹಿತಿಯ ಪ್ರಕಾರ, ಭಾರತವನ್ನು ಕೊಳ್ಳೆ ಹೊಡೆದ ಅಫ್ಟಾನ್ ಧಾಳಿಕೋರನಾದ ಮಾನ್ ಸಿಂಗ್ ಎಂಬ ವ್ಯಕ್ತಿ ತನಗೆ ಸಿಕ್ಕ ಅಪಾರ ನಿಧಿಯನ್ನು ಈ ಕೋಟೆಯಲ್ಲಿ ಎಲ್ಲೋ ಹುದುಗಿಟ್ಟಿದ್ದಾನೆ. ಒಂದು ವೇಳೆ ಈ ಬಗ್ಗೆ ರಾಜರಿಗೇನಾದರೂ ಗೊತ್ತಾದರೆ ಎಲ್ಲವನ್ನೂ ಅವರೇ ಕಬಳಿಸಿ ತನಗೇನೂ ಸಿಗದು ಎಂಬ ಭಯದಿಂದ ಈ ನಿಧಿಯ ಬಗ್ಗೆ ಯಾರಲ್ಲಿ ಹೇಳಲೂ ಇಲ್ಲ. ನಿಧಿ ಎಲ್ಲಿ ಹೂತಿಟ್ಟಿದ್ದಾನೆ ಎಂಬ ಮಾಹಿತಿ ಆತನ ಸಾವಿನೊಂದಿಗೇ ಅಳಿದ ಕಾರಣ ಇಂದಿಗೂ ಈ ನಿಧಿ ಎಲ್ಲಿದೆ ಎಂದು ಯಾರಿಗೂ ಗೊತ್ತಿಲ್ಲ. ನಿಧಿ ಇದ್ದರೆ ಪ್ರಯತ್ನಿಸುವುದರಲ್ಲಿ ತಪ್ಪೇನಿದೆ ಎಂಬ ಲೆಕ್ಕಾಚಾರದಿಂದ ಹಲವರು ನಿಧಿಯನ್ನು ಹುಡುಕಲು ಯತ್ನಿಸಿದರಾದರೂ ಇದುವರೆಗೆ ಸಫಲರಾಗಿಲ್ಲ.

ಸೋನ್ ಭಂಡಾರ್ ಗುಹೆಗಳು

ಸೋನ್ ಭಂಡಾರ್ ಗುಹೆಗಳು

ಹೆಸರೇ ತಿಳಿಸುವಂತೆ ಸೋನಾ ಅಂದರೆ ಚಿನ್ನ, ಭಂಡಾರ್ ಎಂದರೆ ಭಂಡಾರ, ನಿಕ್ಷೇಪ. ಈ ಸ್ಥಳ ರಾಜಗೀರ್ ನಲ್ಲಿದ್ದು ಈ ಗುಹೆಗಳು ಗೌತಮ ಬುದ್ದನಿಗೆ ಸಂಬಂಧಿಸಿದ ಹಲವಾರು ವಸ್ತುಗಳಿಗಾಗಿ ಖ್ಯಾತಿ ಪಡೆದಿದೆ. ಅಲ್ಲದೇ ಬುದ್ದನ ಕಾಲದ ರಾಜನಾದ ಬಿಂಬಿಸಾರನಿಗೆ ಸೇರಿದ ನಿಧಿಯನ್ನು ಈ ಗುಹೆಯಲ್ಲಿ ಅಡಗಿಸಲಾಗಿದೆ ಎಂದೂ ನಂಬಲಾಗಿದೆ. ಈ ಗುಹೆಗಳಲ್ಲಿ ಕೆಲವಾರು ಬಾಗಿಲುಗಳಿದ್ದು ಅಂದಿನಿಂದ ಇದುವರೆಗೂ ತೆರೆದೇ ಇಲ್ಲ! ಇದರಲ್ಲೊಂದು ಬಾಗಿಲಿನ ಮೇಲೆ ಪುರಾತನ ಕಾಲದ ಅಕ್ಷರಗಳಿದ್ದು ಇಂದಿನ ಪಾಸ್ವರ್ಡ್ ಹೇಳಿ ತೆರೆಯುವಂತೆ ಗುಪ್ತಪದದ ಮೂಲಕವೇ ಇದು ತೆರೆಯಲ್ಪಡುತ್ತದೆ ಎಂದು ನಂಬಲಾಗಿದೆ. ನಿಮಗೇನಾದರೂ ಇದನ್ನು ಓದಲು ಸಾಧ್ಯವಾದರೆ ಪ್ರಯತ್ನಿಸಲು ಅಲ್ಲಿಯವರೇನೂ ಅಡ್ಡಿ ಮಾಡುವುದಿಲ್ಲ.

ಶ್ರೀ ಪದ್ಮನಾಭಸ್ವಾಮಿ ದೇವಾಲಯ

ಶ್ರೀ ಪದ್ಮನಾಭಸ್ವಾಮಿ ದೇವಾಲಯ

ಇತ್ತೀಚೆಗೆ ಈ ದೇವಸ್ಥಾನದಲ್ಲಿ ಇದುವರೆಗೆ ಸಿಕ್ಕಿರುವ ಚಿನ್ನದ ಭಂಡಾರ ಭಾರತ ಬಿಡಿ, ಇಡಿಯ ವಿಶ್ವವನ್ನೇ ಚಕಿತಗೊಳಿಸಿತ್ತು. ಆದರೆ ಈ ದೇವಸ್ಥಾನದ ಇನ್ನೂ ಎರಡು ಬಾಗಿಲುಗಳು ಶಾಶ್ವತವಾಗಿ ಮುಚ್ಚಿದ್ದು ಇದನ್ನು ಎರಡು ನಾಗರಹಾವುಗಳು ಕಾವಲು ಕಾಯುತ್ತಿರುವಂತೆ ಕೆತ್ತನೆ ಮಾಡಲಾಗಿದೆ. ಈ ಬಾಗಿಲುಗಳನ್ನು ಅತ್ಯಂತ ಪ್ರತಿಭಾನ್ವಿತ ಹಾಗೂ ಮಂತ್ರವಿದ್ಯೆಯಲ್ಲಿ ಅತ್ಯುನ್ನತ ಸಾಧನೆ ಸಾಧಿಸಿದ ಸಾಧುವೊಬ್ಬರಿಂದ ಮಾತ್ರವೇ, ಅದೂ ಅವರು ತಂತ್ರವಿದ್ಯೆಯ ಉತ್ತುಂಗ ವಿದ್ಯೆಯಾದ ಗರುಡ ಮಂತ್ರವನ್ನು ಕಲಿತಿದ್ದರೆ ಮಾತ್ರ ಈ ಬಾಗಿಲನ್ನು ಮಂತ್ರ ಪಠಿಸಿ ತೆರೆಯಲು ಸಾಧ್ಯ. ಸದ್ಯಕ್ಕೆ ಭಾರತದಲ್ಲಿ ಈ ಸಾಧನೆ ಸಾಧಿಸಿದ ಯಾವ ವ್ಯಕ್ತಿಯೂ ಇಲ್ಲದ ಕಾರಣ ಬಾಗಿಲು ಇನ್ನೂ ಮುಚ್ಚಿಯೇ ಇದೆ. ಅಲ್ಲಿಯವರೆಗೆ ಕಾದು ನೋಡಬೇಕಷ್ಟೇ.

ಅನಂತ ಪದ್ಮನಾಭ ಸ್ವಾಮಿ ದೇವಾಲಯ ಆ ಕಡೆಯ ಬಾಗಿಲಿನ ರಹಸ್ಯ!

ಕರ್ನಾಟಕದ ಮೂಕಾಂಬಿಕಾ ದೇವಾಲಯ

ಕರ್ನಾಟಕದ ಮೂಕಾಂಬಿಕಾ ದೇವಾಲಯ

ದಕ್ಷಿಣ ಕನ್ನಡ ಜಿಲ್ಲೆಯ ಕೊಲ್ಲೂರಿನಲ್ಲಿರುವ ಮೂಕಾಂಬಿಕಾ ದೇವಾಲಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿದ್ದು ಈ ದೇವಾಲಯದಲ್ಲೊಂದು ನಿಗೂಢವಾಗ ಕೋಣೆಯಿದೆ. ಇಲ್ಲಿ ವಿಜಯನಗರದ ದೊರೆಗಳು ತಮ್ಮ ಅಪಾರ ಭಂಡಾರವನ್ನು ಇಲ್ಲಿ ಅಡಗಿಸಿಟ್ಟಿದ್ದಾರೆಂದು ನಂಬಲಾಗಿದೆ. ಆದರೆ ಈ ಕೋಣೆಯನ್ನು ತೆರೆಯದಂತೆ ಬಿಗಿ ಭದ್ರತೆ ಒದಗಿಸಿರುವ ಕಾರಣ ಈ ಕೋಣೆಯೊಳಗೆ ಹೋಗುವುದು ಅಸಾಧ್ಯ.

ಕೃಷ್ಣಾ ನದಿ

ಕೃಷ್ಣಾ ನದಿ

ಈ ನದಿಯ ತೀರದಲ್ಲಿ ವಿಶ್ವದ ಅತ್ಯುತ್ತಮ ವಜ್ರಗಳು ದೊರಕುತ್ತವೆ ಎಂದು ನಂಬಲಾಗಿದೆ. ಇದನ್ನು ನಂಬಿ ಈ ನದಿಯ ತೀರದಲ್ಲಿ ವಜ್ರಗಳಿಗಾಗಿ ಅಗೆತ ನಡೆಸಿದ ಕುರುಹುಗಳು ಇಂದಿಗೂ ಸಿಗುತ್ತವೆ. ಈ ಪ್ರಯತ್ನಗಳಲ್ಲಿ ಹೆಚ್ಚಿನವು ಯಶಸ್ವಿಯೂ ಆಗಿದ್ದುದರ ಪರಿಣಾಮವಾಗಿ ಭಾರತಕ್ಕೆ ಕೋಹಿನೂರು ವಜ್ರ ಹಾಗೂ ಒರ್ಲಾಫ್ ವಜ್ರವೂ ಸಿಕ್ಕಿದೆ. ಈ ವಜ್ರಗಳು ಬಳಿಕ ಜಗತ್ತಿನಲ್ಲಿ ಎಷ್ಟೆಲ್ಲಾ ಕೋಲಾಹಲ ಉಂಟುಮಾಡಿದವು ಎಂದು ಇತಿಹಾಸದಲ್ಲಿ ವರ್ಣಿಸಲಾಗಿದೆ. ಈ ವಜ್ರಗಳು ಸಿಕ್ಕಿರಬೇಕಾದರೆ ಇನ್ನೂ ಇರಬಹುದಲ್ಲವೇ ಎಂಬ ತರ್ಕದಿಂದ ಇಂದಿಗೂ ಕದ್ದುಮುಚ್ಚಿ ವಜ್ರಗಳಿಗಾಗಿ ಹುಡುಕಾಟ ನಡೆಯುತ್ತಲೇ ಇದೆ.

English summary

Indian Treasures That Are Hidden

Most of the times, when we hear in stories about the hidden treasures, we wish that even we could have found them in real. But do you know about the places where you can actually find hidden treasures from in India? According to reports, there are several places in India where there is a lot of hidden treasure saved. This hidden treasure is believed to be so much so that the nation can become one of the richest countries in the world if put to the right use. Find out more about the known places from where these treasures can be found...