ವೃತ್ತಿ ಜೀವನಕ್ಕೂ-ಪಾದರಕ್ಷೆಗಳಿಗೂ ಎತ್ತಿಂದೆತ್ತ ಸಂಬಂಧ?

By: Arshad
Subscribe to Boldsky

ಈ ಲೇಖನದ ಹೆಡ್‌ಲೈನ್ ಓದಿದಾಕ್ಷಣ ನಿಮಗೆ ಇದು ಕೊಂಚ ವಿಚಿತ್ರ ಎಂದೆನಿಸಲಿಲ್ಲವೇ? ಎತ್ತಣ ಮಾಮರ ಎತ್ತಣ ಕೋಗಿಲೆ? ವೃತ್ತಿಜೀವನಕ್ಕೂ ಪಾದರಕ್ಷೆಗಳಿಗೂ ಏನು ಸಂಬಂಧ? ಈ ವಿಷಯವನ್ನು ಅರಿಯುವ ಮುನ್ನ ನಮ್ಮ ದೇಹ ಹಾಗೂ ವಾಸಸ್ಥಳಗಳಲ್ಲಿ ಆವರಿಸುವ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳ ಬಗ್ಗೆ ಕೊಂಚ ಅರಿವಿರುವುದು ಉತ್ತಮ.

ವ್ಯಕ್ತಿ, ಉದ್ಯಮ ಅಥವಾ ಗಳಿಕೆಯ ಯಾವುದೇ ಸ್ಥಳದ ಮೇಲೆ ಈ ಶಕ್ತಿಗಳು ಅಪಾರವಾದ ಪರಿಣಾಮವನ್ನು ಬೀರುತ್ತವೆ. ವಾಸ್ತುಶಾಸ್ತ್ರದ ಪ್ರಕಾರ ಮನುಷ್ಯರಿಗೆ ಸಂಬಂಧಪಟ್ಟ ಯಾವುದೇ ವಸ್ತು ಖಗೋಳದಲ್ಲಿರುವ ಗ್ರಹ ತಾರೆಗಳಿಗೆ ಸಂಬಂಧಪಟ್ಟಿವೆ. ಇದರಲ್ಲಿ ನಮ್ಮ ಪಾದರಕ್ಷೆಗಳು ಸಹಾ ಸೇರಿವೆ!  ಮನೆಯೊಳಗೆ ಪಾದರಕ್ಷೆ ನಿಷೇಧ- ಇಲ್ಲಿದೆ ವೈಜ್ಞಾನಿಕ ಸತ್ಯಾಸತ್ಯತೆ

ಪಾದರಕ್ಷೆಗಳು ನಮಗೆ ನಿಕೃಷ್ಟವೆಂದು ಕಂಡುಬಂದರೂ ವಾಸ್ತವದಲ್ಲಿ ಇವು ವೃತ್ತಿಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ವಿಶೇಷವಾಗಿ ನಮ್ಮೊಂದಿಗೆ ಊರೆಲ್ಲಾ ನಡೆದಾಡುವ ಇವು ತಮ್ಮೊಂದಿಗೆ ಋಣಾತ್ಮಕ ಶಕ್ತಿಯನ್ನೂ ಹೊತ್ತು ತರುತ್ತವೆ ಎಂದು ಜೋತಿಷಿಗಳು ಅಭಿಪ್ರಾಯ ಪಡುತ್ತಾರೆ. ಬನ್ನಿ, ಪಾದರಕ್ಷೆಗಳೂ ನಮ್ಮ ವೃತ್ತಿಜೀವನ ಹಾಗೂ ಗಳಿಕೆಯ ಮೇಲೆ ಯಾವ ರೀತಿಯ ಪ್ರಭಾವ ಬೀರಬಲ್ಲವು ಎಂಬುದನ್ನು ನೋಡೋಣ....   

#1

#1

ನಿಮ್ಮ ಪಾದರಕ್ಷೆಗಳು ಎಂದಿಗೂ ನಿಮ್ಮ ಸ್ವಂತ ಗಳಿಕೆಯಿಂದ ಖರೀದಿಸಿದ್ದವೇ ಆಗಿರಬೇಕು. ಉಡುಗೊರೆಯಾಗಿ ಸಿಕ್ಕಿದ ಅಥವಾ ಕಳುವು ಮಾಡಿದ ಪಾದರಕ್ಷೆಗಳನ್ನು ತೊಡುವ ಮೂಲಕ ನೀವೆಂದಿಗೂ ನಿಮ್ಮ ವೃತ್ತಿಜೀವನದಲ್ಲಿ ಉನ್ನತಿಗೇರಲು ಸಾಧ್ಯವಿಲ್ಲ. ಏಕೆಂದರೆ ಈ ಪಾದರಕ್ಷೆಗಳು ತಮ್ಮ ಋಣಾತ್ಮಕ ಶಕ್ತಿಯಿಂದ ಏಳ್ಗೆಯನ್ನು ತಡೆಯುತ್ತವೆ.

#2

#2

ಒಂದು ವೇಳೆ ನೀವು ಸಂದರ್ಶನಕ್ಕೆ ಹೋಗುವುದಾದರೆ ಎಂದಿಗೂ ಹರಿದ ಅಥವಾ ಭಾರೀ ಸವೆದ ಪಾದರಕ್ಷೆಗಳನ್ನೆಂದೂ ತೊಡಬಾರದು. ಪ್ರಾಚೀನ ನಂಬಿಕೆಯ ಪ್ರಕಾರ ಈ ಪಾದರಕ್ಷೆಗಳು ನಿಮಗೆ ಲಭ್ಯವಾಗಲಿರುವ ಸುಯೋಗದ ದೆಸೆಯನ್ನು ವಿರುದ್ಧ ದಿಕ್ಕಿನಲ್ಲಿ ಬದಲಿಸಬಲ್ಲವು. ಹರಿದ ಪಾದರಕ್ಷೆ ನಿಮ್ಮ ಏಳ್ಗೆಗೆ ಅಡ್ಡಗಾಲು ಹಾಕುತ್ತದೆ ಎಂದು ನಂಬಲಾಗುತ್ತದೆ.

#3

#3

ಒಂದು ನಂಬಿಕೆಯ ಪ್ರಕಾರ ವೃತ್ತಿಪ್ರದೇಶದಲ್ಲಿ ಎಂದಿಗೂ ಕಂದುಬಣ್ಣದ ಪಾದರಕ್ಷೆಗಳನ್ನು ತೊಡಬಾರದು. ಏಕೆಂದರೆ ಈ ಬಣ್ಣದ ಪಾದರಕ್ಷೆಗಳು ಪರಿಸ್ಥಿತಿಯನ್ನು ವ್ಯತಿರಿಕ್ತವಾಗಿಸಬಹುದು.

#4

#4

ಒಂದು ವೇಳೆ ನೀವು ವೈದ್ಯಕೀಯ ರಂಗದಲ್ಲಿದ್ದು ಅನಿವಾರ್ಯವಲ್ಲದೇ ಇದ್ದ ಹೊರತು ಬಿಳಿಬಣ್ಣದ ಪಾದರಕ್ಷೆಗಳನ್ನೆಂದೂ ತೊಡಬಾರದು. ಏಕೆಂದರೆ ಒಂದು ನಂಬಿಕೆಯ ಪ್ರಕಾರ ಈ ಪಾದರಕ್ಷೆಗಳು ಅದೃಷ್ಟವನ್ನು ದೂರ ಮಾಡುತ್ತವೆ.

#5

#5

ಪಾದರಕ್ಷೆಗಳನ್ನು ಧರಿಸಿದ್ದೇ ಊಟ ಮಾಡುವುದು ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಏಕೆಂದರೆ ಈ ಮೂಲಕ ಋಣಾತ್ಮಕ ಶಕ್ತಿಯನ್ನು ತಾವಾಗಿಯೇ ಆಹ್ವಾನಿಸಿದಂತಾಗುತ್ತದೆ. ಆದ್ದರಿಂದ ಊಟ ಮಾಡುವಾಗ ಪಾದರಕ್ಷೆಗಳನ್ನು ಕಳಚಿಡುವುದೇ ಉತ್ತಮ.

#6

#6

ನಿಮ್ಮ ಮನೆಯ ಪಾದರಕ್ಷೆಗಳನ್ನು ಒಂದು ವೇಳೆ ಈಶಾನ್ಯ ದಿಕ್ಕಿನೆಡೆ ಇಟ್ಟಿದ್ದರೆ ತಕ್ಷಣ ಇದನ್ನು ಬದಲಿಸಿ. ಏಕೆಂದರೆ ಬೆಳಗ್ಗಿನ ಪ್ರಥಮ ಕಿರಣಗಳು ಕಳಚಿಟ್ಟ ಪಾದರಕ್ಷೆಗಳ ಮೇಲೆ ಬೀಳುವ ಕಾರಣ ಇದು ಋಣಾತ್ಮಕ ಶಕ್ತಿಯನ್ನು ಮನೆಯೊಳಗೆ ಹಾಯಿಸಿಲು ಅನುವುಮಾಡಿಕೊಟ್ಟಂತಾಗುತ್ತದೆ.

#7

#7

ಮನೆಯೊಳಗೆ ಪಾದರಕ್ಷೆಗಳನ್ನೆಂದಿಗೂ ನೇತು ಹಾಕಬಾರದು. ಏಕೆಂದರೆ ಇದು ಸಾವನ್ನು ಆಹ್ವಾನಿಸುವ ಸಂಕೇತವಾಗಿದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಈ ಪಾದರಕ್ಷೆ ಮನೆಯ ಸದಸ್ಯರಲ್ಲಿ ಅನಾರೋಗ್ಯ, ದುರಾದೃಷ್ಟವನ್ನು ತರುತ್ತದೆ.

#8

#8

ಓರ್ವ ವ್ಯಕ್ತಿಯ ಮರಣಾನಂತರ ಆತನ ಪಾದರಕ್ಷೆಗಳನ್ನೆಂದೂ ಬಳಸಬಾರದು. ಒಂದು ವೇಳೆ ಉಪಯೋಗಕ್ಕೆ ಉತ್ತಮವೆನಿಸಿದರೆ ಅಗತ್ಯವುಳ್ಳವರಿಗೆ ದಾನ ಮಾಡಬೇಕು ಅಥವಾ ತ್ಯಜಿಸಿಬಿಡಬೇಕು. ಎಂದಿಗೂ ಮನೆಯಲ್ಲಿ ಇರಿಸಕೂಡದು. ಇದು ಅತಿ ಹೆಚ್ಚಿನ ಋಣಾತ್ಮಕ ಶಕ್ತಿಯನ್ನು ಮನೆಗೆ ತರುತ್ತದೆ.

 
English summary

How Shoes Affect Your Career & Wealth?

Shoes are known to play a vital role in your career growth, as it is said to draw in negative energy, as per Astrological beliefs. Listed below are points that show how shoes can affect your career growth and wealth. Do read on.
Please Wait while comments are loading...
Subscribe Newsletter