ಈ ಗ್ರಾಮದ ಕಥೆ ಕೇಳಿದರೆ ಕಟುಕನ ಕಣ್ಣಲ್ಲೂ ಕಣ್ಣೀರು ಸುರಿಯುತ್ತೆ

By: Arshad
Subscribe to Boldsky

ಹೆಚ್ಚಿನ ಜನರಿಗೆ ಉಪಯೋಗವಾಗುವುದಾದರೆ ಚಿಕ್ಕ ಗ್ರಾಮಗಳ ಜನರು ತಮ್ಮದೆಲ್ಲವನ್ನೂ ತ್ಯಾಗ ಮಾಡಬೇಕು ಎಂದು ನಾಗರಿಕತೆ ಬಯಸುತ್ತದೆ. ಉದಾಹರಣೆಗೆ ಲಿಂಗನಮಕ್ಕಿ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸಿ ರಾಜ್ಯಕ್ಕೆ ಬೆಳಕು ನೀಡಬೇಕಾದರೆ ಈ ಅಣೆಕಟ್ಟಿನ ಹಿಂಭಾಗದ ವಿಸ್ತಾರದ ಸ್ಥಳ ಮುಳುಗಡೆಯಾಗುವ ಅಪಾಯ ಎದುರಾದಾಗ ಸಾವಿರಾರು ಹಳ್ಳಿಗಳ ಜನರು ತಮ್ಮ ವಂಶಸ್ಥರಿಂದ ಪಡೆದಿದ್ದ ಅಮೂಲ್ಯ ಜಮೀನನ್ನು ಮತ್ತು ತಮ್ಮ ನಿವಾಸಸ್ಥಾನವನ್ನೇ ಬಿಟ್ಟು ಬರಬೇಕಾಯಿತು.

ಇದೇ ರೀತಿಯಾಗಿ ಉತ್ತರ ಭಾರತದ ಜಾರ್ಖಂಡ್ ರಾಜ್ಯದ ಗ್ರಾಮವೊಂದರಲ್ಲಿ ಸ್ಥಾಪಿಸಿದ ಅಣುವಿದ್ಯುತ್ ಸ್ಥಾವರದಿಂದ ದೂರದ ನಗರಗಳಿಗೆ ಬೆಳಕು ಸಿಕ್ಕರೂ ಈ ಗ್ರಾಮದ ಕಥೆ ಏನಾಯ್ತು ಗೊತ್ತೇ? ಈ ಗ್ರಾಮಕ್ಕೆ ದಕ್ಕಿದ್ದು ವಿಷ!    ಇಲ್ಲಿನ ಜನರ ಕಥೆ ಕೇಳಿದರೆ, ಕರುಳು ಚುರ್‍ ಅನ್ನುತ್ತದೆ...

ವಿಶೇಷ ಸೂಚನೆ: ಈ ಲೇಖನಕ್ಕೆ ಬಳಸಲಾದ ಮಾಹಿತಿಗಳನ್ನು ಪಡೆದ ಮೂಲವನ್ನು ಲೇಖನದ ಕೊನೆಯಲ್ಲಿ ನೀಡಲಾಗಿದೆ. 

ಪಾರ್ವತೆ ಗೋಪೆ

ಪಾರ್ವತೆ ಗೋಪೆ

ಈಕೆ ಕೇವಲ ಹದಿನೇಳು ವರ್ಷ ವಯಸ್ಸಿನ ಕಿಶೋರಿಯಾಗಿದ್ದು ಅಣುಸ್ಥಾವರದ ವಿಷದ ಪರಿಣಾಮವಾಗಿ Lumbar Scoliosis ಎಂಬ ಕಾಯಿಲೆಗೆ ತುತ್ತಾಗಿದ್ದಾಳೆ. ಈ ಕಾಯಿಲೆಯ ಲಕ್ಷಣವೆಂದರೆ ಈಕೆಯ ಬೆನ್ನುಮೂಳೆ ನೆಟ್ಟಗಿರಬೇಕಾಗಿದ್ದು ಈಗ ಇಂಗ್ಲಿಷ್ ಅಕ್ಷರದ ಎಸ್ (S) ಆಕಾರವನ್ನು ಪಡೆದಿದ್ದು ನೆಟ್ಟಗೆ ನಿಂತುಕೊಳ್ಳಲು ಆಗದೇ ಭಾರೀ ಕಷ್ಟವಾಗಿದೆ. ಈಕೆಗೆ ಸೂಕ್ತ ಚಿಕಿತ್ಸೆ ನೀಡಲು ಇದರ ದುಬಾರಿ ವೆಚ್ಚ ಅಡ್ಡಿಯಾಗಿದ್ದು ಇದುವರೆಗೆ ಸರ್ಕಾರದಿಂದ ಯಾವುದೇ ಸಹಾಯ ದೊರಕದೇ ಇರುವುದು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.

ರಾಕೇಶ್ ಗೋಪೆ

ರಾಕೇಶ್ ಗೋಪೆ

ಈ ಹದಿಮೂರು ವರ್ಷ ವಯಸ್ಸಿನ ಬಾಲಕನಿಗೆ muscular dystrophy ಎಂಬ ಕಾಯಿಲೆ ಆವರಿಸಿದೆ. ಇದರ ಪರಿಣಾಮವಾಗಿ ಇವನ ಕಾಲುಗಳು ಕಮಾನಿನಂತೆ ಬಾಗಿದ್ದು ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಪಾದಗಳು ನೆಲಕ್ಕೆ ಸಮಾನಾಂತರವಾಗಿರಬೇಕಾಗಿದ್ದುದು ಮೇಲ್ಮುಖವಾಗಿ ಕಮಾನಿನಂತೆ ಬಾಗಿವೆ ಆದರೂ ಈ ಊನವನ್ನು ಆತ ಊನವೆಂದು ಪರಿಗಣಿಸದೇ ತನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ನಡೆದಾಡುತ್ತಿದ್ದಾನೆ.

ಕಾರ್ತಿಕ್ ಗೋಪೆ

ಕಾರ್ತಿಕ್ ಗೋಪೆ

ಈ ಮೂರು ವರ್ಷದ ಪುಟ್ಟ ಬಾಲಕನಿಗೆ ವಿಷದ ಪರಿಣಾಮವಾಗಿ seizures ಎಂಬ ಕಾಯಿಲೆ ಆವರಿಸಿದೆ. ಇದರ ಪರಿಣಾಮವಾಗಿ ಈತನ ದೇಹ ವಿಕೃತಗೊಂಡಿದೆ. ಈತನನ್ನು ಎತ್ತಿಕೊಂಡು ಈತನ ತಾಯಿ ಸರ್ಕಾರದಿಂದ ಏನಾದರೂ ನೆರವು ಸಿಗುತ್ತದೆಯೇ ಎಂದು ಕಾಯುತ್ತಿದ್ದಾರೆ.

ಹರಧನ್ ಗೋಪೆ

ಹರಧನ್ ಗೋಪೆ

ಈ ವ್ಯಕ್ತಿಯ ತಲೆಬುರುಡೆ ವಿಕೃತಗೊಂಡಿದ್ದು ಹಲ್ಲುಗಳೆಲ್ಲಾ ಉದುರಿ ಹೋಗಿವೆ. ತಲೆಬುರುಡೆ ಮಾತ್ರವಲ್ಲ, ದೇಹದ ಇತರ ಮೂಳೆಗಳೂ ವಿಕೃತಗೊಂಡಿವೆ. ಅಣುಸ್ಥಾವರದ ವಿಷಪ್ರಾಶನ ಎಷ್ಟು ಭೀಕರವಾಗಿರಬಹುದು ಎಂಬುದಕ್ಕೆ ಈತ ಜ್ವಲಂತ ಉದಾಹರಣೆಯಾಗಿದ್ದಾನೆ.

ಅನಾಮಿಕಾ ಉರಾವನ್

ಅನಾಮಿಕಾ ಉರಾವನ್

ಈಕೆ ಕೇವಲ ಹದಿಮೂರು ವರ್ಷದ ಬಾಲಕಿಯಾಗಿದ್ದು ಈಕೆಗೆ ದುರ್ಮಾಂಸದ ಗಡ್ಡೆಯೊಂದು ಬಾಧಿಸುತ್ತಿದೆ. ಇದು ದಿನೇ ದಿನೇ ಬೆಳೆಯುತ್ತಿದ್ದು ಕೆಲವರ್ಷಗಳಿಂದ ಒಂದು ಬದಿ ಭಾರೀ ಬೆಳವಣಿಗೆ ಪಡೆದ ಪರಿಣಾಮವಾಗಿ ಈಕೆ ವಿರುದ್ಧ ಭಾಗದಲ್ಲಿ ವಾಲಿಕೊಂಡೇ ನಡೆಯಬೇಕಾಗಿದೆ. ಈಕೆಯ ಚಿತ್ರವನ್ನು ಕಂಡ ಯಾರಿಗೂ ಮನ ಕಲಕದೇ ಇರಲಾರದು. ಈ ಬಗ್ಗೆ ನಿಮಗೆ ಏನೆನೆಸಿತು ಎಂಬುದನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

All Image Source

 
English summary

How Nuclear Poisoning Changed Lives In A Jharkhand Village

Check out how the lives of these villagers have changed and there is hardly anything that is done to make things better here. So find out the story behind the people who have got affected due to nuclear poisoning in this village named 'Jadugoda".
Please Wait while comments are loading...
Subscribe Newsletter