For Quick Alerts
ALLOW NOTIFICATIONS  
For Daily Alerts

  ಮನೆಕೆಲಸಕ್ಕೆ ಬಂದ ಆಕೆ ಒಡೆಯನ ಶರ್ಟ್ ತೊಟ್ಟಿದ್ದೇಕೆ?

  By Arshad
  |

  ಸಾಮಾನ್ಯವಾಗಿ ತಮ್ಮ ಕೆಲಸಗಳಲ್ಲಿ ತುಂಬಾ ವ್ಯಸ್ತರಿರುವ ವ್ಯಕ್ತಿಗಳು ತಮ್ಮ ಮನೆಯ ಕೆಲಸಕ್ಕಾಗಿ ಕೆಸಲದವರನ್ನು ಇರಿಸಿಕೊಳ್ಳುವುದು ಸ್ವಾಭಾವಿಕ. ಹಿಂದೆಲ್ಲಾ ಮನೆ ಕೆಲಸದವರು ಇಡಿಯ ದಿನ ಮನೆಯಲ್ಲಿದ್ದು ಮನೆಯ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಾ ಮನೆಯವರೊಂದಿಗೆ ಹೊಂದಿಕೊಂಡು ಮನೆಯ ಸದಸ್ಯರೇ ಆಗಿಬಿಡುತ್ತಿದ್ದರು.

  ಈಗ ಈ ಪ್ರಕ್ರಿಯೆಯೂ ಬಾಡಿಗೆಯ ರೂಪ ಪಡೆದಿದ್ದು ಇಷ್ಟು ಗಂಟೆಗೆ ಇಷ್ಟು ಹಣ ಎಂಬ ಒಪ್ಪಂದದ ಮೇರೆಗೆ ಮನೆಗೆಲಸದವರು ಸಿಗುತ್ತಾರೆ. ಅಂತೆಯೇ ಹಗಲಿನ ಹೊತ್ತು ಮನೆಯಲಿದ್ದು ಮನೆಕೆಲಸ ನಿರ್ವಹಿಸಲು ಪರಿಚಾರಕರು/ಪರಿಚಾರಿಕೆಯರು ಲಭ್ಯರಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ಇವರನ್ನು ಹೌಸ್ ಸಿಟ್ಟರ್ ಎಂದು ಕರೆಯುತ್ತಾರೆ.  ಮನೆ ಕೆಲಸದವರನ್ನು ಆಯ್ಕೆ ಮಾಡುವ ಮುನ್ನ ಇತ್ತ ಗಮನಿಸಿ

  ಮಾನವ ಸಹಜ ಗುಣದಂತೆ ಗುಂಪಿನಲ್ಲಿದ್ದಾಗ ನಮ್ಮ ಸ್ವಭಾವ ಒಂದು ರೀತಿಯಾಗಿದ್ದರೆ ಒಂಟಿಯಾಗಿದ್ದಾಗ ಬೇರೆಯೇ ರೀತಿಯಲ್ಲಿರುತ್ತದೆ. ಇದಕ್ಕೆ ಪರಿಚಾರಿಕೆಯರೂ ಹೊರತಲ್ಲ. ಒಂಟಿಯಾಗಿದ್ದಾಗ ಇವರ ಮೇಲೆ ಕಣ್ಣಿಡಲು ಕೆಲವರು ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರುತ್ತಾರೆ.

  ಇದು ತುಂಬಾ ಪ್ರಯೋಜನಕಾರಿಯಾಗಿದ್ದು ಇದುವರೆಗೆ ಮಕ್ಕಳ ಮೇಲೆ, ವೃದ್ಧೆಯರ ಮೇಲೆ ಕೆಲವು ಕುತ್ಸಿತ ಮನೋಭಾವದ ಪರಿಚಾರಕರು ನಡೆಸಿದ ಹಲ್ಲೆಯನ್ನು ದಾಖಲಿಸಿ ಇವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ. ಬನ್ನಿ, ಈ ಮನೆಯ ಪರಿಚಾರಿಕೆ ಒಂಟಿಯಾಗಿದ್ದಾಗ ಹೇಗೆ ತನ್ನ ಸಮಯವನ್ನು ಕಳೆದಳು ಎಂಬುದನ್ನು ನೋಡೋಣ...

  ದೃಶ್ಯ #1

  ದೃಶ್ಯ #1

  ಈಕೆ ಸಮಯಕ್ಕೆ ಸರಿಯಾಗಿ ಮನೆಗೆ ಬಂದಿದ್ದಾಳೆ. ಅಂದರೆ ಮನೆಯ ಕೆಲಸಗಳನ್ನು ಸರಿಯಾದ ಸಮಯದಲ್ಲಿ ಪ್ರಾರಂಭಿಸಲು ಸಾಧ್ಯ.

  ದೃಶ್ಯ#2

  ದೃಶ್ಯ#2

  ಇಲ್ಲ, ನಿಮ್ಮ ಊಹೆ ತಪ್ಪು. ಮೊದಲು ಈಕೆ ಎನರ್ಜಿ ಡ್ರಿಂಕ್ ಒಂದನ್ನು ಆರಾಮವಾಗಿ ಕುಡಿಯುತ್ತಿದ್ದಾಳೆ.ಎಷ್ಟು ದೂರದಿಂದ ನಡೆದು ಬಂದಿದ್ದಾಳೋ ಏನೋ ಪಾಪ, ಬಹಳ ಶಕ್ತಿ ಬೇಕಿತ್ತು ಎಂದೆನಿಸುತ್ತಿದೆ.

  ದೃಶ್ಯ#3

  ದೃಶ್ಯ#3

  ಛೇ? ಎನರ್ಜಿ ಡ್ರಿಂಕ್ ಪೇಯಗಳನ್ನು ಹಾಲು ಕುಡಿದಂತೆ ಕುಡಿದರೆ ಆಗುತ್ತೆಯೇ? ನೋಡಿ, ನೊರೆ ಉಕ್ಕಿ ಹರಿದು ಆಕೆಯ ಬಟ್ಟೆಗಳನ್ನೇ ತೋಯಿಸಿಬಿಟ್ಟಿವೆ.

  ದೃಶ್ಯ #4

  ದೃಶ್ಯ #4

  ಹೇಗೂ ಮನೆಯಲ್ಲಿ ಯಾರೂ ಇಲ್ಲ, ನಾಚಿಕೆ ಪಡುವಂತಹದ್ದೇನಿದೆ? ಶರ್ಟ್ ಕಳಚಿಟ್ಟು ಮುಂದಿನ ಕೆಲಸ ಮಾಡಿದರಾಯಿತು ಎಂದು ಆಕೆ ಯೋಚಿಸಿದ್ದಾಳೆ.

  ದೃಶ್ಯ #5

  ದೃಶ್ಯ #5

  ಏನು, ಈಕೆ ತನ್ನ ಸ್ಕರ್ಟ್ ಅನ್ನೂ ಕಳಚುತ್ತಿದ್ದಾಳಲ್ಲಾ, ಎನರ್ಜಿ ಡ್ರಿಂಕ್ ಆಕೆಯ ಸ್ಕರ್ಟ್ ಮೇಲೂ ಬಿದ್ದಿರಬೇಕು. ಹೇಗೂ ಮನೆಯಲ್ಲಿ ಇನ್ಯಾರೂ ಇಲ್ಲವಲ್ಲ!

  ದೃಶ್ಯ #6

  ದೃಶ್ಯ #6

  ಆದರೆ ಸ್ಕರ್ಟ್ ಒದ್ದೆಯಾಗಿರಲಿಕ್ಕಿಲ್ಲ. ಹೇಗೂ ಯಾರೂ ತನ್ನನ್ನು ನೋಡುತ್ತಿಲ್ಲವೆಂಬ ಭರವಸೆಯ ಮೇಲೇ ಆಕೆ ಕೇವಲ ಉಡುಪುಗಳಲ್ಲಿಯೇ ಮುಂದಿನ ಕೆಲಸವನ್ನು ಮಾಡೋಣವೆಂದು ಬೇಕೆಂದೇ ಸ್ಕರ್ಟ್ ಕಳಚಿರುವುದು ಸ್ಪಷ್ಟವಾಗಿದೆ. ಪಾಪ, ಆಕೆಗೇನು ಗೊತ್ತು, ತನ್ನ ಎಲ್ಲಾ ಚಲನವಲನಗಳನ್ನು ಸಿಸಿಟೀವಿ ಮೂಲಕ ದಾಖಲಾಗಿಸುತ್ತಿದೆ ಎಂದು!

  ದೃಶ್ಯ #7

  ದೃಶ್ಯ #7

  ಈಗ ಈಕೆ ಸ್ವಚ್ಛಂದವಾಗಿ ಇಡಿಯ ಮನೆಯನ್ನು ತನ್ನದೇ ಮನೆ ಎಂದು ತಿಳಿದು ಒಳ ಉಡುಪುಗಳಲ್ಲಿಯೇ ಆರಾಮವಾಗಿ ತಿರುಗಾಡುತ್ತಾ ತನಗಿಷ್ಟ ಬಂದಂತೆ ಓಡಾಡುತ್ತಿದ್ದಾಳೆ.

  ದೃಶ್ಯ #8

  ದೃಶ್ಯ #8

  ಈಕೆಗೆ ತಾನು ಇಲ್ಲಿ ಬಂದದ್ದೇಕೆ ಎಂದು ಸ್ಪಷ್ಟವಾಗಿ ಗೊತ್ತು. ಹಾಗಾಗಿ ಸ್ವಚ್ಛಂದವಾಗಿ ಓಡಾಡುತ್ತಾ ನಡುನಡುವೆ ತನ್ನ ಕರ್ತವ್ಯಗಳನ್ನೂ ನಿಭಾಯಿಸುತ್ತಿದ್ದಾಳೆ. ಅಷ್ಟೇ ಅಲ್ಲ, ತನ್ನ ಒದ್ದೆಯಾದ ಶರ್ಟ್ ಮತ್ತು ಸ್ಕರ್ಟ್‌ಗಳನ್ನೂ ಮನೆಯವರ ಬಟ್ಟೆಗಳೊಂದಿಗೆ ವಾಷಿಂಗ್ ಮೆಷೀನ್‌ಗೆ ಹಾಕಿ ಒಗೆಯುತ್ತಿದ್ದಾಳೆ.

  ದೃಶ್ಯ#9

  ದೃಶ್ಯ#9

  ವಾಷಿಂಗ್ ಮೆಶೀನ್ ತನ್ನ ಕೆಲಸ ಮಾಡುತ್ತಿರುವಾಗ ಈಕೆಗೆ ಬೇರೆ ಕೆಲಸವಿಲ್ಲವಲ್ಲಾ, ಆರಾಮವಾಗಿ ಪತ್ರಿಕೆಯೊಂದನ್ನು ತಿರುವಿಹಾಕುತ್ತಾ, ತನ್ನ ಸ್ವಂತ ಮನೆಯಂತೆಯೇ ಮನೆಯ ಎಲ್ಲಾ ವಸ್ತುಗಳನ್ನು ಉಪಯೋಗಿಸುತ್ತಾ ನಿರಾಳವಾಗಿದ್ದಾಳೆ.

  ದೃಶ್ಯ #10

  ದೃಶ್ಯ #10

  ಎಷ್ಟೂ ಅಂತ ಸುಮ್ಮನೇ ಇರುವುದು, ಕಡೆಗೂ ಮನೆಯನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ ಆಕೆ ಮನೆಯನ್ನು ವ್ಯಾಕ್ಯೂಮ್ ಕ್ಲೀನರ್ ಉಪಯೋಗಿಸಿ ಗುಡಿಸಲು ತೊಡಗಿದ್ದಾಳೆ. ಈ ದೃಶ್ಯ ನೋಡಿದವರೆಲ್ಲರಿಗೂ ಛೇ ಇಂತಹ ಪರಿಚಾರಿಕೆ ತಮಗೆ ಸಿಗಬಾರದಿತ್ತೇ ಎಂದೆನಿಸದೇ ಇರದು.

  ದೃಶ್ಯ #11

  ದೃಶ್ಯ #11

  ಮನೆಯ ಏಸಿ ತುಂಬಾ ಚಳಿ ಹುಟ್ಟಿಸಿದೆ ಎಂದೆನಿಸುತ್ತದೆ. ಈಗೊಂದು ಶರ್ಟ್ ತೊಟ್ಟರೆ ಹೇಗೆ? ಆದರೆ ಈಕೆ ಮನೆಯ ಒಡತಿಯ ಬಟ್ಟೆಗಳ ಬದಲು ಒಡೆಯನ ಶರ್ಟ್ ತೊಡುತ್ತಿದ್ದಾಳಲ್ಲಾ? ಏನಾಶ್ಚರ್ಯ!

  ದೃಶ್ಯ #12

  ದೃಶ್ಯ #12

  ಕಡೆಗೂ, ವಾಶಿಂಗ್ ಮೆಶೀನ್ ತನ್ನ ಕೆಲಸ ಮುಗಿಸಿದೆ ಎಂದು ಬೀಪ್ ನೀಡಿದ ಬಳಿಕ ತನ್ನದೇ ಬಟ್ಟೆಗಳನ್ನು ತೊಟ್ಟು ಉಳಿದ ಕೆಲಸಗಳನ್ನು ಮುಂದುವರೆಸಲು ನಿರ್ಧರಿಸಿದ್ದಾಳೆ.

   

   All Image Source 

  English summary

  House-Sitter Wore The Owner's Shirt For This Reason!

  This viral video is trending these days, as it shows the woman, who is apparently the caretaker of the house, stripping down to her undergarments and also ending up wearing the owner's shirt. Check out this hilarious story unfold and look at the video at the bottom of the story to know the actual scenario.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more