For Quick Alerts
ALLOW NOTIFICATIONS  
For Daily Alerts

ಮನೆ ಕೆಲಸದವರನ್ನು ಆಯ್ಕೆ ಮಾಡುವ ಮುನ್ನ ಇತ್ತ ಗಮನಿಸಿ

By Su.Ra
|

ಮನೆಯಲ್ಲಿ ಎಲ್ಲಾ ಕೆಲ್ಸಗಳನ್ನು ಒಬ್ರೆ ಮಾಡೋಕೆ ಸಾಧ್ಯವಿಲ್ಲ. ಅದ್ರಲ್ಲೂ ಈಗಂತೂ ಹೆಚ್ಚಿನ ಮಹಿಳೆಯರು ವರ್ಕಿಂಗ್ ವುಮೆನ್ಸ್.. ಮನೆ ಕೆಲ್ಸಕ್ಕೆ ಅಂತ ಕೆಲ್ಸದವರನ್ನು ಆಯ್ಕೆ ಮಾಡೋದು ಮಾಮೂಲಿ.. ಆದ್ರೆ ಕೆಲಸದವ್ರ ವಿಷ್ಯದಲ್ಲಿ ಅದೆಷ್ಟೋ ಜನ ಮೋಸ ಹೋಗಿದ್ದಾರೆ. ಹಾಗಾಗಿ ಕೆಲ್ಸದವ್ರನ್ನು ಆಯ್ಕೆ ಮಾಡ್ಕೊಳ್ಳುವಾಗ ಪ್ರತಿಯೊಬ್ಬ ಗೃಹಿಣಿಯೂ ನೋಡ್ಬೇಕಾದ ಕೆಲವು ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸ್ತೀವಿ. ಮುಂದೆ ಓದಿ

ಯಾವ್ಯಾವ ಕೆಲಸ ಮಾಡ್ಬೇಕು ಅನ್ನೋದನ್ನು ಡಿಸೈಡ್ ಮಾಡ್ಕೊಳಿ
ನಿಮ್ಮ ಮನೆಗೆ ಬರುವ ಕೆಲ್ಸದವ್ರು ಯಾವ ಯಾವ ಕೆಲ್ಸಗಳನ್ನು ಮಾಡ್ಬೇಕಾಗುತ್ತೆ ಅನ್ನೋದ್ರ ಬಗ್ಗೆ ಅರಿವಿರಲಿ.. ಅದನ್ನ ಅವ್ರಿಗೆ ಮುಂಚಿತವಾಗಿಯೇ ತಿಳಿಸಿ.. ಒಂದೊಂದು ದಿನ ಒಂದೊಂದು ಕೆಲ್ಸ ನೀಡುವುದಾದ್ರೆ ಅದನ್ನೂ ಮೊದಲೇ ತಿಳಿಸಿ. ಮನೆ ಕ್ಲೀನಿಂಗಾ, ಮಕ್ಕಳನ್ನು ನೋಡ್ಕೊಳ್ಳಬೇಕಾ? ಪಾತ್ರೆ ತೊಳೆಯೋದಾ, ಅಡುಗೆಗೆ ಸಹಾಯ ಮಾಡೋದಾ, ಅಥವಾ ಎಲ್ಲವನ್ನೂ ಮಾಡಬೇಕಾ?ಅನ್ನೋದ್ರ ಬಗ್ಗೆ ನಿಮಗೆ ಕ್ಲಾರಿಟಿ ಇರಲಿ. ಸುಖಾಸುಮ್ಮನೆ ಗೊಂದಲ ಬೇಡ.

ಪೂರ್ವಾಪರ ವಿಚಾರಿಸಿ ಆಯ್ಕೆ ಮಾಡ್ಕೊಳಿ
ಕೆಲಸದವರನ್ನು ಆಯ್ಕೆ ಮಾಡಿಕೊಳ್ಳುವಾಗ ಪೂರ್ವಾಪರ ವಿಚಾರಿಸಿ. ಎಲ್ಲಿಯವ್ರು, ಅವ್ರ ಸ್ವಭಾವ ಹೇಗೆ?ಎಷ್ಟು ವರ್ಷದಿಂದ ಕೆಲ್ಸ ಮಾಡ್ತಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಿ. ಯಾರೋ ಹೇಳಿದ ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಳ್ಳೋದು ಬೇಡ. ಗೊತ್ತಿರುವವರನ್ನೇ ಮನೆಕೆಲ್ಸದವ್ರನ್ನಾಗಿ ಆಯ್ಕೆ ಮಾಡ್ಕೊಳ್ಳಿ. ಕೆಲ್ಸಕ್ಕೆ ಸೇರಿಸಿಕೊಳ್ಳುವ ಮುನ್ನವೇ ಆ ಬಗ್ಗೆ ತಿಳಿಯಿರಿ

Things to remember, when selecting a helping maid for home

ಚೆನ್ನಾಗಿ ಕೆಲಸ ಮಾಡ್ತಾರಾ ಅನ್ನೋದನ್ನು ತಿಳಿದುಕೊಳ್ಳಿ
ಆಕೆ ಹೇಗೆ ಕೆಲ್ಸ ಮಾಡ್ತಾಳೆ ಅನ್ನೋದನ್ನು ನೋಡಿ. ಅಥ್ವಾ ಕೇಳಿ. ನಿಮ್ಮ ಮನೆಯ ಕೆಲ್ಸವನ್ನು ಆಕೆ ಮಾಡುವಾಗ ಅದು ನಿಮ್ಗೆ ಮನಃಸಂತೃಪ್ತಿ ನೀಡಬೇಕು. ನಂತರ ಅದು ಮಾಡಿದ್ದು ಸರಿಯಾಗಿಲ್ಲ, ಇದು ಮಾಡಿದ್ದು ಸರಿಯಾಗಿಲ್ಲ ಅಂತ ಸುಮ್ಮನೆ ಕಿರಿಕ್ ಮಾಡಿಕೊಳ್ಳೋದು ಬೇಡ..

ಸಂಬಳದ ಬಗ್ಗೆ ಕಿರಿಕಿರಿ ಬೇಡ
ಸಂಬಳ ಎಷ್ಟು ತೆಗೆದುಕೊಳ್ತಾರೆ. ಎಷ್ಟು ಕೊಡ್ಬೇಕು..ಈ ಬಗ್ಗೆ ಕೆಲ್ಸಕ್ಕೆ ಸೇರಿಸಿಕೊಳ್ಳುವಾಗಲೇ ಚರ್ಚೆಯಾಗಲಿ. ಮಾತುಕತೆಯ ನಂತ್ರ ಸಂಬಳದ ವಿಚಾರವನ್ನು ನಿಗದಿ ಪಡಿಸಿಕೊಂಡೇ ಕೆಲಸಕ್ಕೆ ಸೇರಿಸಿಕೊಳ್ಳಿ.

ಕೆಲಸದವರಿಗೆ ಸಾಲ ನೀಡುವ ಮುನ್ನ ಜೋಕೆ..!
ಐದಾರು ವರ್ಷದಿಂದ ನಿಮ್ಮ ಮನೆಯ ಕೆಲಸ ಮಾಡ್ತಿದ್ದು, ಅವ್ರ ಬಗ್ಗೆ ನಿಮ್ಗೆ ಸಂಪೂರ್ಣ ಗೊತ್ತಿದ್ದಲ್ಲಿ ಮಾತ್ರ ಕೆಲಸದವರಿಗೆ ಸಾಲ ನೀಡಿ.. ಒಂದೆರಡು ತಿಂಗಳು ಕೆಲ್ಸ ಮಾಡಿದವರಾದ್ರೆ ಸಾಲ ನೀಡುವ ಗೋಜಿಗೇ ಹೋಗಬೇಡಿ. ಮರುಪಾವತಿ ಮಾಡದೇ ಎಸ್ಕೇಪ್ ಆದ್ರೆ ನಿಮ್ಗೆ ತಿಪ್ಪರಲಾಗ ಹಾಕಿದ್ರೂ ಸಾಲದ ಹಣ ವಾಪಾಸ್ ಸಿಗುವುದಿಲ್ಲ ಅನ್ನೋದು ನೆನಪಿರಲಿ. ಹಾಗಂತ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ ತೂಗಲೂ ಸಾಧ್ಯವಿಲ್ಲ.

ಕೆಲಸದ ಸಮಯ ಬಗ್ಗೆ ಮಾತುಕತೆ ಮತ್ತು ಸಮಯ ಪಾಲನೆ
ನಿಮ್ಮ ಮನೆ ಕೆಲ್ಸಕ್ಕೆ ಅವ್ರು ಎಷ್ಟೊತ್ತಿಗೆ ಬರಬೇಕು ಅನ್ನೋದ್ರ ಬಗ್ಗೆ ಮೊದಲೇ ಮಾತಾಡಿಕೊಳ್ಳಿ. ನಂತ್ರ ಸಮಯದ ವಿಚಾರಕ್ಕೆ ಜಗಳ ಮಾಡಿಕೊಳ್ಳೋದು ತಪ್ಪುತ್ತೆ. ಕೆಲ್ಸದವ್ರು ಬರುವ ಸಮಯಕ್ಕೆ ನೀವು ಇಲ್ಲದೇ ಇರೋ ಸಂದರ್ಭ, ಅಥ್ವಾ ಯಾವುದೋ ಅನಿವಾರ್ಯ ಕಾರಣಕ್ಕೆ ಕೆಲ್ಸದವಳು ಬರುವುದೇ ಲೇಟಾಗುವುದಾದ್ರೆ ಅದ್ರ ಬಗ್ಗೆ ಸಂಪರ್ಕದಲ್ಲಿದ್ದು ಹೇಳಿಕೊಳ್ಳಿ,. ಕೆಲ್ಸದ ಸಮಯ ಮತ್ತು ಸಮಯ ಪಾಲನೆ ಎರಡೂ ಮುಖ್ಯ.

ಕೆಲಸದವರೊಂದಿಗೆ ಸಂಬಂಧ ಉತ್ತಮವಾಗಿರಲಿ
ನಿಮ್ಮ ಮತ್ತು ಕೆಲ್ಸದವ್ರ ಸಂಬಂಧ ಉತ್ತಮವಾಗಿರಲಿ.. ಅವ್ರ ಗುಣಸ್ವಭಾವನ್ನು ನೀವೂ ಅರಿಯಿರಿ. ನಿಮ್ ಬಗ್ಗೆ ಅವ್ರಿಗೂ ತಿಳಿಯುವಂತೆ ಅವ್ರಿಗೂ ಸುಸ್ತಾಗುತ್ತೆ. ಅವ್ರ ಬಗ್ಗೆ ನಿಮ್ಗೂ ಕಾಳಜಿ ಇರಲಿ. ಒಂದು ಲೋಟ ಕಾಫಿ ಇಲ್ಲವೇ ತಿಂಡಿ ನಿಮ್ಮನ್ನ ಖಂಡಿತ ಬಡತನಕ್ಕೆ ದೂಡುವುದಿಲ್ಲ. ಇಂತಹ ಕಾಳಜಿ ನಿಮ್ಮ ಮತ್ತು ಮನೆಕೆಲ್ಸದವ್ರ ನಡುವಿನ ಸಂಬಂಧ ಉತ್ತಮಗೊಳಿಸಲು ಸಹಕಾರಿಯಾಗುತ್ತೆ.

ಕೆಲಸದವರ ಫೋಟೋವನ್ನು ತೆಗೆದಿಟ್ಟುಕೊಳ್ಳಿ
ಯಾವ್ದಕ್ಕೂ ಕೆಲ್ಸದವ್ಳ ಫೋಟೋ ತೆಗೆದಿಟ್ಟುಕೊಳ್ಳಿ. ಅವ್ರ ಬಳಿ ದಾಖಲಾತಿಗಳ್ಯಾವುದಾದ್ರೂ ಇದ್ದಲ್ಲಿ ಪರಿಶೀಲಿಸಿ ನಿಮ್ಮ ಬಳಿ ಅದ್ರ ಝೆರಾಕ್ಸ್ ಪ್ರತಿಯೊಂದನ್ನು ಇಟ್ಟುಕೊಳ್ಳಿ. ತುಂಬಾ ವರ್ಷದಿಂದ ಇರುವ ಕೆಲ್ಸದವರಾದ್ರೆ ಸಹಜವಾಗೇ ಮನೆಫಂಕ್ಷನ್ ಅಥ್ವಾ ಇನ್ನಿತರೆ ಕಾರ್ಯಕ್ರಮಗಳಲ್ಲಿ ಜೊತೆಗೆ ತೆಗೆಸಿಕೊಂಡ ಫೋಟೋಗಳು ಇರುತ್ತೆ. ಆದ್ರೆ ಕೆಲ್ಸಕ್ಕೆ ಸೇರಿಸಿಕೊಳ್ಳುವ ಮುನ್ನವೇ ಫೋಟೋ ತೆಗೆದಿಟ್ಟುಕೊಳ್ಳೋದು ಉತ್ತಮ.

ಕೆಲಸದವರ ಬಗ್ಗೆ ಸಮೀಪದ ಪೋಲೀಸ್ ಸ್ಟೇಷನ್ನಿಗೆ ತಿಳಿಸಿ
ಗೊತ್ತಿಲ್ಲದ ಅಪರಿಚಿತರನ್ನು ಹೊಸದಾಗಿ ಕೆಲ್ಸಕ್ಕೆ ಸೇರಿಸಿಕೊಳ್ತಾ ಇದ್ದೀರಾದ್ರೆ ಅವ್ರ ಫೋಟೋ ಸಮೇತ ಇರುವ ದಾಖಲಾತಿಗಳೊಂದಿಗೆ ಹತ್ತಿರ ಸ್ಟೇಷನ್ನಿನಲ್ಲಿ ಮಾಹಿತಿ ನೀಡಿರಿ. ಭವಿಷ್ಯದಲ್ಲಿ ಸಮಸ್ಯೆಗಳಾಗುವುದನ್ನು ಇದ್ರಿಂದ ತಡೆಗಟ್ಟಬಹುದು. ಆದ್ರೆ ಹೆಚ್ಚಿನ ಕೆಲ್ಸದವ್ರ ಬಳಿ ದಾಖಲಾತಿಗಳು ಇರೋದಿಲ್ಲ ಅನ್ನೋದು ದುರಂತ. ಹಾಗಿದ್ದಲ್ಲಿ ಸಾದ್ಯವಾದ್ರೆ ದಾಖಲಾತಿಗಳನ್ನು ನೀವೇ ಮಾಡಿಸಿಕೊಡಿ.
ಒಟ್ಟಿನಲ್ಲಿ ಕೆಲ್ಸದವ್ರ ಅಗತ್ಯತೆ ಸಹಜವಾಗಿ ಹೆಚ್ಚ್ನಿನ ಮನೆಗಳಲ್ಲಿ ಇದ್ದೇ ಇರುತ್ತೆ. ಈ ಎಲ್ಲಾ ಅಂಶಗಳನ್ನು ನೆನಪಲ್ಲಿಟ್ಟುಕೊಂಡು ಕೆಲ್ಸದವ್ರ ಆಯ್ಕೆಯನ್ನು ಮಾಡಿದ್ದಾದಲ್ಲಿ ಖಂಡಿತವಾಗ್ಲೂ ಅವ್ರ ಮತ್ತು ನಿಮ್ಮ ಸಂಬಂಧ ಉತ್ತಮವಾಗಿರೋದ್ರಲ್ಲಿ ಅನುಮಾನವೇ ಇಲ್ಲ.

English summary

Things to remember, when selecting a helping maid for home

It is of paramount importance to put in a lot of thought when selecting a suitable maid. After-all entrusting your children's well-being and your valuables into a stranger's hands is no easy task. Especially when this fear has been fueled by numerous news coverage of maids gone bad! With the proper background check and preparation you can be confident you've made the right choice. Here are tips to consider when selecting a suitable maid, to make your selection process smoother
X
Desktop Bottom Promotion