ಈತನಿಗೆ ಎರಡೂ ಕೈಗಳು ಇಲ್ಲ, ಆದರೂ ಕ್ರಿಕೆಟ್ ಆಡುತ್ತಾನೆ!!

Posted By: Hemanth
Subscribe to Boldsky

ಜೀವನ ನಮಗೆ ಹಲವಾರು ಪಾಠಗಳನ್ನು ಕಲಿಸಿಕೊಡುತ್ತದೆ. ಈ ಪಾಠಗಳಿಂದಲೇ ನಾವು ಮುಂದಕ್ಕೆ ದೊಡ್ಡ ಯಶಸ್ಸನ್ನು ಪಡೆದು ಕೊಳ್ಳಬಹುದು. ಕೆಲವರು ವ್ಯಾಪಾರ, ಶಿಕ್ಷಣ ಹಾಗೂ ಇನ್ನು ಕೆಲವರು ಕ್ರೀಡೆಗಳಲ್ಲಿ ಯಶಸ್ಸನ್ನು ಪಡೆಯಬಹುದು. ಕೆಲವರಿಗೆ ಕ್ರೀಡೆಗಳ ಮೇಲೆ ಅತಿಯಾದ ಪ್ರೀತಿಯಿರುತ್ತದೆ. ಆದರೆ ಆ ಕ್ರೀಡೆಯನ್ನು ಆಡಲು ಅವರಿಗೆ ಸಾಧ್ಯವಾಗುವುದಿಲ್ಲ.  ಕ್ರಿಕೆಟ್ ಆಟಗಾರರಿಗೂ ತಟ್ಟಿದ ಟ್ಯಾಟೂ ಹುಚ್ಚು!

ಇನ್ನು ಕೆಲವರು ತಮ್ಮ ದೇಹದ ನ್ಯೂನ್ಯತೆಗಳನ್ನು ಮೀರಿ ತಮ್ಮ ಪ್ರೀತಿಯ ಕ್ರೀಡೆಗಳಲ್ಲಿ ತೊಡಗಿಕೊಳ್ಳುತ್ತಾರೆ... ಅಂತಹದೇ ಒಂದು ಘಟನೆಯನ್ನು ಈ ಲೇಖನದಲ್ಲಿ ನೀಡಿದ್ದೇವೆ... ಕ್ರಿಕೆಟ್ ಮೇಲೆ ಅತಿಯಾದ ಪ್ರೀತಿಯನ್ನು ಹೊಂದಿರುವ ಅಮೀರ್ ಹುಸೇನ್ ತನಗೆ ಎರಡು ಕೈಗಳು ಇಲ್ಲದೆ ಇದ್ದರೂ ಕ್ರಿಕೆಟ್ ಆಡುತ್ತಾ ಇದ್ದಾನೆ. ಅದು ಹೇಗೆಂದು ಲೇಖನದಲ್ಲಿ ನೀಡಿರುವ ವಿಡಿಯೋ ಮೂಲಕ ನೀವೇ ನೋಡಬಹುದಾಗಿದೆ.....  

ಅಮೀರ್ ಹುಸೇನ್

ಅಮೀರ್ ಹುಸೇನ್

ಆತ ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರ. ಎರಡು ಕೈಗಳು ಇಲ್ಲದ ಆತನನ್ನು ಇತರ ಆಟಗಾರರಿಗೆ ಹೋಲಿಸಿದರೆ ಆತ ತುಂಬಾ ವಿಶೇಷವಾಗಿ ಕಾಣಿಸುತ್ತಾನೆ.

ಕಾಶ್ಮೀರದಲ್ಲಿ ಈಗ ಇವನದ್ದೇ ಸುದ್ದಿ....

ಕಾಶ್ಮೀರದಲ್ಲಿ ಈಗ ಇವನದ್ದೇ ಸುದ್ದಿ....

ಆತನ ಕ್ರಿಕೆಟ್ ಮನೋಭಾವ ಮತ್ತು ನಡವಳಿಕೆಯು ಈಗ ಕಾಶ್ಮೀರದಲ್ಲಿ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಅತನ ಮೇಲೆ ನಂಬಿಕೆಯಿದೆ

ಅತನ ಮೇಲೆ ನಂಬಿಕೆಯಿದೆ

ನಿಮ್ಮ ಜೀವನದಲ್ಲಿ ಏನು ಮಾಡಿದ್ದೀರಿ ಎನ್ನುವುದು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುವುದಿಲ್ಲ. ನೀವು ಎಷ್ಟು ಮಂದಿಗೆ ಪ್ರೇರಣೆಯಾಗುತ್ತೀರಿ ಎನ್ನುವುದು ಮುಖ್ಯ. ಇದು ಹುಸೇನ್ ನಂಬಿದ ನೀತಿ.

ಆತ ಒಳ್ಳೆಯ ಸ್ಪಿನ್ನರ್

ಆತ ಒಳ್ಳೆಯ ಸ್ಪಿನ್ನರ್

ಆತ ಹಲವಾರು ಮಂದಿ ಯುವಕರಿಗೆ ಪ್ರೇರಣೆ. ಯಾಕೆಂದರೆ ಆತ ತನ್ನ ಕಾಲುಗಳಿಂದಲೇ ಚೆಂಡನ್ನು ಎಸೆದು ಒಳ್ಳೆಯ ಸ್ಪಿನ್ನರ್ ಆಗಿದ್ದಾನೆ.

ಸ್ವಾವಲಂಬಿ

ಸ್ವಾವಲಂಬಿ

ಆತ ಯಾರಿಗೂ ಹೊರೆಯಾಗಲು ಬಯಸುತ್ತಾ ಇಲ್ಲ. ಇದರಿಂದ ತಾನೇ ಸ್ನಾನ ಮಾಡುತ್ತಾನೆ. ತನ್ನ ಭಾವನೆಗಳನ್ನು ಕಾಗದದಲ್ಲಿ ಬರೆಯುತ್ತಾನೆ ಹಾಗೂ ಆಹಾರವನ್ನೂ ತಿನ್ನುತ್ತಾನೆ. ಆತನಿಗೊಂದು ದೊಡ್ಡ ಸಲಾಮ್.

ಆತನೊಬ್ಬ ಅಲ್ ರೌಂಡರ್

ಆತನೊಬ್ಬ ಅಲ್ ರೌಂಡರ್

ಆತ ಕ್ರಿಕೆಟಿನಲ್ಲಿ ದೊಡ್ಡ ಚಾಂಪಿಯನ್. ಆತ ಕೇವಲ ಸ್ಪಿನ್ ಮಾಡುವುದು ಮಾತ್ರವಲ್ಲದೆ ಚೆನ್ನಾಗಿ ಬ್ಯಾಟಿಂಗ್ ಮಾಡಿ ತನ್ನ ತಂಡದಲ್ಲಿ ಒಳ್ಳೆಯ ಆಲ್ ರೌಂಡರ್ ಆಗಿದ್ದಾನೆ.

ಆತನ ಪ್ರೇರಣೆಯ ಕಥೆ

ಈ ವಿಡಿಯೋ ಅಮೀರ್ ಯಾವ ರೀತಿ ಜೀವನ ಸಾಗಿಸುತ್ತಾನೆ ಎನ್ನುವುದನ್ನು ತೋರಿಸಿದೆ ಮತ್ತು ಇದು ಪ್ರತಿಯೊಬ್ಬರಿಗೂ ಪ್ರೇರಣೆ. ಇದರ ಬಗ್ಗೆ ನಿಮ್ಮ ಯಾವುದೇ ಸಲಹೆ, ಸೂಚನೆಗಳನ್ನು ಕಮೆಂಟ್ ಬಾಕ್ಸ್‌ಗೆ ಹಾಕಿ.

 
For Quick Alerts
ALLOW NOTIFICATIONS
For Daily Alerts

    English summary

    He Does Not Have Arms, But Is A Cricketer!

    Check out his inspirational video at the end of the article, where he can be seen doing everything with his legs and feet! This young man is an inspiration for many people out there who think that they are alone and their problems are the worst! Read on to know more about Amir Hussain...
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more