For Quick Alerts
ALLOW NOTIFICATIONS  
For Daily Alerts

ಕ್ರಿಕೆಟ್ ಆಟಗಾರರಿಗೂ ತಟ್ಟಿದ ಟ್ಯಾಟೂ ಹುಚ್ಚು!

By Super
|

ಹಚ್ಚೆ (ಟ್ಯಾಟೂ)ಹಚ್ಚಿಸಿಕೊಳ್ಳುವುದು ಒಂದು ಪುರಾತನ ಸಂಪ್ರದಾಯವಾಗಿದೆ. ಹೆಚ್ಚಿನವರು ತಮ್ಮ ಧರ್ಮ, ಅಥವಾ ಪ್ರೀತಿಪಾತ್ರರ ಹೆಸರನ್ನು ಕೈಯಲ್ಲಿ ಎಲ್ಲರಿಗೂ ಕಾಣುವಂತೆ ಹಚ್ಚೆ ಹಚ್ಚಿಸಿಕೊಳ್ಳುತ್ತಿದ್ದುದು ಎಪ್ಪತ್ತು ಎಂಭತ್ತರ ದಶಕದಲ್ಲಿ ಸಾಮಾನ್ಯವಾಗಿತ್ತು. ಕಾಲ ಬದಲಾದ ಹಾಗೆ ಹಚ್ಚೆಯ ವಿನ್ಯಾಸ ಮತ್ತು ಪರಿಕಲ್ಪನೆ ಬದಲಾಗಿದೆ. ಇಂದು ಜನರು ತಮ್ಮ ಮೈಮೇಲೆ ವಿವಿಧ ಬಣ್ಣಗಳ, ಚಿತ್ರವಿಚಿತ್ರ ವಿನ್ಯಾಸದ ಹಚ್ಚೆಗಳನ್ನು ಹಚ್ಚಿಸಿಕೊಳ್ಳುತ್ತಾರೆ. ಮೈ ನವಿರೇಳಿಸುವಂತೆ ಮಾಡುವ ಕ್ರಿಕೆಟ್ ಜಗತ್ತಿನ ಅದ್ಭುತ ಸಂಗತಿ..!

ವಿದೇಶಗಳಲ್ಲಿ ಕೆಲವರಂತೂ ಹಚ್ಚೆಯ ವ್ಯಸನಿಗಳಾಗಿ ಮೈತುಂಬಾ ಹಚ್ಚೆ, ಚಿರತೆಯಂತೆ, ಹುಲಿಯಂತೆಯೂ ಮಾರ್ಪಾಡಿಸಿಕೊಂಡಿದ್ದಾರೆ. ಈ ಹುಚ್ಚು ಪ್ರಖ್ಯಾತ ಕ್ರಿಕೆಟ್ ಆಟಗಾರರನ್ನೂ, ಚಿತ್ರನಟರನ್ನೂ ಬಿಟ್ಟಿಲ್ಲ. ಒಮ್ಮೆ ಹಚ್ಚಿಸಿಕೊಂಡರೆ ಜೀವಮಾನವಿಡೀ ಶಾಶ್ವತವಾಗಿ ಉಳಿಯುವ ಈ ವಿನ್ಯಾಸವನ್ನು ತಮ್ಮ ಮೈಮೇಲೆ ಹಚ್ಚಿಸಿಕೊಂಡಿರುವ ಕೆಲವು ಖ್ಯಾತ ಕ್ರಿಕೆಟಿಗರನ್ನು ಈಗ ನೋಡೋಣ. ಸಾರ್ವಕಾಲಿಕ ದಾಖಲೆಯ ಆ ಎಂಟು ಚಿರಸ್ಮರಣೀಯ ಸಿಕ್ಸರ್‌ಗಳು..!

ಶಿಖರ್ ಧವನ್

ಶಿಖರ್ ಧವನ್

ಶಿಖರ್ ಧವನ್ ಮತ್ತು ಅವರ ಪತ್ನಿ ಆಯೇಶಾ ಇಬ್ಬರೂ ಹಚ್ಚೆಪ್ರಿಯರು. ಆಯೇಶಾ ಶಿಖರ್ ಗಿಂತ ದೊಡ್ಡವರಾಗಿದ್ದು, ಆಸ್ಟ್ರೇಲಿಯಾದಲ್ಲಿ ಹುಟ್ಟಿದ್ದರೂ (ತಂದೆ ಪ. ಬಂಗಾಳದವರು) ನಿರರ್ಗಳವಾಗಿ ಬಂಗಾಲಿ ಮಾತನಾಡಬಲ್ಲವರು. ಆಸ್ಟ್ರೇಲಿಯಾದಲ್ಲಿದ್ದಾಗಲೇ ಅವರು ತಮ್ಮ ಬೆನ್ನಿನ ಮೇಲೆ ಸುಂದರವಾದ ಹಚ್ಚೆ ಹಾಕಿಸಿಕೊಂಡಿದ್ದಾರೆ.ಕ್ರಿಕೆಟ್ ಆಟಗಾರರ ನಡುವೆ ಇದ್ದಾಗ ಪ್ರೀತಿಯಿಂದ 'ಗಬ್ಬರ್' ಎಂದು ಕರೆಯಲ್ಪಡುವ ಶಿಖರ್ ಧವನ್ ಸಹಾ ಹಚ್ಚೆಪ್ರಿಯರಾಗಿದ್ದಾರೆ. ಅವರ ಮೇಲ್ತೋಳಿನ ಸ್ನಾಯುವಿನ ಹಿಂಭಾಗದಲ್ಲಿ ಕಾರ್ಪೆ ಡಿಯೆಮ್ ('Carpe Diem') ಎಂದು ಹಚ್ಚೆಯ ಮೂಲಕ ಬರೆದಿದೆ. ಲ್ಯಾಟಿನ್ ಮೂಲದ ಈ ಪದದ ಅರ್ಥ ಈ ದಿನವನ್ನು ಬಂಧಿಸಿಡು ಎಂದಾಗುತ್ತದೆ. ಇದರ ಹೊರತಾಗಿ ಅವರ ಬಲಭುಜ ಮತ್ತು ಬೆನ್ನಿನಲ್ಲಿ ಬುಡಕಟ್ಟು ಜನಾಂಗದವರ ಸಾಂಪ್ರಾದಾಯಿಕ ಚಿಹ್ನೆಯ ಹಚ್ಚೆಯಿದೆ. ಅಭ್ಯಾಸದಲ್ಲಿದ್ದಾಗ ಚೆಡ್ಡಿ ಧರಿಸಿದ್ದರೆ ಅವರ ಎಡಗಾಲಿನ ಮೀನಖಂಡದಲ್ಲಿ ಹಕ್ಕಿಯ ಚಿತ್ರದ ಹಚ್ಚೆ ಇರುವುದನ್ನೂ ಗಮನಿಸಬಹುದು.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಜಾಹೀರಾತುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ವಿರಾಟ್ ಕೊಹ್ಲಿಯವರೂ ನಾಲ್ಕು ಹಚ್ಚೆಗಳನ್ನು ಹಚ್ಚಿಸಿಕೊಂಡಿದ್ದಾರೆ. ವೃಶ್ಚಿಕ ರಾಶಿಯಲ್ಲಿ ಹುಟ್ಟಿದುದರಿಂದ ಚೇಳಿನ ಚಿತ್ರವೊಂದನ್ನು ಬಲತೋಳಿನ ಮೇಲ್ಭಾಗದಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಬಲತೋಳಿನ ಮಣಿಕಟ್ಟಿನ ಬಳಿ ಚೀನೀ ಶಾಂತಿಯ ಸಂಕೇತವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಎಡಗೈಯ ಮೇಲ್ತೋಳಿನ ಸ್ನಾಯುವಿನ ಹಿಂಭಾಗದಲ್ಲಿ ಜಪಾನ್ ಸಮುರಾಯ್ ಯೋಧ ಕತ್ತಿ ಹಿರಿದು ನಿಂತಿರುವ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದೇ ತಡ ಇಡಿಯ ಭಾರತದ ಯುವಜನತೆ ಈ ವಿನ್ಯಾಸವನ್ನು ತಮ್ಮ ಮೈಗೆ ಹಚ್ಚಿಸಿಕೊಳ್ಳಲು ಹಚ್ಚೆ ಕೇಂದ್ರಗಳಲ್ಲಿ ಮುಗಿಬಿದ್ದಿದ್ದರು. ಈ ಯೋಧ ನನ್ನ ಸುಪ್ತ ಪ್ರಜ್ಞೆಯಲ್ಲಿ ನನ್ನನ್ನು ಆವರಿಸಿ ಸದಾ ಶಿಸ್ತುಬದ್ದನಾಗಿರುವಂತೆ ಪ್ರೇರಣೆ ದೊರಕುತ್ತದೆ ಎಂದು ವಿರಾಟ್ ಮಾಧ್ಯಮಗಳಿಗೆ ಹೇಳಿದ್ದುದು ಈ ನೂಕು ನುಗ್ಗಲಿಗೆ ಕಾರಣವಾಯಿತು. ಇಷ್ಟೇ ಅಲ್ಲದೇ ಅವರ ಮೈಮೇಲೆ ಕೆಲವು ಬುಡಕಟ್ಟು ಜನಾಂಗದ ಚಿಹ್ನೆಗಳೂ ಇವೆ.

ಅಂಬಟಿ ರಾಯುಡು

ಅಂಬಟಿ ರಾಯುಡು

ತಮ್ಮ ದುರ್ವರ್ತನೆಯಿಂದ ಕೊಂಚಕಾಲ ಕ್ರಿಕೆಟ್ ನಿಂದ ಹಿಂದೆ ಸರಿದಿದ್ದ ರಾಯುಡು ಮತ್ತೆ ತಂಡ ಸೇರುವಂತಾಗಲು ಹಚ್ಚೆಯೊಂದು ಕಾರಣವಾಗಿರುವುದು ಯುವಜನತೆಯ ಗುಸುಗುಸುವಿಗೆ ಗ್ರಾಸ ನೀಡಿದೆ. ವಿಶ್ರಾಂತ ಅವಧಿಯಲ್ಲಿ ಅವರು ತಮ್ಮ ಕುತ್ತಿಗೆಯ ಎಡಭಾಗದಲ್ಲಿ ಶಾಂತಿಯ ಸಂಕೇತವಾದ ಪಾರಿವಾಳವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಪಾರಿವಾಳ ಅವರಿಗೆ ಶಾಂತಿ ನೀಡಿದೆ, ಹೀಗಾಗಿ ಸಭ್ಯ ಕ್ರಿಕೆಟ್ ಆಟಗಾರನಾಗಲು ಸಾಧ್ಯವಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದರೂ ಪಾರಿವಾಳಕ್ಕೂ ತನ್ನ ಶಾಂತಿಗೂ ಯಾವ ಸಂಬಂಧವೂ ಇಲ್ಲ ಎಂದು ರಾಯುಡು ಅವಲತ್ತುಕೊಳ್ಳುತ್ತಿದ್ದಾರೆ. ಕಾಗೆ ತಾನು ಕಪ್ಪಗಿಲ್ಲ ಎಂದು ಗೋಳಿಟ್ಟರೆ ನಂಬುವವರಾರು?

 ಉಮೇಶ್ ಯಾದವ್

ಉಮೇಶ್ ಯಾದವ್

ತಮ್ಮ ಎಡಕೈಯ ಮಣಿಕಟ್ಟಿನಿಂದ ಭುಜದವರೆಗೆ ಒಟ್ಟು ಐದು ದೇವರ ಚಿತ್ರಗಳನ್ನು ಹಚ್ಚೆಗಳನ್ನು ಹಾಸಿಕೊಂಡಿರುವ ಬೌಲರ್ ಉಮೇಶ್ ಯಾದವ್ ತಮ್ಮ ಭಕ್ತಿಯನ್ನು ಈ ರೀತಿ ಪ್ರಚುರಪಡಿಸುತ್ತಿದ್ದಾರೆ. ಭುಜದ ಬಳಿ ಶಿವನ ಚಿತ್ರ, ಬಳಿಕ ಮಹಾ ಮೃತ್ಯುಂಜಯ ಮಂತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಅದರ ಕೆಳಗೆ ಕನ್ಯಾಮೇರಿಯ ಚಿತ್ರವಿದೆ. ಈ ಚಿತ್ರ 2011ರಲ್ಲಿ ವಿಧಿವಶರಾದ ತಮ್ಮ ತಾಯಿಗೆ ನೀಡುವ ಪ್ರೀತಿ ಮತ್ತು ಗೌರವ ಎಂದು ಅವರು ಹೇಳುತ್ತಾರೆ. ಬಲಗೈಯ ಮೇಲೆ 'ಹರಿಸಲ್ಪಟ್ಟ ಮಗು'ವಿನ(blessed child) ಚಿತ್ರವಿದೆ. ಈ ಚಿತ್ರ ತಮಗೆ ಶುಭವನ್ನು ತರುತ್ತದೆ ಎಂದು ಅವರು ನಂಬಿದ್ದಾರೆ.

 ರವೀಂದ್ರ ಜಡೇಜ

ರವೀಂದ್ರ ಜಡೇಜ

ಬಲ ಮೊಣಕೈ ಮೇಲೆ ರವೀಂದ್ರ ಜಡೇಜರವರು ತಮ್ಮ ನೆಚ್ಚಿನ ಕುದುರೆಯ ಚಿತ್ರವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಇದನ್ನು ಕೆಲವು ಹೂಗಳು ಸುತ್ತವರೆದಿವೆ. ಈ ಕುದುರೆಯನ್ನು ಅವರು ಪ್ರೀತಿಯಿಂದ 'ಜದ್ದು' ಎಂದು ಕರೆಯುತ್ತಾರೆ. ಬೆನ್ನಿನ ಮೇಲೆ ಚೀನೀ ಡ್ರಾಗನ್ ಒಂದರ ಹಚ್ಚೆಯಿದೆ. ಇದನ್ನು ಕಂಡವರು ಯಾರೂ ಇಲ್ಲದಿದ್ದರೂ ಇದೆ ಎಂದು ಸ್ವತಃ ಟ್ವಿಟ್ಟರ್ ನಲ್ಲಿ ಜಡೇಜ ಇತ್ತೀಚೆಗೆ ಹೇಳಿಕೊಂಡಿದ್ದಾರೆ.

ಸುರೇಶ್ ರೈನಾ

ಸುರೇಶ್ ರೈನಾ

ತಮ್ಮ ಜೊತೆಗಾರ ಕ್ರಿಕೆಟಿಗರ ಮೈಮೇಲೆ ಹಚ್ಚೆಗಳಿರುವುದನ್ನು ಗಮನಿಸಿ ಪ್ರೇರಿತರಾದ ಸುರೇಶ್ ರೈನಾ ಸಹಾ ಇತ್ತೀಚೆಗೆ ತಮ್ಮ ಮೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಬಲ ಮೇಲ್ತೋಳಿನ ಒಳಭಾಗದ ಮೇಲೆ 'ನಂಬಿಕೆ' (Believe) ಎಂಬ ಪದವನ್ನು ಅವರು ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಪದ ದಪ್ಪನಾಗಿ ಬರೆದಿದ್ದು ಈಗತಾನೇ ಬರೆದಿದ್ದು ಶಾಯಿ ಕರಗಿ ಇಳಿಯುತ್ತಿರುವಂತೆ ಭಾಸವಾಗುತ್ತದೆ.

ಸ್ಟುವರ್ಟ್ ಬಿನ್ನಿ

ಸ್ಟುವರ್ಟ್ ಬಿನ್ನಿ

ಭಾರತ ಕ್ರಿಕೆಟ್ ತಂಡಕ್ಕೆ ಅತ್ಯಂತ ಸಂಭ್ರಮದಿಂದ ಸ್ವಾಗತಿಸಲ್ಪಟ್ಟ ಸ್ಟುವರ್ಟ್ ಬಿನ್ನಿ ಸಹಾ ತಮ್ಮ ಮೈಮೇಲೆ ಕೆಲವು ಹಚ್ಚೆಗಳನ್ನು ಹಾಕಿಸಿಕೊಂಡಿದ್ದಾರೆ. ಕ್ರಿಕೆಟ್ ಜೀವನದಲ್ಲಿ ಬಹಳಷ್ಟನ್ನು ಇನ್ನೇನು ಸಾಧಿಸುವ ಹಂತದಲ್ಲಿರುವ ಇವರೂ ತಾವೂ ಇತರರಿಗೆ ಕಡಿಮೆಯಿಲ್ಲವೆಂಬಂತೆ ಹಚ್ಚೆ ಹಾಕಿಸಿಕೊಂಡಿದ್ದನ್ನು ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಅರ್ಧತೋಳಿನ ಶರ್ಟ್ ತೊಟ್ಟರೆ ಅರ್ಧಭಾಗ ಕಾಣುವಂತೆ ತೋಳಿನ ಮೇಲೆ ನ್ಯೂಜಿಲ್ಯಾಂಡಿನ ಮಾವೋರಿ ಬುಡಕಟ್ಟು ಜನಾಂಗದವರ ವಿನ್ಯಾಸವನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

ಕ್ರಿಸ್ ಗೇಲ್

ಕ್ರಿಸ್ ಗೇಲ್

ಇತ್ತೀಚೆಗೆ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ ಸಹಾ ಹಚ್ಚೆಹುಚ್ಚಿನವರಾಗಿದ್ದಾರೆ. ಅವರ ಬಲತೋಳಿನಲ್ಲಿ ಬುಡಕಟ್ಟು ಜನಾಂಗದ ವಿನ್ಯಾಸವಿದ್ದರೆ ಎಡತೋಳಿನಲ್ಲಿ ಹಲವು ನಕ್ಷತ್ರಗಳು ಹಾಗೂ ಹಾರುತ್ತಿರುವ ಗಿಡುಗನ ಚಿತ್ರವಿದೆ.

ಡೇಲ್ ಸ್ಟೇಯ್ನ್

ಡೇಲ್ ಸ್ಟೇಯ್ನ್

ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಸಹಾ ತಮ್ಮ ದೇಹದ ಮೇಲ ಹಲವು ಖ್ಯಾತ ವಿನ್ಯಾಸಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರ ಎಡ ತೋಳಿನ ಮಣಿಕಟ್ಟಿನಿಂದ ಭುಜದವರೆಗೂ ವಿವಿಧ ಬಣ್ಣಗಳ, ಸೂಕ್ಷ್ಮ ಕುಸುರಿಯ ವಿನ್ಯಾಸದ ಹಚ್ಚೆಯಿದ್ದು ವಿಶಿಷ್ಟ ಲಕ್ಷಣವನ್ನು ನೀಡುತ್ತದೆ.

ಬ್ರೆಂಡನ್ ಮೆಕಲಮ್

ಬ್ರೆಂಡನ್ ಮೆಕಲಮ್

ಗಣಿತದಲ್ಲಿ ನಿಷ್ಣಾತರಾದವರಿಗೆ ಯುವತಿಯರು ಬೇಗ ಒಲಿಯುತ್ತಾರೆಯೇ? ಹೌದು ಎಂದು ನಂಬಿದ್ದಾರೆ ನ್ಯೂಜಿಲ್ಯಾಂಡಿನ ಖ್ಯಾತ ಕ್ರಿಕೆಟಿಗ ಬ್ರೆಂಡನ್ ಮೆಕಲಮ್. ಇವರ ಟೊಪ್ಪಿಯ ಮೇಲೆ ಯಾವಾಗಲೂ ಕೆಲವು ಅಂಕಿಗಳಿರುತ್ತವೆ. ತಮ್ಮ ಚರ್ಯೆಯಲ್ಲಿಯೂ ಅವರು ಸಂಖ್ಯಾಶಾಸ್ತ್ರವನ್ನು ಬಳಸುತ್ತಾರೆ. ಇವರೂ ಸಹಾ ಹಚ್ಚೆಪ್ರಿಯರಾಗಿದ್ದು ಬಲತೋಳಿನ ಮೇಲ್ಭಾಗದಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಹಚ್ಚೆಯಲ್ಲಿ ಅವರ ನಂಬಿಕೆಯನ್ನು ಬಿಂಬಿಸುವ ಹಲವು ರೋಮನ್ ಅಂಕೆಗಳು ಪ್ರಧಾನವಾಗಿ ಕಾಣಬರುತ್ತದೆ. ಈ ಅಂಕೆಗಳು ಟೆಸ್ಟ್ ಕ್ರಿಕೆಟ್, ಏಕದಿನ ಮತ್ತು ಟ್ವೆಂಟಿಟ್ವೆಂಟಿ ಪಂದ್ಯಗಳಲ್ಲಿ ಅವರು ದೇಶವನ್ನು ಪ್ರತಿನಿಧಿಸಿದ ಸಂಖ್ಯೆಯನ್ನು ತಿಳಿಸುತ್ತವೆ.

ಕೆವಿನ್ ಪೀಟರ್ಸನ್

ಕೆವಿನ್ ಪೀಟರ್ಸನ್

ಸಾಮಾನ್ಯವಾಗಿ ಎಲ್ಲರೂ ತಮ್ಮ ಹಚ್ಚೆಗಳನ್ನು ಹೆಮ್ಮೆಯಿಂದ ತೋರಿಸಿದರೆ ಇಂಗ್ಲೆಂಡಿನ ಈ ಯುವ ಆಟಗಾರ (ಪಟ್ಟಿಯಲ್ಲಿ 626ನೆಯವರು) ಕೆವಿನ್ ಪೀಟರ್ಸನ್ ತಮ್ಮ ಹಚ್ಚೆಯನ್ನು ತೋರಿಸಲು ಸಂಕೋಚ ತೋರುತ್ತಾರೆ. ಅವರ ಎಡಗೈಯ ಮೇಲ್ತೋಳಿನಲ್ಲಿ ರಾಣಿಯ ಕಿರೀಟದ ಕೆಳಗೆ ಮೂರು ಸಿಂಹಗಳಿವೆ. ಅದರ ಕೆಳಗೆ ಚಿಕ್ಕದಾಗಿ ಅವರ ಏಕದಿನ ಅಂತಾರಾಷ್ಟ್ರೀಯ ಆಟಗಾರನ ಸಂಖ್ಯೆಯಾದ (185) ಎಂಬ ಅಂಕೆಯಿದೆ. ಅದರ ಕೆಳಗೆ ರೋಮನ್ ಅಂಕೆಗಳಾದ DCXXVI (626) ಎಂದು ಹಚ್ಚೆ ಹಾಕಲಾಗಿದೆ. ಜೊತೆಗೇ ಭಾರತದ ಮೇಲೆ ಅಪಾರ ಅಭಿಮಾನ ಹೊಂದಿರುವ ಇವರು ತಮ್ಮ ಅಭಿಮಾನವನ್ನು ಸಂಸ್ಕೃತದ ಕೆಲವು ಪದಗಳನ್ನೂ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಪ್ರಕಟಿಸಿದ್ದಾರೆ.

ಲಸಿತ್ ಮಾಲಿಂಗ

ಲಸಿತ್ ಮಾಲಿಂಗ

ತಮ್ಮ ವಿಶಿಷ್ಟ ಶೈಲಿಯ ಬೌಲಿಂಗ್ ಮತ್ತು ಕೇಶವಿನ್ಯಾಸಕ್ಕಾಗಿ ಖ್ಯಾತರಾದ ಶ್ರೀಲಂಕಾ ತಂಡದ ಮಲಿಂಗ ತಮ್ಮ ಬಲತೋಳೀನ ಮೇಲೆ ಎರಡು ದಿನಾಂಕಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಮೊದಲನೆಯದು ಶ್ರೀಲಂಕಾ ತಂಡದಲ್ಲಿ ತಮ್ಮ ವೃತ್ತಿಪರ ಕ್ರಿಕೆಟ್ ಪ್ರಾರಂಭವಾದ ದಿನ ಮತ್ತು ಎರಡನೆಯದು ನಾಲ್ಕು ಸತತ ಎಸೆತಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ ದಿನ. ಅಲ್ಲದೇ ತಮ್ಮ ಬಲಗೈಯ ಮುಂಗೈಮೇಲೆ ತಮ್ಮ ಮಾತೃಭಾಷೆಯಲ್ಲಿ ತಮ್ಮ ಪತ್ನಿಯ ಹೆಸರನ್ನೂ ಹಚ್ಚೆ ಹಾಕಿಸಿಕೊಂಡಿದ್ದಾರೆ.

English summary

Cricketers and their tattoos

Dragons, warriors, scriptures, dates, names... they flaunt it all. It adds to their bad boy quotient, and has millions of fans straining their eyes to catch a glimpse of what it is. Here are a few cricketers, who've announced their arrival with cool tattoos..
X
Desktop Bottom Promotion