Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈತ ಒಂದಲ್ಲ, ಎರಡಲ್ಲ, ಭರ್ತಿ ಹದಿನೆಂಟು ಹಲ್ಲುಜ್ಜುವ ಬ್ರಷ್‌ಗಳನ್ನೇ ತಿಂದಿದ್ದ!
ಈ ಜಗತ್ತು ಹೊರಗಿನಿಂದ ನೋಡಲು ಎಷ್ಟು ಸುಂದರವೋ, ಒಳಗಿನಿಂದ ಅಷ್ಟೇ ನಿಗೂಢ, ಅಷ್ಟೇ ಕ್ರೂರ. ಮಾನವರಲ್ಲಿಯೂ ಕೆಲವರು ಹೊರಗಿನಿಂದ ಒಂದು ಒಳಗಿನಿಂದ ಇನ್ನೊಂದೇ ಆಗಿರುತ್ತಾರೆ. ಮನದಾಳದ ಭೀಭತ್ಸತೆಯನ್ನು ಪ್ರಕಟಿಸಿ ದೌರ್ಜನ್ಯಗಳನ್ನು ಎಸಗಿದ ಬಳಿಕ ಇದರ ಕುರುಹಾಗಿ ಪ್ರಕಟಗೊಳ್ಳುವ ಚಿತ್ರಗಳು ಮನ ಕಲಕುತ್ತವೆ. ಹಲ್ಲುಜ್ಜುವ ಬ್ರಷ್ ಕೂಡ ಆರೋಗ್ಯಕ್ಕೆ ಮಾರಕವಾಗಬಹುದು!
ಇಂತಹದ್ದೇ ಒಂದು ವಿಚಿತ್ರ ಚಿತ್ರಗಳು ಲಭ್ಯವಾಗಿದ್ದು ಇದರಲ್ಲಿ ಪುರುಷನೊಬ್ಬ ಒಂದಲ್ಲ ಎರಡಲ್ಲ, ಭರ್ತಿ ಹದಿನೆಂಟು ಹಲ್ಲುಜ್ಜುವ ಬ್ರಷ್‌ಗಳನ್ನೂ ಸಾಲದಕ್ಕೆ ಕೆಲವು ಲೋಹದ ತುಣುಕುಗಳನ್ನೂ ತಿಂದಿರುವುದು ವರದಿಯಾಗಿದೆ. ಈ ಭಯಾನಕ ಘಟನೆ ಏಕಾಯಿತು? ಹೇಗಾಯಿತು? ಈ ವ್ಯಕ್ತಿ ಹೀಗೇಕೆ ಮಾಡಿದ ಎಂಬ ಹಲವಾರು ಪ್ರಶ್ನೆಗಳಿಗೆ ಕೆಳಗಿನ ಮಾಹಿತಿ ಉತ್ತರ ನೀಡಲಿದೆ:
ವಿಶೇಷ ಸೂಚನೆ: ಈ ಲೇಖನ ದುರ್ಬಲ ಹೃದಯಿಗಳಿಗೆ ಖಂಡಿತಾ ಸಲ್ಲದು. ಇದರಲ್ಲಿ ಬಳಸಲಾಗಿರುವ ಚಿತ್ರಗಳು ಇವರ ಚಿತ್ತವನ್ನು ಕಲಕಬಲ್ಲುದು...

ಈತ ಅಷ್ಟೂ ಬ್ರಷ್‍ಗಳನ್ನು ಒಂದೇ ಬಾರಿಗೆ ತಿಂದ!
ವರದಿಗಳ ಪ್ರಕಾರ ಈತ ಒಂದೊಂದಾಗಿ ಅಲ್ಲ, ಎಲ್ಲವನ್ನೂ ಒಂದೇ ಬಾರಿ ತಿಂದನಂತೆ.

ಇವನ್ನು ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು
ಈತ ಬ್ರಷ್‌ಗಳನ್ನು ತಿಂದಿರುವುದು ನಿಜವೋ ಅಲ್ಲವೋ ಎಂಬುದನ್ನು ಕ್ಯಾಮೆರಾ ಒಂದನ್ನು ದೇಹದ ಒಳಕ್ಕಿಳಿಸಿ ಪ್ರತ್ಯಕ್ಷವಾಗಿ ನೋಡಿದ ಬಳಿಕವೇ ವೈದ್ಯರು ಖಚಿತ ಪಡಿಸಿದ್ದಾರೆ. ಈತನ ಹೊಟ್ಟೆಯೊಳಗೆ ಬಣ್ಣಬಣ್ಣದ ಪ್ಲಾಸ್ಟಿಕ್ಕಿನ ಬ್ರಷ್‌ಗಳಿದ್ದುದು ನಿಜ!

ಇಲ್ಲಿದ್ದುದು ಬರೆಯ ಬ್ರಷ್‌ಗಳು ಮಾತ್ರವಲ್ಲ
ಈ ಶಸ್ತ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಿಸಿದ್ದು ಕೆಳಗಿನ ಕೊಂಡಿಯಲ್ಲಿ ನೀಡಿರುವ ವೀಡಿಯೋದಲ್ಲಿ ಈತನ ಹೊಟ್ಟೆಯೊಳಗೆ ಬರೆಯ ಬ್ರಷ್‌ಗಳು ಮಾತ್ರವಲ್ಲ, ಚಿಕ್ಕ ಚಿಕ್ಕ ಹಸಿರು ತಂತಿಯಂತಹ ವಸ್ತುಗಳೂ ಕಾಣಸಿಗುತ್ತವೆ. ಇವು ಹೆಚ್ಚಾಗಿ ಪೆನ್ಸಿಲ್ ಅಥವಾ ಸ್ಕ್ರೂ ನಂತೆ ಅಥವಾ ಚಿಕ್ಕ ಲೋಹದ ತುಣುಕುಗಳಂತೆ ಕಾಣಿಸುತ್ತವೆ. ಇವೆಲ್ಲವನ್ನೂ ಹೊಟ್ಟೆಯಿಂದ ಹೊರತೆಗೆಯಲಾಯಿತು.

ಇಷ್ಟು ಬ್ರಷ್‌ಗಳನ್ನು ಒಮ್ಮೆಲೇ ತಿನ್ನಲು ಸಾಧ್ಯವೇ ಇಲ್ಲವೆಂದ ವೈದ್ಯರು!
ವೈದ್ಯರ ಪ್ರಕಾರ ಅಷ್ಟೂ ಬ್ರಷ್‌ಗಳನ್ನು ಮನುಷ್ಯಮಾತ್ರದವರಿಗೆ ಒಮ್ಮೆಲೇ ತಿನ್ನಲು ಸಾಧ್ಯವೇ ಇಲ್ಲ. ಈತ ಹದಿನೆಂಟನ್ನು ನುಂಗಿದ್ದ. ಅಂದರೆ ಅಷ್ಟೂ ಬ್ರಷ್‌ಗಳನ್ನು ಒಮ್ಮೆಲೇ ಗಂಟಲಿನಿಂದ ಇಳಿಸಲು ಗಂಟಲು ಅಗಲಗೊಳ್ಳಬೇಕು. ನಮ್ಮ ಗಂಟಲು ಹೀಗೆ ಹಿಗ್ಗಲು ಅಸಮರ್ಥವದುದರಿಂದ ಇವೆಲ್ಲವೂ ಒಂದೇ ಬಾರಿ ಹೋಗಿರುವ ಸಾಧ್ಯತೆಯೇ ಇಲ್ಲ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ಆದರೂ ಪ್ಲಾಸ್ಟಿಕ್ಕನ್ನು ತಿನ್ನಬೇಕಾದರೆ ಆತನ ಮನಸ್ಸು ಸ್ಥಿಮಿತದಲ್ಲಿರಲು ಸಾಧ್ಯವಿಲ್ಲ ಎನ್ನುತ್ತಾರೆ.

ವೀಡಿಯೋ ನೋಡುವ ಧೈರ್ಯವಿದೆಯೇ?
ಈ ಭಯಾನಕ ದೃಶ್ಯದ ವಿಡಿಯೋ ಈಗ ಲಭ್ಯವಿದ್ದು ಇದನ್ನು ನೋಡಲು ಹೆಚ್ಚಿನವರು ಇಷ್ಟಪಡಲಾರರು. ಆದರೆ ಕುತೂಹಲವಿದ್ದರೆ ಹಾಗೂ ಎದೆಗುಂಡಿಗೆ ಗಟ್ಟಿಯಿದ್ದವರ ಸ್ಥೈರ್ಯವನ್ನು ಪರೀಕ್ಷಿಸಬೇಕೆಂದರೆ ಮುಂದುವರೆಯಬಹುದು.

ವೈಜ್ಞಾನಿಕ ವಾಸ್ತವಾಂಶ
ಸಾಮಾನ್ಯವಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವವರು ಹೀಗೆ ಆಹಾರವಸ್ತುಗಳಲ್ಲದ ವಸ್ತುಗಳನ್ನು ತಿನ್ನುವುದು ಸಾಮಾನ್ಯ. ಈ ಸ್ಥಿತಿಗೆ bulimia ಎಂದು ಕರೆಯುತ್ತಾರೆ. ಕೆಲವರು ವಾಂತಿ ಮಾಡಬೇಕೆಂದೇ ಬಲವಂತವಾಗಿ ಇಲ್ಲಸಲ್ಲದ ವಸ್ತುಗಳನ್ನು ಗಂಟಲಿನಲ್ಲಿ ತುರುಕಿಕೊಳ್ಳುತ್ತಾರೆ ಹಾಗೂ ಅಕಸ್ಮಿಕವಾಗಿ ಕೆಲವು ವಸ್ತುಗಳು ಹೊಟ್ಟೆ ಸೇರುತ್ತವೆ.



Click it and Unblock the Notifications











