For Quick Alerts
ALLOW NOTIFICATIONS  
For Daily Alerts

ಖತರ್ನಾಕ್ ರೇಪಿಸ್ಟ್ ಬಾಬಾ ರಾಮ್ ರಹೀಮ್‌ನ ಕಂಪ್ಲೀಟ್ ಬಯೋಡೇಟಾ...

By Arshad
|

ಕಳೆದ ಕೆಲದಿನಗಳಲ್ಲಿ ಮಾಧ್ಯಮದ ಪ್ರಮುಖ ಸಮಯ ಹಾಗೂ ಮುಖಪುಟವನ್ನು ಆವರಿಸಿದ್ದ ಸುದ್ದಿ ಎಂದರೆ ಗುರ್ಮೀತ್ ರಾಮ್ ರಹೀಮ್ ಬಾಬಾರಿಗೆ ಸುಮಾರು ಹದಿನೈದು ವರ್ಷ ಹಿಂದೆ ನಡೆಸಿದ ಅತ್ಯಾಚಾರ ಪ್ರಕರಣದ ನ್ಯಾಯಾಲಯದ ತೀರ್ಪು. ಪಂಚಕುಲ ಎಂಬಲ್ಲಿ ಈ ಘಟನೆ ನಡೆಯುತ್ತಿದ್ದು ತನ್ನನ್ನು ತಾನೇ ಸ್ವಘೋಷಿತ ದೇವಮಾನವನೆಂದು ಘೋಷಿಸಿಕೊಂಡಿದ್ದ ಬಾಬಾ ಈಗ ಕಂಬಿ ಎಣಿಸುತ್ತಿದ್ದಾನೆ.

ಆದರೆ ಭಕ್ತಿ ಎಷ್ಟು ಅಂಧವಾಗಬಹುದು ಎಂಬುದನ್ನು ಈ ಘಟನೆಯೇ ತೋರಿಸುತ್ತದೆ. ತಮ್ಮ ಆಧ್ಯಾತ್ಮ ಗುರುವನ್ನು ಭಾರತದ ನ್ಯಾಯಾಲಯ ಯಾವಾಗ ತಪ್ಪಿತಸ್ಥ ಎಂದು ಘೋಷಿಸಿತೋ, ಆತನ ಭಕ್ತರೆಲ್ಲಾ ಹಿಂಸಾತ್ಮಕ ರೂಪ ತಾಳಿ ಗಲಭೆಯನ್ನು ಎಬ್ಬಿಸಿದ್ದಾರೆ. ಈಗ ಈ ಗುರ್ಮೀತ್ ರಾಮ್ ರಹೀಂ ಯಾರು ಎಂಬುದನ್ನು ಮಾಧ್ಯಮಗಳ ಮೂಲಕ ಇಡಿಯ ದೇಶ ಅರಿತಿದೆ.

ಈತ ಕೇವಲ ದೇವಮಾನವನಲ್ಲ, ಬದಲಿಗೆ ದೇರಾ ಎಂಬ ಧಾರ್ಮಿಕ ಸ್ಥಳದ ಮುಖ್ಯಸ್ಥ, ಸಿನೇಮಾ ನಟ, ಗಾಯಕ, ಲೇಖಕ, ನಿರ್ದೇಶಕ ಹಾಗೂ ಸಮಾಜ ಸುಧಾರಕ ಮೊದಲಾದ ಹಲವು ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬನ್ನಿ, ಈತನ ಆಡಂಬರದ ಬಗ್ಗೆ ಈಗ ಕೆಲವು ಮಾಹಿತಿಗಳನ್ನು ಅರಿಯೋಣ....

ಈತನ ಕುಟುಂಬ

ಈತನ ಕುಟುಂಬ

1967ರ ಆಗಸ್ಟ್ ಹದಿನೈದರಂದು ರಾಜಸ್ಥಾನದ ಶ್ರೀ ಗಂಗಾನಗರ ಎಂಬ ನಗರದಲ್ಲಿ ನಸೀಬ್ ಕೌರ್ ಹಾಗೂ ಮಘರ್ ಸಿಂಗ್ ಎಂಬ ದಂಪತಿಗಳ ಏಕಮಾತ್ರ ಪುತ್ರನಾಗಿ ಜನಿಸಿದನು. ತಂದೆಗೆ ನೆರವಾಗಲು ಟ್ರ್ಯಾಕ್ಟರ್ ಚಲಾಯಿಸುತ್ತಾ ಯೌವನ ತಲುಪಿದ ಬಳಿಕ ಹರ್ಜೀತ್ ಕೌರ್ ರನ್ನು ವಿವಾಹವಾದರು. ಇವರಿಗೆ ಮೂವರು ಹೆಣ್ಣು ಹಾಗೂ ಒಬ್ಬ ಗಂಡು ಮಗನಿದ್ದಾನೆ. ಎಲ್ಲರ ಹೆಸರಿನ ಕಡೆಯಲ್ಲಿ 'ಇನ್ಸಾನ್' ಅಥವಾ ಮಾನವ ಎಂಬ ವಿಶೇಷಣವನ್ನು ಬಳಸಿದ್ದಾರೆ.

ಈತ ಹಲವು ಕ್ರೀಡೆಗಳಲ್ಲಿ ಪಾರಾಂಗತ

ಈತ ಹಲವು ಕ್ರೀಡೆಗಳಲ್ಲಿ ಪಾರಾಂಗತ

ಈತನ ಬಗ್ಗೆ ಇರುವ ವೆಬ್ ಸೈಟ್‌ನಲ್ಲಿ ವಿವರಿಸಿರುವ ಪ್ರಕಾರ ಈತ ಹಲವು ಕ್ರೀಡೆಗಳಲ್ಲಿ ಪಾರಾಂಗತನಾಗಿದ್ದಾನೆ. ಇದರಲ್ಲಿ ವಾಲಿಬಾಲ್, ಕಬಡ್ಡಿ, ಹುಲ್ಲುಹಾಸಿನ ಟೆನ್ನಿಸ್, ಕ್ರಿಕೆಟ್, ಫುಟ್ಬಾಲ್, ಬಿಲಿಯರ್ಡ್, ಟೇಬಲ್ ಟೆನ್ನಿಸ್, ಸ್ನೂಕರ್, ಶೂಟಿಂಗ್ ಬಾಲ್, ಬಾಸ್ಕೆಟ್ ಬಾಲ್, ವಾಟರ್ ಪೋಲೋ ಹಾಗೂ ಇತರ ಕ್ರೀಡೆಗಳಲ್ಲಿ ಪಾರಾಂಗತನಾಗಿದ್ದಾನೆ.

ಈತನ ಬಗ್ಗೆ ಎದ್ದ ವಿವಾದ

ಈತನ ಬಗ್ಗೆ ಎದ್ದ ವಿವಾದ

2002ರಲ್ಲಿ ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಅಟಲ್ ಬಿಹಾರಿ ವಾಯಪೇಯಿಯವರಿಗೆ ಇವರ ಡೇರಾ ಅಥವಾ ಮಠದಲ್ಲಿದ್ದ ಅನಾಮಧೇಯ ಸಾಧ್ವಿಯೊಬ್ಬರು ಪತ್ರವೊಂದನ್ನು ಬರೆದು ಈ ದೇವಮಾನವನ ಬಗ್ಗೆ ಆಘಾತಕಾರಿ ವಿವರಗಳನ್ನು ಪ್ರಕಟಿಸಿ ಮಠದಲ್ಲಿ ಆಗುತ್ತಿದ್ದ ಅತ್ಯಾಚಾರದ ಬಗ್ಗೆ ವಿವರಿಸಿದ್ದರು. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿಗಳು ವಿಚಾರಣೆಗೆ ಆಗ್ರಹಿಸಿದ್ದರು. ವಿಚಾರಣೆಯಲ್ಲಿ ಪಂಚಕುಳ ನ್ಯಾಯಾಯದಲ್ಲಿ ಈ ದೇವಮಾನವ ಹೇಳಿದ್ದೇನು ಗೊತ್ತೇ? ತನಗೆ ದೈಹಿಕವಾಗಿಯಾಗಲೀ ಮಾನಸಿಕವಾಗಿಯಾಗಲೀ, ಅತ್ಯಾಚಾರ ಎಸಗಲು ಸಾಮರ್ಥ್ಯವೇ ಇಲ್ಲ ಎಂದು. ಅಲ್ಲದೇ ಅಧಿಕೃತ ಪ್ರಕಟಣೆಯೊಂದರಲ್ಲಿ ಪ್ರಕಟಿಸಿದ ಪ್ರಕಾರ ದೈಹಿಕ ಸಂಪರ್ಕ ಬೆಳೆಸಲು ಈತ ಸಮರ್ಥನೇ ಅಲ್ಲ.

2012ರಲ್ಲಿ ಈತನ ವಿರುದ್ಧ ನ್ಯಾಯಾಲಯದಲ್ಲಿ ದಾವೆ

2012ರಲ್ಲಿ ಈತನ ವಿರುದ್ಧ ನ್ಯಾಯಾಲಯದಲ್ಲಿ ದಾವೆ

ಈತನನ್ನು ಅನುಸರಿಸುವ ಭಕ್ತವೃಂದ ಎಷ್ಟೊಂದು ಈತನ ಮಾತನ್ನು ಕೇಳುತ್ತಿದ್ದರೆಂದರೆ ತಮ್ಮ ಗುರುವಿಗೆ ಇಲ್ಲದ ಶಕ್ತಿ ತಮಗೂ ಬೇಡವೆಂದು ಮಾನಸಿಕವಾಗಿ ಸಿದ್ಧರಿದ್ದರು. ಅಂದರೆ ತಾವೇ ಸ್ವತಃ ನಿರ್ವೀರ್ಯಗೊಳ್ಳಲು ಸುಮಾರು ನಾನೂರು ಪುರುಷರು ತಯಾರಾಗಿದ್ದರು. ಅಂತೆಯೇ ನಿರ್ವೀರ್ಯಗೊಂಡ ಈ ನಾನೂರು ಪುರುಷರು ಈತನ ಗುಲಾಮರಾಗಿ ಹೋದರು. ಆದರೆ 2012ರಲ್ಲಿ ಇವರಲ್ಲೊಬ್ಬರಿಗೆ ತಾವು ಮೋಸ ಹೋದ ಅರಿವಾಗಿ ಈ ದೇವಮಾನವನ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಇದಕ್ಕೂ ಮುನ್ನ ಸುಮಾರು ಹದಿನಾಲ್ಕು ವರ್ಷ ಈ ವ್ಯಕ್ತಿ ಗುರುವಿನ ಅಪ್ಪಟ ಅಭಿಮಾನಿ ಹಾಗೂ ಶಿಷ್ಯರಾಗಿದ್ದರು.

ಈತನ ಹೆಸರು ಗಿನ್ನೆಸ್ ದಾಖಲೆಯಲ್ಲಿಯೂ ಇದೆ

ಈತನ ಹೆಸರು ಗಿನ್ನೆಸ್ ದಾಖಲೆಯಲ್ಲಿಯೂ ಇದೆ

ಈತನ ಹೆಸರಿನಲ್ಲಿ ಒಟ್ಟು ಹದಿನಾರು ದಾಖಲೆಗಳು ಗಿನ್ನೆಸ್ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಇವುಗಳಲ್ಲಿ ವಿಶ್ವದ ಅತಿ ದೊಡ್ಡ ಬೆರಳಿನಿಂದ ಬಿಡಿಸಿದ ಚಿತ್ರ, ತರಕಾರಿಗಳಿಂದ ನಿರ್ಮಿಸಿದ ಅತಿದೊಡ್ಡ ಕಲಾಕೃತಿ, ಅತಿ ಹೆಚ್ಚು ಜನರು ತಮ್ಮ ಕೈಗಳನ್ನು ಸ್ವಚ್ಛಗೊಳಿಸುವ ದಾಖಲೆ, ವಿಶ್ವದ ಅತಿ ದೊಡ್ಡ ರಕ್ತದ ಬಿಂದುವಿನಾಕೃತಿಯ ಜನರ ಗುಂಪು ಇತ್ಯಾದಿಗಳಿವೆ.

ಇವರಿಗೆ ಲಭಿಸಿತ್ತು ವಿವಿಐಪಿ ಪಟ್ಟ

ಇವರಿಗೆ ಲಭಿಸಿತ್ತು ವಿವಿಐಪಿ ಪಟ್ಟ

ಭಾರತದ ಅತಿ ಮುಖ್ಯ ವ್ಯಕ್ತಿಗಳಿಗೆ ಮಾತ್ರವೇ ವಿವಿಐಪಿ ಪಟ್ಟ ದೊರಕುತ್ತದೆ ಹಾಗೂ ಜ಼ೆಡ್ ಹಂತದ ಸುರಕ್ಷತೆಯೂ ದೊರಕುತ್ತದೆ. ಈ ಪಟ್ಟ ದೊರಕಲು ಕಾರಣವೆಂದರೆ ಇವರ ಭಕ್ತರಲ್ಲಿ ಹರ್ಯಾನಾ, ಪಂಜಾಬ್ ಮತ್ತು ರಾಜಸ್ಥಾನದ ಪ್ರಮುಖ ರಾಜಕೀಯ ವ್ಯಕ್ತಿಗಳೂ ಸೇರಿರುವುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿಯೂ ಜನಪ್ರಿಯತೆ

ಸಾಮಾಜಿಕ ಜಾಲತಾಣದಲ್ಲಿಯೂ ಜನಪ್ರಿಯತೆ

ಇವರನ್ನು ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಸಾಮಾಜಿಕ ಜಾಲತಾಣದಲ್ಲಿ ಹಿಂಬಾಲಿಸುತ್ತಾರೆ. ಟ್ವಿಟರ್‌ನಲ್ಲಿ 37.4 ಲಕ್ಷ ಹಿಂಬಾಲಕರಿದ್ದಾರೆ. ಈ ಸಂಖ್ಯೆ ಶ್ರೀ ಶ್ರೀ ರವಿಶಂಕರ್ (22.6 ಲಕ್ಷ), ಯೋಗ ಗುರು ರಾಮದೇವ್ (938 ಸಾವಿರ) ಕ್ಕಿಂತಲೂ ಹೆಚ್ಚು. ಫೇಸ್ ಬುಕ್‌ನಲ್ಲಿ ಇವರಿಗೆ 683,192 ಹಿಂಬಾಲಕರಿದ್ದಾರೆ ಹಾಗೂ 673,278 ಜನರು ಇವರನ್ನು ಇಷ್ಟ ಎಂಬ ಹೆಬ್ಬೆಟ್ಟನ್ನು ಒತ್ತಿದ್ದಾರೆ.

ಇವರ ಆಶ್ರಮದಲ್ಲಿ ಕಾರುಗಳನ್ನು ವೈಭವಗೊಳಿಸುವ ಸ್ಟುಡಿಯೋ ಇದೆ

ಇವರ ಆಶ್ರಮದಲ್ಲಿ ಕಾರುಗಳನ್ನು ವೈಭವಗೊಳಿಸುವ ಸ್ಟುಡಿಯೋ ಇದೆ

ಇವರ ಆಶ್ರಮದ ಆವರಣದಲ್ಲಿ ಹಳೆಯ ಕಾರುಗಳಿಗೆ ಮರುಜೀವ ನೀಡುವ ಗ್ಯಾರೇಜೊಂದಿದ್ದು ಅಪಘಾತದಲ್ಲಿ ನುಜ್ಜುಗುಜ್ಜಾಗಿದ್ದರೂ ಮತ್ತೆ ಮೊದಲಿನ ರೂಪ ಪಡೆಯುವಂತೆ ಮಾಡಲಾಗುತ್ತದೆ. ಇವರ ಬಳಿ ಒಂದಲ್ಲ, ಎರಡಲ್ಲ, ಡಜನ್ನುಗಟ್ಟಲೇ ಲಕ್ಷುರಿ ಕಾರುಗಳಿವೆ. ಇವುಗಳಲ್ಲಿ ಕೆಲವು ಭಾರತದಲ್ಲಿ ಕಾಣಬರುವುದೇ ಇಲ್ಲವೆನ್ನುವಷ್ಟು ಅಪರೂಪದ್ದಾಗಿವೆ.

English summary

Gurmeet Ram Rahim’s Lavish Lifestyle & Facts Revealed

There is a lot of chaos and turbulence that is happening in Panchkula these days and all thanks to the self-proclaimed god 'Guru Ram Rahim Singh'. From pre-planned violence attacks to people getting killed, the situation is turning worse each day, as his followers are creating chaos and going berserk. By now, the entire nation knowns who 'Guru Ram Rahim Singh' is. From being a Dera chief to a movie actor, a singer, a writer, director, and a social reformer, he has been in the news of late. Check out on some of the untold facts about this self-proclaimed God.
X
Desktop Bottom Promotion