ನಿಮ್ಮ ಬೆರಳನ್ನು ನೋಡಿಯೂ ಭವಿಷ್ಯ ಅರಿಯಬಹುದು!

By: Divya
Subscribe to Boldsky

ನಮ್ಮ ದೇಹದ ಅಂಗಾಂಗಳು ನೋಡಲು ಒಂದೇ ಬಗೆಯಲ್ಲಿದ್ದಂತೆ ಕಂಡರೂ ಕೊಂಚ ವ್ಯತ್ಯಾಸಗಳಿರುತ್ತವೆ. ಈ ವಿಭಿನ್ನತೆಯ ಆಧಾರದ ಮೇಲೆ ನಮ್ಮ ಅದೃಷ್ಟವನ್ನು ಹೇಳಲಾಗುತ್ತದೆ ಎನ್ನುವುದನ್ನು ಕೇಳಿದ್ದೇವೆ. ಅದೇ ಅವು ಭವಿಷ್ಯ ನುಡಿಯುತ್ತವೆ ಎಂದರೆ ವಿಚಿತ್ರ ಎನಿಸುವುದು..ಅಲ್ಲವೇ? ಆದರೆ ಇದು ಸುಳ್ಳಲ್ಲ ಸತ್ಯ.

ದೇಹದ ವೈಶಿಷ್ಟ್ಯಗಳು ನಮ್ಮ ವ್ಯಕ್ತಿತ್ವ ಹಾಗೂ ಸ್ವಭಾವದ ಬಗ್ಗೆ ಭವಿಷ್ಯ ನುಡಿಯುತ್ತವೆ ಎಂದರೆ ಅದೊಂದು ಬಗೆಯ ರೋಮಾಂಚನಕಾರಿ ವಿಷಯ ಎನಿಸುವುದು. ಹಸ್ತ ಮುದ್ರಿಕ ತಜ್ಞರ ಪ್ರಕಾರ ನಮ್ಮ ಅಂಗೈಯಲ್ಲಿರುವ ಬೆರಳುಗಳ ಉದ್ದಳತೆಯು ನಮ್ಮ ಸ್ವಭಾವವನ್ನು ಸೂಚಿಸುತ್ತದೆ ಎನ್ನುತ್ತಾರೆ. ಈ ವಿಚಾರವಾಗಿ ನಿಮಗೂ ನಿಮ್ಮ ಸ್ವಭಾವದ ಬಗ್ಗೆ ಅರಿಯಬೇಕಾದರೆ ನಿಮ್ಮ ಕೈಗಳನ್ನು ನೋಡಿ, ಇಲ್ಲಿರುವ ಮಾಹಿತಿಗಳು ತಿಳಿಯಿರಿ....

ಬಗೆ-1

ಬಗೆ-1

ಹಸ್ತ ಮುದ್ರಿಕೆಯಲ್ಲಿ ತೋರು ಬೆರಳಿಗೆ ಹೆಚ್ಚಿನ ಮಹತ್ವವಿದೆ. ಈ ವಿದ್ಯೆಯಲ್ಲಿ ಪಾರಾಂಗತರಾದವರು ಹಸ್ತಗಳ ರೇಖೆಗಳ ಜೊತೆಗೇ ಬೆರಳುಗಳ ಉದ್ದ ಮತ್ತು ಆಕಾರವನ್ನು ನೋಡಿಯೇ ಆ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ತಿಳಿಸುತ್ತಾರೆ.

ಬಗೆ-2

ಬಗೆ-2

ನಿಮ್ಮ ತೋರು ಬೆರಳು ಮಧ್ಯ ಬೆರಳಿಗೆ ಸಮಾನವಾಗಿದ್ದರೆ, ನೀವು ಡೋಮಿನೇಟಿಂಗ್(ಇತರರ ಮೇಲೆ ನಿಯಂತ್ರಣ ಸಾಧಿಸುವ) ವ್ಯಕ್ತಿತ್ವದವರಾಗಿರುತ್ತೀರಿ. ಅಲ್ಲದೆ ಸ್ವಲ್ಪ ಜಂಬದ ಸ್ವಭಾವ ಎಂತಲೂ ಹೇಳಬಹುದು.

ಬಗೆ-3

ಬಗೆ-3

ತೋರು ಬೆರಳು ಸಾಮಾನ್ಯ ಅಳತೆಗಿಂತ ಅತಿ ಚಿಕ್ಕದಾಗಿದ್ದರೆ, ಹೆಚ್ಚು ಮಹತ್ವಕಾಂಕ್ಷೆ ಹೊಂದಿರದ ವ್ಯಕ್ತಿಗಳಾಗಿರುತ್ತಾರೆ. ಯಾವುದೇ ಹೊಸ ವಿಚಾರಗಳಿಗೆ ಸಂತಸ ಪಡುವ ವ್ಯಕ್ತಿತ್ವ ಇವರದ್ದಾಗಿರುವುದಿಲ್ಲ.

ಬಗೆ-4

ಬಗೆ-4

ತೋರು ಬೆರಳು ಮಧ್ಯ ಬೆರಳಿಗಿಂತ ಉದ್ದವಿದ್ದರೆ, ತುಂಬಾ ಇಗೋ (ಅಹಂಕಾರ) ಹೊಂದಿರುವ ವ್ಯಕ್ತಿತ್ವದವರಾಗಿರುತ್ತಾರೆ. ಜೊತೆಗೆ ಇತರರಿಗಿಂತ ತಾನೇ ಶ್ರೇಷ್ಠ ಎನ್ನುವ ಭಾವನೆಯನ್ನು ತಳೆದಿರುತ್ತಾರೆ.

ಬಗೆ-5

ಬಗೆ-5

ತೋರು ಬೆರಳು ಉಂಗುರ ಬೆರಳಿಗಿಂತ ಉದ್ದವಿದ್ದರೆ, ನೀವು ಬಹಳ ಮಹತ್ವಕಾಂಕ್ಷಿ ವ್ಯಕ್ತಿತ್ವದವರು ಎನ್ನಬಹುದು. ಕೆಲಸದಲ್ಲಿ ಉಂಟಾಗುವ ಬದಲಾವಣೆ ವಿಚಾರವನ್ನು ಹೆಚ್ಚು ಆಶ್ಚರ್ಯಕರ ರೀತಿ ಎನ್ನುವಂತೆ ವರ್ತಿಸುವಿರಿ.

ಬಗೆ-6

ಬಗೆ-6

ಕಿರುಬೆರಳಿನ ಉದ್ದ ತೋರು ಬೆರಳಿನ ಉಗುರಿನ ಮಟ್ಟಕ್ಕೆ ಇದ್ದರೆ, ಅಂತಹವರು ಒಳ್ಳೆಯ ಬರಹಗಾರರು ಮತ್ತು ಕಲಾವಿದರಾಗಿರುತ್ತಾರೆ.

ಬಗೆ-7

ಬಗೆ-7

ಉಂಗುರ ಬೆರಳಿಗಿಂತ ತೋರು ಬೆರೆಳು ಚಿಕ್ಕದಾಗಿದ್ದರೆ, ಅಂತಹವರು ಎಲ್ಲಾ ಸಂದರ್ಭದಲ್ಲೂ ಶಾಂತ ಮತ್ತು ತಾಳ್ಮೆಯ ಸ್ವಭಾವವನ್ನು ತೋರುತ್ತಾರೆ.

ಬಗೆ-8

ಬಗೆ-8

ಕಿರುಬೆರಳಿನ ಉದ್ದ ಮತ್ತು ತೋರು ಬೆರಳಿನ ಉದ್ದ ಸಮನಾದ ಅಳತೆಯನ್ನು ಹೊಂದಿದ್ದರೆ, ಅಂತಹವರು ಉತ್ತಮ ಆಲೋಚನಾ ಶಕ್ತಿ ಹೊಂದಿರುವವರು ಮತ್ತು ಉತ್ತಮ ರಾಜಕಾರಣಿಗಳಾಗಿರುತ್ತಾರೆ.

ಬಗೆ-9

ಬಗೆ-9

ತೋರು ಬೆರಳು ಕಿರು ಬೆರಳಿನ ಉದ್ದಕ್ಕಿಂತ ಚಿಕ್ಕದಾಗಿದ್ದರೆ, ಅಂತಹವರು ನತದೃಷ್ಟವಂತರು ಎನ್ನಲಾಗುತ್ತದೆ.

English summary

Find Out Personality Type & Nature By Just Looking At Their Fingers!

Look at your hands, for example. The length of your fingers can tell a lot about your nature. According to palmistry experts, the shape and length of your index finger with respect to the other fingers, is the key.
Story first published: Tuesday, June 13, 2017, 23:40 [IST]
Subscribe Newsletter