ಮಕ್ಕಳಾಗಲಿಲ್ಲವೇ? ಹಾಗಾದರೆ ಅಂಗೈ ನೋಡಿಕೊಳ್ಳಿ!

Posted By: Lekhaka
Subscribe to Boldsky

ಮನಸ್ಸು ಅನೇಕ ವಿಚಾರಗಳನ್ನು ಬಯಸುತ್ತದೆ. ಆದರೆ ಕೆಲವನ್ನು ಮಾತ್ರ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜೀವನವೇ ಹಾಗೆ ಅಲ್ಲವೇ? ಬಯಸಿದ್ದೆಲ್ಲಾ ಸಿಗುವಂತಿದ್ದಿದ್ದರೆ ಆ ಬಯಕೆಗಳಿಗೆ ಬೆಲೆಯೇ ಇರುತ್ತಿರಲಿಲ್ಲ...ಕೆಲವು ಬಾರಿ ಅಂದು ಕೊಂಡಿದ್ದು ನಮಗೆ ದೊರೆತರೆ ಆ ಖುಷಿಯ ಪರಿಯೇ ಬೇರೆ. ನಮ್ಮ ಜೀವನದ ಆಗು ಹೋಗುಗಳೆಲ್ಲವೂ ನಮ್ಮ ಕೈಗಳಲ್ಲಿ ಇರುವುದಿಲ್ಲ. ನಾವೇನಿದ್ದರೂ ಪಾತ್ರಧಾರಿಗಳು. ನಮ್ಮನ್ನು ಆಡಿಸುವ ಸೂತ್ರಧಾರಿ ನಮ್ಮ ಕುಂಡಲಿ ಹಾಗೂ ರಾಶಿಚಕ್ರಗಳು.

2018ರಲ್ಲಿ ಗ್ರಹಗಳು ತಮ್ಮ ಮನೆಯನ್ನು ಬದಲಾಯಿಸುತ್ತವೆ. ಅದರ ಅನ್ವಯದಂತೆ ನಮ್ಮ ಜೀವನದಲ್ಲಿ ಕೆಲವು ಬದಲಾವಣೆಗಳು ಅಥವಾ ಪರಿಸ್ಥಿತಿಗಳು ಬದಲಾಗುವ ಸಾಧ್ಯತೆಗಳಿವೆ. ಹಾಗಾದರೆ 2018ರಲ್ಲಿ ನಿಮ್ಮ ಯಾವೆಲ್ಲಾ ಅಭಿಲಾಷೆಗಳು ಪೂರ್ಣಗೊಳ್ಳಲಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಈ ಮುಂದೆ ವಿವರಿಸಿರುವ ರಾಶಿಚಕ್ರದ ವಿವರಣೆಯನ್ನು ಪರಿಶೀಲಿಸಿ.

ಮಹಿಳೆಯರಲ್ಲಿ ಫಲವತ್ತತೆ

ಮಹಿಳೆಯರಲ್ಲಿ ಫಲವತ್ತತೆ

ಶುಕ್ರನ ಆರೋಹಣದ ಸುತ್ತಲು ಕೆಲವೊಂದು ಗುರುತುಗಳು ಇರುವುದು. ಇದು ವ್ಯಕ್ತಿಯ ಲೈಂಗಿಕ ಮತ್ತು ಕೌಟುಂಬಿಕ ಬದುಕನ್ನು ಸೂಚಿಸುವುದು. ಇದನ್ನು `ಸಂತತಿ' ಎಂದು ಕರೆಯಲಾಗುವುದು. ಶುಕ್ರನ ಆರೋಹಣದ ಸುತ್ತಲು ಅಥವಾ ಕೆಳಗಡೆ ಅಥವಾ ಒಳಗಡೆ ಎಲ್ಲಾದರೂ ಇದನ್ನು ನೀವು ಕಾಣಬಹುದು.

ಮಹಿಳೆಯರ ಅಂಗೈಯಲ್ಲಿರುವ ಗುರುತುಗಳು

ಮಹಿಳೆಯರ ಅಂಗೈಯಲ್ಲಿರುವ ಗುರುತುಗಳು

ಹಸ್ತಸಾಮುದ್ರಿಕ ಶಾಸ್ತ್ರಜ್ಞರ ಪ್ರಕಾರ ಫಲವತ್ತತೆಯ ಗುರುತುಗಳಿಗೆ ಮಹಿಳೆಯರು ಹಾಗೂ ಪುರುಷರಲ್ಲಿ ತುಂಬಾ ಭಿನ್ನವಾದ ವ್ಯಾಖ್ಯಾನಗಳು ಇವೆ. ಶುಕ್ರನ ಆರೋಹಣವು ಫಲವತ್ತತೆ ಮಟ್ಟದ ಬಗ್ಗೆ ಸಾಕಷ್ಟು ಹೇಳುತ್ತದೆ. ಸಂತತಿ ನಾಶ ಮತ್ತು ಮಹಿಳೆಯರಲ್ಲಿ ಹೆಚ್ಚಿನದನ್ನು ಹೇಳುತ್ತದೆ.

ಈ ಗುರುತುಗಳು ಇದ್ದರೆ....

ಈ ಗುರುತುಗಳು ಇದ್ದರೆ....

ಶುಕ್ರನ ಆರೋಹಣದಲ್ಲಿ ಬಲೆಯಾಕಾರದ ಗುರುತುಗಳು ಇದ್ದರೆ ಆಗ ಇದು ಮಹಿಳೆಯು ಯಾವತ್ತಾದರೂ ತನ್ನ ಜೀವನದಲ್ಲಿ ಗರ್ಭಪಾತಕ್ಕೆ ಒಳಗಾಗುವಳು ಎನ್ನುವ ಸೂಚನೆಯಾಗಿದೆ. ಇದು ನಡೆಯುವಂತಹ ಸಾಧ್ಯತೆ ಹೆಚ್ಚಾಗಿದೆ.

ಕೈಬಲೆ ಗೆರೆಯಲ್ಲಿ ಗುರುತುಗಳು 1

ಕೈಬಲೆ ಗೆರೆಯಲ್ಲಿ ಗುರುತುಗಳು 1

ಕೈಬಲೆ ಗೆರೆಗಳು ದ್ವೀಪವನ್ನು ಸೂಚಿಸಿದರೆ, ಅದು ಮೇಲ್ಭಾಗಕ್ಕೆ ನೋಡುತ್ತಿದ್ದರೆ ಮತ್ತು ಚಿತ್ರದಲ್ಲಿ ತೋರಿಸಿರುವಂತೆ ಶುಕ್ರನ ಆರೋಹಣದ ಕೆಳಗಡೆಯಿದ್ದರೆ ಆಗ ಇದು ಸಂತತಿ ನಾಶದ ಚಿಹ್ನೆಯಾಗಿದೆ.

ಕೈಬಲೆ ಗೆರೆಯಲ್ಲಿ ಗುರುತುಗಳು 2

ಕೈಬಲೆ ಗೆರೆಯಲ್ಲಿ ಗುರುತುಗಳು 2

ಕೈಬಲೆಗೆ ಗೆರೆಯು ವಕ್ರವಾಗಿದ್ದು, ಶುಕ್ರನ ಆರೋಹಣದ ಒಳಮುಖವಾಗಿ ಎದುರಿಸುತ್ತಿದ್ದರೆ(ಚಿತ್ರದಲ್ಲಿ ಇರುವಂತೆ) ಇಂತಹ ಚಿಹ್ನೆಗಳು ಇರುವಂತಹ ಮಹಿಳೆಯರು ಗರ್ಭಧರಿಸಲು ಸಮಸ್ಯೆಗಳನ್ನು ಎದುರಿಸುವರು ಮತ್ತು ಜೀವನದಲ್ಲಿ ತುಂಬಾ ವಯಸ್ಸಾದ ಬಳಿಕ ಮಕ್ಕಳನ್ನು ಪಡೆಯುವರು.

 ಜೀವಗೆರೆಯ ಮೇಲೆ ಗುರುತುಗಳು

ಜೀವಗೆರೆಯ ಮೇಲೆ ಗುರುತುಗಳು

ಮಹಿಳೆಯು ಜೀವಗೆರೆಯ ಭಾಗವಾಗಿ ಅದು ಒಡೆದು ಹೋಗುತ್ತಾ ಶುಕ್ರನ ಆರೋಹಣದ ಕಡೆ ಸಾಗುತ್ತಿದ್ದರೆ ಆಕೆಗೆ ಫಲವತ್ತತೆ ಬಗ್ಗೆ ಸಮಸ್ಯೆಯಾಗಬಹುದು, ಗರ್ಭಕೋಶ ಮತ್ತು ಮೂತ್ರಕೋಶದ ಸೋಂಕಿನ ಸಮಸ್ಯೆ ಎದುರಿಸಬಹುದು.

ಇತರ ಗುರುತುಗಳು

ಇತರ ಗುರುತುಗಳು

ಇದೆಲ್ಲವನ್ನು ಹೊರತುಪಡಿಸಿ ಇತರ ಕೆಲವೊಂದು ಗುರುತುಗಳು ಕೂಡ ಇದೆ. ಇವುಗಳು ಸಂತತಿ ಮತ್ತು ಲೈಂಗಿಕ ಸಮಸ್ಯೆಗಳ ಬಗ್ಗೆ ವಿವರಿಸುತ್ತದೆ. ಮಹಿಳೆಯ ಕಿರುಬೆರಳಿನಿಂದ ಸಾಗುವ ಗೆರೆಯು ಮಧ್ಯದ ಬೆರಳಿನ ತನಕವಿದ್ದರೆ ಅಪಘಾತ ಮತ್ತು ಸಂತಾನಹೀನತೆಯ ಸಮಸ್ಯೆಯಾಗಬಹುದು.

ಈ ಸ್ಥಾನದಲ್ಲಿ X ಗುರುತು

ಈ ಸ್ಥಾನದಲ್ಲಿ X ಗುರುತು

ಮಧ್ಯದ ಬೆರಳು ಮತ್ತು ನಾಲ್ಕನೇ ಬೆರಳಿನ ಮಧ್ಯೆ x ಗುರುತು ಕಾಣಿಸಿದರೆ ಆಗ ಇದು ಸಂತಾನಹೀನತೆಯ ಚಿಹ್ನೆಯಾಗಿದೆ.

ಪುರುಷರಿಗೆ ಫಲವತ್ತತೆ ಗೆರೆಗಳು

ಪುರುಷರಿಗೆ ಫಲವತ್ತತೆ ಗೆರೆಗಳು

ಪುರುಷರ ಅಂಗೈಯಲ್ಲಿ ಇರುವ ಈ ಗುರುತುಗಳು ಅವರ ಲೈಂಗಿಕ ಜೀವನದ ಸಮಸ್ಯೆ ಮತ್ತು ಸಂತತಿ ಅವರ ಕೊಡುಗೆಯ ಬಗ್ಗೆ ಹೇಳುತ್ತದೆ.

 ಈ ಸ್ಥಾನದಲ್ಲಿ x ಗುರುತು

ಈ ಸ್ಥಾನದಲ್ಲಿ x ಗುರುತು

ಶುಕ್ರನ ಆರೋಹಣದಲ್ಲಿ x ಗುರುತು ಕಾಣಿಸಿಕೊಂಡರೆ ಆಗ ಇದನ್ನು ಕಾಮಾಸಕ್ತಿಯ ಕೊರತೆ, ವೀರ್ಯ ಗಣತಿ ಕಡಿಮೆಯಿರುವುದು ಮತ್ತು ಜನನೇಂದ್ರೀಯ ಗ್ರಂಥಿಗಳಿಗೆ ಸಂಬಂಧಿಸಿದ ರೋಗಗಳು ಬರುವ ಸಾಧ್ಯತೆಯಿದೆ ಎನ್ನುವ ಚಿಹ್ನೆಯಾಗಿದೆ.

ಜೀವಗೆರೆಯು ಅತಿಕ್ರಮಿಸುತ್ತಿದ್ದರೆ....

ಜೀವಗೆರೆಯು ಅತಿಕ್ರಮಿಸುತ್ತಿದ್ದರೆ....

ಪುರುಷರಲ್ಲಿ ಜೀವಗೆರೆಯು ಶುಕ್ರನ ಆರೋಹಣವನ್ನು ಅತಿಕ್ರಮಿಸುತ್ತಾ ಇದ್ದರೆ, ಇದು ಹೆಬ್ಬೆರಳಿನ ಕೆಳಗಿನಿಂದ ಆರಂಭವಾಗಿ ವಕ್ರವಾಗಿ ಮೊಣಕೈ ತನಕ ಸಾಗುವುದು(ಚಿತ್ರದಲ್ಲಿ ತೋರಿಸಿರುವಂತೆ) ಇದು ನಪುಂಸಕತೆ ಮತ್ತು ಲೈಂಗಿಕ ಸಮಸ್ಯೆಯ ಚಿಹ್ನೆಯಾಗಿದೆ.

English summary

Facing Pregnancy Issues? Then, Blame Your Palm Lines!

There are so many palm lines that reveal a lot about our fate and destiny. According to palmistry, most of these lines change over a period of time and so does the fate of the person. Do you know that the fertility of a person can also be judged based on the person's lines that are present on the palm? Well, according to palmistry, different lines in both men and women reveal about their fertility level. Check out for these lines on your palm and know about your fertility levels.