ಆಡು ಮುಟ್ಟದ ಸೊಪ್ಪಿಲ್ಲ, ಮನುಷ್ಯ ತಿನ್ನದ ಆಹಾರವಿಲ್ಲ!

By: manu
Subscribe to Boldsky

ಚೀನಾ ದೇಶದ ನಾಗರಿಕರ ಬಗ್ಗೆ ಇತರರು ವ್ಯಂಗ್ಯವಾಡುವ ಮಾತೊಂದಿದೆ. ಚೀನೀಯರು ಎರಡು ಕಾಲುಗಳಲ್ಲಿ ಮನುಷ್ಯರನ್ನು ನಾಲ್ಕು ಕಾಲುಗಳಿರುವಲ್ಲಿ ಮಂಚವನ್ನು ತಿನ್ನುವುದಿಲ್ಲವಂತೆ, ಮತ್ತೆಲ್ಲವನ್ನೂ ತಿನ್ನುತ್ತಾರಂತೆ! ವಾಸ್ತವವಾಗಿ ಮನುಷ್ಯರು ತಿನ್ನಬಹುದಾದ ವಸ್ತುಗಳನ್ನು ಪಟ್ಟಿ ಮಾಡಿದರೆ ಈ ಜಗತ್ತಿನಲ್ಲಿ ತಿನ್ನದೇ ಉಳಿದಿರುವ ಪದಾರ್ಥವೇ ಇಲ್ಲ ಎನ್ನಬಹುದು. ಹಸಿಮೀನಿನಿಂದ ತೊಡಗಿ ಹಾವು, ಗರಿಗರಿಯಾದ ಕೀಟ, ಅಣಬೆ, ಎಲೆ ಚಿಗುರು, ಬಿದಿರಿನ ಹೊಸ ಗೂಟ, ಹೂವು, ಹಣ್ಣು, ಮರದ ತೊಗಟೆ, ಪ್ರಾಣಿಗಳ ಚರ್ಮ, ಇಂತಹ ಹಲವಾರು ವಸ್ತುಗಳನ್ನು ತಿನ್ನುವ ಮೂಲಕ ವಿಶ್ವದ ಅತಿ ವೈವಿಧ್ಯತೆಯ ಆಹಾರ ಸ್ವೀಕರಿಸುವ ಪ್ರಾಣಿಯಾಗಿದ್ದಾನೆ. 

ಮೈಯಲ್ಲಿ ನಡುಕ ಹುಟ್ಟಿಸುವ ವಿಲಕ್ಷಣ ಆಹಾರ ಪದ್ಧತಿ

ವಿಶ್ವಸಂಸ್ಥೆಯೇ ಇತ್ತೀಚಿಗೆ ಹೊರಡಿಸಿದ ಸಲಹೆ ಇಂತಿದೆ: ಕೀಟಗಳನ್ನು ಹೆಚ್ಚು ಭಕ್ಷಿಸಿ! ಕೀಟಗಳನ್ನು ಆಹಾರರೂಪದಲ್ಲಿ ಸೇವಿಸುವಂತೆ ಯಾವಾಗ ವಿಶ್ವಸಂಸ್ಥೆಯೇ ಕರೆನೀಡಿತೋ, ಅದುವರೆಗೆ ಕದ್ದು ಮುಚ್ಚಿ ಕೀಟಗಳನ್ನು ಹುರಿದು ಸವಿಯುತ್ತಿದ್ದವರು ಈ ಅವಕಾಶವನ್ನು ಹಣವನ್ನಾಗಿ ಪರಿವರ್ತಿಸಲು ತಡಬಡಿಸಿ ಎದ್ದಿದ್ದಾರೆ. 

ಇಂತಹ ಚಿತ್ರ ವಿಚಿತ್ರ ಐಷಾರಾಮಿ ಹೋಟೆಲ್‌ಗೆ ಬೆರಗಾಗಲೇಬೇಕು!

ಪರಿಣಾಮವಾಗಿ ಹಲವು ಹೋಟೆಲುಗಳ ಮೆನು ಕಾರ್ಡುಗಳಲ್ಲಿ ಹೊಸರುಚಿಗಳು ಬಂದಿವೆ. ಉದಾಹರಣೆಗೆ ಗಬ್ಬುನಾತದ ಹುಳದ ಫ್ರೈ, ಎರೆಹುಳದ ಶ್ಯಾವಿಗೆ, ಮರಹುಳದ ಸ್ಯಾಂಡ್ವಿಚ್ ಇತ್ಯಾದಿ. ಇಂದಿನ ಲೇಖನದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ದೊರಕುತ್ತಿರುವ ಇಂತಹ ಕೆಲವು ಹೊಸರುಚಿಗಳ ಬಗ್ಗೆ ವಿವರಿಸಲಾಗಿದ್ದು ಈ ಆಹಾರಗಳು ಸ್ವಾದಿಷ್ಟವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿದೆ...

ಸ್ಟಿಂಕ್ ಬಗ್ಸ್

ಸ್ಟಿಂಕ್ ಬಗ್ಸ್

ಗಬ್ಬುನಾತದ ಹುಳವನ್ನು ಹಿಡಿದಾಗ ಇದು ಸೂಸುವ ಗಬ್ಬುನಾತದ ಪರಿಣಾಮವಾಗಿ ಇವನ್ನು ಎಸೆಯುವವರೇ ಹೆಚ್ಚು. ಈ ವಾಸನೆಗೆ ಐಯೋಡಿನ್ ಕಾರಣ. ಈ ಕೀಟಗಳು ಆತ್ಮರಕ್ಷಣೆಗೆ ಐಯೋಡಿನ್ ಅನ್ನು ತಮ್ಮ ದೇಹದಿಂದ ವಿಸರ್ಜಿಸುತ್ತವೆ. ಆದರೆ ಈ ಆತ್ಮರಕ್ಷಣೆಯ ವಿಧಾನವೇ ಇವುಗಳಿಗೆ ಮುಳುವಾಗಿದೆ. ಈ ವಾಸನೆ ಇರುವ ಹುಳಗಳನ್ನು ವಾಸನೆ ಬರದೇ ಇರಲು ಸೇಬಿನ ರುಚಿ ಸೇರಿಸಿ ಫ್ರೈ ಮಾಡಿ ತಿಂದರೆ ಕೆಲವಾರು ರೋಗಗಳು ಗುಣವಾಗುತ್ತವೆ ಎಂದು ಪ್ರಚಾರ ಮಾಡಲಾಗುತ್ತಿದೆ.

ಮಿಡತೆ, ಚಿಮ್ಮುಂಡಿ ಹಾಗೂ ಶಲಭ

ಮಿಡತೆ, ಚಿಮ್ಮುಂಡಿ ಹಾಗೂ ಶಲಭ

ಮಿಡತೆ ಹಾಗೂ ಮಿಡತೆಯನ್ನೇ ಹೋಲುವ ಶಲಭ (ಇದರ ಆಕಾರವನ್ನೇ ಪರಿಗಣಿಸಿ ಶಲಭಾಸನ ಎಂಬ ಯೋಗಾಸನವೂ ಇದೆ) ಹಾಗೂ ರಾತ್ರಿಯಾಗುತ್ತಿದ್ದಂತೆ ಟ್ರರ್ರ್ರ್..ಟ್ರರ್ರ್.. ಎಂಬ ಶಬ್ದ ಹೊರಡಿಸುವ ಚಿಮ್ಮುಂಡಿ (chirping cricket) ಕೀಟಗಳು ಈಗ ಹೋಟೆಲಿನ ತಟ್ಟೆಗಳ ಮೇಲಿನ ದುಬಾರಿ ಖಾದ್ಯಗಳಾಗಿ ಪರಿಗಣಿಸಲ್ಪಡುತ್ತಿವೆ. ಅದರಲ್ಲೂ ಶಲಭಗಳು ದೊಡ್ಡ ಗುಂಪಿನಲ್ಲಿ ಮೋಡದಂತೆ ಹೊಲದ ಮೇಲೆ ಧಾಳಿಇಟ್ಟು ಕೆಲವೇ ನಿಮಿಷಗಳಲ್ಲಿ ರೈತನ ತಿಂಗಳುಗಳ ಪರಿಶ್ರಮದ ಬೆಳೆಯನ್ನು ತಿಂದು ಮತ್ತೆ ಮೋಡದಂತೆ ಹಾರಿ ಹೋಗುತ್ತವೆ. ಹೀಗೆ ಮಾಡುವುದರಿಂದಲಾದರೂ ರೈತರನ್ನು ಆತ್ಮಹತ್ಯೆಯಿಂದ ಉಳಿಸುವ ಇರಾದೆ ವಿಶ್ವಸಂಸ್ಥೆಗೆ ಇರಬಹುದೇ?

ಇರುವೆ

ಇರುವೆ

ಇರುವೆಗಳ ಮೊಟ್ಟೆಗಳನ್ನು ಸಾಮಾನ್ಯವಾಗಿ ಕಾಡಿನ ಪರಿಚಯವಿರುವವರೆಲ್ಲರೂ ರುಚಿ ನೋಡಿದ್ದಾರೆ. ಮಲೆನಾಡಿನಲ್ಲಿ ಇದನ್ನು ಚಟ್ನಿ ಮಾಡಿ ತಿನ್ನುತ್ತಾರೆ. ಈ ಚಟ್ನಿಯ ಪೋಷಕಾಂಶಗಳನ್ನು ಅಧ್ಯಯನ ಮಾಡಿದವರಿಗೆ ನೂರು ಗ್ರಾಂ ಕೆಂಪಿರುವೆ ಚಟ್ನಿಯಲ್ಲಿ ಸುಮಾರು ಹದಿನಾಲ್ಕು ಗ್ರಾಂ ಪ್ರೋಟೀನ್ ದೊರಕಿದ್ದು ಇದು ಮೊಟ್ಟೆಗಿಂತಲೂ ಹೆಚ್ಚು ಪೌಷ್ಟಿಕವಾಗಿದೆ. ಸುಮಾರು ನಲವತ್ತೆಂಟು ಗ್ರಾಂ ಕ್ಯಾಲ್ಸಿಯಂ, ಉತ್ತಮ ಪ್ರಮಾಣದ ಕಬ್ಬಿಣ ಹಾಗೂ ಇತರ ಪೋಷಕಾಂಶಗಳಿರುವ ಆಹಾರವಾಗಿದ್ದು ಇದಕ್ಕೆ ಸರಿಸಾಟಿಯೇ ಇಲ್ಲ.

ಜೇನ್ನೊಣ ಮತ್ತು ಕಣಜ

ಜೇನ್ನೊಣ ಮತ್ತು ಕಣಜ

ಕಚ್ಚದ ಜೇನುನೊಣ ಹಾಗೂ ಭಾರೀ ಉರಿಯುಂಟು ಮಾಡುವ ಕಣಜದ ಹುಳಗಳನ್ನೂ ಈ ಕೀಟಪ್ರಿಯರು ಬಿಟ್ಟಿಲ್ಲ. ಇವನ್ನು ಹುರಿದು ತಿನ್ನುವವರು ತಮಗೆ ಹುರಿದ ಶೇಂಗಾಬೀಜ ಅಥವಾ ಬಾದಾಮಿ ತಿಂದಂತೆಯೇ ಅಯಿತು ಎಂದು ತಿಳಿಸುತ್ತಾರೆ. ಅದರಲ್ಲೂ ಕಣಜದ ಹುಳಗಳು ಕೊಂಚ ಹುಳಿಯಾಗಿದ್ದು ಹೆಚ್ಚು ರುಚಿಕರ ಎಂದು ಚಪ್ಪರಿಸುತ್ತಿದ್ದಾರೆ.

ಚಿಟ್ಟೆ ಮತ್ತು ಪತಂಗ

ಚಿಟ್ಟೆ ಮತ್ತು ಪತಂಗ

ಆಫ್ರಿಕಾದಲ್ಲಿ ಈ ಕೀಟಗಳು ಹೆಚ್ಚು ಜನಪ್ರಿಯವಾಗಿದ್ದು ವಿಶೇಷವಾಗಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಕೊರತೆಯನ್ನು ನೀಗಿಸುವ ಆಹಾರವಾಗಿವೆ. ಯಾವಾಗ ಮನೆಯಲ್ಲಿ ಆಹಾರದ ಕೊರತೆ ಇರುತ್ತದೆಯೋ ಆಗ ಇವರು ಚಿಟ್ಟೆ ಮತ್ತು ಪತಂಗಗಳನ್ನು ಹುಡುಕಿಕೊಂಡು ಹೊರಡುತ್ತಾರೆ. ಮೆಕ್ಸಿಕೋದಲ್ಲಂತೂ ಇವುಗಳನ್ನು ಸಂಗ್ರಹಿಸಿ ಕೊಳೆಸಿ ಮೆಸ್ಕಾಲ್ ಎಂಬ ಹೆಸರಿನ ಮದ್ಯವನ್ನೂ ತಯಾರಿಸಿ ಕುಡಿಯುತ್ತಾರೆ.

ಜೀರುಂಡೆ

ಜೀರುಂಡೆ

ಸಾಮಾನ್ಯವಾಗಿ ಸೆಗಣಿಯನ್ನೇ ಆಹಾರವಾಗಿಸಿರುವ ಜೀರುಂಡೆಗಳನ್ನೂ ಈ ಜನರು ಬಿಟ್ಟಿಲ್ಲ. ವಿಶ್ವದಲ್ಲಿ ಅತಿ ಹೆಚ್ಚು ಸಾಮಾನ್ಯವಾಗಿ ತಿನ್ನಲ್ಪಡುವ ಕೀಟವೂ ಜೀರುಂಡೆ. ಇವುಗಳಲ್ಲಿ ನೂರಾರು ಬಗೆಗಳಿದ್ದು ವಿಶೇಷವಾಗಿ ದಕ್ಷಿಣ ಅಮೇರಿಕಾದ ಅಮೆಜಾನ್ ಅರಣ್ಯಗಳಲ್ಲಿ, ಆಫ್ರಿಕಾದ ಹೆಚ್ಚಿನ ಭಾಗಗಳಲ್ಲಿ ಮತ್ತು ಅರಣ್ಯಪ್ರದೇಶ ದಟ್ಟವಿರುವ ಪ್ರದೇಶಗಳಲ್ಲಿ ಇವುಗಳನ್ನು ಹೆಚ್ಚಾಗಿ ಆಹಾರದ ರೂಪದಲ್ಲಿ ಸೇವಿಸಲಾಗುತ್ತದೆ.

English summary

Edible Insects That People Actually Eat!

Humans can just relish anything under the sun and here is a proof of the same! From raw fish to slimy snakes and crispy bugs, humans are known to relish just about anything. A latest recommendation from the United Nations even states: Consume more insects! This is not a joke, guys! People go ahead and describe the taste of insects in a more detailed way like 'Stinkbugs have an apple flavour, and red agave worms are spicy. A bite of tree worm apparently brings pork rinds to mind'. In this article, we have listed down few of the edible insects that people actually eat around the world.
Subscribe Newsletter