ಭವಿಷ್ಯವನ್ನು ಬಿಚ್ಚಿಡುವ ಹಸ್ತ ರೇಖೆಯ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್‌

By: manu
Subscribe to Boldsky

ಹಸ್ತ ಮುದ್ರಿಕೆ ಎಂಬ ವ್ಯಾಪಕ ವಿಷಯದಲ್ಲಿ ತಿಳಿದುಕೊಳ್ಳಲು ಅನೇಕ ವಿಚಾರಗಳಿರುತ್ತವೆ. ಹಸ್ತದಲ್ಲಿರುವ ಪ್ರತಿಯೊಂದು ರೇಖೆ ಹಾಗೂ ಚಿಹ್ನೆಗಳು ತಮ್ಮದೇ ಆದ ವೈಶಿಷ್ಟ್ಯವನ್ನು ಸಾರುತ್ತವೆ. ಕೆಲವು ನಮ್ಮ ಅದೃಷ್ಟವನ್ನು ಹೇಳಿದರೆ ಇನ್ನು ಕೆಲವು ನಮ್ಮ ದೌರ್ಭಾಗ್ಯವನ್ನು ತೋರಿಸಿ ಕೊಡುತ್ತವೆ. 

ಇದು ಅಂಗೈ ನೋಡಿ ಹೇಳುವ ಶಾಸ್ತ್ರ! ನಿಮ್ಮದೂ ತಿಳಿದುಕೊಳ್ಳಿ...

ಒಂದು ಅಂಗೈನಲ್ಲಿರುವಂತೆ ಇನ್ನೊಂದು ಅಂಗೈನಲ್ಲಿ ಅದೇ ಚಿಹ್ನೆಗಳು ಇರುವುದಿಲ್ಲ. ಕೆಲವೊಂದು ಒಂದೇ ಬಗೆಯಲ್ಲಿ ಇರುತ್ತವೆ. ಇಂತಹ ರೇಖೆಗಳು ಯಾವ ಅರ್ಥ ಕೊಡುತ್ತವೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಸಾಮಾನ್ಯವಾಗಿರುತ್ತದೆ. ಇಂತಹ ಕುತೂಹಲವನ್ನು ಹುಟ್ಟಿಸಿ, ವಿಶೇಷ ಸಂಗತಿಯನ್ನು ತೆರೆದಿಡುವ ಕೆಲವು ರೇಖೆಗಳ ಚಿತ್ರದ ಜೊತೆಗೆ ವಿವರಣೆಯನ್ನು ಈ ಕೆಳಗೆ ನೀಡಿದ್ದೇವೆ...

ಯೂನಿಯನ್ ಲೈನ್

ಯೂನಿಯನ್ ಲೈನ್

ಈ ರೇಖೆಯು ಕಿರು ಬೆರಳ ಕೆಳಭಾಗ ಮತ್ತು ಹಸ್ತದ ತುದಿಯಲ್ಲಿ ಕಂಡುಬರುತ್ತದೆ. ಈ ಚಿಕ್ಕದಾದ ಅಡ್ಡ ರೇಖೆ ನಿಕಟ ಸಂಬಂಧಗಳ ಬಗ್ಗೆ ವಿವರಿಸುತ್ತದೆ. ಆದರೆ ಇದು ಪ್ರಣಯದ ವಿಚಾರ ತಿಳಿಸುತ್ತದೆ ಎನ್ನುವುದು ತಪ್ಪು ಕಲ್ಪನೆ.

ಶುಕ್ರ ರೇಖೆ

ಶುಕ್ರ ರೇಖೆ

ಈ ಚಿತ್ರದಲ್ಲಿ ತೋರಿಸಿದಂತೆ, ಉಂಗುರದ ಬೆರಳಿನ ನಡುವೆಯಿಂದ ಪ್ರಾರಂಭವಾಗುವ ಈ ರೇಖೆ ಮಧ್ಯಮ ಮತ್ತು ತೋರುಬೆರಳಿನ ನಡುವೆ ಅಂತ್ಯಗೊಳ್ಳುತ್ತದೆ. ಈ ರೇಖೆಯನ್ನು ಹೊಂದಿದವರು ಭಾವನಾತ್ಮ ಬುದ್ಧಿವಂತಿಕೆ ಮತ್ತು ಕೌಶಲ್ಯತೆಯ ಸಾಮರ್ಥ್ಯ ಹೊಂದಿರುತ್ತಾರೆ ಎಂದು ನಂಬಲಾಗಿದೆ.

ಹಸ್ತರೇಖೆ: ಮಗು ಹುಟ್ಟುವ ಮೊದಲೇ ಭವಿಷ್ಯ ತಿಳಿಯಬಹುದು!

ಸೂರ್ಯ ರೇಖೆ

ಸೂರ್ಯ ರೇಖೆ

ಹಸ್ತ ಮುದ್ರಿಕೆಯಲ್ಲಿ ಇದೊಂದು ಪ್ರಮುಖ ರೇಖೆ ಎಂದು ಪರಿಗಣಿಸಲಾಗಿದೆ. ಉಂಗುರ ಬೆರಳಿನ ಕೆಳಭಾಗದಲ್ಲಿ ಸಮಾಂತರವಾಗಿ ಉದ್ದುದ್ದ ಗೆರೆಗಳನ್ನು ಹೊಂದಿದ್ದರೆ ಇದು ವ್ಯಕ್ತಿಯ ಖ್ಯಾತಿ ಮತ್ತು ಹಗರಣಗಳ ಕುರಿತು ಸೂಚಿಸುತ್ತದೆ. ವ್ಯಕ್ತಿಯು ಅನಗತ್ಯ ತೊಂದರೆಗಳಿಗೆ ಒಳಗಾಗಬಹುದು.

ಪ್ರಯಾಣದ ರೇಖೆ

ಪ್ರಯಾಣದ ರೇಖೆ

ಹಸ್ತದ ಮುಂಭಾಗದ ಅಂಚಿನಲ್ಲಿ ಕಂಡುಬರುವ ಈ ರೇಖೆ ಮಣಿಕಟ್ಟು ಮತ್ತು ಹೃದಯ ರೇಖೆಗಳ ನಡುವೆ ಕಂಡು ಬರುತ್ತದೆ. ಇದು ವ್ಯಕ್ತಿಯ ಪ್ರವಾಸ ವಿಚಾರದ ಬಗ್ಗೆ ಪ್ರತಿನಿಧಿಸುತ್ತದೆ.

ಲೈನ್ ಆಫ್ ಸಕ್ಸಸ್

ಲೈನ್ ಆಫ್ ಸಕ್ಸಸ್

ಈ ರೇಖೆಯನ್ನು "ಲೈನ್ ಆಫ್ ಸಕ್ಸಸ್'' ಎಂದೂ ಕರೆಯಲಾಗುತ್ತದೆ. ವ್ಯಕ್ತಿಯ ಹಸ್ತದಲ್ಲಿ ಈ ರೇಖೆ ಇಲ್ಲವಾದರೆ ಎಷ್ಟೇ ಪ್ರಯತ್ನ ಪಟ್ಟರು ಯಶಸ್ಸು ಕಾಣುವುದು ಕಷ್ಟ ಎಂದು ಹೇಳಲಾಗುತ್ತದೆ. ಇದನ್ನು ಅದೃಷ್ಟದ ರೇಖೆ ಎಂದು ಸಹ ಕರೆಯಲಾಗುವುದು.

ಮರ್ಕ್ಯುರಿ ಲೈನ್

ಮರ್ಕ್ಯುರಿ ಲೈನ್

ಇದನ್ನು ಆರೋಗ್ಯ ಮತ್ತು ಲಿವರ್‍ಗೆ ಸಂಬಂಧಿಸಿದ ರೇಖೆ ಎಂದು ಕರೆಯುತ್ತಾರೆ. ಇದು ಚಂದ್ರನ ಪರ್ವತದ ಮೇಲಿನಿಂದ ಪ್ರಾರಂಭವಾಗುತ್ತದೆ. ನಮ್ಮ ಯಶಸ್ಸು ಮತ್ತು ವೈಫಲ್ಯತೆಯನ್ನು ಸೂಚಿಸುತ್ತದೆ. ಇದು ಆಳವಾದ ರೇಖೆಯಂತೆ ಕಂಡು ಬಂದರೆ ಉತ್ತಮ ಜೀರ್ಣಕ್ರಿಯೆ, ಯಕೃತ್ತಿನ ಆರೋಗ್ಯ, ಉತ್ತಮ ಸ್ಮರಣ ಶಕ್ತಿಯ ಕುರಿತು ಸೂಚಿಸುತ್ತದೆ ಎನ್ನಲಾಗುವುದು.

ಹಸ್ತರೇಖೆಗಳು: ಅಡ್ಡ-ದಿಡ್ಡಿಯ ರೇಖೆಯಲ್ಲಿದೆ ಅಂಕು-ಡೊಂಕಿನ ಭವಿಷ್ಯ!

English summary

Do You Know The True Meaning Of These Special Lines In Palmistry?

With so many updates about palmistry, there are certain things that most of us are totally unaware of. These are about the special lines that are present on our hands. Understanding the meaning of these special lines is important, as it makes us realize that palmistry for sure is a vast subject.
Subscribe Newsletter