For Quick Alerts
ALLOW NOTIFICATIONS  
For Daily Alerts

ವಾಸ್ತು ಶಾಸ್ತ್ರ: ಹಕ್ಕಿಗಳನ್ನು ಗೂಡಲ್ಲಿ ಇಟ್ಟರೆ ಯಜಮಾನನಿಗೆ ಆರ್ಥಿಕ ನಷ್ಟ!

ವಾಸ್ತು ಶಾಸ್ತ್ರದ ಪ್ರಕಾರ ಹಕ್ಕಿಗಳನ್ನು ಗೂಡಿನಲ್ಲಿ ಇಟ್ಟು ಸಾಕುವುದರಿಂದ ಮನೆಯ ಯಜಮಾನನಿಗೆ ಆರ್ಥಿಕ ಸಂಕಷ್ಟ ಮತ್ತು ದುಃಖ ನಿಶ್ಚಿತ...

By Manu
|

ಹಿಂದಿನ ಕಾಲದಲ್ಲಿ ಗಿಳಿಯನ್ನು ಗೂಡಿನಲ್ಲಿ ಇಟ್ಟು ಸಾಕಲಾಗುತ್ತಾ ಇತ್ತು. ಆದರೆ ಈಗ ಕಾನೂನು ಬದಲಾಗಿದೆ. ಇದರಿಂದ ಯಾವುದೇ ಪಕ್ಷಿಗಳನ್ನು ಗೂಡಿನಲ್ಲಿ ಇಟ್ಟು ಸಾಕುವಂತಿಲ್ಲ. ಆದರೆ ಲವ್ ಬರ್ಡ್ಸ್ ನಂತಹ ಕೆಲವೊಂದು ಸಣ್ಣ ಹಕ್ಕಿಗಳನ್ನು ಗೂಡಿನಲ್ಲಿ ಇಟ್ಟು ಸಾಕಲಾಗುತ್ತದೆ. ಇದೊಂದು ಫ್ಯಾಷನ್ ಕೂಡ ಆಗಿಬಿಟ್ಟಿದೆ... ಬುದ್ಧಿಶಕ್ತಿಯಲ್ಲಿ ಮನುಷ್ಯರಿಗೇ ಸವಾಲೆಸೆಯುವ ಪ್ರಾಣಿ, ಪಕ್ಷಿಗಳು

ಆದರೆ ಪಕ್ಷಿಗಳ ಸ್ವತಂತ್ರ್ಯವನ್ನು ಕಿತ್ತುಕೊಂಡು ನಮ್ಮ ಮೋಜಿಗಾಗಿ ಅವುಗಳನ್ನು ಗೂಡಿನಲ್ಲಿ ಇಟ್ಟುಕೊಳ್ಳುವುದು ಮಾನವೀಯತೆಯಿಂದ ಕೂಡ ಸರಿಯಾದ ನಿರ್ಧಾರವಲ್ಲ. ಕೆಲವರಿಗೆ ಏನೇ ಹೇಳಿದರೂ ಅವರು ಇದನ್ನು ಕೇಳುವ ಹಾಗೆ ಇರುವುದಿಲ್ಲ. ಇಂತಹ ವ್ಯಕ್ತಿಗಳು ಮನೆಯಲ್ಲಿ ಹಲವಾರು ರೀತಿಯ ಪಕ್ಷಿಗಳನ್ನು ಸಾಕುತ್ತಾ ಇರುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಹಕ್ಕಿಗಳನ್ನು ಗೂಡಿನಲ್ಲಿ ಇಟ್ಟು ಸಾಕುವುದರಿಂದ ಮನೆಯ ಯಜಮಾನನಿಗೆ ಆರ್ಥಿಕ ಸಂಕಷ್ಟ ಮತ್ತು ದುಃಖ ನಿಶ್ಚಿತ. ಪಕ್ಷಿಗಳನ್ನು ಗೂಡಿನಲ್ಲಿ ಇಟ್ಟು ಸಾಕಿದಾಗ ಏನಾಗುತ್ತದೆ ಎಂದು ತಿಳಿಯುವ...

ಅಸ್ವಸ್ಥತೆಯ ಕಂಪನ ಉಂಟು ಮಾಡುವುದು

ಅಸ್ವಸ್ಥತೆಯ ಕಂಪನ ಉಂಟು ಮಾಡುವುದು

ವಾಸ್ತು ಶಾಸ್ತ್ರ ಪ್ರಕಾರ ಹಕ್ಕಿಯನ್ನು ಗೂಡಿನಲ್ಲಿ ಇಟ್ಟರೆ ಅದರಿಂದ ಅಸ್ವಸ್ಥತೆಯ ಕಂಪನ ಉಂಟಾಗುವುದು. ಮನೆಯೊಳಗಿರುವ ಧನಾತ್ಮಕ ಶಕ್ತಿಯು ಬಂಧಿಸಲ್ಪಡುತ್ತದೆ ಮತ್ತು ಇದರಿಂದ ಕುಟುಂಬದ ಸದಸ್ಯರಿಗೆ ತೊಂದರೆಯಾಗುತ್ತದೆ.

ದುರಾದೃಷ್ಟವು ಹೆಚ್ಚಾಗಬಹುದು!

ದುರಾದೃಷ್ಟವು ಹೆಚ್ಚಾಗಬಹುದು!

ನಾವು ಮಾರುಕಟ್ಟೆಗೆ ಹೋಗಿ ಅಲ್ಲಿ ಯಾವುದಾದರೂ ಸುಂದರವಾಗಿರುವ ಪಕ್ಷಿಯನ್ನು ನೋಡಿ ಅದನ್ನು ಖರೀದಿಸಿ ಮನೆಗೆ ಬರುತ್ತೇವೆ. ಮನೆಯಲ್ಲಿ ಇವುಗಳನ್ನು ಯಾವ ರೀತಿಯಲ್ಲಿ ಇಟ್ಟುಕೊಳ್ಳಬೇಕು ಮತ್ತು ಇದರಿಂದ ನಮಗೆ ದುರಾದೃಷ್ಟ ಬರಲಿದೆಯಾ ಎನ್ನುವ ಬಗ್ಗೆ ಚಿಂತಿಸುವುದೇ ಇಲ್ಲ. ಪಕ್ಷಿಗಳು ದುಃಖದಿಂದ ಇದ್ದರೆ ಅದರ ನಕಾರಾತ್ಮಕ ಪರಿಣಾಮ ನಮ್ಮ ಮೇಲಾಗುತ್ತದೆ. ಇದರಿಂದ ದುರಾದೃಷ್ಟವು ಹೆಚ್ಚಾಗಬಹುದು.

ಹಕ್ಕಿಗಳ ಸ್ವತಂತ್ರ ಕಿತ್ತುಕೊಳ್ಳಬೇಡಿ!

ಹಕ್ಕಿಗಳ ಸ್ವತಂತ್ರ ಕಿತ್ತುಕೊಳ್ಳಬೇಡಿ!

ಹಕ್ಕಿಗಳು ಗುಂಪಾಗಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತಾ ಇರಬೇಕು. ಅದನ್ನು ತಂದು ಗೂಡಿನಲ್ಲಿ ಹಾಕಿಟ್ಟರೆ ಅದರಿಂದ ಅವುಗಳ ಪ್ರಕೃತಿದತ್ತ ಹಾರಾಟಕ್ಕೆ ನಿರ್ಬಂಧ ಹಾಕಿದಂತೆ.

ಆಕ್ರಮಣಶೀಲವಾಗಬಹುದು

ಆಕ್ರಮಣಶೀಲವಾಗಬಹುದು

ಏಕಾಂಗಿಯಾಗಿರುವುದು ಮತ್ತು ನೈಸರ್ಗಿಕವಾದ ಚಟುವಟಿಕೆಗಳಿಂದ ಬಂಧಿಸಲ್ಪಟ್ಟಿರುವುದರಿಂದ ಹಕ್ಕಿಗಳು ಕೂಡ ಆಕ್ರಮಣಶೀಲವಾಗಬಹುದು.

ಕರ್ಮದ ಚಕ್ರ

ಕರ್ಮದ ಚಕ್ರ

ಹಕ್ಕಿಗಳ ದುಃಖ ಹಾಗೂ ನೋವು ನಮ್ಮ ದುರಾದೃಷ್ಟವಾಗುವ ಬದಲು ಅವುಗಳನ್ನು ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡಲು ಬಿಡಿ. ಇದರಿಂದ ಅವುಗಳು ಕೂಡ ಸ್ವತಂತ್ರವಾಗಿ ಹಾರಾಡಿ ಸಂತೋಷದಿಂದ ಇರುತ್ತದೆ. ನೀವು ಕೂಡ ಶಾಂತಿಯಿಂದ ಇರಬಹುದು.

English summary

Did You Know That Caging Of Birds Leads To Financial Loss?

Here are some of the reasons according to Vastu Shastra which claim that keeping caged birds can only fetch the owner bad luck in the form of financial losses and sadness. Check out on what happens when people keep caged birds and how easily it affects the luck of a person. Find out more below.
X
Desktop Bottom Promotion