For Quick Alerts
ALLOW NOTIFICATIONS  
For Daily Alerts

  ಕೇರಳದ ’ಎದೆ ಮುಚ್ಚಿಕೊಳ್ಳುವ ತೆರಿಗೆ’ ಬಗ್ಗೆ ನಿಮಗೆಷ್ಟು ಗೊತ್ತು?

  By Arshad
  |

  ಭಾರತದ ಇತಿಹಾಸ ಎಷ್ಟು ರಕ್ತಸಿಕ್ತವಾಗಿದೆ ಎಂದರೆ ಇಂದಿನ ದಿನಗಳಲ್ಲಿ ಆ ಬಗ್ಗೆ ಯೋಚಿಸಿದರೇ ಮೈ ಜುಮ್ಮೆನ್ನುತ್ತದೆ. ಅಂದಿನ ದಿನಗಳಲ್ಲಿ ಆಚರಣೆಯಲ್ಲಿದ್ದ ಸಂಪ್ರದಾಯಗಳು, ಸತಿಪದ್ಧತಿ, ದಲಿತರನ್ನು ತಮ್ಮ ಅಡಿಯಾಳಾಗಿರಿಸುವ ಜೀತಪದ್ಧತಿ, ಬಡವರ ದುಡಿಮೆಯ ಬಹುತೇಕವನ್ನು ತೆರಿಗೆಯ ರೂಪದಲ್ಲಿ ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದ ಪದ್ಧತಿ ಇತ್ಯಾದಿಗಳು ಒಂದೊಮ್ಮೆ ಭಾರತದಲ್ಲಿದ್ದುವು. ಜಪಾನ್‌ನ 'ಸ್ತನ ದೇವಾಲಯ' ಎಲ್ಲರನ್ನೂ ಅಚ್ಚರಿಯ ಕೂಪಕ್ಕೆ ತಳ್ಳುತ್ತಿದೆ!!

  ಇಂತಹದ್ದೇ ಒಂದು ಅತ್ಯಂತ ಹೇಯವೆನಿಸುವ ತೆರಿಗೆ ಕೇರಳದಲ್ಲಿತ್ತು. ಇದೇ ಎದೆ ಮುಚ್ಚಿಕೊಳ್ಳಲು ನೀಡಬೇಕಾದ 'ಸ್ತನ ತೆರಿಗೆ'. ಅಂದರೆ ಸಮಾಜದಲ್ಲಿ ತಮ್ಮ ಎದೆಯನ್ನು ಮುಚ್ಚಿಕೊಳ್ಳಬೇಕಾದರೆ ತೆರಿಗೆ ಪಾವತಿಸಬೇಕಿತ್ತು. ಈ ತೆರಿಗೆಯನ್ನು ವಿರೋಧಿಸಲೂ ಆಗದೇ, ನೀಡಲೂ ಆಗದೇ ಮಹಿಳೆಯೊಬ್ಬರು ಕೈಗೊಂಡ ಹೃದಯವಿದ್ರಾವಕ ನಿರ್ಧಾರ ಈ ತೆರಿಗೆಯನ್ನು ತೆಗೆದುಹಾಕಲು ಕಾರಣವಾಯಿತು. ಬನ್ನಿ, ಈ ಬಗ್ಗೆ ಹೆಚ್ಚಿನ ವಿವರವನ್ನು ಅರಿಯೋಣ...

  ತಿರವಾಂಕೂರು ಪ್ರಾಂತದ ದಲಿತ ಮಹಿಳೆಯರಿಗಾಗಿಯೇ ಇತ್ತು ಈ ಕಾನೂನು

  ತಿರವಾಂಕೂರು ಪ್ರಾಂತದ ದಲಿತ ಮಹಿಳೆಯರಿಗಾಗಿಯೇ ಇತ್ತು ಈ ಕಾನೂನು

  ಮುಲಕ್ಕರಂ ಎಂಬ ಹೆಸರಿನ ಈ ತೆರಿಗೆ ಈಗಿನ ಕೇರಳದಲ್ಲಿರುವ ತಿರವಾಂಕೂರು ಪ್ರಾಂತದಲ್ಲಿ ಅಸ್ತಿತ್ವದಲ್ಲಿತ್ತು. ಆ ಪ್ರಕಾರ ದಲಿತ ಮಹಿಳೆಯರು ಸಮಾಜದಲ್ಲಿ ತಮ್ಮ ಎದೆಯನ್ನು ಮುಚ್ಚಿಕೊಳ್ಳಲು ಅವಕಾಶವಿರಲಿಲ್ಲ. ಒಂದು ವೇಳೆ ಮುಚ್ಚಿಕೊಳ್ಳಬೇಕೆಂದಿದ್ದರೆ ಇದಕ್ಕೆ ತೆರಿಗೆ ತೆರಬೇಕಿತ್ತು. ಇದೇ ಮುಲಕ್ಕರಂ (ಮುಲ ಅಂದರೆ ಸ್ತನ, ಕರಂ ಅಂದರೆ ಕರ ಅಥವಾ ತೆರಿಗೆ)

  19ನೇ ಶತಮಾನದಲ್ಲಿತ್ತು ಈ ಆಚರಣೆ

  19ನೇ ಶತಮಾನದಲ್ಲಿತ್ತು ಈ ಆಚರಣೆ

  ಈ ಅಮಾನವೀಯ ತೆರಿಗೆಯನ್ನು ಹತ್ತೊಂಭತ್ತನೆಯ ಶತಮಾನದಲ್ಲಿ ಮೇಲ್ವರ್ಗದ ಜನತೆ ದಲಿತರ ಮೇಲೆ ಬಲವಂತವಾಗಿ ಹೇರಿದ್ದರು.

  ಇದು ಮಾನವತೆಯ ಕೊನೆ

  ಇದು ಮಾನವತೆಯ ಕೊನೆ

  ಮಾನ ಮುಚ್ಚಿಕೊಳ್ಳಲೂ ತೆರಿಗೆ ತೆರಬೇಕಾದ ಪರಿಸ್ಥಿತಿ ವಿಶ್ವದಲ್ಲೆಲ್ಲೂ ಇಲದಿದ್ದದ್ದು ಈ ಪ್ರಾಂತದಲ್ಲಿ ಮಾತ್ರ ರಾಜಾರೋಶವಾಗಿ ಜಾರಿಯಲ್ಲಿತ್ತು. ಈ ಮೂಲಕ ಮಾನವತೆಗೇ ಕಳಂಕ ತಂದಿರಿಸಿತ್ತು. ಮಹಿಳೆಯರು ತಮ್ಮ ಮೂಲಭೂತ ಹಕ್ಕನ್ನು ಕಳೆದುಕೊಂಡಿದ್ದರು.

  ಈ ಕಾನೂನು ಬರೆಯ ಮಹಿಳೆರಿಗೆ ಮಾತ್ರವಲ್ಲ, ಪುರುಷರಿಗೂ!

  ಈ ಕಾನೂನು ಬರೆಯ ಮಹಿಳೆರಿಗೆ ಮಾತ್ರವಲ್ಲ, ಪುರುಷರಿಗೂ!

  ಈ ಕಾನೂನಿನ ಪ್ರಕಾರ ದಲಿತ ಮಹಿಳೆಯರು ತಮ್ಮ ಎದೆಯನ್ನು ಮುಚ್ಚುವಂತಿಲ್ಲ. ಮುಚ್ಚಿದರೆ ಅಥವಾ ಆಭರಣಗಳನ್ನು ಧರಿಸಿದರೆ ಅಥವಾ ಪ್ರಖರ, ಮನಸೆಳೆಯುವ ಸೀರೆಯನ್ನು ಧರಿಸಿದರೂ ತೆರಿಗೆ ಪಾವತಿಸಬೇಕಿತ್ತು. ಅಂತೆಯೇ ದಲಿತ ಪುರುಷರು ಮೀಸೆ ಬಿಡುವಂತಿರಲಿಲ್ಲ. ಬಿಟ್ಟರೆ ಅದಕ್ಕೂ ತೆರಿಗೆ ತೆರಬೇಕಿತ್ತು.

  ಈ ತೆರಿಗೆಗೊಂದು ಕಾರಣವಿತ್ತು

  ಈ ತೆರಿಗೆಗೊಂದು ಕಾರಣವಿತ್ತು

  ಈ ತೆರಿಗೆಗೆ ಮಹಿಳೆಯರ ಅಂಗ ಸೌಷ್ಠವ ಸವಿಯುವುದೇ ಕಾರಣವಾಗಿರಲಿಲ್ಲ. ಬದಲಿಗೆ ಹೀಗೆ ಮಾಡುವ ಮೂಲಕ ಕೆಳವರ್ಗದ ದಲಿತ ಜನರನ್ನು ತೆರಿಗೆಯ ಭಯದಲ್ಲಿ ದಮನಿತರನ್ನಾಗಿಸಿ ಅವರನ್ನು ಸಾಲದಲ್ಲಿ ಮುಳುಗಿಸಿ ಶಾಶ್ವತ ಜೀತದಾಳುಗಳನ್ನಾಗಿಸುವುದೇ ಇದರ ಮುಖ್ಯ ಉದ್ದೇಶವಾಗಿತ್ತು. ಈ ತೆರಿಗೆ ಈ ಜನರ ಅಸ್ತಿತ್ವ ಮತ್ತು ಜೀವನಾಂಶಕ್ಕೇ ಕುತ್ತಾಗಿತ್ತು.

   ಈ ಪದ್ಧತಿಯ ವಿರುದ್ಧ ಸೆಟೆದೆದ್ದ ಮಹಿಳೆಯೊಬ್ಬರ ದಿಟ್ಟ ನಿರ್ಧಾರದೊಂದಿಗೆ ಕೊನೆಗೊಂಡಿತು

  ಈ ಪದ್ಧತಿಯ ವಿರುದ್ಧ ಸೆಟೆದೆದ್ದ ಮಹಿಳೆಯೊಬ್ಬರ ದಿಟ್ಟ ನಿರ್ಧಾರದೊಂದಿಗೆ ಕೊನೆಗೊಂಡಿತು

  ಈ ಪದ್ಧತಿಯನ್ನು ಎಲ್ಲರೂ ದ್ವೇಶಿಸುತ್ತಲೇ ಇದ್ದರೂ ಪ್ರಬಲ ಮೇಲ್ವರ್ಗದವರ ವಿರುದ್ಧ ಹೋರಾಡಲು ಇವರಿಗೆ ಶಕ್ತಿಯಾಗಲೀ ಸಾಮರ್ಥ್ಯವಾಗಲೀ ಇರಲಿಲ್ಲ. ಈ ಹತಾಶೆಯ ಸಂದರ್ಭದಲ್ಲಿ ನಾಂಗೇಲಿ ಎಂಬ ಮಹಿಳೆಯೊಬ್ಬರನ್ನು ಮೇಲ್ವಸ್ತ್ರ ತೊಟ್ಟಿದ್ದಕ್ಕಾಗಿ ತೆರಿಗೆ ನೀಡುವಂತೆ ಬಲವಂತ ಪಡಿಸಲಾಯಿತು. ತನ್ನ ಆತ್ಮಾಭಿಮಾನಕ್ಕೇ ಧಕ್ಕೆ ತರುವ ಈ ವ್ಯವಸ್ಥೆಯ ವಿರುದ್ದ ಆಕೆ ಸಿಡಿದೆದ್ದರು. ಬಳಿಕ ಆಕೆ ಕೈಗೊಂಡ ನಿರ್ಧಾರ ಮಾನವೀಯತೆಯೇ ತಲೆ ತಗ್ಗಿಸುವಂತಹದ್ದಾಗಿತ್ತು.

  ಮೇಲ್ವರ್ಗದ ಘೋರಕೃತ್ಯಕ್ಕೆ ತನ್ನದೇ ರೀತಿಯಲ್ಲಿ ಈಕೆ ಪ್ರತಿಭಟಿಸಿದಳು

  ಮೇಲ್ವರ್ಗದ ಘೋರಕೃತ್ಯಕ್ಕೆ ತನ್ನದೇ ರೀತಿಯಲ್ಲಿ ಈಕೆ ಪ್ರತಿಭಟಿಸಿದಳು

  ದಲಿತರಾದರೇನು? ನಾವೂ ಮಾನವರಲ್ಲವೇ, ನಮಗೂ ಮಾನವಿಲ್ಲವೇ ಎಂದು ದಿಟ್ಟವಾಗಿ ಎಲ್ಲರೆದುರು ಹೇಳಿ ತಾನು ಸ್ವತಃ ಮೇಲ್ವಸ್ತ್ರ ಧರಿಸಿ ಉಳಿದವರಿಗೂ ಧರಿಸುವಂತೆ ಪ್ರೇರೇಪಿಸಿದಳು. ಆದರೆ ಈ ಕ್ರಮ ಮೇಲ್ವರ್ಗದ ಜನರಿಗೆ ಅಪಾರವಾದ ಕೋಪ ಬರಿಸಿತು. ದಲಿತ ಮಹಿಳೆಯೊಬ್ಬಳು ತಮಗೆ ಎದುರಾಗಿ ನಿಲ್ಲುವುದು ಅವರ ದುರಭಿಮಾನಕ್ಕೆ ಕೊಡಲಿ ಏಟು ನೀಡಿತ್ತು. ಈಕೆಯ ದಿಟ್ಟ ಕ್ರಮವನ್ನು ಮೊತ್ತ ಮೊದಲಾಗಿ ಆಕೆಯ ಪತಿಯೇ ಬೆಂಬಲಿಸಿ ಪ್ರೋತ್ಸಾಹಿಸಿದರು.

  ತೆರಿಗೆಗೆ ತೆತ್ತ ದಂಡ

  ತೆರಿಗೆಗೆ ತೆತ್ತ ದಂಡ

  ಆದರೆ ಈಕೆಯ ದಿಟ್ಟ ಕ್ರಮವನ್ನು ಸಹಿಸದ ತಿರವಾಂಕೂರು ರಾಜರು ಈಕೆಯ ಮೇಲೆ ಮುಲಕ್ಕರಂ ಕರ ವಿಧಿಸಿದರು. ಹಾಗೂ ತಕ್ಷಣವೇ ನೀಡಬೇಕೆಂದು ಡಂಗೂರ ಸಾರಿಸಿದರು. ಹಾಗೂ ತಕ್ಷಣವೇ ಈ ಕರವನ್ನು ಸಲ್ಲಿಸತಕ್ಕದ್ದು ಎಂಬ ಫರ್ಮಾನು ಹೊರಡಿಸಿ ಆಕೆಯ ಮನೆಬಾಗಿಲಿಗೆ ಜನರನ್ನು ಅಟ್ಟಿದರು. ಈಕೆಯ ಬಳಿ ಅಷ್ಟು ಹಣವಿಲ್ಲ ಎಂದು ಅವರಿಗೂ ಗೊತ್ತಿತ್ತು. ಆದರೂ ಈಕೆಯಂತೆ ಬೇರೆ ಯಾರೂ ತಮ್ಮ ಎದುರಿಗೆ ಮತ್ತೊಮ್ಮೆ ನಿಲ್ಲಬಾರದು ಎಂಬುದೇ ರಾಜರ ಅಣತಿಯಾಗಿತ್ತು. ಆದರೆ ಈ ಸವಾಲಿಗೆ ಎದೆಗುಂದದ ಈ ಮಹಿಳೆ ತನ್ನ ಸ್ತನಗಳನ್ನೇ ಕತ್ತರಿಸಿ ಕರ ಕೊಂಡುಹೋಗುವವರಿಗೆ ನೀಡಿದಳು. ಈಕೆಯ ಈ ನಿರ್ಧಾರವನ್ನು ಕಂಡು ಕರ ಕೊಂಡುಹೋಗುವವರು ಭಯಭೀತರಾಗಿ ದೊರೆಯ ಬಳಿ ಓಡಿದರು. ಆದರೆ ರಕ್ತಸ್ರಾವದ ಕಾರಣ ಆಕೆ ಕೆಲವು ನಿಮಿಷಗಳಲ್ಲಿಯೇ ಸಾವನ್ನಪ್ಪಿದಳು.

  ಈಕೆಯ ಹಿಂದೆ ಆಕೆಯ ಪತಿಯೂ ಸಾವಿಗೆ ಶರಣಾದ

  ಈಕೆಯ ಹಿಂದೆ ಆಕೆಯ ಪತಿಯೂ ಸಾವಿಗೆ ಶರಣಾದ

  ಆಕೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಆಕೆಯ ಪತಿಗೆ ಈ ಸಾವಿನ ದುಃಖವನ್ನು ಸಹಿಸಲು ಸಾಧ್ಯವಾಗಲಿಲ್ಲ. ಆಕೆಯ ಚಿತೆ ಉರಿಯುತ್ತಿದ್ದಂತೆಯೇ ಚಿತೆಯೊಳಗೆ ಹಾರಿ ತಾನೂ ಪ್ರಾಣಾರ್ಪಣೆ ಮಾಡಿಕೊಂಡ. ಈ ಪ್ರಕರಣ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿ ಪತ್ನಿಯ ಚಿತೆಯಲ್ಲಿ ಹಾರಿದ ಪತಿಯ ಮೊದಲ ಪ್ರಕರಣವೆಂದು ದಾಖಲಾಯಿತು. ಆದರೆ ಆಕೆಯ ತ್ಯಾಗ ವ್ಯರ್ಥವಾಗಲಿಲ್ಲ. ಈ ಕ್ರಮದ ವಿರುದ್ಧ ಜನರೆಲ್ಲಾ ಒಂದಾಗಿ ಸೆಟೆಯುವ ಸೂಚನೆ ಬಂದ ಕೂಡಲೇ ರಾಜರಿಗೆ ಅನಿವಾರ್ಯವಾಗಿ ಈ ತೆರಿಗೆಯನ್ನು ಹಿಂತೆಗೆದುಕೊಳ್ಳಬೇಕಾಗಿ ಬಂದಿತು. ಇದರ ಪರಿಣಾಮವಾಗಿ ದಲಿತರು ಸಮಾನಸ್ಕಂದರಾಗಿ ಸಮಾಜದಲ್ಲಿ ಬಾಳಲು ಸಾಧ್ಯವಾಗಿದೆ.

  English summary

  Did You Know About The 'Breast Tax' In Kerala

  Find out the history behind this practice and how it got abolished after a woman decided to make a stern decision to stop this practice! Check out the bizarre history of this practice!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more