ಅಚ್ಚರಿ ಆದರೂ ನಿಜ! ಕೆಲವರಿಗೆ ಲೈಂಗಿಕ ಭಯವು ಕಾಡುತ್ತದೆಯಂತೆ!!

Posted By: Lekhaka
Subscribe to Boldsky

ಒಬ್ಬೊಬ್ಬ ಮನುಷ್ಯರಿಗೆ ಒಂದೊಂದು ರೀತಿಯ ಭೀತಿಗಳು ಇರುತ್ತದೆ. ಕೆಲವರಿಗೆ ಹಗ್ಗ ಕಂಡರೂ ಹಾವು ಕಂಡಷ್ಟು ಹೆದರುತ್ತಾರೆ. ಇನ್ನು ಕೆಲವರಿಗೆ ಜೋರು ಶಬ್ದ ಭೀತಿ ಉಂಟು ಮಾಡುವುದು. ಇಂತಹ ಹಲವಾರು ರೀತಿಯ ಭಯಗಳು ಒಂದಲ್ಲ ಒಂದು ರೀತಿಯಿಂದ ಕಾಡುತ್ತಾ ಇರುತ್ತದೆ.ಲೈಂಗಿಕ ಜೀವನವನ್ನು ಹೆಚ್ಚಿನ ಪುರುಷರು ಹಾಗೂ ಮಹಿಳೆಯರು ಆನಂದಿಸುವುದೇ ಹೆಚ್ಚು.

ಆದರೆ ಕೆಲವರಲ್ಲಿ ಲೈಂಗಿಕ ಭಯವು ತುಂಬಾ ಗಾಢವಾಗಿ ಕಾಡುತ್ತದೆ. ಅವರಿಗೆ ಇದನ್ನು ಹೇಳಿಕೊಳ್ಳಲು ಕೂಡ ಅವರಿಗೆ ಭೀತಿ. ಈ ರೀತಿಯ ಹಲವಾರು ಲೈಂಗಿಕ ಭಯಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಇಂದು ಈ ಲೇಖನದ ಮೂಲಕ ಹೇಳಿಕೊಡಲಿದೆ. ಇಂತಹ ಭೀತಿ ನಿಮಗೆ ಇದೆಯಾ ಅಥವಾ ಇದು ಯಾವ ರೀತಿಯ ಭೀತಿಯಪ್ಪಾ ಎಂದು ತಿಳಿಯುವ ಆಸಕ್ತಿ ನಿಮಗಿದ್ದರೆ ಕ್ಲಿಕ್ ಮಾಡುತ್ತಾ ಸಾಗಿ....

ಯೋನಿಮಿಸಸ್

ಯೋನಿಮಿಸಸ್

ಯೋನಿಮಿಸಸ್ ಮಹಿಳೆಯರಲ್ಲಿ ಕಂಡು ಬರುವ ಅತ್ಯಂತ ಕಡಿಮೆ ಲೈಂಗಿಕ ಭೀತಿಗಳ ಪೈಕಿ ಒಂದಾಗಿದೆ. ಮಹಿಳೆಯರಿಗೆ ಲೈಂಗಿಕವಾಗಿ ಹೆಚ್ಚು ಕಠಿಣವಾಗುವ ಚಲನರಹಿತ ಸಮಸ್ಯೆಯಾಗಿದೆ. ಮಹಿಳೆಯರಿಗೆ, ಯೋನಿಮಿಸಸ್ ನಿಂದ ಬಳಲುತ್ತಿರುವವರು, ಅವರ ಯೋನಿ ಸ್ನಾಯುಗಳು ದೃಢತ್ವ ಉಳಿಸಿಕೊಳ್ಳುತ್ತವೆ, ಇದು ಒಳಹೊಕ್ಕು ಬಹಳ ಕಷ್ಟವಾಗುತ್ತದೆ. ಯೋನಿಮಿಸಸ್ ನಿಂದ ಬಳಲುತ್ತಿರುವ ಮಹಿಳೆಯರಿಗಾಗಿ, ಲಿಂಗವು ದೊಡ್ಡ ಸಮಸ್ಯೆಯಾಗಿರುವುದು.

ಎರೋಟೋಫೋಬಿಯಾ

ಎರೋಟೋಫೋಬಿಯಾ

ಸಾಮಾನ್ಯವಾಗಿ ಕಂಡುಬರುವ ಹಾಗೂ ಪ್ರಸಿದ್ಧಿಯನ್ನು ಪಡೆದಿರುವ ಮತ್ತೊಂದು ಲೈಂಗಿಕ ಭೀತಿಯೆಂದರೆ ಎರೋಟೋಫೋಬಿಯಾ. ಸಾರ್ವಜನಿಕವಾಗಿ ವ್ಯಕ್ತಿಯು ಲೈಂಗಿಕವಾಗಿ ಮಾತನಾಡುವ ಭಯವೇ ಎರೋಟೋಫೋಬಿಯಾ. ಇಂತಹ ಸಮಸ್ಯೆ ಇರುವವರು ವಿಚಿತ್ರವಾಗಿ ನಟಿಸಬಹುದು, ಲೈಂಗಿಕ ವಿಷಯಗಳ ಬಗ್ಗೆ ಮಾತನಾಡುವಾಗ ಲೈಂಗಿಕತೆ ಅಥವಾ ಆತಂಕದ ಬಗ್ಗೆ ಮಾತನಾಡಲು ನಿರಾಕರಿಸುತ್ತಾರೆ.

ಫ್ಯಾಲೋಫೋಬಿಯಾ

ಫ್ಯಾಲೋಫೋಬಿಯಾ

ಇಂತಹ ಸಮಸ್ಯೆ ಇರುವ ಪುರುಷರು ಹಾಗೂ ಮಹಿಳೆಯರು ಶಿಶ್ನದೊಂದಿಗೆ ವ್ಯವಹರಿಸುವಾಗ ತುಂಬಾ ಹೆದರಿಕೊಳ್ಳುವರು. ಲೈಂಗಿಕ ಕ್ರಿಯೆ ವೇಳೆ ಇಂತಹ ಭಯವು ಪುರುಷರಲ್ಲಿ ಕಾಡುವುದು. ನಿಜವಾದ ಶಿಶ್ನ ಸ್ಪರ್ಶ ಮಾಡುವಾಗ ಅಥವಾ ಅದರ ಕಲ್ಪನೆ ಮಾಡಿಕೊಳ್ಳುವಾಗ ಮಹಿಳೆಯರಲ್ಲಿ ಇಂತಹ ಭೀತಿ ಕಾಣಿಸಿಕೊಳ್ಳುವುದು. ಫ್ಯಾಲೊಫೋಬಿಯಾ ಇರುವಂತಹ ವ್ಯಕ್ತಿಗಳಲ್ಲಿ ಲೈಂಗಿಕ ಕ್ರಿಯೆ ಕೂಡ ತುಂಬಾ ಕಷ್ಟವಾಗಿರುವುದು.

ಯುರೊಟೋಫೋಬಿಯಾ

ಯುರೊಟೋಫೋಬಿಯಾ

ಇದು ಫ್ಯಾಲೊಫೋಬಿಯಾಕ್ಕೆ ಸಂಪೂರ್ಣವಾಗಿ ವಿರುದ್ಧ. ಪುರುಷರು ಅಥವಾ ಮಹಿಳೆಯರು ನಿಜ ಜೀವನದಲ್ಲಿ ಯೋನಿಯೊಂದಿಗೆ ವ್ಯವಹರಿಸಲು ಭಯಪಡುವಂತಹ ಸಮಸ್ಯೆಯೇ ಯುರೊಟೋಫೋಬಿಯಾ. ಈ ಸಮಸ್ಯೆಯು ಯೋನಿಯ ಭಯವಾಗಿದ್ದು, ಯೋನಿಯ ಮತ್ತು ಪುರುಷರೊಂದಿಗಿನ ಲೈಂಗಿಕ ಸಂಪರ್ಕದ ಬಗ್ಗೆ ಹೆದರಿಕೆಯಿರುವುದು. ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಭೀತಿಯೇ ಯುರೊಟೋಫೋಬಿಯಾ.

ಮೆಡೋಮಾಲಕುಪೋಬಿಯಾ

ಮೆಡೋಮಾಲಕುಪೋಬಿಯಾ

ಸಾಮಾನ್ಯವಾಗಿ ಪುರುಷರಲ್ಲಿ ಕಂಡುಬರುವಂತಹ ಭೀತಿ ಇದಾಗಿದೆ. ಪುರುಷರು ತಮ್ಮ ಶಿಶ್ನ ಗಾತ್ರ ಮತ್ತು ಹಾಸಿಗೆಯ ಮೇಲೆ ಅವರ ಪ್ರದರ್ಶನದ ಬಗ್ಗೆ ಒತ್ತಡದಿಂದ ಬಳಲುತ್ತಿದ್ದರೆ ಮೆಡೋಮಲಕುಫೋಬಿಯಾ ಇದೆ ಎನ್ನಬಹುದು. ಲೈಂಗಿಕ ಕ್ರಿಯೆಯಲ್ಲಿ ಸರಿಯಾದ ತೃಪ್ತಿ ನೀಡಲು ಸಾಧ್ಯವಾಗುತ್ತಿಲ್ಲವೆನ್ನುವ ಭೀತಿಯೇ ಮೆಡೊಮಲಕುಫೊಬಿಯಾ. ಇಂತಹ ಭೀತಿ ಹೆಚ್ಚಾಗಿರುವಂತಹ ಪುರುಷರು ಹಾಸಿಗೆಯಲ್ಲಿ ತಮ್ಮ ಆಸಕ್ತಿ ಕಳದುಕೊಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಿಲ್ಲ ಎಂದು ನಿರ್ಧರಿಸುತ್ತಾರೆ.

 ಜೀನೋಫೋಬಿಯಾ

ಜೀನೋಫೋಬಿಯಾ

ಜೀನೋಫೋಬಿಯಾದಿಂದ ಪುರುಷರು ಮತ್ತು ಮಹಿಳೆಯರು ಇಬ್ಬರು ಬಳಲುವ ಸಾಧ್ಯತೆಗಳು ಹೆಚ್ಚಿವೆ. ಇಂತಹವರು ತಮ್ಮ ನಿಜ ಜೀವನದಲ್ಲಿ ಲೈಂಗಿಕ ಕ್ರಿಯೆ ಬಗ್ಗೆ ಹೆದರುತ್ತಾರೆ. ಈ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರು ಅಥವಾ ಪುರುಷರು ತಮ್ಮ ಸಂಗಾತಿ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಹೆದರುತ್ತಾರೆ. ಇಂತಹ ಭೀತಿ ಇರುವವರು ಕೇವಲ ಚುಂಬನ ಮತ್ತು ಅಪ್ಪುವಿಕೆಯನ್ನು ಆನಂದಿಸಬಹುದು. ಆದರೆ ಇದನ್ನು ಮೀರಿ ಹೋಗಲು ಅವರು ಬಯಸುವುದಿಲ್ಲ.

ಜಿಮ್ನೋಫೋಬಿಯಾ

ಜಿಮ್ನೋಫೋಬಿಯಾ

ಒಬ್ಬ ವ್ಯಕ್ತಿಯು ಇತರರ ಮುಂದೆ ನಗ್ನಳಾಗಲು ಅಥವಾ ನಗ್ನನಾಗಲು ಹೆದರುವುದೇ ಈ ಜಿಮ್ನೋಫೋಬಿಯಾ. ತಮ್ಮ ಬೆತ್ತಲೆಯಾಗಿ ತೋರಿಸಲು ಅಥವಾ ತಮ್ಮ ಸಂಗಾತಿಯನ್ನು ಬೆತ್ತಲೆಯಾಗಿ ನೋಡಲು ಅವರು ತುಂಬಾ ಭೀತಿಗೊಳಗಾಗುವರು. ಯಾರ ಮುಂದೆಯೂ ಅವರು ನಗ್ನರಾಗುವುದನ್ನು ತಪ್ಪಿಸಿಕೊಳ್ಳುತ್ತಾರೆ. ದೇಹದ ಆಕಾರದಿಂದಾಗಿ ಇಂತಹ ಭೀತಿ ಕಾಡುತ್ತದೆ ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು. ಪರಿಪೂರ್ಣ ದೇಹ ಹೊಂದಿರುವ ತುಂಬಾ ಸುಂದರ ಹುಡುಗಿ ಕೂಡ ಇಂತಹ ಭೀತಿಗೆ ಒಳಗಾಗಬಹುದು.

ಮೆನೋಫೋಬಿಯಾ

ಮೆನೋಫೋಬಿಯಾ

ಪುರುಷ ಮತ್ತು ಮಹಿಳೆ ಲೈಂಗಿಕವಾಗಿ ಸಮೀಪ ಬರುವಾಗ ಇಬ್ಬರು ಮುಟ್ಟಿನ ಬಗ್ಗೆ ಭೀತಿ ಪಡುವುದೇ ಈ ಮೆನೋಫೋಬಿಯಾ. ಮುಟ್ಟಿನ ಬಗ್ಗೆ ಹುಡುಗಿಯನ್ನು ಯಾವಾಗಲೂ ಚಿಂತೆ ಮಾಡುತ್ತಿರುವಾಗ, ಈ ಭೀತಿಯಿಂದ ಬಳಲುತ್ತಿರುವ ಪುರುಷರು ಲೈಂಗಿಕ ಸಮಯದಲ್ಲಿ ರಕ್ತ ನೋಡುವ ಭಯದಲ್ಲಿರುತ್ತಾರೆ. ಮೆನೋಫೋಬಿಯಾದಿಂದ ಪುರುಷರು ಬಳಲುತ್ತಿದ್ದರೆ, ಲೈಂಗಿಕವಾಗಿ ಬಳಲುತ್ತಿರುವ ಮಹಿಳೆಯರು ಆ ಸಮಯದಲ್ಲಿ ಮುಟ್ಟಾಗುತ್ತದೆ ಎಂದು ಅವರು ಭಾವಿಸುತ್ತಾರೆ.

ಒನೊರೊಮೋಫೋಬಿಯಾ

ಒನೊರೊಮೋಫೋಬಿಯಾ

ಕನಸುಗಳಲ್ಲಿ ಲೈಂಗಿಕ ವಿಚಾರಗಳು ಕಾಣಿಸಿಕೊಳ್ಳುವ ಬಗ್ಗೆ ಯಾವುದೇ ಪುರುಷ ಅಥವಾ ಮಹಿಳೆ ಹೆದರುವುದಿಲ್ಲ, ಆದರೆ ಒನೊರೊಮೋಫೋಬಿಯಾ ಬಳಲುತ್ತಿರುವ ಜನರು ನಿದ್ದೆ ಮಾಡುವಾಗ ಲೈಂಗಿಕ ಕ್ರಿಯೆಗಳ ಬಗ್ಗೆ ಬೀಳುವ ಕನಸುಗಳ ಬಗ್ಗೆ ಭಯಪಡುವರು. ಇದು ನಿದ್ರಾಹೀನತೆಗೆ ಕಾರಣವಾಗಬಹುದು. ಒನಿರೊ ಮೊಮೋಫೋಬಿಯಾ ಸಾಮಾನ್ಯವಾಗಿ ಪ್ರೌಢಾವಸ್ಥೆಯ ವೇಳೆ ಕಂಡುಬರುವ ಅಂಶವಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ.

English summary

Common Sexual Phobias You Did Not Know Existed

With people suffering from several phobias, there are a few individuals as well who suffer from sex phobia when it comes to bed. These phobias can be strange, shocking and scary as well. So, check out for some of the strange sexual phobias you did not know existed.