ಚಿತ್ರವೊಂದನ್ನು ಆರಿಸಿ, ನಿಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತನ್ನಿ

By: manu
Subscribe to Boldsky

ಪ್ರತಿಯೊಬ್ಬರಲ್ಲಿಯೂ ಕೆಲವೊಂದು ಸುಪ್ತ ಪ್ರತಿಭೆಗಳಿರುತ್ತವೆ. ಇವೆಲ್ಲವೂ ಬೂದಿ ಮುಚ್ಚಿದ ಕೆಂಡದಂತಿದ್ದು ಬೂದಿಯನ್ನು ಊದಿ ಕೆಂಡವನ್ನು ಪ್ರಜ್ವಲಿಸುವ ಕೆಲಸವನ್ನು ಮಾಡಿದಾಗ ಮಾತ್ರ ಈ ಪ್ರತಿಭೆ ಉಜ್ವಲವಾಗುತ್ತದೆ. ಎಷ್ಟೋ ಸಲ ನಮ್ಮಲ್ಲಿ ಈ ಪ್ರತಿಭೆ ಇರುವುದೇ ನಮಗೆ ಗೊತ್ತಿರುವುದಿಲ್ಲ. ಯಾವಾಗ ತಿಳಿಯಿತೋ ಆಗ ಈ ಪ್ರತಿಭೆಯನ್ನು ಇನ್ನಷ್ಟು ಬೆಳಗಿಸಿ ಹೆಚ್ಚಿನ ಯಶಸ್ಸು ಪಡೆಯಲು ಸಾಧ್ಯ.

ಆದರೆ ಈ ಬೂದಿಯನ್ನು ಊದುವ ಕೆಲಸ ಮಾಡುವವರು ಯಾರು? ಈ ಪ್ರಯತ್ನವನ್ನು ಇಂದು ಬೋಲ್ಡ್ ಸ್ಕೈ ತಂಡ ನಡೆಸಿದ್ದು ಇದಕ್ಕಾಗಿ ಸರಳ ವಿಧಾನವನ್ನು ಬಳಸುತ್ತಿದೆ. ಇಲ್ಲಿ ಕೆಲವು ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲು ನೀಡಲಾಗಿದ್ದು ಪ್ರತಿ ಚಿತ್ರದಲ್ಲಿಯೂ ಕೆಲವು ನಿಗೂಢ ಅರ್ಥಗಳಿವೆ. ಇವುಗಳನ್ನು ಗುರುತಿಸುವ ಪರಿಯಲ್ಲಿ ನಿಮ್ಮ ಸುಪ್ತ ಪ್ರತಿಭೆ ಹೊರಬರುತ್ತದೆ.

ಇದಕ್ಕಾಗಿ ನೀವೇನು ಮಾಡಬೇಕೆಂದರೆ ಕೆಳಗೆ ನೀಡಿರುವ ಕೊಲಾಜ್ (ಅಥವಾ ಚಿತ್ರಗಳ ಗುಂಪು) ಚಿತ್ರವೊಂದನ್ನು ಆಯ್ಕೆ ಮಾಡಿ ನಿಮ್ಮ ವ್ಯಕ್ತಿತ್ವದ ಮೇಲೆ ಯಾವ ಪರಿಣಾಮವುಂಟುಮಾಡುತ್ತದೆ ಎಂದು ಪರಿಶೀಲಿಸಿ. ಈ ಚಿತ್ರವನ್ನು ನಿಮ್ಮ ಸ್ನೇಹಿತರಿಗೂ ತೋರಿಸಿ ಅವರ ಆಯ್ಕೆಯನ್ನು ಗಮನಿಸಿ ಅವರ ವ್ಯಕ್ತಿತ್ವವನ್ನು ಅರಿಯಲು ಯತ್ನಿಸಿ...

ಚಿತ್ರ #1

ಚಿತ್ರ #1

ಒಂದು ವೇಳೆ ವ್ಯಕ್ತಿಯೊಬ್ಬರು ಈ ಚಿತ್ರವನ್ನು ಆಯ್ಕೆ ಮಾಡಿಕೊಂಡರೆ ಇದರ ಅರ್ಥ ನಿಜವಾಗಿಯೂ ವಿಶೇಷವಾದುದು ಎಂದು ಅರ್ಥೈಸಿಕೊಳ್ಳಬೇಕು. ಈ ಚಿತ್ರದಲ್ಲಿ ಚಂದ್ರ ಬಲಭಾಗದಲ್ಲಿದ್ದು ಸಮುದ್ರ ಶಾಂತವಾಗಿದೆ. ಇದು ನಿಮ್ಮ ವ್ಯಕ್ತಿತ್ವದ ಸ್ಥೂಲ ಪರಿಚಯ ಮಾಡಿಕೊಡುತ್ತದೆ. ನೀವು ಕನಸನ್ನು ಕಾಣುವ ಹಾಗೂ ದೂರದೃಷ್ಟಿಯುಳ್ಳ ವ್ಯಕ್ತಿಗಳಾಗಿದ್ದು ನಿಮ್ಮ ಭವಿಷ್ಯದ ಯೋಜನೆಗಳೆಲ್ಲಾ ದೊಡ್ಡದಾಗಿಯೇ ಇರುತ್ತವೆ.

ಗುರಿ ಸಾಧನೆಯ ಬಗ್ಗೆ ಹೆಚ್ಚು ಚಿಂತಿಸುತ್ತೀರಿ...

ಗುರಿ ಸಾಧನೆಯ ಬಗ್ಗೆ ಹೆಚ್ಚು ಚಿಂತಿಸುತ್ತೀರಿ...

ನಿಮ್ಮ ಗುರಿಯನ್ನು ಖಚಿತಪಡಿಸಿಕೊಂಡ ಬಳಿಕ ನೀವು ಇದನ್ನು ಸಾಧಿಸುವವರೆಗೆ ವಿರಮಿಸದವರಾಗಿದ್ದು ಗುರಿ ಸಾಧನೆಯ ಮೂಲಕ ಆತ್ಮತೃಪ್ತಿಯನ್ನು ಪಡೆದುಕೊಳ್ಳುತ್ತೀರಿ. ಪ್ರೇಮ ಹಾಗೂ ಸ್ನೇಹದ ವಿಷಯ ಬಂದಾಗ ನೀವು ಇದರಲ್ಲಿ ಬದ್ಧತೆಯನ್ನು ಕಾಯ್ದುಕೊಳ್ಳುವವರಾಗಿದ್ದು ಯಾವುದೇ ಬದಲಾವಣೆಯನ್ನು ಇಷ್ಟಪಡುವುದಿಲ್ಲ. ಈ ವ್ಯಕ್ತಿಗಳ ಸಂಬಂಧಗಳು ಬಹುತೇಕ ಇಡಿಯ ಜೀವಮಾನ ಉಳಿಯುವಂತಹದ್ದಾಗಿರುತ್ತವೆ.

ಚಿತ್ರ #2

ಚಿತ್ರ #2

ಪ್ರತಿ ಹತ್ತರಲ್ಲಿ ಮೂವರು ಈ ಚಿತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಇಲ್ಲಿ ಚಂದ್ರ ಬಲಭಾಗದಲ್ಲಿದ್ದರೂ ಸಮುದ್ರ ಮಾತ್ರ ದೊಡ್ಡ ಅಲೆಗಳಿಂದ ಪ್ರಕ್ಷುಬ್ದವಾಗಿದೆ. ಇದು ನಿಮ್ಮ ಪ್ರಬಲ ವ್ಯಕ್ತಿತ್ವವನ್ನು ಸಾರುತ್ತದೆ ಹಾಗೂ ಈ ವ್ಯಕ್ತಿಗಳು ತಮ್ಮ ಭಾವನೆಯ ಮೇಲೆ ಅಪಾರವಾಗಿ ಅವಲಂಬಿತರಾಗಿರುತ್ತಾರೆ. ಅಂದರೆ ಈ ವ್ಯಕ್ತಿಗಳು ಯಾವುದೇ ನಿರ್ಧಾರ ಕೈಗೊಳ್ಳುವಾಗ ಇವರ ಹೃದಯ ಹೇಳಿದ ಮಾತುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

ಇವರು ಅತೀ ಪ್ರಾಮಾಣಿಕರೂ, ಉದಾರ ಹೃದಯಿಗಳೂ...

ಇವರು ಅತೀ ಪ್ರಾಮಾಣಿಕರೂ, ಉದಾರ ಹೃದಯಿಗಳೂ...

ಇವರು ಅತೀ ಪ್ರಾಮಾಣಿಕರೂ, ಉದಾರ ಹೃದಯಿಗಳೂ ಹಾಗೂ ಕಾಳಜಿಯುಳ್ಳವರೂ ಆಗಿರುತ್ತಾರೆ. ಇವರು ತಮ್ಮ ಸುತ್ತಮುತ್ತಲಿರುವವರಲ್ಲಿ ನಗುವನ್ನು ಪಸರಿಸಲು ಇಚ್ಛಿಸುತ್ತಾರೆ. ಆದರೆ ಇನ್ನೊಂದು ಕಡೆಯಲ್ಲಿ ಇವರನ್ನು ಪೂರ್ಣವಾಗಿ ನಂಬಲಿಕ್ಕೆ ಸಾಧ್ಯವಿಲ್ಲ.

ಚಿತ್ರ#3

ಚಿತ್ರ#3

ಈ ಚಿತ್ರವನ್ನು ಆಯ್ಕೆ ಮಾಡಿಕೊಂಡ ವ್ಯಕ್ತಿಗಳು ತರ್ಕಬದ್ಧವಾಗಿ ಯೋಚಿಸುವ ಬುದ್ಧವಂತರಾಗಿರುತ್ತಾರೆ. ಇವರಿಗೆ ಇತರ ವ್ಯಕ್ತಿಗಳಿಗಿಂತ ಸಾಮಾನ್ಯಜ್ಞಾನ ಹಾಗೂ ಬುದ್ಧಿಮತ್ತೆ ಕೊಂಚ ಹೆಚ್ಚೇ ಇರುತ್ತದೆ. ಇವರ ಚುರುಕುಬುದ್ಧಿ ಚಿಕ್ಕಪುಟ್ಟ ವಿಷಯಗಳನ್ನೂ ಗಮನಿಸದೇ ಬಿಡದ ಹಾಗೂ ಇವರ ಅಪಾರವಾದ ಅಂತರ್ದೃಷ್ಟಿಯ ಕಾರಣಗಳಿಂದ ಇವರು ಗಹನವಾದ ಸಮಸ್ಯೆಗಳನ್ನೂ ಸುಲಭವಾಗಿ ಬಗೆಹರಿಸುತ್ತಾರೆ.

ಚಿತ್ರ #4

ಚಿತ್ರ #4

35% ರಷ್ಟು ಜನರು ಈ ಚಿತ್ರವನ್ನು ಆಯ್ಕೆ ಮಾಡಿದ್ದಾರೆ. ಶಾಂತಿ ಹಾಗೂ ಅಪಾರ ತಾಳ್ಮೆ ಈ ವ್ಯಕ್ತಿಗಳ ದೈನಂದಿನ ಜೀವನದ ಎರಡು ಪ್ರಮುಖ ಶಕ್ತಿಗಳಾಗಿವೆ.

ಸುಲಭವಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾರೆ

ಸುಲಭವಾಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾರೆ

ಇವರಿಗೆ ಎದುರಾಗುವ ಯಾವುದೇ ಸಮಸ್ಯೆಗಳನ್ನು ಇವರು ಸುಲಭವಾಗಿ ಎದುರಿಸುತ್ತಾರೆ ಹಾಗೂ ವಿಶೇಷವಾಗಿ ನಿರ್ಧಾರಗಳನ್ನು ಕೈಗೊಳ್ಳುವಾಗ ತಣ್ಣನೆಯ ಮನಸ್ಸಿನಿಂದ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಇವರಲ್ಲಿ ಹುದುಗಿರುವ ಶಕ್ತಿ ಅಪಾರವಾಗಿದ್ದು ಇವರಿಗೆ ಹೊಟ್ಟೆಯಲ್ಲಿ ಚಳಕು ಹುಟ್ಟಿಸುವ ಚಟುವಟಿಕೆಗಳೆಂದರೆ ಹೆಚ್ಚು ಪ್ರಿಯವಾಗಿರುತ್ತವೆ.

English summary

Choose An Image And Discover Your Hidden Personality!

A personality test can enlighten us on our hidden strengths. It can make us understand those little things that we have been ignoring about ourself. So, this is why we, here at Boldsky, are sharing a couple of pictures in which the hidden meaning behind each picture reveals about your personality.
Subscribe Newsletter