For Quick Alerts
ALLOW NOTIFICATIONS  
For Daily Alerts

ಜಿಮ್‌ ತರಬೇತಿ ನೀಡುವವರಿಗೆ, ಇವರು ಎಷ್ಟು ಹಣ ನೀಡುತ್ತಾರೆ ಗೊತ್ತೇ?

By Arshad
|

ಒಂದು ಕಾಲದಲ್ಲಿ ಸಿನೆಮಾ ನಟರಿಗೆ ಪ್ರತಿಭೆಯಿದ್ದರೆ ಮಾತ್ರ ಸಾಕಿತ್ತು, ದೇಹದಾರ್ಢ್ಯತೆಯ ಪ್ರಶ್ನೆ ಬರುತ್ತಿರಲಿಲ್ಲ. ಕಲ್ಯಾಣ್ ಕುಮಾರ್, ಶ್ರೀನಾಥ್ ಮೊದಲಾದ ಅಪ್ಪಟ ಪ್ರತಿಭಾವಂತರಿಗೆ ಸ್ಥೂಲಕಾಯ ಎಂದೂ ಅಡ್ಡಿಯಾಗಲಿಲ್ಲ. ಆದರೆ ಇಂದು ಸಿನೆಮಾ ತಾರೆಯರಿಗೆ ಪ್ರತಿಭೆಯ ಜೊತೆಗೆ ಅಂಗ ಸೌಷ್ಟವವನ್ನೂ ಹೊಂದಿರಬೇಕಾದುದು ಅಗತ್ಯವಾಗಿದೆ. ಹಾಲಿವುಡ್, ಬಾಲಿವುಡ್‌ನ ಪ್ರಮುಖ ನಟರು ತಮ್ಮ ಅಂಗಸೌಷ್ಟವವನ್ನು ಉಳಿಸಿಕೊಳ್ಳಲು ಹಾಗೂ ಶರೀರವನ್ನು ಹುರಿಗಟ್ಟಿಸಲು ತಮ್ಮದೇ ಆದ ವ್ಯಾಯಾಮಶಾಲೆ ಹಾಗೂ ತರಬೇತುದಾರರನ್ನು ಹೊಂದಿರುವುದು ಅಚ್ಚರಿಯ ವಿಷಯವೇನೂ ಅಲ್ಲ.

ಆದರೆ ಕೆಲವು ಚಿತ್ರಗಳಿಗಾಗಿಯೇ ತಮ್ಮ ಶರೀರವನ್ನು ಪಾತ್ರದ ಅಗತ್ಯತೆಗನುಗುಣವಾಗಿ ಬೆಳೆಸುವುದು ಮತ್ತು ಇಳಿಸುವುದು ಮಾತ್ರ ಭಾರೀ ಕಷ್ಟದ ಕೆಲಸವಾಗಿದೆ. ಇತ್ತೀಚಿನ ಭರ್ಜರಿ ಚಿತ್ರ 'ದಂಗಲ್' ಗಾಗಿ ಆಮೀರ್ ಖಾನ್‌ರವರು ತಮ್ಮ ದೇಹದ ತೂಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಂಡು ಬಳಿಕ ಇಳಿಸಿಯೂಕೊಂಡಿದ್ದರು. ಅಷ್ಟೇ ಅಲ್ಲ, ತಮ್ಮ ಮನೋಬಲದಿಂದ ತಮ್ಮ ದೇಹವನ್ನು ಮರಳಗಡಿಯಾರದಂತೆ ಬಳುಕಿಸುವ ಕಿಮ್ ಕರ್ದಾಶಿಯಾನ್ ರವರು ಸಹಾ ಮಾದರಿಯಾಗಿ ಮನಗಳಲ್ಲಿ ಸದಾ ಉಳಿದುಕೊಳ್ಳುತ್ತಾರೆ.

ಕ್ರಿಕೆಟ್ ಆಟಗಾರರಿಗೂ ತಟ್ಟಿದ ಟ್ಯಾಟೂ ಹುಚ್ಚು!

ಹುರಿಗಟ್ಟಿದ ಕಾಯಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ಇದನ್ನು ಪಡೆಯಲು ಸತತ ಪರಿಶ್ರಮ, ಕಠಿಣ ಅಭ್ಯಾಸ ಹಾಗೂ ಮುಖ್ಯವಾಗಿ ನಿಮಗೆ ಸರಿಯಾಗಿ ಮಾರ್ಗದರ್ಶನ ನೀಡಬಲ್ಲ ತರಬೇತುದಾರ ಬೇಕು. ಈ ಸಿನೆಮಾ ತಾರೆಯರು ಈ ಕೆಲಸಕ್ಕಾಗಿ ತಮ್ಮದೇ ಆದ ತರಬೇತುದಾರರನ್ನು ನೇಮಿಸಿಕೊಳ್ಳುತ್ತಾರೆ. ಇವರ ಕೆಲಸವೆಂದರೆ ತಾರೆಯರ ಆರೋಗ್ಯವೂ ಕೆಡದಂತೆ, ಐಚ್ಚಿಕ ಮೈಕಟ್ಟು ಹೊಂದಲು ನೆರವಾಗುವುದು. ಇದಕ್ಕಾಗಿ ಇವರು ಉತ್ತಮ ಪ್ರಮಾಣದ ಸಂಭಾವನೆಯನ್ನೂ ಪಡೆಯುತ್ತಾರೆ. ಬನ್ನಿ, ಯಾವ ತಾರೆಯರು ತಮ್ಮ ಮೈಕಟ್ಟಿಗಾಗಿ ತರಬೇತುದಾರರಿಗೆ ಎಷ್ಟು ವೇತನ ನೀಡುತ್ತಾರೆ ಎಂಬುದನ್ನು ನೋಡೋಣ....

 ಅಮಿರ್ ಖಾನ್

ಅಮಿರ್ ಖಾನ್

ವರ್ಷಕ್ಕೊಂದೇ ಅಪ್ಪಟ ಪ್ರತಿಭೆಯ ಚಿತ್ರ ನೀಡುವ ಆಮೀರ್ ಖಾನ್ ಪ್ರತಿಭಾವಂತ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಪಾತ್ರಕ್ಕೆ ಪೂರ್ಣನ್ಯಾಯ ಒದಗಿಸಲು ಇವರು ಯಾವುದೇ ಮಟ್ಟಕ್ಕೆ ತಮ್ಮನ್ನು ತಾವು ಬದಲಿಸಿಕೊಳ್ಳಲು ಸಿದ್ದರಾಗಿರುತ್ತಾರೆ. ಗಜನಿ ಚಿತ್ರಕ್ಕಾಗಿ ಇವರು ತಮ್ಮ ಮೈಯನ್ನು ಹುರುಗಟ್ಟಿಸಿದ್ದರೆ ಇದರ ಶ್ರೇಯ ಇವರ ತರಬೇತುದಾರ ಸತ್ಯಜಿತ್ ಚೌರಾಸಿಯಾರಿಗೆ ಸಲ್ಲಬೇಕು. ಇವರು ಪ್ರತಿ ಬಾರಿಯ ತರಬೇತಿಗಾಗಿಯೂ ಹತ್ತು ಸಾವಿರದಿಂದ ಒಂದು ಲಕ್ಷ ರೂಪಾಯಿ ಪಡೆಯುತ್ತಾರೆ. ಆಮೀರ್ ಖಾನ್ ರಿಗೆ ತರಬೇತಿ ನೀಡುವ ಜೊತೆಗೇ ಇವರು ನಿತ್ಯದ ತಾಲೀಮಿನ ಮೂಲಕ ದೇಹವನ್ನು ಸುದೃಢವಾಗಿರಿಸಲೂ ನೆರವಾಗುತ್ತಾರೆ. ದೇಹದ ಭಂಗಿಯನ್ನು ಉತ್ತಮವಾಗಿರಿಸುವುದರಿಂದ ಹಿಡಿದು ಯಾವ ಆಹಾರಗಳನ್ನು ಸೇವಿಸಬೇಕು, ಯಾವುದನ್ನು ವರ್ಜಿಸಬೇಕು ಎಂದೆಲ್ಲಾ ನಿರ್ಧರಿಸುವ ಅಧಿಕಾರ ಸತ್ಯಜಿತ್ ರಿಗೆ ಮಾತ್ರ ಇದೆ. ಇವರ ವ್ಯಾಯಾಮಗಳು ಕಠಿಣವಾಗಿದ್ದು ಇದನ್ನು ಕಡ್ಡಾಯವಾಗಿ ಪೂರ್ಣಗೊಳಿಸಲೇಬೇಕಾಗಿದ್ದು ಯಾವುದೇ ತಾರೆಯರೂ ಇವರ ಕ್ರಮವನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್

ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್

ಗರ್ಭಿಣಿಯಾದ ಬಳಿಕ ಕರೀನಾ ಕಪೂರ್ ರವರ ಮೈತೂಕ ಭಾರೀ ಪ್ರಮಾಣದಲ್ಲಿ ಇಳಿದಿದ್ದು ಹೆಚ್ಚಿನವರ ಹುಬ್ಬುಗಳನ್ನು ಏರಿಸಿತ್ತು. ಸೈಫ್ ಅಲಿ ಖಾನ್ ಸಹಾ ಉತ್ತಮ ಮೈಕಟ್ಟು ಹೊಂದಿರಲು ಇವರ ಸತತ ವ್ಯಾಯಾಮದ ಅಭ್ಯಾಸವೇ ಕಾರಣವಾಗಿದ್ದು ಈ ಜೋಡಿ ತಮ್ಮ ಆರೋಗ್ಯ ಹಾಗೂ ವ್ಯಾಯಮದ ಬಗ್ಗೆ ನಿಗಾ ವಹಿಸಲು ಖಾಸಗಿ ತರಬೇತುದಾರರ ಸೇವೆಯನ್ನು ಪಡೆಯುತ್ತಾರೆ.

ಜಾನ್ ಅಬ್ರಹಾಂ

ಜಾನ್ ಅಬ್ರಹಾಂ

ತಮ್ಮ ಮೈಕಟ್ಟು ಹಾಗೂ ಹುರಿಗಟ್ಟಿದ ಸ್ನಾಯುಗಳಿಂದಾಗಿಯೇ ಹೆಚ್ಚು ಜನಪ್ರಿಯರಾಗಿರುವ ಜಾನ್ ಅಬ್ರಹಾಂ ರವರಿಗೆ ತರಬೇತಿ ನೀಡಿದ್ದು ವಿನೋದ್ ಚನ್ನಾ. ಇವರು ಕನಿಷ್ಟ ಹದಿನೈದು ಬಗೆಯ ದೇಹದಾರ್ಢ್ಯತೆಯಲ್ಲಿ ತಜ್ಞರಾಗಿದ್ದು ಇವರು ವ್ಯಕ್ತಿಯ ಅಂಗಸೌಷ್ಟವ ಹಾಗೂ ಆರೋಗ್ಯವನ್ನು ಅಭ್ಯಸಿಸಿ ಅವರಿಗೆ ಸೂಕ್ತವಾದ ವ್ಯಾಯಮವನ್ನು ಸಲಹೆ ಮಾಡುತ್ತಾರೆ. ಇವರ ಪ್ರಕಾರ ಯಾವುದೇ ವ್ಯಕ್ತಿಗೆ ಒಂದೇ ಬಗೆಯ ವ್ಯಾಯಮಗಳು ಹೊಂದಿಕೊಳ್ಳದು. ಆದ್ದರಿಂದ ತಮ್ಮ ಗ್ರಾಹಕರಿಗೆ ಇವರು ತಮ್ಮ ಅನುಭವದಿಂದ ಅವರಿಗೆ ಸೂಕ್ತವಾಗುವ ವ್ಯಾಯಮ ಹಾಗೂ ಆಹಾರಕ್ರಮಗಳನ್ನು ಸೂಚಿಸಿ ಇದಕ್ಕೆ ಬದ್ದರಾಗಿರುವಂತೆ ಕಟ್ಟುಪಾಡು ವಿಧಿಸುತ್ತಾರೆ. ಸಿನೆಮಾ ತಾರೆಯರ ಮನೆಯಲ್ಲಿರುವ ಖಾಸಗಿ ವ್ಯಾಯಾಮಶಾಲೆಗೇ ಬಂದು ಇವರು ತರಬೇತಿ ನೀಡಲು ಇವರು ಮೂರುವರೆಯಿಂದ ಐದು ಲಕ್ಷ ರೂಪಾಯಿಗಳವರೆಗೆ ವೇತನ ಪಡೆಯುತ್ತಾರೆ. ಇಲ್ಲದಿದ್ದರೆ ಪ್ರತಿ 10-12 ಅಭ್ಯಾಸಗಳಿಗೆ ಸುಮಾರು ಒಂದೂವರೆ ಲಕ್ಷ ರೂ. ಪಡೆಯುತ್ತಾರೆ. ಇವರ ಗ್ರಾಹಕರಲ್ಲಿ ಶಿಲ್ಪಾ ಶೆಟ್ಟಿ, ಅಭಿಶೇಕ್ ಬಚ್ಚನ್ ಸಹಿತ ಹಲವು ಖ್ಯಾತ ತಾರೆಯರಿದ್ದಾರೆ.

ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್

ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್

ಇವರಿಬ್ಬರಿಗೂ ಸಮಾನರಾದ ತರಬೇತುದಾರ್ತಿ ಯಾಸ್ಮಿನ್ ಕರಾಚಿವಾಲಾರವರು ನೀಡುವ ದೈನಂದಿನ ವ್ಯಾಯಾಮಗಳನ್ನು ಪೂರೈಸದೇ ಹೊರಹೋಗುವುದೇ ಇಲ್ಲ. ಯಾಸ್ಮಿನ್ ರವರು ವಿಶೇಷವಾಗಿ ಮಹಿಳೆಯರ ವ್ಯಾಯಾಮ ತರಬೇತುದಾರ್ತಿಯಾಗಿದ್ದು ಇವರ ಗ್ರಾಹಕರಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಹೊರತಾಗಿ ದೀಪಿಕಾ ಪಡುಕೋಣೆ ಹಾಗೂ ಕರೀನಾ ಕಪೂರ್ ಸಹಾ ಇದ್ದಾರೆ. ಸುಮಾರು ಹನ್ನೆರಡು ಅಭ್ಯಾಸಗಳಿಗೆ ಇವರು 19,500ರೂ ವೇತನ ಪಡೆಯುತ್ತಾರೆ.

ಫರ್ಹಾನ್ ಅಖ್ತರ್

ಫರ್ಹಾನ್ ಅಖ್ತರ್

ಭಾಗ್ ಮಿಲ್ಖಾ ಭಾಗ್ ಚಿತ್ರಕ್ಕಾಗಿ ಇವರು ತಮ್ಮ ದೇಹವನ್ನು ಎಷ್ಟು ಕಠಿಣ ರೂಪದಲ್ಲಿ ದಂಡಿಸಿ ಹುರಿಗಟ್ಟಿಸಿದ್ದರೆಂದರೆ ಎಲ್ಲರ ಗಮನವೂ ಇವರ ಮೇಲೆ ಹರಿದಿತ್ತು. ಇದರ ಶ್ರೇಯ ವಾಸ್ತವದಲ್ಲಿ ಇವರ ತರಬೇತುದಾರ ಸಮೀರ್ ಜೌರಾರಿಗೆ ಸಲ್ಲಬೇಕು. ಇವರು ಫರ್ಹಾನ್ ಅಖ್ತರ್ ರಿಗೆ ಮಾತ್ರವಲ್ಲ, ಹೃತಿಕ್ ರೋಷನ್, ಪ್ರಿಯಾಂಕಾ ಚೋಪ್ರಾ ಸಹಿತ ಇನ್ನೂ ಹಲವು ತಾರೆಯರಿಗೆ ತರಬೇತುದಾರರಾಗಿದ್ದಾರೆ. ಪ್ರತಿತಿಂಗಳೂ ಇವರು ಪ್ರತಿ ತಾರೆಯರಿಂದ ಸುಮಾರು ನಾಲ್ಕರಿಂದ ಐದು ಲಕ್ಷ ರೂ ಸಂಭಾವನೆ ಪಡೆಯುತ್ತಾರೆ. ಇದರಲ್ಲಿ ಇವರು ನೀಡುವ ಆಹಾರಕ್ರಮದ ಸಲಹೆಯೂ ಸೇರಿದೆ.

ಜಾಕ್ವೆಲಿನ್ ಫೆರ್ನಾಂಡಿಸ್

ಜಾಕ್ವೆಲಿನ್ ಫೆರ್ನಾಂಡಿಸ್

ಪ್ರಸ್ತುತ ಜುಡ್ವಾ-2 ಎಂಬ ಚಿತ್ರದಲ್ಲಿ ವ್ಯಸ್ತರಾಗಿರುವ ಈ ತಾರೆ ತಮ್ಮ ಎಂದೂ ತಪ್ಪದ ವ್ಯಾಯಾಮ ಅಭ್ಯಾಸಗಳಿಗಾಗಿ ಹೆಸರು ಪಡೆದಿದ್ದಾರೆ. ಇವರ ತರಬೇತುದಾರ್ತಿಯಾದ ನಮೃತಾ ಪುರೋಹಿತ್ ರವರ ಶಿಸ್ತೇ ಇದಕ್ಕೆ ಕಾರಣ. ಪಿಲೇಟ್ಸ್ ಸ್ಟುಡಿಯೋ ಎಂಬ ಸಂಸ್ಥೆಯ ಸಹಸಂಸ್ಥಾಪಕಿಯೂ ಆಗಿದ್ದಾರೆ. ಇವರು ಮಾನ್ಯತೆ ಪಡೆದ ತರಬೇತಿ ಶಾಲಾ ಶಿಕ್ಷಕಿಯೂ ಹೌದು. ಇವರು ತಮ್ಮ ವಿದ್ಯಾರ್ಥಿಗಳಿಂದ ಪ್ರತಿ ಹನ್ನೆರಡು ತರಗತಿಗಳಿಗೆ ಮೂವತ್ತೆರಡು ಸಾವಿರ ರೂ ಸಂಭಾವನೆ ಪಡೆಯುತ್ತಾರೆ.

ಸಲ್ಮಾನ್ ಖಾನ್ ಹಾಗೂ ಟೈಗರ್ ಶ್ರಾಫ್

ಸಲ್ಮಾನ್ ಖಾನ್ ಹಾಗೂ ಟೈಗರ್ ಶ್ರಾಫ್

ಈ ಇಬ್ಬರೂ ತಾರೆಯರು ತಮ್ಮ ದೇಹದಾರ್ಢ್ಯತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಹಾಗೂ ಇಂದು ಅತ್ಯಂತ ಸಮರ್ಪಕ ದೇಹಸೌಂದರ್ಯವನ್ನು ಹೊಂದಿದ್ದಾರೆ. ಸುಲ್ತಾನ್ ಚಿತ್ರದ ಯಶಸ್ಸಿಗೆ ಸಲ್ಮಾನ್ ರ ದೇಹಸೌಂದರ್ಯವೇ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಅಂತೆಯೇ ಟೈಗರ್ ಶ್ರಾಫ್ ರವರ ದೇಹದಾರ್ಢ್ಯತೆಯನ್ನು ಮೆಚ್ಚದ ಯುವತಿಯೇ ಇಲ್ಲ. ಇವರ ಮೈಕಟ್ಟಿಗೆ ಪ್ರಮುಖ ಕಾರಣರಾದ ವ್ಯಕ್ತಿ ಎಂದರೆ ಮನೀಶ್ ಅದ್ವಿಲ್ಕರ್. ಇವರು ಸಲ್ಮಾನ್, ಟೈಗರ್ ಸಹಿತ ಹೃತಿಕ್ ರೋಷನ್ ರಿಗೂ ತರಬೇತು ನೀಡುತ್ತಾರೆ. ಪ್ರತಿ ತರಗತಿಗೂ ಇವರು ನಾಲ್ಕು ಸಾವಿರ ರೂ ಸಂಭಾವನೆ ಪಡೆಯುತ್ತಾರೆ. ಇವರ ವೈಶಿಷ್ಟ್ಯವೆಂದರೆ ಇವರು ತಮ್ಮ ಗ್ರಾಹಕರಿಗೆ ಯಾವುದೇ ಆಹಾರಕ್ರಮದ ಬದ್ದತೆಯನ್ನು ವಿಧಿಸುವುದಿಲ್ಲ. ಇದೇ ನಿಯಮದಿಂದ ಕಳೆದ ಇಪ್ಪತ್ತು ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕಿಮ್ ಕರ್ದಾಶಿಯಾನ್

ಕಿಮ್ ಕರ್ದಾಶಿಯಾನ್

ಇವರ ಅದ್ಭುತ ಅಂಗಸೌಷ್ಟವದ ಹಿಂದೆ ಗುನ್ನಾರ್ ಪೀಟರ್ಸನ್ ಎಂಬ ತರಬೇತುದಾರರ ಕೈಚಳಕ ಅಡಗಿದೆ. ಸಾಮಾನ್ಯವಾಗಿ ಮಹಿಳೆಯರಿಗೆ ಮಹಿಳಾ ತರಬೇತುದಾರ್ತಿಯರೇ ತರಬೇತಿ ನೀಡುತ್ತಾರೆ. ಆದರೆ ಕಿಮ್ ಈ ವ್ಯಕ್ತಿಯ ಪ್ರತಿಭೆಯನ್ನು ಬಲುವಾಗಿಯೇ ಮೆಚ್ಚಿಕೊಂಡಿದ್ದು ತಮ್ಮ ಸಹೋದರಿಯರೂ ಇವರ ತರಬೇತಿಯನ್ನು ಪಡೆಯುವಂತೆ ಮಾಡಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದಲು ದೇಹದಾರ್ಢ್ಯತೆ ಹಾಗೂ ಆಹಾರಕ್ರಮಗಳ ಬಗ್ಗೆ ತರಬೇತಿ ನೀಡುತ್ತಾ ಬಂದಿರುವ ಗುನ್ನಾರ್ ಕಿಮ್ ರ ಹೊರತಾಗಿ ಜೆನ್ನಿಫರ್ ಲೋಪೆಜ್ ಹಾಗೂ ಕಿಯಾರಾರಿಗೂ ತರಬೇತಿ ನೀಡುತ್ತಿದ್ದಾರೆ. ವರದಿಗಳ ಪ್ರಕಾರ ಒಂದು ವಾರದ ತರಬೇತಿಗಾಗಿ ಇವರು ಸುಮಾರು ಎರಡರಿಂದ ನಾಲ್ಕು ಲಕ್ಷ ರೂ ಸಂಭಾವನೆ ಪಡೆಯುತ್ತಾರೆ.

ಆನ್ನಾ ಕೈಸರ್

ಆನ್ನಾ ಕೈಸರ್

ಶಕೀರಾ, ಹೆಸರು ಕೇಳಿದ್ದೀರಾ? ಇವರೊಬ್ಬ ಗಾಯಕಿಯಾಗಿದ್ದರೂ ಇವರು ತಮ್ಮ ಅಂಗಸೌಷ್ಟವದಿಂದಲೇ ಹೆಚ್ಚು ಜನಪ್ರಿಯರು. ಇವರ ದೇಹಸೌಂದರ್ಯದ ಹಿಂದೆ ಆನ್ನಾ ಕೈಸರ್ ರವರ ಪರಿಶ್ರಮ ಅಡಗಿದೆ. ವಿಶೇಷವೆಂದರೆ ಇವರು ತರಬೇತಿ ನೀಡುವ ವಿಧಾನ ಮಾತ್ರ ಪ್ರಾಚೀನವಾಗಿದೆ. ಇದರಲ್ಲಿ ನೃತ್ಯ ಹಾಗೂ ಶಿಲಾಕಲ್ಲುಗಳ ಕೆತ್ತನೆಯಂತಹ ಕೆಲಸಗಳೂ ಒಳಗೊಂಡಿವೆ. ನೃತ್ಯವೆಂದರೆ ಸುಲಭವಾದ ನೃತ್ಯವಲ್ಲ, ಬದಲಿಗೆ ಶರೀರದ ಎಲ್ಲಾ ಸ್ನಾಯುಗಳನ್ನು ಸೆಳೆಯುವ ಮೂಲಕ ಹಾಗೂ ಲಯಬದ್ದವಾದ ಚಲನೆಯ ಮೂಲಕ ಉತ್ತಮವಾದ ದೇಹಸೌಂದರ್ಯ ಪಡೆಯಲು ಸಾಧ್ಯವಾಗುತ್ತದೆ. ಇದರಲ್ಲಿ ಯೋಗಾಸನದ ಕೆಲವು ಆಸನಗಳನ್ನೂ ಬಳಸಲಾಗಿದೆ. ಅಂದ ಹಾಗೇ ಇವರು ಪಡೆಯುವ ಸಂಭಾವನೆಯೇನೂ ಪ್ರಾಚೀನ ಕಾಲದ್ದಲ್ಲ. ಬದಲಿಗೆ ಪ್ರತಿ ತರಗತಿಗೆ ಇವರು ಸುಮಾರು ಮೂವತ್ತರಿಂದ ನಲವತ್ತು ರೂ. ಸಂಭಾವನೆ ಪಡೆಯುತ್ತಾರೆ.

ನಟಾಲಿ ಪೋರ್ಟ್ಮನ್

ನಟಾಲಿ ಪೋರ್ಟ್ಮನ್

ಯಾವುದೇ ನ್ಯೂನ್ಯತೆಯನ್ನು ಗುರುತಿಸಲೇ ಸಾಧ್ಯವಾಗದ ಅಂಗಸೌಷ್ಟವ ಹೊಂದಿರುವ ನಟಾಲಿಯವರ ಸೌಂದರ್ಯದ ಹಿಂದೆ ಮೇರಿ ಹೆಲೆನ್ ಬೋವರ್ಸ್ ಎಂಬ ತರಬೇತುದಾರ್ತಿಯ ಕೈಚಳಕವಿದೆ. ಇವರು ತಮ್ಮ ತರಬೇತಿಯನ್ನು ಸಂಗೀತದ ಲಯಬದ್ದತೆಯೊಂದಿಗೆ ಬ್ಯಾಲೆ ಹಾಗೂ ಸರಳ ವ್ಯಾಯಾಮಗಳನ್ನು ಮಾಡಿಸುತ್ತಾರೆ. ಈ ಮೂಲಕ ತರಬೇತಿ ಪಡೆಯುವ ತಾರೆಯರು ಅತ್ಯುತ್ತಮವಾದ ಅಂಗಸೌಷ್ಟವವನ್ನು ಪಡೆಯುತ್ತಾರೆ. ಇವರ ತರಬೇತಿಯ ಅವಧಿ ಕನಿಷ್ಟ ಹದಿನೈದು ನಿಮಿಷದಿಂದ ಮೂರು ಘಂಟೆಯವರೆಗೂ ಇರುತ್ತದೆ. ಈ ಅವಧಿಯನ್ನು ವಿದ್ಯಾರ್ಥಿಯ ಆರೋಗ್ಯ ಹಾಗೂ ಆಹಾರಕ್ರಮವನ್ನು ಅಸುಸರಿಸಿ ಅವರೇ ನಿರ್ಧರಿಸುತ್ತಾರೆ. ಇದಕ್ಕಾಗಿ ಪ್ರತಿ ತರಗತಿಗೆ ಪಡೆಯುವ ಸಂಭಾವನೆ ಹತ್ತು ಸಾವಿರದಿಂದ ಎಂಭತ್ತು ಸಾವಿರದವರೆಗೂ ಇರುತ್ತದೆ. ನಟಾಲಿಯವರ ಹೊರತಾಗಿ ಇವರಿಂದ ಹಲವು ಖ್ಯಾತ ತಾರೆಯರೂ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

English summary

Celebs Who Pay Fat Cheques To Their Gym Trainers

When it comes to fitness, Bollywood or Hollywood celebrities around the world follow a strict fitness routine. Be it Aamir Khan's transformation for Dangal or Kareena Kapoor's bikini body in Tashan, celebrities have always left us spellbound with their amazing body transformation. Wait, not to forget, that hourglass figure of Kim Kardashian has left us memorised every time.
X
Desktop Bottom Promotion