ಪಾಪ! ಈ ಮೂಕ ಪ್ರಾಣಿಗಳ ಗೋಳು,ಕೇಳುವವರು ಯಾರು?

By: Arshad
Subscribe to Boldsky

ಸಾವು ಎಲ್ಲರಿಗೂ ನಿಶ್ಚಿತ. ಆದರೆ ಇದು ಯಾವಾಗ ಬರುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಸಾವು ಯಾರಿಗೂ ಹೇಳದೇ ಯಾವ ಕ್ಷಣದಲ್ಲಿಯಾದರೂ ಎದುರಾಗಬಹುದು. ಇದು ನೈಸರ್ಗಿಕ ವಿಕೋಪದ ರೂಪದಲ್ಲಿಯೂ ಇರಬಹುದು ಅಥವಾ ಇನ್ನಾವುದೋ ರೂಪದಲ್ಲಿರಬಹುದು. ನಿಸರ್ಗ ಬೀಸುವ ಕೆಲವು ಸಾವಿನ ಬಾಹುಗಳನ್ನು ಮಾತ್ರ ನಾವು ಊಹಿಸಲೂ ಸಾಧ್ಯವಿಲ್ಲ. ಅಚ್ಚರಿ ಜಗತ್ತು: ನಿದ್ದೆ ಮಾಡುವುದರಲ್ಲಿ ಈ ಪ್ರಾಣಿಗಳು ನಂ.1...

ಮೇಲೆ ಶಾಂತವಾಗಿರುವಂತೆ ಕಾಣುವ ನೀರಿನಡಿಯಲ್ಲಿರುವ ಸುಳಿ ಈಜುವವನನ್ನು ಒಳಗೆಳೆದುಕೊಳ್ಳಬಹುದು. ಹಿಮಬೀಳುವ ಪ್ರದೇಶದಲ್ಲಿ ಯಾವುದೋ ಒಂದು ಘಳಿಗೆಯಲ್ಲಿ ಪ್ರಾಣಿಯ ಒಂದುಭಾಗ ಮಂಜುಗಡ್ಡೆಗೆ ಸಿಲುಕಿ ಅಂಟಿಕೊಂಡಿತೋ, ಬಳಿಕ ಇದರ ಸುತ್ತಲೂ ಕೆಲವೇ ಕ್ಷಣಗಳಲ್ಲಿ ಮಂಜುಗಡ್ಡೆ ಕಟ್ಟಿಕೊಂಡು ಐಸ್ ತುಂಡಿನಿಂದ ಆವೃತವಾಗಿಬಿಡುತ್ತದೆ. ಆದ್ದರಿಂದಲೇ ಎಂದಿಗೂ ಮಂಜುಗಟ್ಟಿರುವ ವಸ್ತುಗಳನ್ನು ಎಂದಿಗೂ ಬರಿಗೈಯಿಂದ ಮುಟ್ಟಬಾರದು. ಆದರೆ ಈ ಕ್ರಮವನ್ನು ಪ್ರಾಣಿಗಳು ಕೈಗೊಳ್ಳಲು ಸಾಧ್ಯವಿಲ್ಲದ ಕಾರಣ ಇವು ನಿರ್ವಾಹವಿಲ್ಲದೇ ಕಾಲನಿಗೆ ಬಲಿಯಾಗಿ ಮಂಜುಗಡ್ಡೆಯಲ್ಲಿ ಸಮಾಧಿಯಾಗಿಬಿಡುತ್ತವೆ.  ಶ್‌...ಎಚ್ಚರಿಕೆ! ಬಹಳ ಖತರ್ನಾಕ್ ಪ್ರಾಣಿಗಳಿವು....

ಬನ್ನಿ, ಮಂಜುಗಡ್ಡೆಯಲ್ಲಿ ಸಿಲುಕಿ ಪ್ರಾಣಕಳೆದುಕೊಂದರೂ ಆರ್ತನಾದದ ನೋಟ ಬೀರುತ್ತಿರುವ ಈ ಪ್ರಾಣಿಗಳ ಕೆಲವು ಚಿತ್ರಗಳನ್ನು ನೋಡೋಣ. ಈ ಚಿತ್ರಗಳನ್ನು ಕಂಡ ಬಳಿಕ ಈ ಪ್ರಾಣಿ ಈ ಮಂಜುಗಡ್ಡೆಯೊಳಗೆ ಸಿಲುಕಿಕೊಂಡಿದ್ದಾದರೂ ಹೇಗೆ ಎಂಬ ಯೋಚನೆ ನಿಮ್ಮನ್ನು ಕಾಡದೇ ಇರಲಾರದು.... 

ನರಿ

ನರಿ

ಜರ್ಮನಿಯ ಫ್ರಾನ್ಜ್ ಸ್ಟೇಹ್ಲೇ ಎಂಬ ಬೇಟೆಗಾರನೊಬ್ಬ ತನ್ನ ಕುಟುಂಬ ನಡೆಸುತ್ತಿರುವ ಹೋಟೆಲಿನ ಹೊರಭಾಗದಲ್ಲಿ ದೊಡ್ಡ ಮಂಜುಗಡ್ಡೆಯೊಂದನ್ನು ಕಂಡ. ಅಪ್ಪಟ ಆಯತಾಕಾರದ ಐಸ್ ಪೆಟ್ಟಿಗೆಯಲ್ಲಿ ಬಂಧಿತವಾಗಿದ್ದ ನರಿಯನ್ನು ಕಂಡು ಇತರರಿಗೆ ಸುದ್ದಿ ಮುಟ್ಟಿಸಿದ. ನೀರಿನಲ್ಲಿ ಮುಳುಗಿ ಮರಗಟ್ಟಿದ ಬಳಿಕ ಸುತ್ತಲ ನೀರು ಮಂಜುಗಡ್ಡೆಯಾಗಿದ್ದು ಒತ್ತಡದ ಮೂಲಕ ಹಲಗೆಯೊಂದು ಈ ನರಿಯನ್ನು ಒಳಗೊಂಡೇ ತುಂಡಾಗಿ ನದಿಯಲ್ಲಿ ತೇಲಿ ಬಂದಿರಬೇಕು ಎಂದು ಹೆಚ್ಚಿನವರು ಊಹಿಸಿದ್ದಾರೆ. ಬಳಿಕ ಈ ಮಂಜುಗಡ್ಡೆಯಿಂದ ನರಿಯ ಪಾರ್ಥಿವ ಶರೀರವನ್ನು ಬೇರ್ಪಡಿಸಿ ಜನವರಿ 2017ರಿಂದ ಪ್ರದರ್ಶನಕ್ಕಿಡಲಾಗಿದೆ.

Image Courtesy

ಮಂಜುಗಡ್ಡೆಯಲ್ಲಿ ಬಂಧಿತವಾಗಿ ಮೇಲೆದ್ದ ಮೀನುಗಳು

ಮಂಜುಗಡ್ಡೆಯಲ್ಲಿ ಬಂಧಿತವಾಗಿ ಮೇಲೆದ್ದ ಮೀನುಗಳು

ನೀರಿನಡಿಯಲ್ಲಿರಬೇಕಾದ ಮೀನುಗಳು ನೀರಿನ ಮೇಲೆ ಏನು ಮಾಡುತ್ತಿವೆ? ವಾಸ್ತವವಾಗಿ ಈ ಮೀನುಗಳು ಮಂಜಿನಲ್ಲಿ ಸಿಲುಕಿದ್ದು ಕೆರೆಯ ನೀರು ಕರದಿದ ಬಳಿಕ ಮಂಜುಗಡ್ಡೆ ನೀರಿನಲ್ಲಿ ತೇಲುವ ಕಾರಣ ಇವು ಬಂಧಿತವಾಗಿದ್ದ ಭಾಗ ನೀರಿನ ಮಟ್ಟಕ್ಕಿಂತಲೂ ಮೇಲೆ ಬಂದಿದೆ. ಟ್ವಿಟ್ಟರ್ ನಲ್ಲಿ ಜನವರಿ 2017 ರಲ್ಲಿ ಪ್ರಕಟವಾದ ಈ ಚಿತ್ರವನ್ನು ನೋಡಿದ ತಜ್ಞರು ಈ ಮೀನುಗಳು ನೀರಿನಲ್ಲಿ ಆಮ್ಲಜನಕ ಕಡಿಮೆಯಾದ ಕಾರಣ ಸಾವನ್ನಪ್ಪಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Image courtesy

ಸ್ವೀಡನ್ನಿನ ಮಂಜಿನಲ್ಲಿ ಸಿಲುಕಿದ ನರಿ

ಸ್ವೀಡನ್ನಿನ ಮಂಜಿನಲ್ಲಿ ಸಿಲುಕಿದ ನರಿ

ಸ್ವೀಡನ್ನಿನಲ್ಲಿ 2014 ರ ಚಳಿಗಾಲದಲ್ಲಿ ಮಂಜುಗಟ್ಟಿದ್ದ ಕೆರೆಯ ಮೇಲೆ ಐಸ್ ಸ್ಕೇಟಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಜೀವಮಾನದ ಆಘಾತವನ್ನು ಅಲ್ಲಿ ನಿರೀಕ್ಷಿಸಿರಲಿಲ್ಲ. ಕೆರೆಯ ನಡುವಣ ಭಾಗದಲ್ಲಿ ಮಂಜು ತೆಳುವಾಗಿದ್ದ ಕಡೆಯಲ್ಲಿ ನರಿಯೊಂದು ಮಂಜುಗಡ್ಡೆಕಟ್ಟಿ ತೇಲುತ್ತಿದ್ದುದನ್ನು ಕಂಡರು. ಈ ನರಿಯನ್ನು ಅವರು ಆ ಕ್ಷಣದಲ್ಲಿ ಜೀವಂತವಿತ್ತೇಂದೇ ಭಾವಿಸಿದ್ದರು...

Image courtesy

ಪಾಪ ಈ ಪುಟ್ಟ ಕಪ್ಪೆ

ಪಾಪ ಈ ಪುಟ್ಟ ಕಪ್ಪೆ

ಈ ಚಿತ್ರ ಕಂಡರೆ ಕಪ್ಪೆಯೊಂದು ನಿದ್ರಿಸುತ್ತಿದೆ ಎಂದೇ ನಿಮಗನ್ನಿಸುತ್ತದೆ. ಆದರೆ ಇದು ಮಂಜುಗಡ್ಡೆಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದು ಮುಂದಿನ ಬಿಸಿಲು ಬಂದ ಬಳಿಕ ಮಂಜು ಕರಗಿ ಈ ಸ್ಥಿತಿಯಲ್ಲಿದ್ದಾಗ ಚಿತ್ರ ತೆಗೆಯಲು ಸಿಕ್ಕಿದೆ. ನಾರ್ವೆ ದೇಶದ ಕೆರೆಯೊಂದನ್ನು ಹಾರುವಾಗ ಮಂಜಿಗೆ ಅಂಟಿಕೊಂಡ ಕಾರಣ ಇದು ಸಾವಿಗೀಡಾಗಿರಬಹುದು ಎಂದು ಒಂದು ಅಂದಾಜು.

Image courtesy

ಕತ್ತೆಯನ್ನೂ ಬಿಡದ ಮಂಜು

ಕತ್ತೆಯನ್ನೂ ಬಿಡದ ಮಂಜು

ಈ ಚಿತ್ರವನ್ನು ನೋಡಿ. ಸಂಪೂರ್ಣವಾಗಿ ಮಂಜಿನಿಂದ ಆವೃತವಾಗಿರುವ ಈ ಕತ್ತೆಗಳ ಹಿಂಡಿನ ಚಿತ್ರವನ್ನು ಯಾರೋ ತೆಗೆದು ಸಂಬಂಧಪಟ್ಟವರಿಗೆ ಕಳುಹಿಸಿದ ತಕ್ಷಣವೇ ರಕ್ಷಣಾ ತುಕಡಿಯ ಸೇವಕರು ಆಗಮಿಸಿ ಈ ಕತ್ತೆಗಳನ್ನು ಹಿಮದಲ್ಲಿ ಬಂಧಿಯಾಗುವುದರಿಂದ ರಕ್ಷಿಸಿದ್ದಾರೆ.

Image courtesy

ಮಂಜುಗಡ್ಡೆಯಲ್ಲಿ ಬಂಧಿತವಾದ ಮೀನುಗಳು

ಮಂಜುಗಡ್ಡೆಯಲ್ಲಿ ಬಂಧಿತವಾದ ಮೀನುಗಳು

ಮೀನುಗಳು ಸದಾ ನೀರಿನಲ್ಲಿ ಈಜುತ್ತಲೇ ಇರುತ್ತವೆ. ಈ ಚಲನೆಯನ್ನೇ ತಡೆದು ಮಂಜುಗಟ್ಟಿರಬೇಕಾದರೆ ಅದು ಎಷ್ಟು ವೇಗದಲ್ಲಿ ಮಂಜುಗಟ್ಟಿರಬಹುದು ಎಂದು ಊಹಿಸಬಹುದು. 2014ರಲ್ಲಿ ನಾರ್ವೆ ದೇಶದ ಮಂಜುಗಟ್ಟಿದ ಕೆರೆಯೊಂದರ ಮೇಲ್ಪದರದಲ್ಲಿ ಕಂಡುಬಂದಂತೆ ಇದರ ಅಡಿಯಲ್ಲಿ ಸಹಸ್ರಾರು ಮೀನುಗಳು ಮಂಜುಗಟ್ಟಿದ್ದವು. ವರದಿಗಳ ಪ್ರಕಾರ ಈ ಕೆರೆಯ ಮೇಲೆ ಹಾಯುತ್ತಿದ್ದ ಗಾಳಿಯ ತಾಪಮಾನ ಅತ್ಯಂತ ಕ್ಷಿಪ್ರ ಕ್ಷಣದಲ್ಲಿ ಇಡಿಯ ಕೆರೆಯನ್ನೇ ಮಂಜುಗಟ್ಟಿಸಿದ್ದೇ ಇದಕ್ಕೆ ಕಾರಣವಾಗಿದೆ.

Image courtesy

 
English summary

Can You Believe These Animals Are For Real?

These cases of living animals freezing on their own makes us realise how furious Mother Nature can be! Check out the pictures of these animals as they are mind blowing and would definitely make you wonder as to how it happened! Read on...
Please Wait while comments are loading...
Subscribe Newsletter