For Quick Alerts
ALLOW NOTIFICATIONS  
For Daily Alerts

  ನಂಬಿಕೆಯೇ ಬರುತ್ತಿಲ್ಲ! ಈ ಜಗತ್ತಿನಲ್ಲಿ ಹೀಗೂ ನಡೆಯುತ್ತಿದೆಯೇ?

  By Deepu
  |

  ಈ ಜಗತ್ತು ವೈವಿಧ್ಯಮಯವಾದ ರಹಸ್ಯಗಳಿಂದ ಕೂಡಿದೆ ಎಂಬ ಅಂಶವನ್ನು ಮರೆಮಾಚುವಂತಿಲ್ಲ. ನಮಗೆಷ್ಟೋ ತಿಳಿಯದ ವಿಷಯಗಳು ನಿಧಾನಕ್ಕೆ ನಮ್ಮ ಕಣ್ಣೆದುರಿಗೆ ಬರುತ್ತಿವೆ. ಕಟ್ಟಡದ ಉತ್ಖನನ ಸಮಯದಲ್ಲಿ, ಭೂಮಿ ಅಗೆಯುವಾಗ, ಹಳೆಯ ಮನೆಗಳನ್ನು ಕೆಡವುವಾಗ ಮೊದಲಾದ ಕ್ರಿಯೆಗಳಲ್ಲಿ ಈ ರಹಸ್ಯಗಳು ನಮ್ಮ ಕಣ್ಣೆದುರಿಗೆ ಬಂದು ನಮ್ಮನ್ನು ನಿಬ್ಬೆರಗಾಗಿಸುತ್ತವೆ.

  ಹೌದು! ಜಗತ್ತಿನಲ್ಲಿ ಸಂಘಜೀವಿಗಳಾದ ಮನುಷ್ಯರು ಒಬ್ಬರಿಗೊಬ್ಬರು ಸಹಕರಿಸಿ ಸಹಬಾಳ್ವೆ ನಡೆಸುತ್ತಿರುವ ನಡುವೆಯೇ ಕೆಲವರು ಒಂಟಿಯಾಗಿಯೇ ಇರಲು ಬಯಸುತ್ತಾರೆ. ಹೆಚ್ಚಿನವರು ಪರಿಸ್ಥಿತಿಯ ಫಲದ ಪರಿಣಾಮವಾಗಿ ತಮ್ಮ ಸ್ನೇಹಿತರಿಂದ ಹಾಗೂ ಕುಟುಂಬದಿಂದ ಪರಿತ್ಯಕ್ತರಾದವರು. ಈ ವ್ಯಕ್ತಿಗಳು ಕೈಕಾಲು ಗಟ್ಟಿ ಇದ್ದಾಗ ತಮ್ಮ ಬಾಳನ್ನು ತಾವೇ ನೋಡಿಕೊಂಡರೂ ಕೊನೆಗಾಲದಲ್ಲಿ ಯಾರೂ ಇವರ ಆರೈಕೆಗೆ ಬರದೇ ಇರುವ ಕಾರಣ ಯಾರ ಗಮನಕ್ಕೂ ಬರದೇ ಪರಂಧಾಮಕ್ಕೆ ತೆರಳುತ್ತಾರೆ! ಅಕಾಸ್ಮಾತ್ತಾಗಿ ಯಾವುದೋ ಕಾರಣದಿಂದ ಇವರ ಕಳೇಬರದ ಅವಶೇಷಗಳು ಕಂಡು ಬಂದರೂ ಯಾರಿಗೂ ಇದು ಯಾರ ಕಳೇಬರ ಎಂದು ಗೊತ್ತಿಲ್ಲದ ಕಾರಣ ಅನಾಥರಾಗುತ್ತಾರೆ.

  ಇನ್ನೂ ಅಚ್ಚರಿಯ ವಿಷಯವೆಂದರೆ ಕೆಲವು ಮನೆಗಳಲ್ಲಿರುವ ಒಬ್ಬಂಟಿ ವ್ಯಕ್ತಿಗಳು ಮನೆಯೊಳಗೇ ಮರಣ ಹೊಂದಿದ್ದು ಇವರ ಕಳೇಬರ ಕೊಳೆತು ನಾರುವ ವಾಸನೆ ಅಕ್ಕಪಕ್ಕದವರಿಗೆ ಕ್ಷೀಣವಾಗಿ ಬಡಿದರೂ ಹೆಚ್ಚಿನವರು ಇದಕ್ಕೂ ಗಮನ ಕೊಡದೇ ಹೋಗಿರುವುದು ಎಷ್ಟೋ ವರ್ಷಗಳ ನಂತರವೇ ಬೆಳಕಿಗೆ ಬರುತ್ತದೆ. ಈ ನತದೃಷ್ಟರ ಕಥೆಗಳನ್ನು ಕೇಳುತ್ತಿದ್ದರೆ ನಾವು ಯಾವ ಲೋಕದಲ್ಲಿದ್ದೇವೆ? ನಮ್ಮ ಮನುಷ್ಯತ್ವಕ್ಕೇನಾಗಿದೆ ಎಂದು ನಾವೇ ಕೇಳಿಕೊಳ್ಳುವಂತಾಗುತ್ತದೆ.... 

  ಆಕೆಯ ಮೃತದೇಹ ದೊರಕಿದ್ದು ಹಲವು ವರ್ಷಗಳ ಬಳಿಕ!

  ಆಕೆಯ ಮೃತದೇಹ ದೊರಕಿದ್ದು ಹಲವು ವರ್ಷಗಳ ಬಳಿಕ!

  ಬಾರ್ಬರಾ ಸಾಲಿನಾಸ್ ನೋರ್ಮನ್ ಎಂಬ ಮಹಿಳೆ ಓರ್ವ ಲೇಖಕಿ, ಪ್ರಕಾಶಕಿ ಹಾಗೂ ಸಾಮಾಜಿಕ ಕಾರ್ಯಕರ್ತೆಯೂ ಆಗಿದ್ದರು. ಮೆಕ್ಸಿಕೋ ದೇಶದ ಸಾಂಟಾ ಫೆ ಎಂಬ ಸ್ಥಳದಲ್ಲಿರುವ ತನ್ನ ಮನೆಯಲ್ಲಿಯೇ ಒಂಟಿಯಾಗಿದ್ದ ಈಕೆ ತನ್ನ ಎಪ್ಪತ್ತನೆಯ ವಯಸ್ಸಿನಲ್ಲಿ ವಯೋಸಹಜವಾಗಿ ಮರಣವನ್ನಪ್ಪಿದ್ದರು. ಆದರೆ ಇವರ ಮರಣ ಯಾರ ಗಮನಕ್ಕೂ ಬಾರದೇ ಒಂದು ವರ್ಷ ಕಾಲ ನಿಧನರಾದ ಸ್ಥಳದಲ್ಲಿಯೇ ಇತ್ತು. ದೂರದ ಕ್ಯಾಲಿಫೋರ್ನಿಯಾದಲ್ಲಿರುವ ಈಕೆಯ ಸಹೋದರಿ ಇವರಿಗೆ ಮಾಡಿದ ಯಾವುದೇ ಕರೆ ಅಥವಾ ಪತ್ರಕ್ಕೆ ಉತ್ತರವೇ ಇಲ್ಲವೆಂದು ತನ್ನ ಪತಿಯಲ್ಲಿ ದುಗುಡ ವ್ಯಕ್ತಪಡಿಸಿದ ಬಳಿಕ ಈ ದಂಪತಿ ಸ್ವತಃ ನೋಡಲೆಂದು ಸಾಂಟಾ ಫೆ ನಗರಕ್ಕೆ ಬಂದು ಬಾಗಿಲು ಒಡೆದು ನೋಡಿದ ಬಳಿಕವೇ ಇವರ ಮರಣದ ಸಂಗತಿ ಬಯಲಾಗಿತ್ತು.

  ಮೂರು ವರ್ಷಗಳ ನಂತರ ದೊರಕಿದ ಮೃತದೇಹ

  ಮೂರು ವರ್ಷಗಳ ನಂತರ ದೊರಕಿದ ಮೃತದೇಹ

  ಸೈಮನ್ ಆಲೆನ್ ಎಂಬ ಈ ವ್ಯಕ್ತಿ ಯಾವುದೋ ಕಾರಣಕ್ಕೆ ಸಮಾಜದೊಂದಿಗೆ ಇರಬಯಸದೇ ಒಂಟಿಯಾಗಿಯೇ ಇದ್ದ. 2013ರಲ್ಲಿ ಈತನ ಮನೆಯನ್ನು ಸ್ವಚ್ಛಗೊಳಿಸಲೆಂದು ಬಂದ ಕಾರ್ಮಿಕರಿಗೆ ಈತನ ಮೃತದೇಹ ಸಿಕ್ಕಿತ್ತು. ಆದರೆ ಮರಣ ಸಂಭವಿಸಿ ಮೂರು ವರ್ಷವೇ ಆಗಿ ಹೋಗಿತ್ತು. ಈತನ ಶವದ ಮೇಲೆ ಕೇವಲ ಒಂದು ಕಾಲುಚೀಲವಿತ್ತು ಹಾಗೂ ಆರಾಮಕುರ್ಚಿಯಲ್ಲಿ ಪವಡಿಸಿದ್ದಾಗ ಹಿಂದಕ್ಕೆ ವಾಲಿ ಬಿದ್ದ ಭಂಗಿಯಲ್ಲಿ ಸಿಕ್ಕಿತ್ತು. ಮೂರು ವರ್ಷಗಳ ಹಿಂದೆ ಆರಾಮಕುರ್ಚಿಯನ್ನು ಅತಿಹೆಚ್ಚು ಹಿಂದಕ್ಕೆ ವಾಲಿಸಿದ್ದ ಕಾರಣ ಬಿದ್ದು ತಲೆಗೇಟಾಗಿ ಸಾವು ಸಂಭವಿಸಿತ್ತು.

  ಮೂರು ವರ್ಷಗಳ ಬಳಿಕೆ ದೊರೆತ ಶವ

  ಮೂರು ವರ್ಷಗಳ ಬಳಿಕೆ ದೊರೆತ ಶವ

  ಜೆನೆವಾ ಚೇಂಬರ್ಸ್ ಬೇರೆಡೆ ವಾಸವನ್ನು ಬದಲಿಸಿದ್ದಾರೆಂದೇ ಪಕ್ಕದ ಮನೆಯವರು ಅಂದುಕೊಂಡಿದ್ದರು. ಆದರೆ ನಿಜವಾದ ವಿಷಯ ಏನಾಗಿತ್ತು ಅಂದರೆ ಆಕೆ ಮೃತಹೊಂದಿ ಮೂರು ವರ್ಷಗಳಾಗಿತ್ತು!

  ಅವಳಿ ಜವಳಿ ಮೃತದೇಹ

  ಅವಳಿ ಜವಳಿ ಮೃತದೇಹ

  ಆಂಡ್ರ್ಯೂ ಮತ್ತು ಜಾನ್‌ಸನ್ ಅವಳಿ ಜವಳಿಗಳು ಯಾವಾಗಲೂ ತೋಟಗಾರಿಕೆ ಮಾಡುತ್ತಿದ್ದಾಗ ತಮ್ಮ ನೆರೆಹೊರೆಯರ ಕಣ್ಣಿಗೆ ಬೀಳುತ್ತಿದ್ದರು. ಆದರೆ ಒಮ್ಮೆಲೇ ಕಣ್ಮರೆಯಾದ ಇವರುಗಳನ್ನು ಕುರಿತು ಯಾರೂ ಹುಡುಕುವ ಮಾಡಲಿಲ್ಲ...ಕೊನೆಗೆ ಇವರ ಮೃತದೇಹ ಮೂರು ವರ್ಷಗಳ ಬಳಿಕ, ಮನೆಯೊಂದರಲ್ಲಿ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿ ಕಾಣಲು ಸಿಕ್ಕಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

  ನಾಲ್ಕು ವರ್ಷಗಳ ಕಾಲ ಪಕ್ಕದ ಮನೆಯವರಿಗೆ ಸಾವಿನ ಕುರಿತು ತಿಳಿದೇ ಇಲ್ಲ

  ನಾಲ್ಕು ವರ್ಷಗಳ ಕಾಲ ಪಕ್ಕದ ಮನೆಯವರಿಗೆ ಸಾವಿನ ಕುರಿತು ತಿಳಿದೇ ಇಲ್ಲ

  ಡೇವಿಡ್ ವಾಕರ್ ಪಕ್ಕದ ಮನೆಯವರು ಮತ್ತು ಸ್ನೇಹಿತರಿಗೆ ನೆಚ್ಚಿನ ವ್ಯಕ್ತಿಯಾಗಿದ್ದ. ಹೊರದೇಶಕ್ಕೆ ಹೋಗುವುದಾಗಿ ಹೀಗೆಯೇ ಆತ ಅವರಿಗೆಲ್ಲಾ ತಿಳಿಸಿದ್ದ. ಆದರೆ ತಾನೇ ಗುಂಡುಹಾರಿಸಿ ಮೃತನಾದ. ಬಳಿಕ ನಾಲ್ಕು ವರ್ಷಗಳ ಬಳಿಕೆ ಈತನ ಮೃತದೇಹದ ಅಸ್ತಿಪಂಜರಗಳು ದೊರಕಿದೆ.

  ಹದಿನೈದು ವರ್ಷಗಳ ಬಳಿಕ ದೊರಕಿದ ಮೃತದೇಹ

  ಹದಿನೈದು ವರ್ಷಗಳ ಬಳಿಕ ದೊರಕಿದ ಮೃತದೇಹ

  ಫ್ರಾನ್ಸ್ ದೇಶದ ಲಿಲ್ಲೆ ಎಂಬ ಸ್ಥಳದ ನಿವಾಸಿಯಾಗಿದ್ದ ವ್ಯಕ್ತಿಯೊಬ್ಬರ ಶವ 2012ರಲ್ಲಿ ಸಿಕ್ಕಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಈ ವ್ಯಕ್ತಿ ಹದಿನೈದು ವರ್ಷಕ್ಕೂ ಹಿಂದೆಯೇ ಸಾವಿಗೀಡಾಗಿದ್ದ ಅಂಶ ಬೆಳಕಿಗೆ ಬಂದಿತ್ತು. ಈ ವ್ಯಕ್ತಿ ಒಂಟಿಜೀವನ ನಡೆಸುತ್ತಿದ್ದು ಅಕ್ಕಪಕ್ಕದವರೊಂದಿಗಾಗಲೇ ಸಂಬಂಧಿಕರೊಂದಿಗಾಗಲೀ ಸಂಪರ್ಕವೇ ಇರಿಸಿಕೊಂಡಿರದಿದ್ದ ಕಾರಣ ಯಾರಿಗೂ ಈ ವ್ಯಕ್ತಿಯ ಇರುವಿಕೆಯಾಗಲೀ ಸಾವಿಗೀಡಾಗಿದ್ದುದಾಗಲೀ ಅರಿವೇ ಇರಲಿಲ್ಲ.

  ವರ್ಷಗಳ ಬಳಿಕ ದೊರೆತ ಮೃತದೇಹ

  ವರ್ಷಗಳ ಬಳಿಕ ದೊರೆತ ಮೃತದೇಹ

  59 ವರ್ಷದ ಪುರುಷ ಮೃತದೇಹದ ಅಸ್ತಿಪಂಜರವು ಏಳು ವರ್ಷಗಳ ಬಳಿಕ ಹಾಸಿಗೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ದೊರಕಿದೆ. ಸಿಗರೇಟ್, ಹಳೆಯ ಟಿವಿ ಗೈಡ್ ಕಾಯಿನ್‌ಗಳನ್ನು ಮೃತದೇಹದ ಪಕ್ಕದಲ್ಲಿ ದೊರಕಿದೆ.

   8 ವರ್ಷಗಳ ಬಳಿಕ ಆಕೆಯ ಮೃತದೇಹ ದೊರಕಿದೆ

  8 ವರ್ಷಗಳ ಬಳಿಕ ಆಕೆಯ ಮೃತದೇಹ ದೊರಕಿದೆ

  ನಟಾಲಿ ವುಡ್ ಹೆಸರಿನ ಅಸ್ಸಿ ಮಹಿಳೆ ಮೆದುಳು ಜ್ವರದಿಂದ ಬಳಲುತ್ತಿದ್ದರು. ಆದರೆ ಈಕೆ ಮೃತಳಾಗಿ 8 ವರ್ಷಗಳ ಬಳಿಕ ಆಕೆಯ ದೇಹದ ಅಸ್ತಿಪಂಜರಗಳು ದೊರಕಿದೆ.

  5 ವರ್ಷಗಳ ಬಳಿಕ ದೊರೆತ ಮೃತದೇಹ

  5 ವರ್ಷಗಳ ಬಳಿಕ ದೊರೆತ ಮೃತದೇಹ

  ಪಿಯಾ ಫ್ಯಾರೆನ್ಕಾಫ್ ಎಂಬ ಮಹಿಳೆಗೆ ಒಂದೆಡೆ ಸ್ಥಿರವಾಗಿ ನೆಲೆಸುವುದೇ ಗೊತ್ತಿರಲಿಲ್ಲ. ಸದಾ ಅಲೆಮಾರಿಯಾಗಿ ತಿರುಗಾಡಿಕೊಂಡಿದ್ದ ಈಕೆ ಯಾವಾಗಲೋ ಒಮ್ಮೆ ಯಾವುದೋ ಸಾಗರದಾಚೆಯ ದೇಶದಿಂದ ತನ್ನವರಿಗೆ ಫೋನ್ ಮೂಲಕ ತನ್ನ ಕ್ಷೇಮಸಮಾಚಾರವನ್ನು ತಿಳಿಸುತ್ತಿದ್ದಳು. ಪ್ರತಿಬಾರಿ ಫೋನ್ ಮಾಡಿದಾಗಲೂ ಸ್ಥಳ ಬದಲಾವಣೆಯಾಗಿರುತ್ತಿದ್ದ ಕಾರಣ ಈಕೆ ಕಣ್ಮರೆಯಾದುದನ್ನು ಯಾರೂ ಗಮನಿಸಲೇ ಇಲ್ಲ. ಆದರೆ ಈಕೆಯ ಕಳೇಬರವನ್ನು ಈಕೆ ಸತ್ತು ಐದು ವರ್ಷಗಳ ಬಳಿಕ ಪೋಲೀಸರು ಕಂಡುಕೊಂಡ ಬಳಿಕ ಎಲ್ಲರಿಗೂ ಭಾರೀ ಆಘಾತ ಕಾದಿತ್ತು.

  English summary

  Bodies That Were Found YEARS After the Person Died

  The world is filled with many loners. There are those who are left to lead a life without friends and family. These are the people who are hardly cared for in their last moments. These are some of the people who were left to die alone. And the sad part is, nobody cared to even check on them for years!
  Story first published: Saturday, June 24, 2017, 23:33 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more