Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಈ ಶಾಲೆಯಲ್ಲಿ ಶಿಕ್ಷಕಿಯರು ಬಿಕಿನಿ ಹಾಕಿಯೇ, ಮಕ್ಕಳಿಗೆ ಪಾಠ ಮಾಡಬೇಕಂತೆ!
ಆಧುನಿಕತೆ ಮುಂದುವರಿಯುತ್ತಿದ್ದಂತೆ ನಮ್ಮ ಕಿವಿಗಳೂ ವಿಲಕ್ಷಣ ವಿಚಾರಗಳನ್ನು ಕೇಳುತ್ತಿವೆ. ಇವುಗಳೆಲ್ಲವನ್ನು ನೋಡುತ್ತಿದ್ದರೆ ಒಂದು ವಿಷಯ ಸ್ಪಷ್ಟವಾಗಿ ಅರ್ಧವಾಗತ್ತದೆ. ಅದೇನೆಂದರೆ ಪ್ರಪಂಚದೆಲ್ಲೆಡೆ ವಿಲಕ್ಷಣ ಎನ್ನುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎನ್ನುವುದು. ಶಾಲೆಯೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಪೂಜ್ಯ ಭಾವನೆ ಮೂಡುತ್ತದೆ. ಮಕ್ಕಳ ವಿದ್ಯಾರ್ಜನೆಯ ಮಂದಿರ ಎಂದು ಪರಿಗಣಿಸಲಾಗುತ್ತದೆ.
ಅಂತಹ ಸ್ಥಳದಲ್ಲಿ ಶಿಕ್ಷಕರಾದವರು ಬಿಕನಿಯಲ್ಲಿರುತ್ತಾರೆ ಎಂದರೆ ಎಂತಹ ಆಶ್ಚರ್ಯ ಅಲ್ಲವಾ? ಇದು ಒಂದು ಕ್ಷಣಕ್ಕೆ ನಂಬಲಾಗದಂತಹ ಸುದ್ದಿ ಎನಿಸಬಹುದು. ಆದರೆ ಇದು ನಿಜ. ಹೌದು, ಚೀನಾದಲ್ಲಿರುವ ಒಂದು ಶಾಲೆಯಲ್ಲಿ ಶಿಕ್ಷಕರು ಯಾವುದೇ ಔಪಚಾರಿಕ ಉಡುಗೆಯನ್ನು ಧರಿಸುವುದಿಲ್ಲ. ನಿತ್ಯವೂ ಬಿಕನಿಯನ್ನು ಧರಿಸುತ್ತಾರೆ. ಇವರು ಬಿಕನಿಯಲ್ಲಿ ಭೋದಿಸುವುದರಿಂದಲೇ ಶಾಲೆಯು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ ಎನ್ನಲಾಗುತ್ತದೆ. ವಿಲಕ್ಷಣ ಉಡುಗೆ ಪದ್ಧತಿಯ ಶಾಲೆಯ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಮುಂದಿನ ವಿವರಣೆಯನ್ನು ಓದಿ...
ನಿಮಗೆ ಗೊತ್ತಾ? ಈ ಶಾಲೆಯ ಶಿಕ್ಷಕರು ಬಿಕನಿಯಲ್ಲಿ ಬೋಧಿಸುತ್ತಾರೆ

ಇದೊಂದು ಆನ್‍ಲೈನ್ ಶಾಲೆ
ಈ ಶಾಲೆಗೆ "ಸೆಕ್ಸಿಮ್ಯಾಂಡರಿನ್ ಡಾಟ್ ಕಾಮ್" ಎಂದು ಕರೆಯುತ್ತಾರೆ. ಇದರಲ್ಲಿ ಮ್ಯಾಂಡರಿನ್ ಭಾಷೆಯನ್ನು ಕಲಿಸುವ ಶಿಕ್ಷಕರು ಬಿಕನಿಯನ್ನು ಧರಿಸಿರುತ್ತಾರೆ ಎನ್ನಲಾಗುವುದು. ಈ ಶಿಕ್ಷಕರ ಪ್ರತಿಕ್ರಿಯೆಯಿಂದ ಶಾಲೆಯು ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ ಎನ್ನುತ್ತಾರೆ.

2011ರಲ್ಲಿ ಆರಂಭಗೊಂಡ ಶಾಲೆ
ದಾಖಲೆಯ ಪ್ರಕಾರ ಈ ಶಾಲೆಯು 2011ರಲ್ಲಿ ಆರಂಭವಾಯಿತು. ಶಾಲೆಯ ಆರಂಭಿಕ ದಿನಗಳಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರಲಿಲ್ಲ. ಆನ್‍ಲೈನ್‍ನಲ್ಲಿ ಮ್ಯಾಂಡರಿನ್ ಭಾಷೆಯನ್ನು ಶಿಕ್ಷಕರು ಬಿಕನಿ ಧರಿಸಿ ಕಲಿಸಲು ಪ್ರಾರಂಭಿಸಿದರು. ಆಗ ಹೆಚ್ಚು ಜನಪ್ರಿಯತೆ ಪಡೆಯಿತು ಎನ್ನಲಾಗುತ್ತದೆ.

ಮೊದಲ ಅಧ್ಯಾಯ
ಈ ಶಾಲೆಯ ಮೊದಲ ಪಾಠ, ಮಾಹಿತಿ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿದ್ದು. ಇವುಗಳನ್ನು ಲಿಂಗರೀ ಧರಿಸಿರುವ ರೂಪದರ್ಶಿಗಳು ಬೋಧನೆ ಮಾಡುತ್ತಾರೆ. ಇದು ಅತ್ಯಂತ ಜನಪ್ರಿಯತೆ ಪಡೆದುಕೊಂಡಿದ್ದು, ಜನರು ಸದಾ ಈ ವಿಚಾರದ ಕುರಿತು ಹೆಚ್ಚು ಮಾತನಾಡಿಕೊಳ್ಳಲು ಪ್ರಾರಂಭಿಸಿದ್ದಾರೆ ಎನ್ನಲಾಗುತ್ತಿದೆ.

ವಿಚಿತ್ರವಾದ ಪಾಠಗಳು
ಈ ವಿಚಿತ್ರ ಶಾಲೆಯ ಪಠ್ಯ ಕ್ರಮದ 3ನೇ ಅಧ್ಯಾಯ ಶಾಲೆಯ ವಿಚಿತ್ರ ಸಂಗತಿಗಳನ್ನು ವಿವರಿಸುತ್ತದೆ. ಅಲ್ಲದೆ ಅಡುಗೆ ಶಬ್ಧಕೋಶದ ಬಗ್ಗೆ ತಿಳಿಸುತ್ತದೆ. ನಿಂಬೆ ಹಣ್ಣನ್ನು ಹೀರುವುದು ಹೇಗೆನ್ನುವ ಅಸಭ್ಯವಾದ ಚಿತ್ರಣ. ಇನ್ನೊಂದು ಅಧ್ಯಾಯದಲ್ಲಿ ಮಹಿಳಾ ಶಿಕ್ಷಕರು ಕಪ್ಪು ಬಣ್ಣದ ಲಂಡನ್ ಕ್ಯಾಬ್ ಒಂದನ್ನು ನಯವಾದ ಸ್ಪಂಜ್‍ಗಳೊಂದಿಗೆ ಸ್ವಚ್ಛಗೊಳಿಸುತ್ತಿರುವಂತೆ ತೋರಿಸಿದ್ದಾರೆ.

ಇದರ ಆರಂಭ
ನಾಟಿಂಗ್‍ಹಾಮ್ ವಿಶ್ವವಿದ್ಯಾಲಯದಲ್ಲಿ ವಾಸ್ತುಶಿಲ್ಪ ಪದವಿ ಪಡೆದ ಕೌರು ಕಿಕುಚಿ ಎನ್ನುವ ಹೆಸರಿನ ಮಹಿಳೆಯೊಬ್ಬರಿಂದ ಈ ವೆಬ್‍ಸೈಟ್ ಆರಂಭಗೊಂಡಿತು. ಸಾಮಾನ್ಯ ಜನರಿಗೂ ಚೈನಾ ಭಾಷೆಯಾದ ಮ್ಯಾಂಡರಿನ್ ಭಾಷೆಯ ಜ್ಞಾನ ಬೆಳೆಸುವ ಉದ್ದೇಶದಿಂದ ಈ ವೆಬ್‍ಸೈಟ್‍ನಲ್ಲಿ ಬೋಧನೆ ಆರಂಭಿಸಿದೆಯಂತೆ. ಸಂಸ್ಥಾಪಕರ ಪ್ರಕಾರ ವೆಬ್‍ಸೈಟ್ ಅಮೆರಿಕಾದಲ್ಲಿ ಹೆಚ್ಚು ಯಶಸ್ವಿಯನ್ನು ಪಡೆದಿದೆ. ಹೊಸ ಹೊಸ ಯೋಜನೆಗಳಿಂದ ಜನರನ್ನು ತಲುಪುವುದು ನಮ್ಮ ಉದ್ದೇಶ ಎನ್ನುತ್ತಾರೆ.

ಟೀಕೆಗೆ ಒಳಗಾಗಿದೆ
ಆನ್‍ಲೈನ್‍ಅಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದರೂ, ಚೀನಾದಲ್ಲಿ ಸ್ತ್ರೀ ಸಮಾನತಾವಾದಿಗಳು ಇದನ್ನು ಟೀಕಿಸಿದ್ದಾರೆ. ಎಲ್ಲಾ ಸಾಮಾಜಿಕ ವೇದಿಕೆಗಳಲ್ಲಿ ಮುಜುಗರವನ್ನು ಸೃಷ್ಟಿಸುವಂತಿದೆ. ಶಿಕ್ಷಕರು ಈ ರೀತಿಯಲ್ಲಿ ಬೋಧಿಸುವುದು ಕೇವಲ ಚೀನಾ ಮಹಿಳೆಯರಿಗಷ್ಟೇ ಅಲ್ಲ. ಪ್ರಪಂಚದಾದ್ಯಂತ ಮಹಿಳೆಯರಿಗೂ ಮುಜುಗರದ ಸಂಗತಿ ಎಂದು ಹೇಳಲಾಗುತ್ತಿದೆ.



Click it and Unblock the Notifications
