For Quick Alerts
ALLOW NOTIFICATIONS  
For Daily Alerts

  ರಾಶಿ ಭವಿಷ್ಯ: ವಿರಾಟ್ ಮತ್ತು ಅನುಷ್ಕಾಳ ದಾಂಪತ್ಯ ಜೀವನದ ಭವಿಷ್ಯ

  By Deepu
  |

  ಭಾರತದ ಕ್ರಿಕೆಟ್ ತಂಟಡದ ನಾಯಕ ವಿರಾಟ್ ಕೋಹ್ಲಿ ಮತ್ತು ಬಾಲಿವುಡ್ ಸುಂದರಿ ಅನುಷ್ಕಾ ಶರ್ಮಾ ದೂರದ ದೇಶವಾದ ಇಟಲಿಯಲ್ಲಿ ವಿವಾಹವಾಗಿದ್ದಾರೆ. ಇವರು ದೇಶವನ್ನು ಬಿಟ್ಟು ವಿದೇಶದಲ್ಲಿ ವಿವಾಹವಾಗಿರುವುದಕ್ಕೂ ಕೆಲವು ಪ್ರಮುಖ ಕಾರಣಗಳಿವೆ ಎಂದು ಮೂಲಗಳು ತಿಳಿಸುತ್ತಿವೆ. ಈಗಾಗಲೇ ಕೆಲವು ಫೋಟೋಗಳು ಹಾಗೂ ವೀಡಿಯೊ ಅಭಿಮಾನಿಗಳಿಗೆ ಸಿಕ್ಕಿರುವುದು ಸಂತೋಷ ಹಾಗೂ ವಿಶೇಷವಾದ ಸಂಗತಿಯಾಗಿದೆ.

  ಕೆಲವು ವರ್ಷಗಳ ಕಾಲ ಜೋಡಿ ಹಕ್ಕಿಯಂತೆ ಹಾರಾಡಿಕೊಂಡಿರುವ ಇವರಿಬ್ಬರು ಇದೀಗ ಸುದ್ದಿಯಿಲ್ಲದೆ ಮದುವೆಯಾಗಿದ್ದಾರೆ. ಅದೇನೇ ಇರಲಿ ಇವರ ಇಬ್ಬರ ವಿವಾಹದ ಜೀವನ ಸುಖಮಯವಾಗಿರಲಿ ಎಂದು ಅಭಿಮಾನಿಗಳು ಆಶಿಸುತ್ತಾರೆ. ತಮ್ಮ ತಮ್ಮ ವೃತ್ತಿ ಜೀವನದಲ್ಲಿ ವಿಶೇಷ ಸಾಧನೆ ಹಾಗೂ ಹೆಸರನ್ನು ಮಾಡಿರುವ ಇವರ ಕುಂಡಲಿಗಳ ಅನುಕೂಲಗಳು ಮತ್ತು ಅನಾನೂಕೂಲಗಳನ್ನು ಗಮನಿಸಿದರೆ ಇವರು ಅತುತ್ತಮ ಜೋಡಿಯಾಗಿ ಬದುಕು ನಡೆಸಲಿದ್ದಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ.

  ಈ ವಿಚಾರ ಅಭಿಮಾನಿಗಳಿಗೆ ಇನ್ನಷ್ಟು ಖುಷಿಯನ್ನು ಕೊಟ್ಟಿರುವುದರಲ್ಲಿ ಎಳ್ಳಷ್ಟು ಸಂದೇಹವಿಲ್ಲ. ಸ್ವರ್ಗದಲ್ಲಿ ನಿಶ್ಚಯವಾಗುವ ದಾಂಪತ್ಯ ಜೀವನವು ಜೀವನದ ತಿರುವುಗಳನ್ನು ಬದಲಾಯಿಸುತ್ತವೆ. ಈ ಇಬ್ಬರು ಗಣ್ಯರ ಜಾತಕವು ಹೇಗೆ ಹೊಂದಾಣಿಕೆಯನ್ನು ಪಡೆದುಕೊಂಡಿದೆ? ಇವರ ಮುಂದಿನ ಜೀವನ ಹೇಗಿದೆ ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸುತ್ತಿದೆ...

  ಅವರದ್ದು ಆಕರ್ಷಕ ವ್ಯಕ್ತಿತ್ವ

  ಅವರದ್ದು ಆಕರ್ಷಕ ವ್ಯಕ್ತಿತ್ವ

  ಅನುಷ್ಕಾ ವೃಷಭ ರಾಶಿಯಲ್ಲಿ ಜನಿಸಿದವಳು. ವಿರಾಟ್ ವೃಶ್ಚಿಕ ರಾಶಿಯವನು. ಇವರಿಬ್ಬರ ರಾಶಿ ಚಿಹ್ನೆಗಳು ಆದರ್ಶ ದಾಂಪತ್ಯವನ್ನು ಸೂಚಿಸುತ್ತವೆ. ಇವರಿಬ್ಬರ ನಕ್ಷತ್ರವು ಕಾಂತೀಯ ವ್ಯಕ್ತಿತ್ವವನ್ನು ಹೊಂದಿದೆ. ವೃಶ್ಚಿಕ ರಾಶಿಯಲ್ಲಿ ಹುಟ್ಟಿದ ವ್ಯಕ್ತಿ ತನ್ನ ಸಂಗಾತಿ ಹಾಗೂ ಪ್ರೀತಿಯನ್ನು ಬಹಳ ಸುರಕ್ಷಿತವಾಗಿ ಪ್ರೀತಿಯಿಂದ ರಕ್ಷಿಸುತ್ತಾನೆ ಎನ್ನಲಾಗುವುದು.

   ಉತ್ತಮ ಹೊಂದಾಣಿಕೆ ಇರುತ್ತದೆ

  ಉತ್ತಮ ಹೊಂದಾಣಿಕೆ ಇರುತ್ತದೆ

  ವೃಶ್ಚಿಕದವರು ಸದಾ ಉತ್ಸಾಹ, ಸೃಜನಾತ್ಮಕವಾಗಿ ತಮ್ಮ ಸಾಮರ್ಥ್ಯವನ್ನು ಹೊಂದಿರುವ ಸ್ವಭಾವದವರಾಗಿರುತ್ತಾರೆ. ಅನುಷ್ಕಾ ರಾಶಿಚಕ್ರವು ಬಿಂದಾಸ್ ವರ್ತನೆಯಿಂದ ಉತ್ತಮ ಹೊಂದಾಣಿಕೆ ಕಾಣುವುದು.

  ಜ್ಯೋತಿಷ್ಯ ಹೇಳುವುದು

  ಜ್ಯೋತಿಷ್ಯ ಹೇಳುವುದು

  ಜ್ಯೋತಿಷ್ಯದ ಪ್ರಕಾರ ವೃಷಭ ರಾಶಿಯ ಮಹಿಳೆ, ವೃಶ್ಚಿಕರಾಶಿಯ ಪುರುಷನನ್ನು ಅಭಿನಂದಿಸುತ್ತಾಳೆ. ಎರಡೂ ರಾಶಿ ಚಕ್ರದವರು ತಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳುತ್ತಾರೆ. ಇವರು ವ್ಯವಹಾರವನ್ನು ಸಾರ್ವಜನಿಕ ನೋಟದಲ್ಲಿ ಇರಿಸಿಕೊಳ್ಳುತ್ತಾರೆ ಎನ್ನಲಾಗುವುದು. ಇದು ಶಾಂತಿಯುತವಾದ ವಿವಾಹವಾಗಿಯೇ ಎಲ್ಲರನ್ನು ಸೆಳೆದುಕೊಳ್ಳುವುದು.

  ಪರಸ್ಪರ ಹೊಂದಾಣಿಕೆ

  ಪರಸ್ಪರ ಹೊಂದಾಣಿಕೆ

  ಈ ಎರಡು ರಾಶಿ ಚಕ್ರದವರು ಪರಸ್ಪರ ಹೇಗೆ ತಮ್ಮ ಪ್ರೀತಿ ಪಾತ್ರರನ್ನು ನೋಡಿಕೊಳ್ಳಬೇಕು ಎನ್ನುವುದನ್ನು ಅರಿತಿರುತ್ತಾರೆ. ವೃಶ್ಚಿಕದವರ ಮನಃಸ್ಥಿತಿ ಬದಲಾದಾಗ ಅದನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ವೃಷಭ ರಾಶಿಯವರು ತಿಳಿದಿರುತ್ತಾರೆ. ಹಾಗಗಿಯೇ ಈ ದಂಪತಿಗಳು ಜೆಲ್ ನಂತೆ ಅಂಟಿಕೊಂಡು ಇರುತ್ತಾರೆ ಎಂದು ಹೇಳಲಾಗುತ್ತದೆ.

  ಇನ್ನೊಂದಿಷ್ಟು...

  ಇನ್ನೊಂದಿಷ್ಟು...

  ವೃಷಭ ರಾಶಿಯಾಗಿರುವ ಅನುಷ್ಕಾ ಸಂಗಾತಿಯ ಹಠತ್ ನಿರ್ಧಾರಗಳನ್ನು ವಿವೇಕದಿಂದ ಹೇಗೆ ಸ್ವೀಕರಿಸಬೇಕು? ಮತ್ತು ನಿಯಂತ್ರಿಸಬೇಕು? ಎನ್ನುವುದನ್ನು ಅರಿತಿರುತ್ತಾರೆ. ನೈಜ ವರ್ತನೆ ಹಾಗೂ ಸ್ವಭಾವವು ವಿರಾಟ್ ಅವರನ್ನು ಭಾವನಾತ್ಮಕವಾಗಿ ಸಮತೋಲನಗೊಳಿಸುತ್ತದೆ. ಜೊತೆಗೆ ಇಬ್ಬರಲ್ಲೂ ಉತ್ತಮ ಹೊಂದಾಣಿಕೆ ಇರುತ್ತದೆ ಎಂದು ಹೇಳುತ್ತದೆ.

  English summary

  astro-compatibility-between-virat-kohli-anushka-sharma

  With the secret wedding and breaking the news to the world through their social media accounts, Virat And Anushka took the world by a storm on their wedding day. The media has been going bonkers about their wedding in Italy. From her beautiful gown to the pagadi that Virat wore on their wedding day, their wedding was the major talk of the town. Amidst all this, we here at Boldsky reveal the zodiac compatibility between these two celebs. So, check out on how this match is made in heaven, if stars are to be believed...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more