ಬೇಕಾ ಮೇಕಪ್!! ಇದರಿಂದಾಗಿ ಈಕೆ ಒಂದು ಕಣ್ಣನ್ನೇ ಕಳೆದುಕೊಳ್ಳಬೇಕಾಯ್ತು!

By: manu
Subscribe to Boldsky

ಸೌಂದರ್ಯ ಪ್ರಸಾಧನಗಳ ಅಲರ್ಜಿಯಿಂದ ಕೈಗಳಲ್ಲಿ ಬೊಬ್ಬೆ ಬಂದ, ಸುಟ್ಟ ಕಥೆಗಳನ್ನು ಆಗಾಗ ಕೇಳುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ತಪ್ಪು ಸೌಂದರ್ಯ ಪ್ರಸಾಧನವನ್ನು ಬಳಸಿದ ಕಾರಣ ಮಹಿಳೆಯೊಬ್ಬರು ತನ್ನ ಕಣ್ಣನ್ನೇ ಕಳೆದುಕೊಳ್ಳಬೇಕಾದ ವಿದ್ರಾವಕ ಘಟನೆ ಜರುಗಿದೆ. ಕಳಪೆ ಮತ್ತು ಅಗ್ಗದ ಸೌಂದರ್ಯ ಪ್ರಸಾಧನಗಳ ಬಳಕೆ ಇದಕ್ಕೆ ಮೊದಲ ಕಾರಣವಾದರೆ, ಯಾವುದೇ ಸೌಂದರ್ಯ ಪ್ರಸಾಧನವನ್ನು ಬಳಸವುದಕ್ಕೂ ಮುನ್ನ ಕಡ್ಡಾಯವಾಗಿ ಮಾಡಬೇಕಾದ ಅಲರ್ಜಿಕಾರಕ ಪರೀಕ್ಷೆಯನ್ನು ನಡೆಸದೇ ಇರುವುದು ಇನ್ನೊಂದು ಕಾರಣವಾಗಿದೆ.   ಮೇಕಪ್ ಹಿಂದಿರುವ ಬೆಚ್ಚಿ ಬೀಳಿಸುವ ಭಯಾನಕ ಸತ್ಯ

ಕಾರಣವೇನೇ ಇರಲಿ, ಇದರಿಂದ ಕಳೆದುಕೊಂಡ ಸೌಂದರ್ಯ ಹಾಗೂ ಅಂಗಗಳು ಮತ್ತೆ ಪಡೆಯಲಾರದ ಶಾಶ್ವತ ನಷ್ಟವಾಗಿದೆ. ಮಹಿಳೆಯೊಬ್ಬರು ತಪ್ಪು ಪ್ರಸಾಧನವನ್ನು ಬಳಸಿದ ಕಾರಣ ಕಣ್ಣನ್ನೇ ಕಳೆದುಕೊಳ್ಳಬೇಕಾಗಿ ಬಂದ ಸತ್ಯಘಟನೆಯನ್ನು ಇಂದು ಸಾದರಪಡಿಸುತ್ತಿದ್ದೇವೆ. ಇದು ಕಳಪೆ ಮತ್ತು ಅಗ್ಗದ ಪ್ರಸಾಧನಗಳನ್ನು ಕೊಳ್ಳುವ ಯಾರಿಗೇ ಆದರೂ ನೀಡುವ ಎಚ್ಚರಿಕೆಯ ಘಂಟೆಯಾಗಿದೆ...

ಒಂದು ರಾತ್ರಿ ಈ ಘಟನೆ ನಡೆಯಿತು

ಒಂದು ರಾತ್ರಿ ಈ ಘಟನೆ ನಡೆಯಿತು

ಮಧ್ಯಮವರ್ಗದ ಈ ಮಹಿಳೆ ಇಬ್ಬರು ಮಕ್ಕಳ ತಾಯಿಯಾಗಿದ್ದು ಸುಖಜೀವನ ನಡೆಸುತ್ತಿದ್ದಳು. ಒಂದು ಸಂಜೆ ಆಕೆ ತನ್ನ ಗೆಳತಿಯರೊಂದಿಗೆ ಮೋಜಿನ ಸಮಯವನ್ನು ಕಳೆದು ಮನೆಗೆ ಬಂದ ಬಳಿಕ ಕಣ್ಣಿನ ಮೇಕಪ್ ನಿವಾರಿಸಲು ನೀರಿನಿಂದ ತೊಳೆಯುತ್ತಿದ್ದಂತೆ ಕಣ್ಣುರೆಪ್ಪೆಗಳಲ್ಲಿ ಏನೋ ವಿಚಿತ್ರವಾದ ಅನುಭವವಾಯಿತು.

ಮುಂದಿನ ಘಟನೆಯನ್ನು ಆಕೆಯ ಸ್ನೇಹಿತೆ ಹೀಗೆ ವಿವರಿಸುತ್ತಾರೆ

ಮುಂದಿನ ಘಟನೆಯನ್ನು ಆಕೆಯ ಸ್ನೇಹಿತೆ ಹೀಗೆ ವಿವರಿಸುತ್ತಾರೆ

ಸಾಮಾಜಿಕ ತಾಣದಲ್ಲಿ ಆಕೆಯ ಸ್ನೇಹಿತೆಯೊಬ್ಬರು ಹೀಗೆ ವಿವರಿಸುತ್ತಾರೆ: "ನನ್ನ ಸ್ನೇಹಿತೆ ಎರಿಕಾ ಡಿಯಾಜ್ ರವರು ಕಣ್ಣಿಗೆ ಹೊಳೆಯುವ ಗ್ಲಿಟ್ಟರ್ ಹಚ್ಚಿಕೊಂಡಿದ್ದು ಇದರ ಪ್ರಭಾವದಿಂದ ಕಣ್ಣಿನ ಒಂದು ಭಾಗವನ್ನೇ ಕಳೆದುಕೊಳ್ಳಬೇಕಾಯಿತು. ನಾನು ಗ್ಲಿಟ್ಟರ್ ಎಂದು ಹೇಳಿದೆನೆಲ್ಲಾ, ಇದೊಂದು ಚಿಕ್ಕ ಚಿಕ್ಕ ಕಣಗಳ ಪುಡಿಯಾಗಿದೆ. ಇದನ್ನು ತೊಳೆದುಕೊಳ್ಳುವಾಗ ಕೊಂಚ ಪುಡಿಯ ಭಾಗ ಆಕೆಯ ಕಣ್ಣಿನ ಒಳಗೆ ಬಿದ್ದುಬಿಟ್ಟಿತ್ತು. ಈ ಪುಡಿ ಕಣ್ಣಿನ ಪಾಪೆಗೆ ಚುಚ್ಚಿಕೊಂಡು ಬಿಟ್ಟಿತ್ತು."

ಆಗ ಉಂಟಾದ ಸೋಂಕು ಕೂಡಲೇ ಹರಡಿತು

ಆಗ ಉಂಟಾದ ಸೋಂಕು ಕೂಡಲೇ ಹರಡಿತು

ಈ ಪುಡಿ ಭಾರೀ ಸೋಂಕುಕಾರಕವಾಗಿದ್ದು ಕೆಲವೇ ಸಮಯದಲ್ಲಿ ಕಣ್ಣಿನ ಭಾಗಕ್ಕೆ ಸೋಂಕು ಕರಡಿತು. ಆಕೆಯ ಇಡಿಯ ಕಣ್ಣು ಕೀವಿನಿಂದ ತುಂಬಿಕೊಂಡಿತ್ತು. ಕೀವಿನ ಇರುವಿಕೆಯಿಂದ ಎದುರಾದ ಒತ್ತಡದಿಂದ ಕಣ್ಣು ಒಳಗೆ ಒತ್ತಲ್ಪಡುತ್ತಿದ್ದು ಆಕೆ ಅಪಾರ ನೋವು ಅನುಭವಿಸುತ್ತಿದ್ದಳು. ನಾವು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆವು ಹಾಗೂ ಅಲ್ಲಿ ವೈದ್ಯರು ತಕ್ಷಣವೇ ತುರ್ತಾಗಿ ಶಸ್ತ್ರಚಿಕಿತ್ಸೆ ನಡೆಸಲೇಬೇಕೆಂದು ತಿಳಿಸಿದರು"

ವೈದ್ಯರ ವಿವರಣೆ ಹೀಗಿದೆ

ವೈದ್ಯರ ವಿವರಣೆ ಹೀಗಿದೆ

"ಆಕೆಯ ಕಣ್ಣಿನಲ್ಲಿ ಬಿದ್ದ ಗ್ಲಿಟ್ಟರ್ ಪುಡಿ ವಾಸ್ತವದಲ್ಲಿ ಪುಟ್ಟ ಗಾಜಿನ ತುಣುಕುಗಳಾಗಿದ್ದು ಈ ತುಣುಕುಗಳು ಆಕೆಯ ಕಣ್ಣಿನ ಪಾಪೆಯನ್ನೇ ಹರಿದಿದ್ದು ಇಲ್ಲಿ ಸೋಂಕು ಉಂಟಾಗಲು ಕಾರಣವಾಯಿತು. ಕಣ್ಣು ಅತ್ಯಂತ ಸೂಕ್ಷ್ಮ ಅಂಗವಾಗಿದ್ದು ಇಲ್ಲಿನ ತೇವಾಂಶ ಸೋಂಕನ್ನು ಹರಡಿಸಲು ನೆರವಾಯಿತು. ತಕ್ಷಣವೇ ರೋಗ ನಿರೋಧಕ ಶಕ್ತಿ ಈ ಸೋಂಕನ್ನು ಎದುರಿಸಲು ಕೀವನ್ನು ಉಂಟುಮಾಡಿತು. ಆದರೆ ಈ ಕೀವಿನ ಪ್ರಮಾಣ ಎಷ್ಟು ಹೆಚ್ಚಿತ್ತೆಂದರೆ ಇದು ಕಣ್ಣಿನ ಮೇಲೆ ಅಪಾರವಾದ ಒತ್ತಡ ಹೇರಿ ಈಗಾಗಲೇ ಹರಿದಿದ್ದ ಪಾಪೆಯ ಮೇಲೆ ಇನ್ನಷ್ಟು ಒತ್ತಡ ಹೇರಿ ಅಪಾರವಾದ, ತಡೆಯಲಾರದ ನೋವು ನೀಡಿತ್ತು"

ಕಡೆಗೆ ಆಕೆ ಕಣ್ಣನ್ನೇ ಕಳೆದುಕೊಳ್ಳಬೇಕಾಯಿತು

ಕಡೆಗೆ ಆಕೆ ಕಣ್ಣನ್ನೇ ಕಳೆದುಕೊಳ್ಳಬೇಕಾಯಿತು

ಕಣ್ಣಿನ ಪಾಪೆ ಅತ್ಯಂತ ಸೂಕ್ಷ್ಮಭಾಗವಾಗಿದ್ದು ಇದು ಹರಿದರೆ ಇದನ್ನು ಹೊಲಿಯಲು ಹಲವು ತಜ್ಞ ವೈದ್ಯರು ಇನ್ನಿಲ್ಲದ ಶ್ರಮವಹಿಸಿದರೂ ಆಕೆಯ ಕಣ್ಣನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ವಿಧಿಯಿಲ್ಲದೇ ಸೋಂಕು ಇನ್ನೊಂದು ಕಣ್ಣಿಗೂ ಹರಡದಂತೆ ತಡೆಯಲು ಕಣ್ಣನ್ನು ನಿವಾರಿಸಬೇಕಾಯಿತು.

ಈಗಲಾದರೂ ಕಳಪೆ ಪ್ರಸಾಧನಗಳ ಬಗ್ಗೆ ಎಚ್ಚರ ವಹಿಸಿ, ಕೊಂಚ ದುಬಾರಿಯಾದರೂ ಚಿಂತೆಯಿಲ್ಲ, ಉತ್ತಮ ಗುಣಮಟ್ಟದ್ದನ್ನೇ ಕೊಳ್ಳಿ. ಅಷ್ಟಕ್ಕೂ ಅಲ್ಪ ಮತ್ತು

ಸರಳ ಪ್ರಸಾಧನಗಳಿಂದಲೇ ಸಹಜ ಸೌಂದರ್ಯ ಪ್ರಜ್ವಲಿಸಲು ಸಾಧ್ಯವಿರುವಾಗ ದುಬಾರಿ ಮತ್ತು ಅನಗತ್ಯವಾಗಿ ಹೊಳೆಯುವ ಪ್ರಸಾದನಗಳ ಅಗತ್ಯವೇನಿದೆ?

English summary

All Thanks To Bad Makeup, She Lost An Eye!

Check out this true case of woman who lost her eye after she used bad makeup products, which will make you never want to use cheap makeup products again!
Subscribe Newsletter