Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತನ್ನ ಪ್ರಿಯಕರನನ್ನು ಮದುವೆಯಾಗಲು ಸಿಂಹಾಸನವನ್ನು ತ್ಯಜಿಸಿದ ಯುವರಾಣಿ
ನೀವು ಬಾಹುಬಲಿ-2 ಸಿನಿಮಾ ನೋಡಿರಬಹುದು. ಯುವರಾಣಿ ದೇವಸೇನಳನ್ನು ಕೈ ಹಿಡಿಯಲು ಸಿಂಹಾಸನವನ್ನು ತ್ಯಜಿಸುವ ರಾಜಕುಮಾರನಾಗಿ ಬಾಹುಬಲಿ ನಮಗೆಲ್ಲಾ ಇಷ್ಟವಾಗುತ್ತಾನೆ.
ಆದರೆ ಇಲ್ಲಿ ಕತೆ ಬೇರೆ ಇದೆ, ಹೇಳಿ ಕೇಳಿ ಜಪಾನಿನಲ್ಲಿ ಯುವರಾಣಿಯಾಗಿ ಸುಂದರ ಜೀವನ ನಡೆಸುತ್ತಿದ್ದ ಮಕೊ ಎಂಬಾಕೆ ಈಗ ತನ್ನ ಯುವರಾಣಿ ಪದವಿಯನ್ನು ತ್ಯಜಿಸಿ ಪ್ರೀತಿಯೇ ನನ್ನ ಸರ್ವಸ್ವ ಎನ್ನಲು ಸಿದ್ಧಳಾಗಿದ್ದಾಳೆ. ಏಕೆಂದರೆ ಆಕೆ ಅತಿ ಶೀಘ್ರದಲ್ಲಿಯೇ ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾಳೆ. ಬನ್ನಿ ಈ ಸುಂದರ ಪ್ರೇಮಕತೆಯನ್ನು ನಾವು ಸಹ ತಿಳಿದುಕೊಳ್ಳೋಣ.....

ಈಕೆ ಅಖಿಟೊ ಚಕ್ರವರ್ತಿಯ ಮೊಮ್ಮಗಳು
ಮಕೊ ಎಂಬ 25 ವರ್ಷದ ಯುವರಾಣಿಯು ಚಕ್ರವರ್ತಿ ಅಖಿಟೊನ ಮೊಮ್ಮಗಳು ಮತ್ತು ಯುವರಾಜ ಅಖಿಷಿನೊಳ ದೊಡ್ಡ ಮಗಳು. ಈಗ ಆಕೆ ಕೇಯ್ ಕೊಮುರೊ ಎಂಬಾತನನ್ನು ಮದುವೆಯಾಗಲು ಸಿದ್ಧಳಾಗಿದ್ದಾಳೆ.

ಆತ ಆಕೆಯ ಹೃದಯ ಕದ್ದವನು
ಕೇಯ್ ಒಬ್ಬ ಕಾನೂನು ಪದವಿಧರ ಮತ್ತು ಈತ ಹಾಗು ಯುವರಾಣಿ ಮಕೊ ಇಬ್ಬರೂ ಒಂದು ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿ ಆತ ಯುವರಾಣಿಯ ಮನಸ್ಸು ಕದ್ದನು. ಇಬ್ಬರೂ ಸಹ ಇಂಟರ್‌ನ್ಯಾಷನಲ್ ಕ್ರಿಶ್ಚಿಯನ್ ಯೂನಿವರ್ಸಿಟಿ ಟೋಕಿಯೊದಲ್ಲಿ ಓದುತ್ತಿದ್ದಾಗಲೇ ಈತ ಆಕೆಯ ಮನಸ್ಸನ್ನು ಕದ್ದಿದ್ದನು.

ಇವರ ಪ್ರೇಮಾಂಕುರ ಹೇಗಾಯಿತು...
ಇಬ್ಬರೂ ಒಮ್ಮೆ ವಿದೇಶದಲ್ಲಿ ನಡೆದ ಸಮಾರಂಭಕ್ಕೆ ಭಾಗವಹಿಸಲು ಹೋಗಿದ್ದರು. ಅದೂ ಐದು ವರ್ಷಗಳ ಹಿಂದೆ. ಅಲ್ಲಿ ಈ ಇಬ್ಬರೂ ಒಂದು ರೆಸ್ಟೋರೆಂಟಿನಲ್ಲಿ ತಮ್ಮ ಪ್ರೇಮ ನಿವೇದನೆಯನ್ನು ಮಾಡಿಕೊಂಡಿದ್ದರು.

ಕೇಯ್ (ಆಕೆಯ ಭಾವಿ ಪತಿ) ಸ್ವಲ್ಪ ಜನಪ್ರಿಯ ವ್ಯಕ್ತಿ ಸಹ ಹೌದು...
ನಮ್ಮ ಯುವರಾಣಿಯ ಭಾವಿ ಪತಿ ಸಹ ತನ್ನ ರಕ್ತದಲ್ಲಿ ರಾಜವಂಶದ ರಕ್ತವನ್ನು ಹೊಂದಿದ್ದಾನೆ. ಈತನೇ ಹೇಳುವ ಹಾಗೆ ಒಮ್ಮೆ ಈತನು ಫ್ಯೂಜಿಸವ ನಗರದ ಬೀಚ್ ಟೂರಿಸಂ ಜಾಹೀರಾತಿಗಾಗಿ ಒಮ್ಮೆ ನಟಿಸಿದ್ದನಂತೆ. ಹೀಗಾಗಿ ಈತನನ್ನು "ಪ್ರಿನ್ಸ್ ಆಫ್ ಸೀ" ಎಂದು ಕರೆಯುತ್ತಾರೆ.

ಮದುವೆಗಾಗಿ ಯುವರಾಣಿ ಪದವಿಯ ತ್ಯಾಗ
ಮಕೊ ಈ ಮದುವೆಗಾಗಿ ಆಕೆಯ ಯುವರಾಣಿ ಪದವಿಯನ್ನು ತ್ಯಾಗ ಮಾಡಲು ಸಿದ್ಧಳಾಗಿದ್ದಾಳೆ. ಈಕೆ ಮದುವೆಯ ನಂತರ "ಸಾಮಾನ್ಯ" ಪ್ರಜೆಯಾಗುತ್ತಾಳೆ.

ಆಕೆಯ ಸಿಂಹಾಸನಾರೋಹಣ ಮಿತಿಯಲ್ಲಿರುತ್ತದೆ..
ಆದರೂ ಕ್ರಿಸೆಂತೆಮಮ್ ಸಿಂಹಾಸನವನ್ನು ಆಕೆಯು ಆರೋಹಣ ಮಾಡುವುದು ಸಾಧ್ಯವಿರುವುದಿಲ್ಲ. ಏಕೆಂದರೆ ಈ ರಾಜ ಮನೆತನದಲ್ಲಿ ಅಧಿಕಾರವು ಪುರುಷರಿಂದ ಪುರುಷರಿಗೆ ವರ್ಗಾವಣೆಯಾಗುತ್ತಿರುತ್ತದೆ.

ಮಂಗಳ ವಾದ್ಯಗಳು ಈಗಾಗಲೇ ಮೊಳಗಲು ಆರಂಭವಾಗಿವೆ...
ಜಪಾನಿನ ಮದುವೆ ಸಂಪ್ರದಾಯಗಳು "ತುಂಬಾ ಸಾಂಪ್ರದಾಯಿಕವಾಗಿರುತ್ತದೆ" ಮತ್ತು ಹೆಚ್ಚು ಶಾಸ್ತ್ರಗಳನ್ನು ಹಾಗು ಆಚರಣೆಗಳನ್ನು ಒಳಗೊಂಡಿರುತ್ತವೆ. ಮದುವೆಗೆ ಮೊದಲೇ ಈ ಶಾಸ್ತ್ರಗಳು ಆರಂಭವಾಗುತ್ತವೆ. ಭಾವಿ ವಧು ವರರು ಈಗಾಗಲೇ ತಮ್ಮ ಮದುವೆಯ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಹೀಗೆ ಮಾಡುತ್ತಿರುವವರಲ್ಲಿ ಈಕೆಯ ಮೊದಲೇನಲ್ಲ...
ಈ ರೀತಿ ಸಿಂಹಾಸನಕ್ಕಾಗಿ ರಾಜ ಪದವಿಯನ್ನು ತ್ಯಾಗ ಮಾಡುತ್ತಿರುವವರಲ್ಲಿ ಈಕೆಯೇ ಮೊದಲೇನಲ್ಲ. ಈಕೆಯ ಚಿಕ್ಕಮ್ಮ ಸಯಕೊ 2005 ರಲ್ಲಿ ಇದೇ ರೀತಿ ಪದವಿ ತ್ಯಾಗ ಮಾಡಿದ್ದರು. ಆಕೆ ನಗರ ಯೋಜನೆ ತಜ್ಞನಾದ ಯೊಶಿಕಿ ಕುರೊಡರವರನ್ನು ಮದುವೆಯಾಗಿದ್ದರು.



Click it and Unblock the Notifications
