Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಕ್ಯಾನ್ಸರ್ ಕುರಿತು ನೀವು ತಿಳಿದಿರಬೇಕಾದ 10 ಸಂಗತಿಗಳು
ಕ್ಯಾನ್ಸರ್, ಎಂದರೆ ಸಾವಿನ ರಾಯಭಾರಿ ಎಂದೇ ಹೆಚ್ಚಿನವರ ಅಭಿಪ್ರಾಯವಾಗಿದೆ. ಒಂದರ್ಥದಲ್ಲಿ ಇದು ನಿಜವೂ ಸಹಾ, ಏಕೆಂದರೆ ಅರಿವಿಲ್ಲದೇ ಚಿಕಿತ್ಸೆ ಪಡೆಯದಿರುವುದು ಅಥವಾ ಕಂಡುಬಂದಾಗ ತುಂಬಾ ತಡವಾಗಿರುವುದು ಅಥವಾ ಸೂಕ್ತ ಚಿಕಿತ್ಸೆಯೇ ಲಭ್ಯವಿಲ್ಲದಿರುವ ಕಾರಣದಿಂದ ಕ್ಯಾನ್ಸರ್ ವ್ಯಾಪಿಸುತ್ತಾ ಸಾವಿನಲ್ಲಿ ಪರ್ಯವಸಾನವಾಗುತ್ತದೆ.
ಒಂದು ಕಾಲದಲ್ಲಿ ಮಧುಮೇಹ ಕೇವಲ ಬ್ರಿಟಿಷರಿಗೆ ಬರುತ್ತಿದ್ದ ಕಾರಣ ಇದಕ್ಕೆ ಪರಂಗಿಯವರ ಕಾಯಿಲೆ ಎಂದೂ ಹೇಳುತ್ತಿದ್ದರು. ಆದರೆ ಕ್ಯಾನ್ಸರ್‌ಗೆ ಯಾವುದೇ ಬೇದಭಾವವಿಲ್ಲ. ಬಡವ, ಶ್ರೀಮಂತ, ಗಂಡು, ಹೆಣ್ಣು, ಮಕ್ಕಳು, ವೃದ್ಧರು ಎಂಬ ಯಾವುದೇ ಬೇಧಭಾವ ತೋರದೇ ಆವರಿಸಿಕೊಂಡ ವ್ಯಕ್ತಿಯನ್ನು ಹಿಂಡಿ ಹಿಪ್ಪೆ ಮಾಡಿ ರೋಗಿಯ ಆಪ್ತರಿಗೂ, ಕುಟುಂಬದವರಿಗೂ ಸಮಾಜದ ಇತರ ಜನರಿಗೂ ಅಪಾರವಾದ ದುಃಖ ಮತ್ತು ಹೊರೆಯನ್ನು ನೀಡುತ್ತದೆ. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್
ಇವರನ್ನು ಉಪಚರಿಸುವ ವೈದ್ಯರಿಗಂತೂ ಯಾರಲ್ಲೂ ಹೇಳಲಾಗದ ಅಸಹಾಯಕ ಭಾವನೆ, ತಮ್ಮ ಕಣ್ಣುಮುಂದೆಯೇ ರೋಗಿ ಸಾವಿನತ್ತ ಜಾರುತ್ತಿದ್ದು ತಮ್ಮಿಂದ ಸಹಾಯ ಮಾಡಲಾಗುತ್ತಿಲ್ಲವಲ್ಲ ಎಂಬ ಕೊರಗು. ಕ್ಯಾನ್ಸರ್ ಅಭಿವೃದ್ಧಿ ಪಡೆದ ದೇಶಗಳಲ್ಲಿ ಹಿಂದೆ ಹೆಚ್ಚಾಗಿ ಕಾಣಿಸುತ್ತಿದ್ದುದು ಈಗ ಇತರ ರಾಷ್ಟ್ರಗಳಲ್ಲಿಯೂ ಕಾಣಿಸಿಕೊಂಡಿದೆ. ಅಂದರೆ ಹಿಂದೆಯೂ ಇಲ್ಲಿ ಇರಲಿಲ್ಲವೆಂದಲ್ಲ, ಇದ್ದ ಪ್ರಕರಣಗಳನ್ನು ಕ್ಯಾನ್ಸರ್ ಎಂದು ಖಚಿತವಾಗಿ ಗುರುತಿಸುವ ಉಪಕರಣಗಳು ಅಂದು ಇಲ್ಲಿ ಲಭ್ಯವಿರಲಿಲ್ಲ.
ಕ್ಯಾನ್ಸರ್‌ನ ಸಾವುಗಳಿಗೆ ಹೆಚ್ಚಿನವು ತಡವಾಗಿ ಗುರುತಿಸಲ್ಪಡುವುದೇ ಕಾರಣವಾಗಿದೆ. 30% ರಷ್ಟು ಪ್ರಕರಣಗಳು ಆರಾಮವಾದ ಜೀವನಶೈಲಿಯ ಕಾರಣವಾದರೆ ಉಳಿದವು ಕ್ಯಾನ್ಸರ್ ಕಾರಕ ಕಣಗಳಿಂದ ಬರಬಹುದು. ಇವುಗಳಲ್ಲಿ ಪ್ರಮುಖವಾದವು ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡುವ ಶಕ್ತಿಯನ್ನು ದೇಹ ಕಳೆದುಕೊಂಡಾಗ (HBV, HPV ಸೋಂಕುಗಳು) ಕ್ಯಾನ್ಸರ್ ಎದುರಾಗುತ್ತದೆ. ವಾಸ್ತವವೆಂದರೆ ಕ್ಯಾನ್ಸರ್ ಒಮ್ಮೆಲೇ ದೇಹವನ್ನು ಆವರಿಸುವುದಿಲ್ಲ. ಎಲ್ಲೋ ಒಂದೆಡೆ ಒಂದು ಕಣದಿಂದ ಪ್ರಾರಂಭವಾಗಿ ನಿಧಾನವಾಗಿ ಆವರಿಸುತ್ತಾ ಹೋಗುತ್ತದೆ. ಈ ಬೆಳವಣಿಗೆಯನ್ನು ಪ್ರಾರಂಭದ ಹಂತದಲ್ಲಿಯೇ ಕಂಡುಕೊಂಡರೆ ಇದನ್ನು ಬುಡಸಹಿತ ನಿವಾರಿಸಲು ಹಾಗೂ ರೋಗಿಯನ್ನು ಬದುಕಿಸಲು ಸಾಧ್ಯವಿದೆ. ಇದಕ್ಕೆ ಸೂಕ್ತ ಮತ್ತು ದೀರ್ಘಕಾಲದ ಚಿಕಿತ್ಸೆ ಅಗತ್ಯವಾಗಿದೆ. ಕ್ಯಾನ್ಸರ್ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕಾದ ಹತ್ತು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ, ಮುಂದೆ ಓದಿ..

ಮಾಹಿತಿ 1
ಕ್ಯಾನ್ಸರ್‌ಗಳಲ್ಲಿ ನೂರಕ್ಕೂ ಹೆಚ್ಚು ವಿಧಗಳಿವೆ. ದೇಹದ ಯಾವ ಅಂಗವನ್ನು ಇದು ಆವರಿಸಿತೋ ಆ ಅಂಗದ ಜೊತೆಗೇ ಇದನ್ನು ಹೆಸರಿಸಲಾಗುತ್ತದೆ. ವಾಸ್ತವವಾಗಿ ನಮ್ಮ ದೇಹದ ಯಾವುದೇ ಭಾಗ ಕ್ಯಾನ್ಸರ್ ಗಒಳಗಾಗಬಹುದು. ಉದಾಹರಣೆಗೆ ಗರ್ಭಕೋಶದ ಕ್ಯಾನ್ಸರ್, ರಕ್ತದ ಕ್ಯಾನ್ಸರ್ ಇತ್ಯಾದಿ.

ಮಾಹಿತಿ 2
2008ರಲ್ಲಿ ಪಡೆದ ಮಾಹಿತಿಯ ಪ್ರಕಾರ ವಿಶ್ವದಲ್ಲಿ 76 ಲಕ್ಷ ಜನರು ಕ್ಯಾನ್ಸರ್ ನಿಂದ ಸಾವಿಗೀಡಾಗಿದ್ದಾರೆ. ಇದು ವಿಶ್ವದ ಒಟ್ಟೂ ಸಾವುಗಳ 13% ರಷ್ಟಿದೆ.

ಮಾಹಿತಿ 3
70%ರಷ್ಟು ಸಾವುಗಳು ಮಧ್ಯಮ ಮತ್ತು ಕೆಳವರ್ಗದ ಜನರಲ್ಲಿ ಸಂಭವಿಸಿದೆ. ಕ್ಯಾನ್ಸರ್‌ನ ದುಬಾರಿ ಚಿಕಿತ್ಸಾ ವೆಚ್ಚವನ್ನು ಭರಿಸಲಾಗದಿರುವುದು ಮುಖ್ಯ ಕಾರಣವಾಗಿದೆ.

ಮಾಹಿತಿ 4
ವಿಶ್ವದಾದ್ಯಂತ ಪುರುಷರಲ್ಲಿ ಕ್ಯಾನ್ಸರ್ ಸಾವುಗಳಿಗೆ ಕಾರಣವಾದ ಅತಿ ಸಾಮಾನ್ಯವಾದ ಐದು ಅಂಗಗಳೆಂದರೆ ಕ್ರಮವಾಗಿ (ಅತಿ ಹೆಚ್ಚಿನಿಂದ ಮುಂದುವರೆದಂತೆ) ಶ್ವಾಸಕೋಶ, ಜಠರ, ಯಕೃತ್, ದೊಡ್ಡಕರುಳು ಮತ್ತು ಗುದನಾಳ (colorectal), ಮತ್ತು ಅನ್ನನಾಳ (oesophagus). ಶ್ವಾಸಕೋಶದ ಕ್ಯಾನ್ಸರ್ ಗೆ ಧೂಮಪಾನ ಪ್ರಮುಖ ಕಾರಣವೆಂದು ಸಾಬೀತಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಸಿಗರೇಟು ಪ್ಯಾಕ್ ಮೇಲೂ ಸಿನೆಮಾ, ಟೀವಿ ಮೊದಲಾದ ದೃಶ್ಯಮಾಧ್ಯಮಗಳಲ್ಲಿಯೂ ಧೂಮಪಾನ ಕ್ಯಾನ್ಸರ್ ಗೆ ಕಾರಣ ಎಂಬ ಸಂದೇಶವನ್ನು ಕಡ್ಡಾಯವಾಗಿ ಪರದೆಯ ಕೆಳಗೆ ಬರುವಂತೆ ಕಾನೂನು ಮಾಡಲಾಗಿದೆ.

ಮಾಹಿತಿ 5
ವಿಶ್ವದಾದ್ಯಂತ ಮಹಿಳೆಯರ ಕ್ಯಾನ್ಸರ್‌ಗೆ ಕಾರಣವಾದ ಐದು ಸಾಮಾನ್ಯವಾದ ಅಂಗಗಳೆಂದರೆ (ಕ್ರಮವಾಗಿ ಅತಿ ಹೆಚ್ಚಿನಿಂದ ಮುಂದುವರೆದಂತೆ) ಸ್ತನ, ಶ್ವಾಸಕೋಶ, ಜಠರ, ದೊಡ್ಡಕರುಳು ಮತ್ತು ಗುದನಾಳ (colorectal) ಹಾಗೂ ಗರ್ಭಕಂಠ (cervical). ಆದರೆ ಮುಂದುವರೆಯುತ್ತಿರುವ ದೇಶಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಅತಿ ಸಾಮಾನ್ಯವಾಗಿದೆ.

ಮಾಹಿತಿ 6
ಹೆಚ್ಚಿನ ಕ್ಯಾನ್ಸರ್‌ಗಳನ್ನು ತಡೆಯಲು ಸಾಧ್ಯವಿಲ್ಲವಾದರೂ ತಂಬಾಕು ಸೇವನೆಯನ್ನು ಬಿಟ್ಟುಬಿಡುವ ಮೂಲಕ ಇದರ ಪ್ರಕೋಪವನ್ನು ತಗ್ಗಿಸಬಹುದು. ಪ್ರಸ್ತುತ ಒಟ್ಟಾರೆ ಸಾವುಗಳಲ್ಲಿ 22% ಸಾವುಗಳು ತಂಬಾಕಿನಿಂದಾಗುತ್ತಿವೆ.

ಮಾಹಿತಿ 7
ವಿಶ್ವದಾದ್ಯಂತ ಸಂಭವಿಸಿರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ ಇಪ್ಪತ್ತರಷ್ಟು ಪ್ರಕರಣಗಳು ಅತಿ ಹೆಚ್ಚಿನ ಸೋಂಕಿನಿಂದ ಕೂಡಿವೆ. ಉದಾಹರಣೆಗೆ human papillomavirus (HPV) ಎಂಬ ವೈರಸ್ ನಿಂದ ಬರುವ ಗರ್ಭಕಂಠದ ಕ್ಯಾನ್ಸರ್ ಹಾಗೂ hepatitis B virus (HBV) ಎಂಬ ವೈರಸ್‌ನಿಂದ ಬರುವ ಯಕೃತ್‌ನ ಕ್ಯಾನ್ಸರ್.

ಮಾಹಿತಿ 8
ಜನರಲ್ಲಿ ಸೂಕ್ತಕಾಲಕ್ಕೆ ಮಾಹಿತಿ ನೀಡಿ ಕಾಲಕಾಲಕ್ಕೆ ಪರೀಕ್ಷೆಗೊಳಪಟ್ಟು ಕ್ಯಾನ್ಸರ್ ಇಲ್ಲವೆಂದು ದೃಢೀಕರಿಸುವ ಮೂಲಕ ಕೆಲವು ವಿಧದ ಕ್ಯಾನ್ಸರ್ ಗಳನ್ನು ಮೂಲ ಅವಸ್ಥೆಯಲ್ಲಿಯೇ ಸೂಕ್ತ ಚಿಕಿತ್ಸೆಯ ಮೂಲಕ ನಿವಾರಿಸಬಹುದು. ಇವುಗಳಲ್ಲಿ ಸ್ತನ, ದೊಡ್ಡಕರುಳು ಮತ್ತು ಗುದನಾಳ (colorectal) ಮತ್ತು ಗರ್ಭಕಂಠದ ಕ್ಯಾನ್ಸರ್ ಪ್ರಮುಖವಾಗಿವೆ.

ಮಾಹಿತಿ 9
ಕ್ಯಾನ್ಸರ್‌ನ ಪರಿಣಾಮದಿಂದ ಕ್ಯಾನ್ಸರ್‌ಗೆ ಒಳಗಾದ ಅಂಗ ಭಾರೀ ನೋವು ನೀಡುತ್ತದೆ. ಎಲ್ಲಿ ನೋವಾಗುತ್ತಿದೆ ಎಂದು ಖಚಿತವಾಗಿ ತಿಳಿದರೆ ವೈದ್ಯರಿಗೂ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಕೇವಲ ನೋವು ನಿವಾರಕ ಮಾತ್ರವಲ್ಲ, ರೋಗಿಗೆ ಸಾಂತ್ವಾನ ಮತ್ತು ಮಾನಸಿಕವಾದ ಉಪಶಮನವೂ ಅವಶ್ಯವಾಗಿವೆ.

ಮಾಹಿತಿ 10
ಒಟ್ಟಾರೆ ಕ್ಯಾನ್ಸರ್‌ಗಳಲ್ಲಿ 30% ಕ್ಕೂ ಹೆಚ್ಚು ವಿಧಗಳನ್ನು ತಡೆಯಬಹುದು. ಕ್ಯಾನ್ಸರಿಗೆ ಮುಖ್ಯವಾಗಿ ಕಾರಣವಾದ ತಂಬಾಕು ಸೇವನೆಯನ್ನು ಬಿಟ್ಟುಬಿಡುವುದು, ಆರೋಗ್ಯಕರವಾದ ಆಹಾರ ಸೇವನೆ, ದಿನವಿಡೀ ಚಟುವಟಿಕೆಯಿಂದಿರುವುದು, ಮದ್ಯಪಾನವನ್ನು ತ್ಯಜಿಸುವುದು ಅಥವಾ ನಿಕೃಷ್ಟ ಪ್ರಮಾಣಕ್ಕಿಳಿಸುವುದು ಮೊದಲಾದ, ಯಾರೂ ಸಾಧಿಸಬಹುದಾದ ಸುಲಭ ವಿಧಾನಗಳಿಂದ ಕ್ಯಾನ್ಸರ್ ತಡೆಗಟ್ಟಬಹುದು.

ಮಾಹಿತಿ 10
ಅದರಲ್ಲೂ ಪ್ರಗತಿಶೀಲ ರಾಷ್ಟ್ರಗಳಲ್ಲಿ HBV ಮತ್ತು HPV ಸೋಂಕುಗಳಿಗೆ ಸೂಕ್ತ ನಿವಾರಕಗಳನ್ನು ಒದಗಿಸುವ ಮೂಲಕ 20% ರಷ್ಟು ಕ್ಯಾನ್ಸರ್ ಸಾವುಗಳನ್ನು ತಡೆಗಟ್ಟಬಹುದು.



Click it and Unblock the Notifications











