For Quick Alerts
ALLOW NOTIFICATIONS  
For Daily Alerts

  ಗಂಡಂದಿರನ್ನೇ ಬೆಂಕಿ ಹಚ್ಚಿ ಸುಟ್ಟ ಖತರ್ನಾಕ್ ಮಹಿಳೆಯರು!

  By Manu
  |

  ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಇದೆ. ಆದರೆ ಕೆಲವು ಗಂಡ ಹೆಂಡಂದಿರು ಉಂಡು ಮಲಗಿದ ಬಳಿಕ ಜಗಳ ಮುಗಿಸದೇ ಮರುದಿನವೂ ಮುಂದುವರೆಸುವ ದುರ್ಬುದ್ಧಿ ಹೊಂದಿರುತ್ತಾರೆ. ಹೆಚ್ಚಿನ ಸಂದರ್ಭದಲ್ಲಿ ಇದು ಹಿಂಸಾತ್ಮಕ ರೂಪವನ್ನೂ ಪಡೆಯುವುದಿದೆ. ಮುರಿದ ಮನ ಮನೆ ಮುರಿಯಲೂ ಕಾರಣವಾಗಬಹುದು.

  ಸಾವಿರಾರು ವರ್ಷಗಳಿಂದ ಯಜಮಾನನ ಧೋರಣೆಯನ್ನು ಅನುಸರಿಸುತ್ತಾ ಬಂದಿರುವ ಪತಿಯ ವರ್ತನೆಯನ್ನು ಸಹಿಸುತ್ತಲೇ ಬಂದಿರುವ ಮಹಿಳೆಯರೇ ಹೆಚ್ಚು. ಆದರೆ ದಿಟ್ಟತನ ತೋರಿದ ಕೆಲವು ಪತ್ನಿಯರು ತಮ್ಮ ಪತಿಯರಿಗೆ ಸರಿಯಾದ ಬುದ್ಧಿ ಹೇಳಿ ಸರಿದಾರಿಗೆ ತರುತ್ತಾರೆ. ಕೆಲವೊಮ್ಮೆ ಲಟ್ಟಣಿಗೆಯ ರುಚಿ ತೋರಿಸುವುದೂ ಇದೆ. ಇದಕ್ಕೂ ಬಗ್ಗದೇ ಪತ್ನಿಯ ಮೇಲೆ ಹಿಂಸೆಯನ್ನು ಹೆಚ್ಚಿಸುತ್ತಾ ಹೋಗುವ ಪತಿಯರನ್ನು ಬೆಂಕಿ ಹಚ್ಚಿ ಸಮಸ್ಯೆಯ ಬುಡವನ್ನೇ ನಿವಾರಿಸಿದ ದಿಟ್ಟ ಮಹಿಳೆಯರೂ ಇದ್ದಾರೆ. ಬನ್ನಿ, ಇಂತಹ ದಿಟ್ಟ ಮಹಿಳೆಯರ ಬಗ್ಗೆ ಕೆಲವು ಮಾಹಿತಿಗಳನ್ನು ಪಡೆಯೋಣ.... 

  ಕಿರಣ್ ಜೀತ್ ಅಹ್ಲುವಾಲಿಯಾ

  ಕಿರಣ್ ಜೀತ್ ಅಹ್ಲುವಾಲಿಯಾ

  ಸುಮಾರು ಹತ್ತು ವರ್ಷಗಳ ಸತತ ಕ್ರೌರ್ಯ ಮತ್ತು ದೌರ್ಜನ್ಯವನ್ನು ಅನುಭವಿದ ಬಳಿಕ 1989ರಲ್ಲಿ ತನ್ನ ಪತಿಯನ್ನು ಸುಟ್ಟು ಕೊಲೆ ಮಾಡಿ ಈ ದೌರ್ಜನ್ಯವನ್ನು ಕೊನೆಗೊಳಿಸಿದ ಮಹಿಳೆ ಕಿರಣ್ ಜೀತ್ ಅಹ್ಲುವಾಲಿಯಾ. ಮದುವೆಯಾದ ದಿನದಿಂದ ಒಂದು ದಿನವೂ ಬಿಡದೇ ಆತ ಆಕೆಯನ್ನು ಹೊಡೆಯುವುದು, ಹಿಂಸೆ ನೀಡುವುದು ಮತ್ತು ಇಚ್ಛೆಗೆ ವಿರುದ್ಧಗಾಗಿ ಕೂಡುವುದು ಮಾಡುತ್ತಿದ್ದ.

  ತಾಳ್ಮೆ ಕಳೆದುಕೊಂಡ ಈಕೆ ಕಾಸ್ಟಿಕ್ ಸೋಡಾ, ಪೆಟ್ರೋಲ್ ಬೆರೆಸೆ ಈತ ಮಲಗಿದ್ದಾಗ ಆತನ ಮೈಮೇಲೆ ಚೆಲ್ಲಿ ಬೆಂಕಿ ಹಚ್ಚಿದ್ದಳು. ಭಾರೀ ಪ್ರಮಾಣದ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆ ಸೇರಿದ ಆಕೆಯ ಪತಿ ದೀಪಕ್ ಕೆಲವು ದಿನಗಳ ನಂತರ ಮೃತಪಟ್ಟ. Image courtesy

  ರಜನಿ ನಾರಾಯಣ್

  ರಜನಿ ನಾರಾಯಣ್

  ಗಂಡನ ಮಾರ್ಮಾಂಗವನ್ನೇ ಸುಟ್ಟ ಮಹಿಳೆ ಎಂದೇ ಈಗೆ ಖ್ಯಾತಿ ಪಡೆದಿದ್ದಾಳೆ. ಏಕೆಂದರೆ ಈಕೆಯ ಪತಿ, ಸತೀಶ್ ನಾರಾಯಣ್ ಪರಸ್ತ್ರೀಯೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದು ಪತ್ನಿಯಾದ ಈಕೆಗೆ ಸಹಿಸಲು ಸಾಧ್ಯವಾಗಿರಲಿಲ್ಲ.

  ನಯಮಾತಿಗೆ ಬಗ್ಗದ ಆತನನ್ನು ರಿಪೇರಿ ಮಾಡಲು ಈಕೆ ಯೋಚಿಸಿದ ವಿಧಾನ ಮಾತ್ರ ಅತಿ ಕ್ರೂರವಾಗಿದೆ. ಮಲಗಿದ್ದ ಸಮಯದಲ್ಲಿ ಆತನ ಮಾರ್ಮಾಂಗಕ್ಕೆ ಬಟ್ಟೆ ಸುತ್ತಿ ಬೆಂಕಿಯಿಟ್ಟಿದ್ದಳು. ಉರಿ ತಾಳಲಾರದೇ ನಿದ್ದೆಯಿಂದ ಎದ್ದ ಆತ ತಡವರಿಸಿ ಪಕ್ಕದ ಮೇಜಿನ ಮೇಲಿದ್ದ ಮದ್ಯದ ಬಾಟಲಿಗಳನ್ನು ಬೀಳಿಸಿದ. ಯಾವಾಗ ಮದ್ಯ ಈತನ ಮೈಮೇಲೆ ಬಿತ್ತೋ, ಆಗ ಮಾರ್ಮಾಂಗದ ಸಹಿತ ಇಡಿಯ ದೇಹ ಧಗಧಗಿಸಿ ಉರಿಯಲು ಪ್ರಾರಂಭವಾಯ್ತು. ಬಳಿಕ ಆಸ್ಪತ್ರೆಗೆ ಸೇರಿಸಿದರೂ ಇಪ್ಪತ್ತು ದಿನ ಉರಿ ಅನುಭವಿಸಿ ಆತ ಕಾಲವಾದ. Image courtesy

  ತಾತಾನೈಶಾ ಹೆಡ್ಮನ್

  ತಾತಾನೈಶಾ ಹೆಡ್ಮನ್

  ತನ್ನ ಗಂಡ ಏಳು ವರ್ಷದ ತನ್ನ ಮಲಮಗಳ ಮೇಲೇ ದೌರ್ಜನ್ಯ ಎಸಗುತ್ತಿರುವುದನ್ನು ಸಹಿಸಲಾರದ ಈ ಮಹಿಳೆ ತನ್ನ ಪತಿಯ ತಲೆಯ ಮೇಲೆ ಗ್ಯಾಸೋಲಿನ್ ದ್ರವವನ್ನು ಸುರಿದು ಬೆಂಕಿ ಇಟ್ಟಿದ್ದಳು. ಬೆಂಕಿಯ ಕಿರೀಟವನ್ನು ತೊಟ್ಟು ಉರಿ ತಾಳಲಾರದೇ ಹೊರಗೋಡಿ ತನಗೆ ನೆರವು ನೀಡುವಂತೆ ಸಿಕ್ಕಸಿಕ್ಕವರಲ್ಲೆಲ್ಲಾ ಸಹಾಯ ಮಾಡುತ್ತಿದ್ದ.

  ಯಾರೋ ತುರ್ತು ನಿಗಾ ವಿಭಾಗಕ್ಕೆ ಕರೆ ಮಾಡಿ ತಕ್ಷಣ ಆಂಬ್ಯುಲೆನ್ಸ್ ಬಂದಾಗ ಈತ ಕಾಲವಶನಾಗಿದ್ದ. ಈ ಬಗ್ಗೆ ವಿಚಾರಣೆ ನಡೆಸಿದ ವೇಳೆ ಈತನನ್ನು ಸುಟ್ಟಿದ್ದು ತಾನೇ ಎಂದು ಹೇಳಿದ ಈಕೆ ಛೇ, ಆತ ರಸ್ತೆಯಲ್ಲಿ ಹೀಗೆ ಅಂಗಲಾಚುತ್ತಿರುವುದನ್ನು ತಾನು ನೋಡಬೇಕಿತ್ತಲ್ಲಾ ಎಂದೂ ಕೈ ಕೈ ಹಿಸುಕಿಕೊಂಡಿದ್ದಳು. Image courtesy

  ಮಿಷೆಲ್ ಹೌಕ್ಸ್

  ಮಿಷೆಲ್ ಹೌಕ್ಸ್

  ಉಂಡು ಮಲಗಿದ ಬಳಿಕವೂ ಪರಿಸ್ಥಿತಿ ಸರಿಯಾಗದ ಕಾರಣ ತಮ್ಮ ತಮ್ಮ ದಾರಿ ಇಬ್ಬರೂ ಹಿಡಿಯುವುದು ಎಂದು ಈ ಪತಿ ಪತ್ನಿಯರು ನಿಶ್ಚಯಿಸಿದ್ದರು. ಏಕೆಂದರೆ ಇನ್ನೂ ಕೆಲ ಕಾಲ ಮುಂದುವರೆದಿದ್ದರೆ ಇಬ್ಬರಲ್ಲೊಬ್ಬರು ಕೊಲೆಯಾಗುವುದು ಸಾಧ್ಯವಿತ್ತು. ಆದರೆ ಪತಿ ಪತ್ನಿಯರಿಬ್ಬರೂ ಪ್ರತ್ಯೇಕವಾದ ಬಳಿಕ ಪತಿ ಇನ್ನೊಂದು ಸಂಬಂಧವನ್ನು ಕಂಡುಕೊಂಡಿದ್ದ.

  ಪರಸ್ತ್ರೀಯನ್ನು ತನ್ನ ಮನೆಯಲ್ಲಿ ಕಂಡ ಈಕೆ ಸಹಿಸದೇ ಮನೆಗೆ ಧಾವಿಸಿ ಜಗಳಕ್ಕೆ ಪ್ರಾರಂಭಿಸಿದಳು. ಜಗಳ ತಾರಕಕ್ಕೇರಿದಂತೆಯೇ ಗ್ಯಾಸೋಲಿನ್ ದ್ರವವನ್ನು ಆಕೆ ಆತನ ಮೈಮೇಲೆಲ್ಲಾ ಚೆಲ್ಲಿ ಲೈಟರ್ ಕೈಯಲ್ಲಿ ಹಿಡಿದು ಜಗಳ ಮುಂದುವರೆಸಿದಳು. ಆ ಲೈಟರಿನೊಂದಿಗೆ ತಮಾಷೆ ಬೇಡ ಎಂದು ಅದನ್ನು ಕಿತ್ತುಕೊಳ್ಳಲು ಯತ್ನಿಸಿದ ಪತಿಯಿಂದ ಬಿಡಿಸಿಕೊಳ್ಳುವ ಹಂತದಲ್ಲಿ ಅಕಸ್ಮಾತ್ತಾಗಿ ಲೈಟರ್ ಹತ್ತಿ ಉರಿಯಿತು. ಜೊತೆಗೇ ಪತಿ ಸಹಾ. ಬೆಂಕಿಯ ಕೆನ್ನಾಲಿಗೆ ಆತನ ಪ್ರಾಣವನ್ನೇ ಹರಣ ಮಾಡಿತ್ತು. ತನಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ, ಇದೊಂದು ಆಕಸ್ಮಿಕ ಎಂದು ಬಳಿಕ ತಿಳಿಸಿದ್ದಾಳೆ.

  English summary

  Wives Who Set Their Husbands On Fire

  Domestic abuse or being cheated can change a person completely. It can either break down the person completely or make them negative in life. There are so many cases of women who've set their husbands on fire, just to come out of an abusive relationship. Here, in this article, we are about to share stories about wives who have killed their husbands for various reasons.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more