Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಹದಿಹರೆಯದ ಯುವತಿಯರ ಗೋಳು, ಕೇಳುವವರು ಯಾರು?
ಕೆಲವರಿಗೆ ಏನೇ ಆದರೂ ಮಹಿಳೆಯರನ್ನು ತುಚ್ಛವಾಗಿ ಕಾಣುವ ಅಭ್ಯಾಸ. ಇದು ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಕಂಡು ಬರುವಂತಹ ಪರಿಸ್ಥಿತಿ. ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದರೆ ನಮ್ಮನ್ನು ಎಲ್ಲರೂ ಗುಣಗಾನ ಮಾಡುತ್ತಾರೆ ಎನ್ನುವ ಭಾವನೆ ಅವರಲ್ಲಿರುತ್ತದೆ. ಆದರೆ ಇದು ನಿಜವಾಗಿಯೂ ತಪ್ಪು. ಹೆಣ್ಣನ್ನು ಅರ್ಥೈಸಿಕೊಳ್ಳಲು ಬ್ರಹ್ಮನಿಂದಲೂ ಸಾಧ್ಯವಿಲ್ಲ!
ಕೆಲವು ಯುವಕರು/ಪುರುಷರು ಹದಿಹರೆಯದ ಯುವತಿಯರ ಬಗ್ಗೆ ವಿಲಕ್ಷಣವಾಗಿ ಮಾತನಾಡುತ್ತಾ ಇರುತ್ತಾರೆ. ಇದನ್ನು ಯುವತಿಯರು ಕೂಡ ಕೇಳುತ್ತಾ ಇರುತ್ತಾರೆ. ಇದರಿಂದ ಅವರಿಗೆ ತುಂಬಾ ಬೇಸರ ಹಾಗೂ ಕೋಪ ಬರುವುದು ಸಹಜ. ಈ ದೇಶಗಳಲ್ಲಿ ಮಹಿಳೆಯರಿಗೆ ನಯಾ ಪೈಸೆಯ ಮರ್ಯಾದಿ ಇಲ್ಲ!
18-24ನೇ ವಯಸ್ಸಿನ ಯುವತಿಯರು ಕೇಳಲ್ಪಡುವಂತಹ ಕೆಲವೊಂದು ವಿಲಕ್ಷಣವಾದ ಮಾತುಗಳ ಬಗ್ಗೆ ನಾವು ಈ ಲೇಖನದಲ್ಲಿ ಚರ್ಚೆ ನಡೆಸಲಿದ್ದೇವೆ. ಯಾರದೇ ಜತೆ ಮಾತನಾಡುವಾಗ ಎಚ್ಚರದಿಂದ ಇದ್ದು, ಈ ಮಾತುಗಳನ್ನು ಕಡೆಗಣಿಸಿದರೆ ಒಳ್ಳೆಯದು.

ಸಿಳ್ಳೆ ಹೊಡೆಯುವುದು
ಮಹಿಳೆಯರು ರಸ್ತೆಯಲ್ಲಿ ಹೋಗುತ್ತಿರುವ ಕಳ್ಳಬೆಕ್ಕಿನಂತೆ ಅವರ ಹಿಂದಿನಿಂದ ಹೋಗಿ ಸಿಳ್ಳೆ ಹಾಕುವುದು. ನಿಮ್ಮ ಮನೆಯ ಸಾಕು ನಾಯಿಯ ಮುಂದೆ ಸಿಳ್ಳೆ ಹಾಕಿ. ಅದಕ್ಕಾದರೂ ತುಂಬಾ ಸಂತೋಷವಾಗಬಹುದು.

ಮೇಕಪ್ ಇಲ್ಲದೆಯೂ ನೀನು ಸುಂದರವಾಗಿ ಕಾಣುತ್ತಿ!
ಮಹಿಳೆಯರು ಮೇಕಪ್ ಮಾಡಿಕೊಳ್ಳುವುದು ತಮ್ಮ ತೃಪ್ತಿಗಾಗಿ ಮತ್ತು ಒಳ್ಳೆಯ ರೀತಿ ಕಾಣಿಸಿಕೊಳ್ಳಲು. ಬೇರೆಯವರನ್ನು ಸೆಳೆಯಲು ಅಲ್ಲ ಎನ್ನುವುದು ಪುರುಷರು ನೆನಪಿಟ್ಟುಕೊಳ್ಳಬೇಕು. ಇದರ ಬಗ್ಗೆ ಅವರಿಗೆ ಉಪದೇಶ ಮಾಡಲು ಹೋಗಬೇಡಿ!

ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೆ. ಆದರೆ...
ಪೂರ್ಣಗೊಳ್ಳದ ಈ ವಾಕ್ಯವು ಯಾವುದೇ ಅರ್ಥವನ್ನು ಕಲ್ಪಿಸುವುದಿಲ್ಲ. ಆಕೆಯ ತೂಕ ಅಥವಾ ಧರಿಸುವ ಬಟ್ಟೆಯ ಬಗ್ಗೆ ನೀವು ಹೇಳುತ್ತೀರಿ ಎಂದಾದರೆ ಅದರ ಬಗ್ಗೆ ಮುಚ್ಚುಮರೆಯಿಲ್ಲದೆ ಹೇಳಿಬಿಡಿ. ಇಂತಹ ಅರ್ಧಂಬರ್ಧ ಮಾತುಗಳು ತುಂಬಾ ಕೋಪ ಉಂಟುಮಾಡುತ್ತದೆ.

ನನ್ನ ಗೆಳತಿಯಾಗಿರುವುದು ಯಾಕೆ?
ನಾವು ಕೇವಲ ಸ್ನೇಹಿತರಾಗಿ ಉಳಿದಿಲ್ಲ ಅಥವಾ ನಿನ್ನತ್ತ ಆಕರ್ಷಿತರಾಗಿದ್ದೇವೆ ಎನ್ನುವ ಬಗ್ಗೆ ಯಾವುದೇ ಸಂಜ್ಞೆಗಳನ್ನು ಮಾಡಿಲ್ಲ. ಹಾಗೆ ಏನಾದರೂ ಇದ್ದರೆ ಖಂಡಿತವಾಗಿಯೂ ನಾವು ಅದನ್ನು ಹೇಳಿಕೊಳ್ಳುತ್ತೇವೆ.

ತಾಳ್ಮೆ ವಹಿಸು
ಈ ಮಾತು ಹೆಚ್ಚಿನ ಹುಡುಗಿಯರ ಮನಸ್ಸನ್ನು ಕೆಡಿಸಿಬಿಡುತ್ತದೆ. ಅವರಿಗೆ ಕೂಡ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಂತಹ ಸ್ವಾತಂತ್ರ್ಯವಿದೆ ಮತ್ತು ಅದನ್ನು ವ್ಯಕ್ತಪಡಿಸುವುದು ತಪ್ಪಲ್ಲ ಎಂದು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು.

ಮಹಿಳೆಯಾಗಿ ನೀನು ತುಂಬಾ ಜಾಣೆ
ಇಂತಹ ಮಾತುಗಳನ್ನು ಮಹಿಳೆಯರು ಪ್ರಶಂಸೆಯಾಗಿ ಸ್ವೀಕರಿಸಬೇಕಾ ಅಥವಾ ವ್ಯಂಗವೇ?



Click it and Unblock the Notifications
