Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕಾಲಿಗೆ ಹಾಕುವ ಶೂಗಳ ಹಿಂದೆಯೂ, ಇಂಟರೆಸ್ಟಿಂಗ್ ಸ್ಟೋರಿ ಇದೆ!
ವಾರಾಂತ್ಯದ ಹಿಂದಿನ ದಿನ ಅಂದರೆ ಶುಕ್ರವಾರ ಹೆಚ್ಚಿನವರು ತಮ್ಮ ಸ್ನೀಕರ್ ಶೂಗಳನ್ನು ಅಂದರೆ ಕ್ಯಾನ್ ವಾಸ್ ನಂತಹ ಶೂಗಳನ್ನು ಮರುದಿನಕ್ಕಾಗಿ ತಯಾರಾಗಿಟ್ಟುಕೊಳ್ಳುತ್ತಾರೆ. ಈ ಶೂಗಳ ಬಗ್ಗೆ ನಿಮಗೆಷ್ಟು ಗೊತ್ತು? ಆದರೆ ನಿಮಗೆ ಅರಿವಿಲ್ಲದ ಕೆಲವು ಮಾಹಿತಿಗಳಿವೆ. ಆದರೆ ಅಷ್ಟೂ ಮಾಹಿತಿಗಳು ನಿಮ್ಮನ್ನು ತಬ್ಬಿಬ್ಬಾಗಿಸದೇ ಇರಲಾರದು. ಬನ್ನಿ, ಈ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡುತ್ತಾ ಸಾಗೋಣ:

ಸದ್ದಿಲ್ಲದೇ ಸಾಗುವ ಶೂ ಹೆಸರೇ ಸ್ನೀಕರ್
ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಸುಮಾರು ಹತ್ತೊಂತ್ತನೆಯ ಶತಮಾನದ ಕೊನೆಯ ವರ್ಷಗಳಲ್ಲಿ ಅಮೇರಿಕಾದಲ್ಲಿ ಸದ್ದಿಲ್ಲದೇ ಅತ್ತಿತ್ತ ಚಲಿಸಲು ಈ ಶೂಗಳನ್ನು ಜನರು ಹೆಚ್ಚು ಬಳಸುತ್ತಿದ್ದರು. ಸ್ನೀಕ್ ಅಂದರೆ ಸದ್ದಿಲ್ಲದೆ ನುಸುಳು ಎಂಬ ಅರ್ಥವಿದ್ದರೂ, ಸದ್ದಿಲ್ಲದೇ ಇತರರಿಗೆ ತೊಂದರೆಯಾಗದಂತೆ ನಡೆದಾಡಲು ಬಳಸಲಾಗುತ್ತಿದ್ದ ಈ ಶೂಗಳಿಗೆ ಸ್ನೀಕರ್ ಎಂಬ ಹೆಸರೇ ಖಾಯಮ್ಮಾಯಿತು.

ಶೂ ಅಳತೆಗೆ ಬಾರ್ಲಿಕಾಳುಗಳ ಬಳಕೆ
ಶೂ ಅಳತೆ ಹೇಗಿರಬೇಕು ಎಂಬುದನ್ನು ಪ್ರಥಮವಾಗಿ ವಿಶ್ವಕ್ಕೆ ಪರಿಚಯಿಸಿದ್ದು ಇಂಗ್ಲೆಂಡ್, ಅದೂ 1300ರ ಪ್ರಾರಂಭದ ವರ್ಷಗಳಲ್ಲಿ. ಅಂದಿನ ರಾಜ ಕಿಂಗ್ ಎಡ್ವರ್ಡ್ II ರವರು ಘೋಷಿಸಿದ ಪ್ರಕಾರ ಶೂ ಅಳತೆ ಬಾರ್ಲಿಯ ಕಾಳುಗಳ ಉದ್ದಕ್ಕೆ ಅನುಗುಣವಾಗಿರಬೇಕು. ಅಂದರೆ ಒಂದರ ಹಿಂದೆ ಒಂದು ಕಾಳು ಬರುವಂತೆ ಮೂರು ಕಾಳುಗಳನ್ನು ಇಟ್ಟಾಗ ಅದು ಒಂದು ಇಂಚು ಆಗುತ್ತದೆ. ಆ ಪ್ರಕಾರವೇ ಎಷ್ಟು ಇಂಚು ಪಾದವಿದೆಯೋ ಅಷ್ಟೇ ಅದರ ಅಳತೆ.

ಹಿಮ್ಮಡಿ ಎತ್ತರವಿರುವ ಶೂ ತೊಟ್ಟವರಲ್ಲಿ ಪುರುಷರೇ ಪ್ರಥಮರು
ಇಂದು ಅತಿ ಹೆಚ್ಚು ಎತ್ತರವಾದ ಮತ್ತು ಸೂಜಿಯಂತೆ ಚೂಪಾಗಿರುವ ಪಾದರಕ್ಷೆಗಳನ್ನು ಮಹಿಳೆಯರು ತೊಡುತ್ತಿದ್ದರೂ ಶತಮಾನಗಳ ಹಿಂದೆ ಕೇವಲ ಪುರುಷರು ಮಾತ್ರ ಅನಿವಾರ್ಯವಾಗಿ ತೊಡುತ್ತಿದ್ದರು.
ಅನಿವಾರ್ಯವಾಗಿ ಏಕೆಂದರೆ ಹಿಂದಿನ ದಿನಗಳಲ್ಲಿ ಕುದುರೆ ಸವಾರಿಯೇ ಪ್ರಮುಖ ಸಂಚಾರ ಮಾಧ್ಯಮವಾಗಿದ್ದಾಗ ಕುದುರೆಯ ಪಕ್ಕೆಗೆ ತಿವಿಯಲು ಹಿಮ್ಮಡಿ ಕೊಂಚ ಎತ್ತರವಿರಲೇಬೇಕಿತ್ತು.

ಇದುವರೆಗಿನ ದುಬಾರಿ ಶೂ ಬೆಲೆ $660,000
ದ ವಿಜ಼ಾರ್ಡ್ ಆಫ್ ಓಜ಼್ ಚಿತ್ರಮಾಲಿಕೆಯಲ್ಲಿ ಬಳಸಲಾದ ಕೆಂಪು ರೂಬಿ ಮಣಿ ಇರುವ ಶೂ ಆ ಶೃಂಖಲೆಗೆ ನೀಡಿದ ಜನಪ್ರಿಯತೆ ಮತ್ತು ಪ್ರಾಮುಖ್ಯತೆಯಿಂದಾಗಿ ತನ್ನ ಮೌಲ್ಯವನ್ನೂ ಹೆಚ್ಚಿಸಿಕೊಂಡಿತ್ತು. 2000ರಲ್ಲಿ ನಡೆದ ಹರಾಜಿನಲ್ಲಿ ಈ ಶೂ ಅನ್ನು $660,000 (ರೂ. 4,44,07,077) ಗೆ ಯಾರೋ ಕೊಂಡುಕೊಂಡರು.

ಪೂರ್ಣ ಪಾದಗಳನ್ನು ಆವರಿಸುವ ಶೂ ತೊಟ್ಟವರು ಕ್ವೀನ್ ವಿಕ್ಟೋರಿಯಾ
1840ರಲ್ಲಿ ಇಂಗ್ಲೆಂಡಿನ ಮಹಾರಾಣಿ ಕ್ವೀನ್ ವಿಕ್ಟೋರಿಯಾ ರವರಿಗೆಂದೇ ಇಡಿಯ ಪಾದಗಳನ್ನು ಆವರಿಸುವ ಶೂ ತಯಾರಿಸಿ ತೊಡಿಸಲಾಯಿತು. ಆದರೆ ಈ ಪರಿಯ ಶೂಗಳನ್ನು ಇತರ ಮಹಿಳೆಯರು ಇಷ್ಟಪಟ್ಟು ತೊಡಲು ಒಂದು ಶತಮಾನವೇ ಬೇಕಾಯಿತು.

ಕಾರ್ಕ್ ಬಳಸಿದ ಸೋಲ್ ಇರುವ ಶೂಗಳನ್ನು ಕೇವಲ ಪ್ರಯೋಗಾತ್ಮಕವಾಗಿ ಪ್ರಾರಂಭಿಸಲಾಗಿತ್ತು
1940ರ ಆಸುಪಾಸಿನಲ್ಲಿ ಇಟಲಿಯಲ್ಲಿ ವಾಣಿಜ್ಯ ವಹಿಹಾಟು ಸ್ಥಗಿತಗೊಂಡ ಕಾರಣ ಅಲಭ್ಯವಾಗಿದ್ದ ಉಕ್ಕು ಯಾವುದೇ ಉಪಕರಣ ತಯಾರಿಸಲು ಅಡ್ಡಿಯಾಗಿತ್ತು. ಆಗ ಇದಕ್ಕೇನಾದರೂ ಮಾಡಬೇಕಲ್ಲ ಎಂದು ಯೋಚಿಸಿದ ವಿನ್ಯಾಸಕಾರ ಸಲ್ವಾಟೋರ್ ಫೆರ್ರಾಗ್ಯಾಮೋ ಎಂಬುವರು ಪ್ರಯೋಗಾತ್ಮಕವಾಗಿ ಇತರ ಕಚ್ಚಾವಸ್ತುಗಳನ್ನು ಪ್ರಯೋಗಿಸಿ ನೋಡಿದರು. ಅದರಲ್ಲಿ ಕಾರ್ಕ್ ನ ಕಚ್ಚಾವಸ್ತು ಹೆಚ್ಚು ಇಷ್ಟವಾಗಿತ್ತು. ಇದೇ ಮುಂದೆ ವೆಡ್ಜ್ ಶೂ ಎಂದು ಜನಪ್ರಿಯವಾಯಿತು.

ಎಡ ಬಲ ಶೂಗಳನ್ನು ಪ್ರಾರಂಭಿಸಿದ್ದು ಫಿಲಡೆಲ್ಫಿಯಾದಲ್ಲಿ
ಸುಮಾರು ಹದಿನಾರನೇ ಶತಮಾನದ ಅಂತ್ಯದವರೆಗೂ ಎರಡೂ ಕಾಲಿನ ಶೂಗಳನ್ನು ಏಕಪ್ರಕಾರವಾಗಿ ತಯಾರಿಸಲಾಗುತ್ತಿತ್ತು. ಕೆಲಕಾಲ ನಡೆದ ಬಳಿಕ ಒಳಭಾಗದಲ್ಲಿ ಕಾಲುಬೆರಳುಗಳ ಒತ್ತಡದಿಂದ ಬೀಳುತ್ತಿದ್ದ ಗುಳಿಯನ್ನು ಪರಿಗಣಿಸಿ ಸರಿಯಾದ ಪಾದಗಳಿಗೆ ಹಾಕಿಕೊಳ್ಳಬೇಕಾಗಿತ್ತು. ಆದರೆ ಇದನ್ನು ಸರಿಪಡಿಸಿ ಎಡಗಾಲಿಗೇ ಬೇರೆ, ಬಲಗಾಲಿಗೇ ಬೇರೆ ಶೂಗಳನ್ನು ಮೊತ್ತ ಮೊದಲಾಗಿ ಫಿಲಡೆಲ್ಫಿಯಾದಲ್ಲಿ ಪರಿಚಯಿಸಲಾಯಿತು.



Click it and Unblock the Notifications











