For Quick Alerts
ALLOW NOTIFICATIONS  
For Daily Alerts

  ಕಾಲಾ ಜಾದೂವಿಗೆ ಈ ನಗರವೇ ಭಾರತದ ರಾಜಧಾನಿ!

  By Manu
  |

  ಕಾಲಾಜಾದೂ ಅಥವಾ ತಂತ್ರವಿದ್ಯೆಯ ಬಗ್ಗೆ ಭಾರತದ ಪ್ರತಿ ಊರಿನಲ್ಲಿಯೂ ಹಲವಾರು ಕಥೆಗಳು ಧಾರಾಳವಾಗಿ ಸಿಗುತ್ತವೆ. ಆದರೆ ಈ ವಿದ್ಯೆಯನ್ನು ಸಾಧಿಸಿ ಇದರ ಪ್ರಯೋಗ ಮಾಡುವವರು ಮಾತ್ರ ಎಲ್ಲಾ ಊರುಗಳಲ್ಲಿ ಸಿಗಲಾರರು. ಈ ತಂತ್ರವನ್ನು ಬಲ್ಲವರು ಒಳಿತಿಗಿಂತಲೂ ಕೆಡುಕಿಗೇ ಈ ವಿದ್ಯೆಯನ್ನು ಬಳಸಿ ಅಪಾರ ಸಾವು ನೋವಿಗೆ ಕಾರಣವಾಗಿರುವ ಕಾರಣ ತಂತ್ರವಿದ್ಯೆ ಕಪ್ಪು ವಿದ್ಯೆ ಅಥವಾ ಕಾಲಾಜಾದೂ ಎಂಬ ಅನ್ವರ್ಥನಾಮವನ್ನೇ ಪಡೆದುಕೊಂಡಿದೆ.     ಲಿಂಬೆಹಣ್ಣಿನ ಅಲೌಕಿಕ ಶಕ್ತಿ: ಮಾಟಮಂತ್ರದ ರಹಸ್ಯ ಬಯಲು!

  ಬೊಂಬೆಯನ್ನು ಮಂತ್ರಿಸಿ ವ್ಯಕ್ತಿಯೊಬ್ಬರ ಆತ್ಮಕ್ಕೆ ಲಗ್ಗೆಯಿಟ್ಟು ಬೊಂಬೆಗೆ ಸೂಜಿ ಚುಚ್ಚುವ ಮೂಲಕ ಆ ವ್ಯಕ್ತಿಗೆ ನೋವು ನೀಡುವಂತಹ ಕಥೆಗಳಂತೂ ಬೆನ್ನುಹುರಿಯಲ್ಲಿ ಛಳಕು ಹುಟ್ಟಿಸುತ್ತವೆ. ಅದರಲ್ಲೂ ಈ ಅನುಭವಕ್ಕೆ ಒಳಗಾದವರು ತಮ್ಮ ಅನುಭವಗಳನ್ನು ಹೇಳುತ್ತಾ ಹೋದಂತೆಯೇ ಭಯ ಮತ್ತು ವಿಸ್ಮಯಗಳೆರಡೂ ಏಕಕಾಲಕ್ಕೆ ಉಂಟಾಗುತ್ತವೆ.

  ಕಾಲಾಜಾದೂವಿಗೆ ಕುಪ್ರಸಿದ್ಧವಾದ ದೇಶವೆಂದರೆ ಬಾಂಗ್ಲಾದೇಶ. ಆದರೆ ಭಾರತದಲ್ಲಿಯೂ ಈ ವಿದ್ಯೆಯನ್ನು ಅಭ್ಯಸಿಸುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ ಈ ವಿದ್ಯೆಯನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯಸಿಸುವವರ ಗ್ರಾಮವೊಂದು ಮಾತ್ರ ಭಾರತದಲ್ಲಿದೆ. ಇದೇ ಕಾರಣಕ್ಕೆ ಈ ಗ್ರಾಮವನ್ನು ಭಾರತದ ಕಾಲಾಜಾದುವಿನ ರಾಜಧಾನಿ ಎಂದೂ ಕರೆಯುತ್ತಾರೆ.   ತಂತ್ರ ವಿದ್ಯೆ: ಅದೇನು ಮಾಯೆ, ಅದೇನು ಜಾದೂ!

  ಈ ಗ್ರಾಮದಲ್ಲಿ ದಂತಕಥೆಗಳೂ, ವಿಚಿತ್ರ ಆಚರಣೆಗಳೂ ಅಪಾರ ಪ್ರಮಾಣದಲ್ಲಿ ಚಲಾವಣೆಯಲ್ಲಿದ್ದು ಪ್ರತಿದಿನವೂ ಕಾಲಾಜಾದೂವಿನ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಅಮವಾಸ್ಯೆ ಹುಣ್ಣಿಮೆಗಳಲ್ಲಿ ಮತ್ತು ಕೆಲವು ವಿಶೇಷ ದಿನಗಳಲ್ಲಿ ಈ ಚಟುವಟಿಕೆಗಳು ತಾರಕಕ್ಕೇರುತ್ತವೆ. ಅಷ್ಟಕ್ಕೂ ಈ ಗ್ರಾಮ ಯಾವುದು ಎಂದು ಇದುವರೆಗೆ ನೆನಪಿಗೆ ಬರಲಿಲ್ಲವೇ? ಅದೇ ಅಸ್ಸಾಂ ರಾಜ್ಯದಲ್ಲಿರುವ "ಮಾಯೋಂಗ್" ಗ್ರಾಮ. ಬನ್ನಿ, ಈ ಗ್ರಾಮದ ಬಗ್ಗೆ ಕೊಂಚ ತಿಳಿದುಕೊಳ್ಳೋಣ.....

  ಈ ಗ್ರಾಮಕ್ಕೆ

  ಈ ಗ್ರಾಮಕ್ಕೆ "ಮಾಯೋಂಗ್" ಎಂಬ ಹೆಸರೇಕಿದೆ?

  "ಮಾಯೋಂಗ್" ಎಂಬ ಹೆಸರು ಮಾಯಾ ಅಥವಾ ಮಾಯೆಯಿಂದ ಬಂದಿದೆ. ಇಲ್ಲಿ ನಡೆಸುವ ಚಟುವಟಿಕೆಗಳೆಲ್ಲಾ ಒಂದು ರೀತಿಯ ಮಾಯೆಯೇ ಆಗಿರುವುದರಿಂದ ಸ್ಥಳೀಯವಾಗಿ ಮಾಯೆಯ ಗ್ರಾಮ ಎಂಬ ಹೆಸರೇ ಉಳಿದುಬಂದಿದೆ.

  ವಾರ್ಷಿಕ ಮಾಯೋಂಗ್ ಪೋರ್ಬಿತಾ ಹಬ್ಬ

  ವಾರ್ಷಿಕ ಮಾಯೋಂಗ್ ಪೋರ್ಬಿತಾ ಹಬ್ಬ

  ನಮ್ಮಲ್ಲಿ ದೀಪಾವಳಿ ಇದ್ದಂತೆ ಈ ಗ್ರಾಮದಲ್ಲಿ ವರ್ಷದಲ್ಲೊಂದು ಅವಧಿಯಲ್ಲಿ ಮೂರು ದಿನಗಳ ಮಾಯಾ ಉತ್ಸವ ನಡೆಯುತ್ತದೆ. ಈ ಮೂರು ದಿನಗಳಲ್ಲಿ ಕಾಲಾಜಾದೂ ಅಥವಾ ತಂತ್ರವಿದ್ಯೆಗಳ ಚಲಾವಣೆ, ಪ್ರಾಣಿಬಲಿ ಮೊದಲಾದವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ವಾರ್ಷಿಕ ಮಾಯೋಂಗ್ ಪೋರ್ಬಿತಾ ಹಬ್ಬ

  ವಾರ್ಷಿಕ ಮಾಯೋಂಗ್ ಪೋರ್ಬಿತಾ ಹಬ್ಬ

  ಅಷ್ಟು ಮಾತ್ರವಲ್ಲ, ಈ ಮೂರೂ ದಿನಗಳಲ್ಲಿ ಇಡಿಯ ಗ್ರಾಮದಲ್ಲಿ ಈ ವಿದ್ಯೆಯನ್ನು ಅಭ್ಯಸಿಸುವ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಈ ಗ್ರಾಮ ಏಕಾಗಿ ಪ್ರಸಿದ್ಧಿಗೊಂಡಿದೆ ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾರೆ.

  ಈ ಗ್ರಾಮಕ್ಕೂ ಆಗಮಿಸುವ ವಿದ್ಯಾರ್ಥಿಗಳು

  ಈ ಗ್ರಾಮಕ್ಕೂ ಆಗಮಿಸುವ ವಿದ್ಯಾರ್ಥಿಗಳು

  ತಂತ್ರವಿದ್ಯೆ ಎಂದರೆ ಒಳ್ಳೆಯ ವಿದ್ಯೆಯಲ್ಲ, ಇದನ್ನು ಕೇವಲ ಸೈತಾನನ ಆರಾಧಕರು ಮಾತ್ರ ಅಭ್ಯಸಿಸುತ್ತಾರೆ ಎಂಬ ಅಭಿಪ್ರಾಯ ನೀವು ಹೊಂದಿದ್ದರೆ ಬದಲಿಸಿಕೊಳ್ಳುವುದು ಒಳಿತು. ಏಕೆಂದರೆ ಈ ವಿದ್ಯೆಯನ್ನು ಕಲಿಯಲೆಂದೇ ದೇಶ ವಿದೇಶಗಳಿಂದ ಆಸಕ್ತರು ವಿದ್ಯಾರ್ಥಿಗಳಾಗಿ ಇಲ್ಲಿ ಬರುತ್ತಾರೆ. ಹೀಗೆ ಬಂದು ಅಭ್ಯಸಿಸುತ್ತಿರುವವರ ಸಂಖ್ಯೆ ನೋಡಿದರೆ ಅಚ್ಚರಿಯಾಗುವುದು ಸಹಜ.

  ತಂತ್ರವಿದ್ಯೆಗೂ ಒಂದು ಮ್ಯೂಸಿಯಂ

  ತಂತ್ರವಿದ್ಯೆಗೂ ಒಂದು ಮ್ಯೂಸಿಯಂ

  2002 ರಲ್ಲಿ ಈ ಗ್ರಾಮದಲ್ಲೊಂದು ಮ್ಯೂಸಿಯಂ ಒಂದನ್ನು ಸ್ಥಾಪಿಸಲಾಗಿದ್ದು ಇದರಲ್ಲಿ ತಂತ್ರವಿದ್ಯೆಗೆ ಸಂಬಂಧಿಸಿದ ಹಲವಾರು ಪುಸ್ತಕಗಳು, ಮಹಾಗ್ರಂಥಗಳು, ಬಹಳ ವರ್ಷ ಹಿಂದಿನ ತಂತ್ರವಿದ್ಯೆಗೆ ಸಂಬಂಧಿಸಿದ ತಾಳೆಗರಿ ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು ಕಾಲಾಜಾದೂ ಕಲಿಯುವವರಿಗೆ ಹೆಚ್ಚಿನ ಪ್ರೇರಣೆ ನೀಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ತಂತ್ರವಿದ್ಯೆಗೂ ಒಂದು ಮ್ಯೂಸಿಯಂ

  ತಂತ್ರವಿದ್ಯೆಗೂ ಒಂದು ಮ್ಯೂಸಿಯಂ

  Mayong Central Museum ಎಂಬ ಈ ಮ್ಯೂಸಿಯಂನಲ್ಲಿ ತಂತ್ರವಿದ್ಯೆಗೆ ಬಳಸಲಾಗುವ ನೂರಾರು ವಸ್ತುಗಳು, ಅಸ್ಥಿಪಂಜರ ಮೊದಲಾದವುಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಡಲಾಗಿದೆ.

  ತಂತ್ರವಿದ್ಯೆಯನ್ನು ಅಭ್ಯಸಿಸುವವರಿಗೆ ಯಾವ ಪದವಿ ದೊರಕುತ್ತದೆ?

  ತಂತ್ರವಿದ್ಯೆಯನ್ನು ಅಭ್ಯಸಿಸುವವರಿಗೆ ಯಾವ ಪದವಿ ದೊರಕುತ್ತದೆ?

  ಈ ಗ್ರಾಮದಲ್ಲಿ ನೂರಾರು ಜನರು ತಂತ್ರವಿದ್ಯೆಯನ್ನು ಅಭ್ಯಸಿಸಿದರೂ ಒಂದು ಹಂತದಲ್ಲಿ ತಾಂತ್ರಿಕನಾಗಿ ಬೆಳದುನಿಂತರೂ ಯಾವುದೇ ಪದವಿಪತ್ರ ದೊರಕುವುದಿಲ್ಲ. ತಾಂತ್ರಿಕ ಕೇವಲ ತನ್ನ ಸಾಮರ್ಥ್ಯದಿಂದಲೇ ಹಲವಾರು ಪಟ್ಟುಗಳನ್ನು ಸಾಧಿಸಿ ತೋರಿಸಿದ ಬಳಿಕವೇ ಈತನಿಗೆ "ಬೇಝ್" ಅಥವಾ "ಓಝಾ" ಎಂಬ ಪಟ್ಟ ದೊರಕುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

  ತಂತ್ರವಿದ್ಯೆಯನ್ನು ಅಭ್ಯಸಿಸುವವರಿಗೆ ಯಾವ ಪದವಿ ದೊರಕುತ್ತದೆ?

  ತಂತ್ರವಿದ್ಯೆಯನ್ನು ಅಭ್ಯಸಿಸುವವರಿಗೆ ಯಾವ ಪದವಿ ದೊರಕುತ್ತದೆ?

  ಈ ಪಟ್ಟ ಪಡೆಯುವವರು ತಮ್ಮ ಸಾಮರ್ಥ್ಯದಿಂದ ಕೆಲವು ಭೂತ ಪಿಶಾಚಿಗಳನ್ನು ತಮ್ಮ ಗುಲಾಮರನ್ನಾಗಿಸಿಕೊಂಡು ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ ಎಂದು ನಂಬಲಾಗಿದೆ. ಈ ಲೇಖನ ಓದುತ್ತಿರುವ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಒಂದು ಪಿಶಾಚಿಯನ್ನು ಪಳಗಿಸಿದರೆ ಹೇಗೆ ಎಂದು ಖಂಡಿತಾ ಯೋಚಿಸಬಾರದಾಗಿ ವಿನಂತಿ.

   

  English summary

  This Is The Black Magic Capital Of India

  Here in this article, we are about to share facts about an Indian village, that is very famous for practising black magic. This village is also considered the black magic capital of India and it has been haunted with the black practice rituals that are practised day in and day out. Find out more about this special Indian village named "Mayong" which is in Assam. Read on to know more...
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more